ವಿಜಯ್ ದೇವರಕೊಂಡ ರಶ್ಮಿಕಾಗೆ ಉಂಗುರು ಹಾಕಿದ್ದಾರೆ. ಇಷ್ಟು ದಿನ ನಾವಿಬ್ರು ಫ್ರೆಂಡ್ಸ್ ಫ್ರೆಂಡ್ಸ್ ಅಂತ ಹೇಳ್ಕೊಂಡು ಎಲ್ಲರ ಫಾಲೋವರ್ಸ್ ಕಿವಿಗೆ ಹೂ ಇಡುತ್ತಿದ್ದ ರಶ್ಮಿಕಾ ಹಾಗು ವಿಜಯ್ ದೇವರಕೊಂಡ ಈಗ ಅಧಿಕೃತವಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ಶ್ರೀವಲ್ಲಿ ರಶ್ಮಿಕಾ ಮಂದಣ್ಣಗೆ ಕೂಡಿ ಬಂತು ಕಂಕಣ ಭಾಗ್ಯ.. ಪ್ರೀತಿಸಿದ ಹುಡುಗನಿಗೇ ರಶ್ಮಿಕಾ ಹಾಕಿದ್ಲು ಉಂಗುರಾ. ಅಂತು ಇಂತು ರಶ್ಮಿಕಾ ಬಳಗದಿಂದ ಬಹು ದೊಡ್ಡ ಸಮಾಚಾರವೊಂದು ಹೊರ ಬಂದಿದೆ. ನಟಿ ರಶ್ಮಿಕಾ ಮಂದಣ್ಣ ಪ್ರೀತಿಸಿದ ಹುಡುಗ ಮನದರಸ ವಿಜಯ್ ದೇವರಕೊಂಡ ಜೊತೆ ದಾಂಪತ್ಯ ಶುರು ಮಾಡುತ್ತಿದ್ದಾರೆ. ಅದರ ಮೊದಲ ಹೆಜ್ಜೆಯಂತೆ ಇಬ್ಬರು ಉಂಗುರ ಬದಲಿಸಿಕೊಂಡಿದ್ದಾರೆ. ಹಾಗಾದ್ರೆ ಗೀತಾ ಗೋವಿಂದನ ಎಂಗೇಜ್ಮೆಂಟ್ ಹೇಗಾಯ್ತು..? ಎಲ್ಲಾಯ್ತು.? ಸಿನಿ ಬಜಾರ್ ನಲ್ಲಿ ಸುದ್ದಿಯಲ್ಲಿರುವುದಕ್ಕೆ, ಟಾಕ್ ಆಫ್ ದಿ ಟೌನ್ ಎನಿಸಿಕೊಳ್ಳುವುದಕ್ಕೆ ಕೆಲವು ನಟ-ನಟಿಯರು ಇನ್ನಿಲ್ಲದ ಕಸರತ್ತು ನಡೆಸ್ತಾರೆ. ಆದ್ರೆ, ಚಮಕ್ ಚೆಲುವೆ ರಶ್ಮಿಕಾ ಮಂದಣ್ಣ ಮಾತ್ರ ಏನು ಮಾಡದೆಯೂ ಸುದ್ದಿಯಲ್ಲಿರ್ತಾರೆ. ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗ್ತಾ, ಸಿನಿದುನಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಾರೆ.
ಇವತ್ತು ಎಂಗೇಜ್ ಮೆಂಟ್ ವಿಚಾರವಾಗಿ ಸುದ್ದಿಮನೆಗೆ ಬಂದಿದ್ದಾರೆ ಶ್ರೀವಲ್ಲಿ. ಕರ್ನಾಟಕದಿಂದ ಹೋಗಿ ಟಾಲಿವುಡ್, ಕಾಲಿವುಡ್, ಬಾಲಿವುಡ್ನಲ್ಲಿ ಮೋಡಿ ಮಾಡಿ, ಇಂಡಿಯನ್ ಇಂಡಸ್ಟ್ರಿಯಲ್ಲಿ ಸೌಂಡ್ ಫ್ಲಸ್ ಟ್ರೆಂಡ್ ಸೃಷ್ಟಿಸಿರುವ ಕಿರಿಕ್ ಬ್ಯೂಟಿ, ಸ್ಟಾರ್ ನಾಯಕಿಯರನ್ನೆಲ್ಲಾ ಸೈಡಿಗೆ ಸರಿಸಿ ನಂ1 ನಾಯಕಿ ಪಟ್ಟಕ್ಕೇರಿದ್ದಾಳೆ. ಕಾಲಿವುಡ್, ಟಾಲಿವುಡ್, ಬಾಲಿವುಡ್ ಹೀಗೆ ಎಲ್ಲಾ ಇಂಡಸ್ಟ್ರಿಯಲ್ಲೂ ಮೆರವಣಿಗೆ ಹೊರಟಿರುವ ಕೂರ್ಗ್ ಕುವರಿ ನಿಶ್ಚಿತಾರ್ಥದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಯೆಸ್, ಬಾಲಿವುಡ್ ಹಾಗು ಟಾಲಿವುಡ್ ಬಣ್ಣದ ಜಗತ್ತಲ್ಲಿ ನಂಬರ್ 1 ನಾಯಕಿ ಪಟ್ಟಕ್ಕೇರಿರುವ ರಶ್ಮಿಕಾ ಮಂದಣ್ಣ ಎಂಗೇಜ್ ಮೆಂಟ್ ಆಗಿದ್ದಾರೆ. ಹೀಗೊಂದು ಪಕ್ಕಾ ಸುದ್ದಿ ಬಾಲಿವುಡ್ಇಂದ ಎದ್ದು ಬಂದಿದೆ. ರಶ್ಮಿಕಾಗೆ ಉಂಗುರ ತೊಡಿಸುವ ಆ ಚೆಲುವ ಯಾರು ಅನ್ನೋದು ನಿಮಗೆ ಗೊತ್ತಾಗಿರಬೇಕಲ್ಲ. ಗೊತ್ತಿಲ್ಲದವರಿಗೆ ಈಗ ಉತ್ತರ ಸಿಕ್ಕಿದೆ.
ಟಾಲಿವುಡ್ ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊಂಡ ರಶ್ಮಿಕಾಗೆ ಉಂಗುರು ಹಾಕಿದ್ದಾರೆ. ಇಷ್ಟು ದಿನ ನಾವಿಬ್ರು ಫ್ರೆಂಡ್ಸ್ ಫ್ರೆಂಡ್ಸ್ ಅಂತ ಹೇಳ್ಕೊಂಡು ಎಲ್ಲರ ಫಾಲೋವರ್ಸ್ ಕಿವಿಗೆ ಹೂ ಇಡುತ್ತಿದ್ದ ರಶ್ಮಿಕಾ ಹಾಗು ವಿಜಯ್ ದೇವರಕೊಂಡ ಈಗ ಅಧಿಕೃತವಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥದ ಬಗ್ಗೆ ಈ ಹಿಂದೆಯೂ ಹತ್ತಾರು ಗಾಸಿಪ್ಗಳು ಬಂದಿದ್ವು. ಆದ್ರೆ ಈಗ ಬಂದಿರೋದು ಪಕ್ಕಾ ಸುದ್ದಿ. ಇಬ್ಬರು ಉಂಗುರ ಬದಲಿಸಿಕೊಂಡು ಸಪ್ತಪತಿ ತುಳಿದು ಸತಿ ಪತಿಗಳಾಗಿ ಬಾಳೋದಕ್ಕೆ ತಯಾರಿ ಮಾಡುತ್ತಿದ್ದಾರೆ. ಇಬ್ಬರ ನಿಶ್ಚಿತಾರ್ಥದ ವಿಚಾರ ಅಧಿಕೃತ ಘೋಷಣೆಯೊಂದೇ ಭಾಗಿ ಇದೆ. ಈ ಬಡಾ ಬ್ರೇಕಿಂಗ್ ಸಮಾಚಾರ ಸಿನಿರಂಗದಲ್ಲಿ ಹಲ್ ಚಲ್ ಎಬ್ಬಿಸ್ತಿದೆ. ರಶ್ಮಿಮಾ ಮಂದಣ್ಣ ಶೂಟಿಂಗ್ ಇಲ್ಲ ಕೆಲಸ ಇಲ್ಲ ಅಂದ್ರೆ ಕಾಲಿ ಕೂರ್ತ ಇರಲಿಲ್ಲ. ಕರ್ನಾಟಕದ ಕೂರ್ಗು ಬರ್ತಾ ಇರಲಿಲ್ಲ.
ರಶ್ ಡೈರೆಕ್ಟರ್ ಆಗಿ ಹೋಗ್ತಾ ಇದ್ದದ್ದು, ಹೈದರಾಬಾದ್ಗೆ.. ಅಲ್ಲಿರೋ ತನ್ನ ಮನದರಸ ವಿಜಯ್ ದೇವರಕೊಂಡ ಮನೆಗೆ. ಈಗ ಹೈದರಾಬಾದ್ನಲ್ಲಿರೋ ವಿಜಯ್ ದೇವರಕೊಂಡ ಮನೆಯಲ್ಲೇ ಇಬ್ಬರು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಶ್ಮಿಕಾ ಬಾಲಿವುಡ್ ತಾರೆ. ವಿಜಯ್ ದೇವರಕೊಂಡ ತೆಲುಗು ಸ್ಟಾರ್. ಇಬ್ಬರು ಕಲಾವಿದರೆ. ಇವರ ಎಂಗೇಜ್ಮೆಂಟ್ ಅಂದ್ರೆ ಅದ್ಧೂರಿಯಾಗಿ ಎಲ್ಲರ ಸಮ್ಮುಖದಲ್ಲಿ ನಡೆಯುತ್ತೆ ಅನ್ನೋ ನಿರೀಕ್ಷೆ ಇರುತ್ತೆ. ಆದ್ರೆ ಇಬ್ಬರು ಗುಟ್ಟಾಗಿ ಕದ್ದು ಮುಚ್ಚಿ. ಯಾರಿಗೂ ಗೊತ್ತಾಗದ ಹಾಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಬ್ಬರ ಕುಟುಂಬ ಸದಸ್ಯರು, ಹಾಗು ತೀರಾ ಆಪ್ತ ಕೆಲ ಸ್ನೇಹಿತರಿಗಷ್ಟೆ ಕರೆದು ಉಂಗುರ ಹಾಕಿಕೊಂಡಿದ್ದಾರೆ. ಇಬ್ಬರ ಎಂಗೇಜ್ಮೆಂಟ್ ಎಷ್ಟು ಗುಟ್ಟಾಗಿ ನಡೆದಿದೆ ಅಂದ್ರೆ ಒಂದೇ ಒಂದು ಫೋಟೋ ಕೂಡ ರಿವಿಲ್ ಮಾಡಿಲ್ಲ. ಬಹುಶಃ ದೀಪಿಕಾ ಪಡುಕೋಣೆ ನಂತರ ಇಂಡಿಯನ್ ಸಿನಿಇಂಡಸ್ಟ್ರಿಯಲ್ಲಿ ಇಷ್ಟು ದೊಡ್ಡ ಸಕ್ಸಸ್ ಕಂಡ ನಟಿಮಣಿ ಅಂದ್ರೆ ಅದು ರಶ್ಮಿಕಾ ಮಂದಣ್ಣ.
ಕಿರಿಕ್ ಪಾರ್ಟಿ ಸಿನಿಮಾದಿಂದ ಇಂಡಸ್ಟ್ರಿಗೆ ಬಂದ ಈ ಬ್ಯೂಟಿ ಮೊದಲ ಚಿತ್ರದಿಂದಲೂ ಮುಟ್ಟಿದ್ದೆಲ್ಲಾ ಚಿನ್ನ. ನೂರಾರು ಕೋಟಿ ಬಂಡವಾಳ ಹಾಕಿರೋ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಹಸೆಮಣೆ ಏರೋದಕ್ಕೂ ಟೈಂ ಫಿಕ್ಸ್ ಮಾಡಿದ್ದಾರೆ. ಕಳೆದ 6 ವರ್ಷಗಳಿಂದಲೂ ರೌಡಿ ಬಾಯ್ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಡೇಟಿಂಗ್ ಮಾಡ್ತಾ ಇದ್ದು, ಸಿನಿಮಾದ ಕೆಲಸದ ನಡು ನಡುವೆ ಆಗಾಗ ಭೇಟಿ ಆಗುತ್ತಿದ್ರು. ಟಾಲಿವುಡ್ನ ಲಿಲ್ಲಿ ರಶ್ಮಿಕಾ ಬ್ಯಾಕ್ ಟು ಬ್ಯಾಕ್ ಸಕ್ಸಸ್ ಸಿನಿಮಾಗಳನ್ನೇ ಕೊಟ್ಟು ಬಂದಿದ್ದಾರೆ. ರಶ್ಮಿಕಾ ಇದ್ದಲ್ಲಿ ಗೆಲುವು ನಿಶ್ಚಿತಾ ಅನ್ನೋ ಹಾಗಾಗಿದೆ. ಆದ್ರೆ ಹೀಗೆ ಸಕ್ಸಸ್ಫುಲ್ ರನ್ನಿಂಗ್ ರೇಸ್ನಲ್ಲಿ ಇರುವಾಗ್ಲೆ ತನ್ನ ಖರಿಯರ್ನ ಮತ್ತೊಂದು ಚಾಪ್ಟರ್ ತೆರೆದಿಟ್ಟಿದ್ದಾರೆ ರಶ್ಮಿಕಾ. ಅದು ಮದುವೆ ಚಾಪ್ಟರ್, ಗುಟ್ಟಾಗಿ ಎಂಗೇಜ್ಮೆಂಟ್ ಆದ್ರೆ ಏನಂತೆ, ಅದ್ಧೂರಿಯಾಗಿ ಮದುವೆ ಆಗುತ್ತೇವೆ ಅಂತ ಆಫ್ತರ ಬಳಿ ಹೇಳಿಕೊಂಡಿರೋ ಈ ಗೀತಾ ಗೋವಿಂದ 2026ರ ಫೆಬ್ರವರಿ ತಿಂಗಳಲ್ಲಿ ಮದುವೆ ಆಗುತ್ತಿದ್ದಾರೆ.
ಸಿನಿಮಾ ಜಗತ್ತಲ್ಲಿ ಈಗ ಒಂದು ಟ್ರೆಂಡ್ ಇದೆ. ಅದು ಡೆಸ್ಟಿನೇಷನ್ ವೆಡ್ಡಿಂಗ್ ಟ್ರೆಂಡ್.. ಅನುಷ್ಕಾ ಶರ್ಮ, ದೀಪಿಕಾ ಪಡುಕೋಣೆ ಹಾಗು ರಣ್ವೀರ್ ಸಿಂಗ್, ಪ್ರಿಯಾಂಕ ಚೋಪ್ರಾ, ಕಿಯಾರಾ ಅಡ್ವಾನಿ ಸೇರಿದಂತೆ ಹಲವು ನಟಿಯರು ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡಿದ್ರು. ಅಂದ್ರೆ ತನ್ನೂರಿನಿಂದ ವಿದೇಶ ಅಥವ ಬೇರೆ ರಾಜ್ಯದ ಪ್ರಸಿದ್ಧ ಸ್ಥಳಗಳಿಗೆ ಹೋಗಿ ಆಪ್ತರಿಗಷ್ಟೇ ಆಹ್ವಾನಿಸಿ ಮದುವೆ ಆಗೋದು. ಇದೇ ಪದ್ದತಿಯನ್ನ ನಟಿ ರಶ್ಮಿಕಾ ಮಂದಣ್ಣ ಹಾಗು ವಿಜಯ್ ದೇವರಕೊಂಡ ಅನುರಿಸ್ತಾರಂತೆ. ಈ ಜೋಡಿ ಫೆಬ್ರವರಿಯಲ್ಲಿ ವಿದೇಶದಲ್ಲಿ ಡೆಸ್ಟಿನೇಷನ್ ವೆಂಡ್ಟಿಂಗ್ ಆಗ್ತಾರೆ. ವಿಜಯ್ ರಶ್ಮಿಕಾ ತಮ್ಮ ಮಧ್ಯೆ ಜೆಸ್ಟ್ ಫ್ರೆಂಡ್ಶಿಪ್ ಅಷ್ಟೇ ಅಂತ ಹೇಳಿದ್ರೂ, ಇಬ್ಬರು ಆ ಸ್ನೇಹವನ್ನ ಮರೆ ಮಾಚುವಲ್ಲಿ ಸೋತಿದ್ರು. ಯಾಕಂದ್ರೆ ಇಬ್ಬರು ಗುಟ್ಟಾಗಿ ಆಗಾಗ ಭೇಟಿ ಮಾಡುತ್ತಿದ್ರೂ ಅದು ರಟ್ಟಾಗುತ್ತಿತ್ತು.
ಮುಂಬೈ ರೆಸ್ಟೋರೆಂಟ್, ಹೈದರಾಬಾದ್ ಬೀದಿ, ವಿದೇಶದಲ್ಲಿ ಒಟ್ಟಿಗೆ ಸುತ್ತಾಟಕ್ಕೆ ಹಲವು ಕುರುಹುಗಳು ಸಿಕ್ಕಿದ್ವು. ಇಬ್ಬರ ಔಟಿಂಗ್ ವಿಚಾರ ಗೊತ್ತಾಗ್ತಿದ್ದ ಹಾಗೆ ಫ್ಯಾನ್ಸ್ ಡೇಟಿಂಗ್ ಜೋರು ಅನ್ನುತ್ತಿದ್ರು. ವಿಜಯ್ ದೇವರಕೊಂಡ-ರಶ್ಮಿಕಾ ನಡುವೆ ಕುಚ್ ಕುಚ್ ನಡೀತಾ ಇದೆ ಅನ್ನೋದು ಅಭಿಮಾನಿಗಳ ಖಚಿತ ಅನುಮಾನ. ಈ ಇಬ್ಬರೂ ಕೂಡ ಇದು ಸುಳ್ಳು ಅಂತಲೂ ಹೇಳಿಲ್ಲ.. ಜೊತೆಗೆ ಓಡಾಡ್ತಾ ಫ್ಯಾನ್ಸ್ ತಲೆಗೆ ಹುಳ ಬಿಡೋದನ್ನ ನಿಲ್ಲಿಸಿರಲಿಲ್ಲ. ಇತ್ತೀಚಿಗೆ ಇಂಟರ್ವ್ಯೂ ವೊಂದರಲ್ಲಿ ಮಾತನಾಡಿದ್ದ ವಿಜಯ್ ದೇವರಕೊಂಡ ನಾನು ಸಿಂಗಲ್ ಅಲ್ಲ ಅಂತ ಒಪ್ಪಿಕೊಂಡಿದ್ರು. ನಟಿಯೊಬ್ಬರ ಜೊತೆಗೆ ರಿಲೇಷನ್ಶಿಪ್ನಲ್ಲಿದ್ದೇನೆ ಅಂತ ಬಿಂದಾಸ್ ಆಗಿ ಹೇಳಿದ್ರು. ರಶ್ಮಿಕಾ ಹೆಸರು ಹೇಳದೇ ಹೋದ್ರೂ ಅವಳೇ ನನ್ನ ಗೆಳತಿ ಅನ್ನೋ ಹಿಂಟ್ ಕೊಟ್ಟಿದ್ರು.
‘ನನಗೆ ಈಗ 35 ವರ್ಷ ವಯಸ್ಸು, ನಿಮಗೆ ನಾನು ಸಿಂಗಲ್ ಅಂತ ಈಗಲೂ ಅನ್ನಿಸುತ್ತಾ..? ನಾನು ಸಹನಟಿಯೊಬ್ಬರ ಜೊತೆ ಪ್ರೀತಿಯಲ್ಲಿರೋದು ನಿಜ.’ ‘ನನ್ನ ಪ್ರೀತಿ ಅನ್ಕಂಡೀಷನಲ್ ಅಲ್ಲ. ನನ್ನ ಪ್ರೀತಿಗೆ ಕೆಲವು ನಿರೀಕ್ಷೆಗಳಿವೆ. ನಿರೀಕ್ಷೆಗಳು ಇಲ್ಲದೆ ಯಾರೂ ಯಾರನ್ನೂ ಪ್ರೀತಿ ಮಾಡುವುದಿಲ್ಲ. ಕೆಲವರದ್ದು ಸಣ್ಣ-ಪುಟ್ಟ ನಿರೀಕ್ಷೆಗಳಿರುತ್ತವೆ, ಕೆಲವರದ್ದು ದೊಡ್ಡ ನಿರೀಕ್ಷೆಗಳು ಇರಬಹುದು. ಹಾಗೆಯೇ ನನ್ನದು ಸಹ ನಿರೀಕ್ಷೆಗಳು ಇರುವ ಪ್ರೀತಿಯೇ, ಬೇಷರತ್ ಆಗಿ ಪ್ರೀತಿಸಲು ಆಗುವುದಿಲ್ಲ. ಬೇಷರತ್ ಪ್ರೀತಿ ಎಂಬುದೆಲ್ಲ ಕ್ಲೀಷೆ ಎಂದಿದ್ದರು’. ಪುಷ್ಪ 2 ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮ ಚೆನ್ನೈನಲ್ಲಿ ನಡೆದಿತ್ತು. ಆಗ ಸ್ಟೇಜ್ ಮೇಲೆ ತನ್ನ ಮದುವೆ ಬಗ್ಗೆ ಮಾತನಾಡಿದ್ದ ರಶ್ಮಿಕಾ ಆಂಕರ್ ಕೇಳಿದ್ದ ಪ್ರಶ್ನೆಗೆ ನಾಚುತ್ತಲೇ ಉತ್ತರ ಕೊಟ್ಟಿದ್ರು. ನೀವು ಚಿತ್ರರಂಗದಲ್ಲಿ ಇರೋ ಹುಡುಗನನ್ನ ಮದುವೆ ಆಗ್ತೀರಾ ಅಂತ ಕೇಳಿದ್ದಕ್ಕೆ ಅದು ಎಲ್ಲರಿಗೂ ಗೊತ್ತಿರೋ ವಿಷಯ ಅಲ್ವಾ ಅಂತ ಹೇಳಿ ವಿಜಯ್ ಜೊತೆ ರಿಲೇಷನ್ ಶಿಪ್ಅನ್ನ ಧೃಡ ಪಡಿಸಿದ್ರು.
ನಾನು ಹೈದರಾಬ್ನವಳು
ರಶ್ಮಿಕಾ ತನ್ನ ಪ್ರತಿ ಹೆಜ್ಜೆಯಲ್ಲೂ ವಿಜಯ್ ದೇವರಕೊಂಡ ಕುಟುಂಬವನ್ನ ಕರೆದುಕೊಂಡು ಹೋಗ್ತಾರೆ. ಪುಷ್ಪ ಸಿನಿಮಾಗಳು ಬಿಡುಗಡೆ ಆದಾಗ ವಿಜಯ್ ದೇವರಕೊಂಡ ಕುಟುಂಬಕ್ಕೆ ಸ್ಪೆಷಲ್ ಶೋ ಹಾಕಿ ತೋರಿಸಿದ್ರು, ವಿಜಯ್ ದೇವರಕೊಂಡನ ತಮ್ಮ ಆನಂದ್ ದೇವರಕೊಂಡನ ಸಿನಿಮಾದ ಮಹೂರ್ಥದಲ್ಲಿ ಭಾಗಿ ಆಗಿ ಶುಭ ಹಾರೈಸಿದ್ರು. ಅಷ್ಟೆ ಅಲ್ಲ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ನಾನು ಹೈದರಾಬ್ನವಳು ಅಂತ ಹೇಳಿ ದೊಡ್ಡ ವಿವಾದಕ್ಕೆ ಕಾರಣ ಆಗಿದ್ರು. ಆದ್ರೆ ಈಗ ಹೈದರಾಬಾದ್ ಹುಡುಗ ವಿಜಯ್ ಜೊತೆ ಎಂಗೇಜ್ಮೆಂಟ್ ಆಗಿರೋದನ್ನ ನೋಡಿದ್ರೆ ರಶ್ಮಿಕಾ ಹೇಳಿದ್ರಲ್ಲೇನು ತಪ್ಪಿಲ್ಲ. ಯಾಕಂದ್ರೆ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅನ್ನೋ ಹಾಗೆ ರಶ್ಮಿಕಾ ಹೈದರಾಬಾದ್ನ ಸೊಸೆ ಆಗ್ತಿದ್ದಾರೆ. ಅಂದ್ಮೇಲೆ ಶ್ರೀವಲ್ಲಿ ಹೈದರಾಬಾದ್ವರೇ ಅಲ್ಲವೇ.
