ಕೊಚ್ಚಿ(ಏ.13): ಸುದೀರ್ಘ ದಿನಗಳ ಬಳಿ ನಟಿ ಸಂಗೀತಾ ಕ್ರಿಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ವಿವಾದದ ಸುಳಿಯಲ್ಲಿ ಸಿಲುಕಿರುವ ಮಲೆಯಾಳಂ ನಟಿ ಸಂಗೀತಾ ಕ್ರಿಶ್, ಟ್ವಿಟರ್ ಮೂಲಕ ಆರೋಪಗಳಿಗೆ ಸುದೀರ್ಘ ಉತ್ತರ ನೀಡಿದ್ದಾರೆ. ತನ್ನ ತಾಯಿಯಿಂದಲೇ ಆರೋಪ ಎದುರಿಸಿರುವ ಸಂಗೀತಾ, ಗೊಂದಲಗಳಿಗೆ ತೆರೆ ಎಳೆಯೋ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: #MeToo ನಂತರ ಸಂಗೀತಾ ಭಟ್ ಮದ್ವೆ ಫೋಟೋ ರಿವೀಲ್ !

ಸಂಗೀತಾಳಿಂದ ನಾನು ಮನೆಯಿಂದ ಹೊರಬಿದ್ದಿದ್ದೇನೆ. ನನ್ನ ವಯಸ್ಸೂ ನೋಡದೆ ಮನೆಯಿಂದ ಹೊರಗೆ ಹಾಕಲಾಗಿದೆ. ಇಷ್ಟೇ ಅಲ್ಲ ಆಸ್ತಿಯನ್ನೂ ಕಬಳಿಸುವ ಪ್ರಯತ್ನ ನಡೆಸುತ್ತಿದ್ದಾಳೆ ಎಂದು ಆರೋಪಿಸಿದ್ದರು. ಆದರೆ ತಾಯಿಯ ಆರೋಪಕ್ಕೆ ಸಂಗೀತಾ ತಿರುಗೇಟು ನೀಡಿದ್ದಾರೆ. ತಾಯಿಗೆ ಧನ್ಯವಾದ ಹೇಲೋ ಮೂಲಕ ತೀಕ್ಷ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಕಿರುತೆರೆಯ ಈ ನಟಿ ಅಮ್ಮನಾಗುತ್ತಿದ್ದಾರೆ!

ಈ ಜಗತ್ತಿಗೆ ನನ್ನ ಪರಿಚಯಿಸಿದ್ದಕ್ಕೆ ತಾಯಿಗೆ ತುಂಬು ಹೃದಯದ ಧನ್ಯವಾದ. ನನ್ನನ್ನು ಶಾಲೆಯಿಂದ ಬಿಡಿಸಿ, 13ನೇ ವರ್ಷಕ್ಕೆ ಕೆಲಸಕ್ಕೆ ಸೇರುವಂತೆ ಮಾಡಿದ ತಾಯಿಗೆ ಧನ್ಯವಾದ. ಖಾಲಿ ಚೆಕ್‌ನಲ್ಲಿ ನನ್ನ ಸಹಿ ಮಾಡಿಸಿದ್ದಕ್ಕೆ ಧನ್ಯವಾದ.  ಡ್ರಗ್ಸ್ ಹಾಗೂ ಕುಡಿತ ದಾಸನಾಗಿದ್ದ, ಯಾವುದೇ ಕೆಲಸಕ್ಕೆ ಹೋಗದ ನಿನ್ನ ಪುತ್ರನಿಗಾಗಿ ನನ್ನ ಮನೆಯಿಂದ ಹೊರಗೆ ಹಾಕಿದ ತಾಯಿಗೆ ಧನ್ಯವಾದ. ನಿನ್ನ ಮನೆಯಲ್ಲಿ ನನ್ನ ಮೂಲೆಗುಂಪು ಮಾಡಿದ ನನ್ನ ತಾಯಿಗೆ ಧನ್ಯವಾದ. ನನಗಿಷ್ಟವಾದ  ಹುಡುಗನ ಮುದವೆಯಾಗಲು ಒಪ್ಪದ, ಕೊನೆಗೆ ನಾನು ಹೋರಾಟ ಮಾಡುವಂತ ಪರಿಸ್ಥಿತಿಗೆ ದೂಡಿದ ನನ್ನ ತಾಯಿಗೆ ಧನ್ಯವಾದ. ಮದುವೆ ಬಳಿಕವೂ ನನಗೆ ಹಾಗೂ ನನ್ನ ಕುಟುಂಬಕ್ಕೆ ಕಿರುಕುಳ ನೀಡಿದ ನನ್ನ ತಾಯಿಗೆ ಧನ್ಯವಾದ. ಓರ್ವ ತಾಯಿ ಹೇಗಿರಬಾರದು ಅನ್ನೋದು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದ. ಸುಳ್ಳು ಆರೋಪ ಮಾಡಿದ ಹಾಗೂ ಮಾಡುತ್ತಿರುವ ತಾಯಿಗೆ ಧನ್ಯವಾದ. ಕಠಿಣ ಪರಿಸ್ಥಿತಿಯಲ್ಲೂ ಹೋರಾಟದ ಮನೋಭಾವ ಬೆಳೆಸಿ, ಎಲ್ಲರೆದರು ತಲೆ ಎತ್ತಿ ನಡೆಯುವಂತೆ ಮಾಡಿದ ನನ್ನ ತಾಯಿಗೆ ಧನ್ಯವಾದ. ನನ್ನನ್ನು ಬಲಿಷ್ಠವಾಗಿ ಮಾಡಿ ತಾಯಿಗೆ ಧನ್ಯವಾದ.  ಈ ಎಲ್ಲಾ ಕಾರಣಕ್ಕೆ ನನ್ನ ತಾಯಿ ನನಗಿಷ್ಟ. ಒಂದು ದಿನ ನಿನ್ನೊಳಗಿನ ಅಹಂ ದೂರವಾದ, ನನ್ನ ಬದುಕಿನ ಪಯಣ ನಿನಗೆ ಹೆಮ್ಮೆ ತರಬಹುದು ಎಂದು ಸಂಗೀತಾ ಟ್ವೀಟ್ ಮೂಲಕ ತಾಯಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಮೋದಿ ಪರ ಪ್ರಚಾರ ಶುರು ಮಾಡಿದ್ರಾ ದೀಪಿಕಾ-ರಣವೀರ್?

 

 

ತಾಯಿಯ ವಿರೋಧವಿದ್ದರೂ 2009ರಲ್ಲಿ ಸಂಗೀತಾ ಕ್ರಿಶ್, ಹಿನ್ನಲೆ ಗಾಯಕ ಕ್ರಿಶ್ ಮದುವೆಯಾದರು. ಇವರಿಗೆ ಹೆಣ್ಣು ಮಗಳಿದ್ದಾಳೆ. ಇದೀಗ ತಾಯಿ ಹಾಗೂ ಸಂಗೀತಾ ಆರೋಪ -ಪ್ರತ್ಯಾರೋಪ ಮಾಡುತ್ತಿದ್ದಾರೆ. ಈ ರೀತಿ ಪೋಷಕರ ವಿರುದ್ಧ ನಟ ನಟಿಯರು ಸಿಡಿದೇಳುತ್ತಿರುವುದು ಇದೇ ಮೊದಲಲ್ಲ. ಕಹೋ ನಾ ಪ್ಯಾರ್ ಹೇ ಬಾಲಿವುಡ್ ಚಿತ್ರದ ನಾಯಕ ಅಮೀಷಾ ಪಟೇಲ್, ಪೋಷಕರ ವಿರುದ್ಧ ಅಸಮಧಾನ ಹೊರಹಾಕಿದ್ದರು. ಇದೀಗ ಸಂಗೀತಾ ಕ್ರಿಶ್ ಅಸಮಧಾನ ಹೊರಹಾಕಿದ್ದಾರೆ.