ಅಲಿಯಾ ಭಟ್ ಮಾಂಗಲ್ಯ ಸರ ಹೇಗಿದೆ ನೋಡಿ:  ಮಾಂಗಲ್ಯ ಸರಕ್ಕು ಮತ್ತು ರಣಬೀರ್ ಕಪೂರ್‌ಗೂ ಒಂದು ಲಿಂಕ್ ಇದೆ. 

ಬಾಲಿವುಡ್ ನಟಿ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಯಾಗಿ ಮುದ್ದಾದ ಮಗಳನ್ನು ಸ್ವಾಗತಿಸಿದ್ದಾರೆ. ಮಗಳಿಗೆ ರಾಹಾ ಎಂದು ನಾಮಕರಣ ಮಾಡಿದ್ದಾರೆ. ಸದ್ಯ ಅಲಿಯಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಏಪ್ರಿಲ್ 14ರಂದು ಅಲಿಯಾ ಭಟ್ ಬಹುಕಾಲದ ಗೆಳೆಯ ರಣಬೀರ್ ಕಪೂರ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟರು. ಈ ನಡುವೆ ಆಲಿಯಾ ಭಟ್ ಮಾಂಗಲ್ಯ ಸರ ವೈರಲ್ ಆಗಿದೆ. ಆಲಿಯಾ ಧರಿಸಿರುವ ಮಾಂಗಲ್ಯ ಸರದಲ್ಲಿ ವಿಶೇಷತೆ ಇದೆ. 

ಆಲಿಯಾ ಧರಿಸಿದ್ದ ಮಾಂಗಲ್ಯ ಸರವನ್ನು ವಜ್ರದಿಂದ ಮಾಡಲಾಗಿದೆ. ಇನ್ಫಿನಿಟಿ ಚಿಹ್ನೆ ಹೊಂದಿದೆ. ಅದರ ಮಧ್ಯದಲ್ಲಿ ಸಾಲಿಟೇರ್ ಜೋಡಿಸಲಾಗಿದೆ. ಇನ್ಫಿನಿಟಿಯನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ ರಣಬೀರ್ ಕಪೂರ್ ಅವರ ನೆಚ್ಚಿನ ಸಂಖ್ಯೆ. ರಣಬೀರ್ ಕಪೂರ್ ಅವರಿಗೆ 8 ಲಕ್ಕಿ ನಂಬರ್ ಅಂತೆ. ಹಾಗಾಗಿ ಅದನ್ನೇ ಮಾಂಗಲ್ಯ ಸರಕ್ಕೆ ಬಳಸಿಕೊಂಡಿದ್ದಾರೆ ಅಲಿಯಾ. ಪಾರ್ಟಿಯ ಫೋಟೋಗಳಲ್ಲಿ ಆಲಿಯಾ ಧರಿಸಿದ್ದ ಮಾಂಗಲ್ಯ ಸರದ ಫೋಟೋ ಕಾಣಿಸಿದ್ದು ವೈರಲ್ ಆಗಿದೆ.

Heart of Stone: ಹಾಲಿವುಡ್​ನಲ್ಲಿ ಆಲಿಯಾ ವಿಲನ್​; ಬಿಡುಗಡೆಯಾಯ್ತು ಚೊಚ್ಚಲ ಚಿತ್ರದ ಟ್ರೇಲರ್​

ಅಲಿಯಾ ಭಟ್ ಮಗಳು ಮತ್ತು ಸಿನಿಮಾ ಕೆಲಸ ಎರಡನ್ನು ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಆಲಿಯಾ, 'ನನ್ನ ಮನಸ್ಸಿನಲ್ಲಿ ಬಹಳಷ್ಟು ಗೊಂದಲಗಳಿವೆ ಆದರೆ ತಾಯಿಯ ವಿಷಯದ ಬಗ್ಗೆ ಹೇಳುವುದಾದರೆ ಹೊಸ ಅನುಭವವಾಗಿದೆ. ಚಾಲೆಂಜಿಂಗ್ ಆಗಿದೆ. ನನ್ನ ಶಕ್ತಿ ಎಷ್ಟೇ ಕಡಿಮೆ ಆಗಿದ್ದರೂ ನನ್ನ ಮಗುವಿನ ಕಡೆಗೆ ಒಂದು ಲುಕ್ ನೋಡಿದ್ರೆ ಸಾಕು ನನಗೆ 1000-ವ್ಯಾಟ್ ಶಕ್ತಿ ಬರುತ್ತೆ. ನಾನು ನಟಿ, ನಿರ್ಮಾಪಕಿ, ಉದ್ಯಮಿ ಮತ್ತು ತಾಯಿಯಾಗಲು ಆಯ್ಕೆ ಮಾಡಿಕೊಂಡಿದ್ದೇನೆ. ಹಾಗಾಗಿ ನಾನು ಕುಳಿತು ಯಾವುದೇ ದೂರು ಹೇಳಲು ಇಷ್ಟಪಡಲ್ಲ. 'ಜೀವನ ತುಂಬಾ ಕಷ್ಟ' ಆದರೆ ಜೀವನವು ಪ್ರತಿಯೊಬ್ಬರಿಗೂ ಕಠಿಣವಾಗಿದೆ. ಜೀವನ ಯಾವಾಗಲೂ ಸುಗಮವಾಗಿರುವುದಿಲ್ಲ. ನೀವು ಚಲಿಸುತ್ತಲೇ ಇರಬೇಕು, ಆದರೆ ರಾತ್ರಿಯ ನಿದ್ದೆಯು ಯಾವಾಗಲೂ ನನಗೆ ಚೇತರಿಸಿಕೊಳ್ಳುವ ಮಾರ್ಗವಾಗಿದೆ' ಎಂದು ಹೇಳಿದ್ದರು. 

ಹಲ ವರ್ಷಗಳ ನಂತ್ರ ಖುದ್ದು ಮೇಕಪ್ ಮಾಡ್ಕೊಂಡ ಆಲಿಯಾ: ಹೊಟೇಲ್‌ನ ಕ್ರೀಂ ಚೆನ್ನಾಗಿಲ್ಲವೆಂದ ನಟಿ!

ಆಲಿಯಾ ಭಟ್ ಸದ್ಯ ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ಸಿನಿಮಾದಲ್ಲಿ ಬ್ಯುಸಿಗಿದ್ದಾರೆ. ಈ ಸಿನಿಮಾದಲ್ಲಿ ಅಲಿಯಾ ಮತ್ತು ರಣವೀರ್ ಸಿಂಗ್ ನಟಿಸಿದ್ದಾರೆ. ಈ ಸಿನಿಮಾಗೆ ಕರಣ್ ಜೋಹರ್ ಆಕ್ಷನ್ ಕಟ್ ಹೇಳಿದ್ದು ಈಗಾಗಲೇ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಣವೀರ್ ಮತ್ತು ಅಲಿಯಾ ಜೋಡಿಯನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.