alia bhatt : ಹೆರಿಗೆಯಾಗಿ ನಾಲ್ಕೈದು ತಿಂಗಳಿಗೆ ತೂಕ ಇಳಿಸೋ ಅಗತ್ಯ ಏನಿತ್ತು, ಅಷ್ಟೊಂದು ವರ್ಕ್ ಔಟ್ ಬೇಕಿತ್ತಾ? ಆಲಿಯಾ ಫಿಟ್ನೆಸ್ ನೋಡಿ ಟ್ರೋಲ್ ಮಾಡಿದ್ದವರಿಗೆ ನಟಿ ಉತ್ತರ ನೀಡಿದ್ದಾರೆ. ತಮ್ಮ ವೇಟ್ ಲಾಸ್ ಗೆ ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ. 

ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಹೆರಿಗೆ ಆದ್ಮೇಲೆ ಮತ್ತಷ್ಟು ಸ್ಲಿಮ್ ಆಗಿದ್ದಾರೆ. ನಟಿ ಮಗು ಹುಟ್ಟಿದ್ಮೇಲೆ ಡಯಟ್, ವರ್ಕ್ ಔಟ್ ಅಂತ ಸಿಕ್ಕಾಪಟ್ಟೆ ಕಸರತ್ತು ಮಾಡಿದ್ದಾರೆ ಅಂತ ಫ್ಯಾನ್ಸ್ ಅಂದ್ಕೊಂಡಿದ್ದಾರೆ. ಆದ್ರೆ ವಾಸ್ತವ ಬೇರೆನೇ ಇದೆ. ಆಲಿಯಾ ಭಟ್, ಹೇಳಿಕೊಳ್ಳುವಷ್ಟು ವರ್ಕ್ ಔಟ್, ಡಯಟ್ ಫಾಲೋ ಮಾಡ್ಲಿಲ್ಲ. ಹೆರಿಗೆಯಾದ ಕೆಲವೇ ತಿಂಗಳಲ್ಲಿ ತೂಕ ಇಳಿದಿದ್ದು ನ್ಯಾಚುರಲ್ ಆಗಿ. ಆಲಿಯಾ ವೇಟ್ ಲಾಸ್ ಗೆ ಮುಖ್ಯ ಕಾರಣ ಏನು ಅನ್ನೋದನ್ನು ಸ್ಪಷ್ಟಪಡಿಸುವ ಮೂಲಕ ಟ್ರೋಲರ್ ಬಾಯಿ ಮುಚ್ಚಿಸಿದ್ದಾರೆ.

ಆಲಿಯಾ ತೂಕ ಇಳಿಕೆಗೆ ಇದು ಕಾರಣ : 

ಸಾಮಾನ್ಯವಾಗಿ ಸೆಲೆಬ್ರಿಟಿಗಳ ತೂಕ ಕಡಿಮೆ ಆದ್ರೆ, ಅವ್ರಿಗೇನು, ಡಯಟೀಶಿಯನ್, ಜಿಮ್ ಟ್ರೈನರ್ ಅಂತ ಒಂದಿಷ್ಟು ಮಂದಿ ಇಟ್ಕೊಂಡಿರ್ತಾರೆ. ಇವ್ರಿಗೆ ಮಕ್ಕಳನ್ನು ಸಾಕೋ ಕೆಲ್ಸ ಕೂಡ ಇರೋದಿಲ್ಲ. ಕೈಗೊಂದು, ಕಾಲಿಗೊಂದು ಆಳು ಇದ್ರೆ ತೂಕ ಇಳಿಸೋದು ಸುಲಭ ಅಂತ ಜನಸಾಮಾನ್ಯರು ಮಾತನಾಡ್ತಾರೆ. ಆದ್ರೆ ಎಲ್ಲ ಟೈಂನಲ್ಲಿ, ಎಲ್ಲ ಸೆಲೆಬ್ರಿಟಿ ಲೈಫ್ ನಲ್ಲಿ ಇದು ಆಗೋದಿಲ್ಲ. ಕೆಲವೊಮ್ಮೆ ತೂಕ ಇಳಿಕೆ ಹಾಗೂ ಏರಿಕೆಗೆ ನೈಸರ್ಗಿಕ ಕಾರಣ ಇರುತ್ತೆ. ಅದಕ್ಕೆ ಬಾಲಿವುಡ್ ಬೆಡಗಿ ಆಲಿಯಾ ಭಟ್ ಉದಾಹರಣೆ. ಪ್ರೆಗ್ನೆನ್ಸಿಯಲ್ಲಿ ಸ್ವಲ್ಪ ದಪ್ಪಗಾಗಿದ್ದ ಆಲಿಯಾ ಭಟ್, ಹೆರಿಗೆಯಾಗಿ ಕೆಲವೇ ತಿಂಗಳಲ್ಲಿ ಸಣ್ಣಗಾಗಿದ್ರು. ಈಗ್ಲೂ ಆಲಿಯಾ ತೆಳ್ಳಗಿದ್ದಾರೆ. ಅದಕ್ಕೆ ಕಾರಣ ಏನು ಅನ್ನೋದನ್ನು ಆಲಿಯಾ ಟಾಕ್ ಶೋನಲ್ಲಿ ಎಲ್ಲರ ಮುಂದಿಟ್ಟಿದ್ದಾರೆ. ಆಲಿಯಾ ಭಟ್, ಹೆರಿಗೆ ನಂತ್ರ ಬ್ರೆಸ್ಟ್ ಫೀಡಿಂಗ್ (breastfeeding )ತೂಕ ಇಳಿಸಿದೆ ಎಂದಿದ್ದಾರೆ. ಬ್ರೆಸ್ಟ್ ಫೀಡಿಂಗ್,. ಕ್ಯಾಲೋರಿ ಬರ್ನ್ ಮಾಡಲು ಹೆಲ್ಪ್ ಮಾಡಿದೆ ಎಂದು ಆಲಿಯಾ ತಿಳಿಸಿದ್ದಾರೆ.

ಇದು ಶ್ರೀವಲ್ಲಿ ರಶ್ಮಿಕಾಳ ಸಖತ್ ಸಮಾಚಾರ: ಸಿಂಗಲ್ ನಾನಲ್ಲ.. ಪ್ರೀತಿ ಸುಳ್ಳಲ್ಲ.. ಎಂದಿದ್ದ ದೇವರಕೊಂಡ!

ಟಾಕ್ ಶೋನಲ್ಲಿ ಆಲಿಯಾ ಭಟ್ : 

ಆಲಿಯಾ ಭಟ್, ಕಾಜೋಲ್ ಮತ್ತು ಟ್ವಿಂಕಲ್ ಖನ್ನಾ ಅವರ ಟಾಕ್ ಶೋನಲ್ಲಿ ಪಾಲ್ಗೊಂಡಿದ್ದರು. ಆಲಿಯಾ ಜೊತೆ ವರುಣ್ ಧವನ್ ಈ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಶೋನಲ್ಲಿ ಟ್ರೋಲರ್ ಪ್ರಶ್ನೆಗೆ ಆಲಿಯಾ ಉತ್ತರ ನೀಡಿದ್ದಾರೆ. ಹೆರಿಗೆ ನಂತ್ರ ಆಲಿಯಾ ತಮ್ಮ ವೇಟ್ ಬಗ್ಗೆ ಟ್ರೋಲರ್ ಬಾಯಿಗೆ ಆಹಾರವಾಗಿದ್ದರು. ಅನೇಕರು ಆಲಿಯಾ ತೂಕದ ಬಗ್ಗೆ ಕಮೆಂಟ್ ಮಾಡಿದ್ದರು. ಅಸ್ವಾಭಾವಿಕವಾಗಿ ಆಲಿಯಾ ಭಟ್ ತೂಕ ಇಳಿಸಿಕೊಂಡಿದ್ದಾರೆ, ಇಷ್ಟು ಬೇಗ ತೂಕ ಇಳಿಸಿಕೊಳ್ಳುವ ಅಗತ್ಯ ಏನಿತ್ತು, ಇನ್ನೊಂದು ಸ್ವಲ್ಪ ಟೈಂ ತೆಗೆದುಕೊಳ್ಳಿ ಎಂಬೆಲ್ಲ ಮಾತು ಕೇಳಿ ಬಂದಿತ್ತು. ಶೋನಲ್ಲಿ ಆಲಿಯಾ, ಯಾವುದೇ ಹೆಚ್ಚುವರಿ ಡಯಟ್, ವರ್ಕ್ ಔಟ್, ಔಷಧಿ ಇಲ್ದೆ ನೈಸರ್ಗಿಕವಾಗಿ ನನ್ನ ತೂಕ ಇಳಿದಿದೆ ಎಂದಿದ್ದಾರೆ. ಆಲಿಯಾ ಭಟ್ ನವೆಂಬರ್ 6, 2022 ರಂದು ತಮ್ಮ ಮಗಳು ರಿಯಾಗೆ ಜನ್ಮ ನೀಡಿದ್ದಾರೆ.

ಒಂದು ಪ್ರದರ್ಶನಕ್ಕೆ ಒದ್ದಾಡಿದ ದಿನದಿಂದ 5000 ಹೌಸ್‌ಫುಲ್‌ ಶೋವರೆಗೆ: ರಿಷಬ್ ಶೆಟ್ಟಿ

ಬ್ರೆಸ್ಟ್ ಫೀಟಿಂಗ್ ನಿಂದ ತೂಕ ಇಳಿಕೆ ? : 

ಬ್ರೆಸ್ಟ್ ಫೀಡಿಂಗ್ ತೂಕ ಇಳಿಕೆಗೆ ನೈಸರ್ಗಿಕವಾಗಿ ಸಹಾಯ ಮಾಡುತ್ತೆ. ಪ್ರತಿದಿನ 400-500 ಕ್ಯಾಲೊರಿ ಬರ್ನ್ ಆಗುತ್ತೆ. ಆದ್ರೆ ಪ್ರತಿ ಮಹಿಳೆಯ ದೇಹವನ್ನು ಇದು ಅವಲಂಭಿಸಿದೆ. ಡಯಟ್ಅಥವಾ ಜಿಮ್ ವರ್ಕ್ ಔಟ್ ಮಾಡಿ ಬೆವರಿಳಿಸಿದ್ರೆ ಮಾತ್ರ ತೂಕ ಇಳಿಯುತ್ತೆ ಅನ್ನೋದು ತಪ್ಪು. ಮೊದಲ ಬಾರಿ ಅಮ್ಮನಾದವರು ಇದ್ರ ಬಗ್ಗೆ ತಿಳಿಯಬೇಕಿದೆ. ಈಗಿನ ದಿನಗಳಲ್ಲಿ ಅನೇಕ ಮಹಿಳೆಯರು ಬಾಹ್ಯ ಸೌಂದರ್ಯದ ನೆಪ ಹೇಳಿ ಬ್ರೆಸ್ಟ್ ಫೀಡಿಂಗ್ ಮಿಸ್ ಮಾಡ್ತಿದ್ದಾರೆ. ಇದ್ರಿಂದ ತಾಯಿ ಹಾಗೂ ಮಗು ಇಬ್ಬರಿಗೂ ನಷ್ಟ.