Asianet Suvarna News Asianet Suvarna News

Alia Bhatt; ಮಗಳಿಗೆ ಎದೆ ಹಾಲುಣಿಸುತ್ತಿರುವ ಅಲಿಯಾ; ಈ ವೈರಲ್ ಫೋಟೋದ ಅಸಲಿಯತ್ತೇನು?

ನಟಿ ಅಲಿಯಾ ಭಟ್ ಮಗಳಿಗೆ ಎದೆ ಹಾಲುಣಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Alia Bhatt morphed photo breastfeeding newborn baby girl Raha goes viral sgk
Author
First Published Dec 21, 2022, 2:20 PM IST

ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಸದ್ಯ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಅಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿ ಒಂದು ತಿಂಗಳಿಗೆ ವರ್ಕೌಟ್ ಪ್ರಾರಂಭಿಸಿದ್ದಾರೆ. ಅಲಿಯಾ ಜಿಮ್‌ಗೆ ಹೋಗುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿವೆ. ಅಂದಹಾಗೆ ಅಲಿಯಾ ಮತ್ತು ರಣಬೀರ್ ದಂಪತಿ  ಇದುವರೆಗೂ ಮಗಳ ಫೋಟೋ ರಿವೀಲ್ ಮಾಡಿಲ್ಲ. ಇತ್ತೀಚಿಗಷ್ಟೆ ಮಗಳ ಹೆಸರನ್ನು ಬಹಿರಂಗ ಪಡಿಸಿದ್ದರು. ಅಲಿಯಾ ಮತ್ತು ರಣಬೀರ್ ದಂಪತಿ ಮಗಳಿಗೆ ರಾಹಾ ಎಂದು ನಾಮಕರಣ ಮಾಡಿದ್ದಾರೆ. ಆದದರೆ ಮಗಳನ್ನು ಇನ್ನು ಅಭಿಮಾನಿಗಳಿಗೆ ಪರಿಚಯಿಸಿಲ್ಲ. ಹಾಗಾಗಿ ಅಲಿಯಾ ಮಗಳು ಹೇಗಿದ್ದಾಳೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಆದರೆ ಅಲಿಯಾ ಭಟ್ ಮಗಳನ್ನು ಕ್ಯಾಮರಾ ಕಣ್ಣುಗಳಿಂದ ದೂರ ಇಟ್ಟಿದ್ದಾರೆ. 

ಅಲಿಯಾ ಭಟ್ ಮಗಳ ಫೋಟೋ ರಿವೀಲ್ ಮಾಡುವ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಮಗಳ ಜೊತೆ ಇರುವ ಫೋಟೋ ವೈರಲ್ ಆಗಿದೆ. ಮಗಳಿಗೆ ಹಾಲುಣಿಸುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೆಂಪು ಬಣ್ಣದ ಜೆರಿ ಸೀರೆ ಧರಿಸಿರುವ ಅಲಿಯಾ ಮಗಳಿಗೆ ಎದೆ ಹಾಲುಣಿಸುತ್ತಿದ್ದಾರೆ. ಮುದ್ದಾದ ಮಗಳನ್ನು ಮಡಿಲಿನಲ್ಲಿ ಮಲಗಿಸಿ ಜೋರಾಗಿ ನಗು ಬೀರುತ್ತಿರುವ ಅಲಿಯಾ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿಯೂ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಇದು ಅಸಲಿ ಫೋಟೋ ಅಲ್ಲ, ಮಾರ್ಫ್ ಮಾಡಿದ ಫೋಟೋ. ಬೇರೆ ಯಾರದ್ದೋ ಫೋಟೋಗೆ ಅಲಿಯಾ ಮುಖ ಜೋಡಿಸಿ ಮಾರ್ಫ್ ಮಾಡಲಾಗಿದೆ. 

ಕೇವಲ 15 ವರ್ಷಕ್ಕೆ ವರ್ಜಿನಿಟಿ ಕಳೆದುಕೊಂಡೆ; ರಣಬೀರ್ ಕಪೂರ್ ಶಾಕಿಂಗ್ ಹೇಳಿಕೆ

ಈ ಫೋಟೋವನ್ನು ತಕ್ಷಣ ನೋಡಿದರೆ ಮಾರ್ಫ್ ಮಾಡಿದ್ದು ಅಂತ ಹೇಳಲು ಸಾಧ್ಯವೇ ಇಲ್ಲ. ಥೇಟ್ ಅಲಿಯಾ ಹಾಗೆ ಕಾಣುವಂತೆ ನೀಟಾಗಿ ಎಡಿಟ್ ಮಾಡಲಾಗಿದೆ. ಮಾರ್ಫ್ ಮಾಡಿದ ಅಲಿಯಾ ಫೋಟೋ ವೈರಲ್ ಆದ ಬೆನ್ನಲ್ಲೇ ಅಸಲಿ ಫೋಟೋ ಕೂಡ ಹರಿದಾಡುತ್ತಿದೆ. ಅಸಲಿ ಫೋಟೋ ನೋಡಿದ ಬಳಿಕ ಅಲಿಯಾ ಫೋಟೋ ಮಾರ್ಫ್ ಮಾಡಿರುವ ಸತ್ಯ ಬಹಿರಂಗವಾಗಿದೆ. ಇದು ನಕಲಿ ಫೋಟೋ ಎಂದು ತಿಳಿದು ಅಭಿಮಾನಿಗಳು ನಿರಾಸೆಯಾಗಿದ್ದಾರೆ. ಸದ್ಯ ರಾಹಾ ಫೋಟೋ ಯಾವಾಗ ರಿವೀಲ್ ಆಗುತ್ತೆ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

  Alia Bhatt morphed photo breastfeeding newborn baby girl Raha goes viral sgk

ಅಂದಹಾಗೆ ಅಲಿಯಾ ಭಟ್ ಈ ವರ್ಷ ಏಪ್ರಿಲ್ ನಲ್ಲಿ ಹಸೆಮಣೆ ಏರಿದರು. ಏಪ್ರಿಲ್ 14ರಂದು ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಜೊತೆ  ಅಲಿಯಾ ದಾಂಪತ್ಯಕ್ಕೆ ಕಾಲಿಟ್ಟರು. ಮುಂಬೈನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಅಲಿಯಾ ಮತ್ತು ರಣಬೀರ್ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ನವೆಂಬರ್ 6 ರಂದು ಹೆಣ್ಣು ಮಗುವನ್ನು ಸ್ವಾಗತಿಸಿದರು.  

ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲವೇ ದಿನಕ್ಕೆ ಜಿಮ್‌ಗೆ ಮರಳಿದ ಅಲಿಯಾ ಭಟ್; ಫೋಟೋ ವೈರಲ್

ಅಂದಹಾಗೆ ಸಿನಿಮಾ ವಿಚಾರಕ್ಕೆ ಬರುವುದಾದರೆ, ಅಲಿಯಾ ಮತ್ತು ರಣಬೀರ್ ಕಪೂರ್ ಇಬ್ಬರೂ ಕೊನೆಯದಾಗಿ ಬ್ರಹ್ಮಾಸ್ತ್ರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಸದ್ಯ ಅಲಿಯಾ ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಇನ್ನು ಹಾಲಿವುಡ್ ಸಿನಿಮಾದ ಚಿತ್ರೀಕರಣ ಕೂಡ ಮುಗಿಸಿದ್ದಾರೆ. ಸದ್ಯ ಮತ್ತೆ ವರ್ಕೌಟ್ ಪ್ರಾರಂಭ ಮಾಡಿರುವ ಅಲಿಯಾ ಸದ್ಯದಲ್ಲೇ ಸಿನಿಮಾಗೆ ಮರಳಲಿದ್ದಾರೆ. 

 

Follow Us:
Download App:
  • android
  • ios