ಬೆಂಗಳೂರು (ಏ. 14): ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಮುಂದಿನ ಸಿನಿಮಾ 'ಇನ್ಶಾಲ್ಲಾ’ ಭಾರೀ ಕುತೂಹಲ ಮೂಡಿಸಿದೆ. 20 ವರ್ಷಗಳ ನಂತರ ಸಂಜಯ್ ಲೀಲ ಬನ್ಸಾಲಿ ಹಾಗೂ ಸಲ್ಮಾನ್ ಒಂದಾಗುತ್ತಿದ್ದಾರೆ. ಆದರೆ ವಿಚಾರ ಅದಲ್ಲ. ಇದೇ ಮೊದಲ ಬಾರಿಗೆ ಸಲ್ಮಾನ್ ಹಾಗೂ ಅಲಿಯಾ ಭಟ್ ಒಟ್ಟಿಗೆ ತೆರೆಯನ್ನು ಹಂಚಿಕೊಳ್ಳಲಿದ್ದಾರೆ. 

‘ಈಗಲೇ ತಾಯಿಯಾಗಲು ಒತ್ತಾಯಿಸಬೇಡಿ, ಮದುವೆಯಾಗುವುದು ಇದೊಂದಕ್ಕೆ ಅಲ್ಲ’!

ಅಲಿಯಾ ಭಟ್-ಸಲ್ಮಾನ್ ನಡುವೆ ಸಾಕಷ್ಟು ವಯಸ್ಸಿನ ಅಂತರವಿದ್ದು ಇವರಿಬ್ಬರು ಜೋಡಿ ಅಭಾಸ ಎನಿಸಬಹುದು ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸಿದ ಅಲಿಯಾ, ಬನ್ಸಾಲಿಯವರು, ಮುಂದಾಲೋಚನೆ ಇರುವವರು. ಸದ್ಯಕ್ಕೆ ಇಂತದ್ದೊಂದು ಪ್ಲಾನ್ ಮಾಡುತ್ತಿದ್ದೇವೆ. ಇಂತಹ ಅಸಹಜವಾದ ಕಾಂಬಿನೇಶನ್ ಹಿಂದೆ ಒಂದು ಕಾರಣವಿದೆ ಎಂದು ಅಲಿಯಾ ಹೇಳಿದ್ದಾರೆ. 

ಅಮ್ಮನ ಅಳಲಿಗೆ ತಿರುಗೇಟು ನೀಡಿದ ನಟಿ ಸಂಗೀತಾ!

ಸಲ್ಮಾನ್ ಜೊತೆ ಕೆಲಸ ಮಾಡಲು ನಾನು ಥ್ರಿಲ್ ಆಗಿದ್ದೇನೆ. ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಸಿನಿಮಾ ಮಾಡಬಹುದೆಂದು ನಾನು ಯೋಚಿಸಿರಲಿಲ್ಲ ಎಂದು ಅಲಿಯಾ ಹೇಳಿದ್ದಾರೆ.