Asianet Suvarna News Asianet Suvarna News

ಇದು ಗುಂಡಿಗೆ ಗಟ್ಟಿ ಇದ್ದವರಿಗೆ ಮಾತ್ರ! ಆಲಿಯಾ ಭಟ್​ ನಗು ಕೇಳುವ ತಾಕತ್ತು ನಿಮಗಿದ್ಯಾ?

ನಗುವಿನಿಂದ ಜೀವನ ಸುಖಮಯ, ಆದರೆ ಆಲಿಯಾ ಭಟ್ ನಗುವಿನ ಕಾರಣ ಏನು ಎಂದು ತಿಳಿದರೆ ನೀವು ಬೆಚ್ಚಿ ಬೀಳುವಿರಿ. ವಿವಿಧ ಸಂದರ್ಭಗಳಲ್ಲಿ ಆಲಿಯಾ ಭಟ್ ನಗುವುದನ್ನು ಈ ಲೇಖನದಲ್ಲಿ ನೋಡಿ.

Alia Bhatt laughing on various occasions have gone viral and fans are tired of hearing laugh suc
Author
First Published Aug 16, 2024, 12:27 PM IST | Last Updated Aug 16, 2024, 12:27 PM IST

ಸಂತೋಷವೆಂದರೆ ಅದು ಕೇವಲ ನಗು ಅಥವಾ ಮುಗುಳ್ನಗೆ ಎಂದರ್ಥವಲ್ಲ. ಸಂತೋಷವೆಂದರೆ ಇದಕ್ಕಿಂತಲೂ ಮಿಗಿಲಾದುದು. ಸಂತೋಷ ಎಂದರೆ ನೀವು ಜೀವನದ ಆಂತರ್ಯದಲ್ಲಿದ್ದೀರಿ ಎಂದರ್ಥ. ನೀವು ಅದನ್ನು ಒಂದು ನಿರ್ದಿಷ್ಟವಾದ ಅಭಿವ್ಯಕ್ತಿಗೆ ಕಟ್ಟಿಹಾಕಿದ ತಕ್ಷಣ, ನಿಮ್ಮ ಸಂತೋಷವು ಪ್ರತಿ ಕ್ಷಣ ನಿಮ್ಮೊಂದಿಗಿರುವುದಿಲ್ಲ ಎಂಬುದನ್ನು ನೀವು ಖಚಿತಪಡಿಸಿಕೊಂಡಂತೆಯೇ ಸರಿ... ಇದು ಸದ್ಗುರು ಜಗ್ಗಿ ವಾಸುದೇವ ಅವರು ಹೇಳಿರೋ ಮಾತು. ಇದರ ಅರ್ಥ ಸಂತೋಷವಾಗಿರುವುದನ್ನು ತೋರಿಸಲು ನಗಲೇಬೇಕೆಂದೇನೂ ಇಲ್ಲ, ಕೆಲವರು ದುಃಖದಿಂದ ಇರುವಾಗಲೂ ಅದನ್ನು ಮರೆಮಾಚಲು ನಗುವುದು ಇದೆ. ಆದರೆ ನಾವು ಇಲ್ಲಿ ಹೇಳಹೊರಟಿರುವುದು ಈ ನಗುವಿನ ಬಗ್ಗೆ ಅಲ್ಲ. ಬದಲಿಗೆ ಗಹಗಹಿಸಿ ನಗುವ ಬಗ್ಗೆ. ಅದು ಯಾರ ನಗು ಅಂತೀರಾ? ಬಾಲಿವುಡ್​ ನಟಿ ಆಲಿಯಾ ಭಟ್​ ನಗು! 

ಹೌದು. ನಗುವಿನಿಂದ ಜೀವನ ಸುಖಮಯ. ನಮ್ಮ ಜೀವನದ ಮೂಲ ಮಂತ್ರ ನಗುವೇ ಆಗಿರಬೇಕು ಎನ್ನಲಾಗುತ್ತದೆ. ಅದು ಸಂತೋಷದ ನಗುವಾಗಿರಬೇಕು. ಹೀಗೆ ಸಂತೋಷದಿಂದ  ನಗುನಗುತ್ತಾ ಇದ್ದರೆ ಬರುವ ಕಷ್ಟಗಳನ್ನು ಸುಲಭವಾಗಿ ಎದುರಿಸಬಹುದು. ನಮಗೆ ಅನುಕೂಲಕರವಾದ ಸಂದರ್ಭವನ್ನು ನಾವೇ ಸ್ವತಹ ಸೃಷ್ಟಿ ಮಾಡಿಕೊಳ್ಳಬಹುದು. ಮನುಷ್ಯನಿಗೆ ಬರುವ ಹಲವಾರು ಕಾಯಿಲೆಗಳಿಗೆ ಇಂದಿಗೂ ಸಹ ನಗುವಿಗಿಂತ ಒಳ್ಳೆಯ ಔಷಧಿ ಇಲ್ಲ ಎಂದು ವೈದ್ಯರು ಹೇಳುತ್ತಾರೆ. ನಕ್ಕರೆ ಜೀವನವೇ ಸ್ವರ್ಗ ಎಂದು ಹೇಳುತ್ತಾರೆ. ಯಾವ ಮನುಷ್ಯ ಹೆಚ್ಚು ಖುಷಿಯಾಗಿರುತ್ತಾನೆ ಅವನಿಗೆ ಆಯಸ್ಸು ಹೆಚ್ಚು ಎಂಬ ಮಾತಿದೆ. ನಗುವಿನಿಂದ ಮನಸ್ಸಿನ ಬೇಸರ, ಮನಸ್ಸಿನ ಖಿನ್ನತೆ ಎಲ್ಲವೂ ದೂರವಾಗುತ್ತದೆ ಎನ್ನುವುದೂ ಇದೇ ಕಾರಣಕ್ಕೆ. ಹೃದಯಪೂರ್ವಕವಾಗಿ ಮನಸಾರೆ  ನಕ್ಕರೆ  ಒತ್ತಡ ಮತ್ತು ಮನಸ್ಸಿನ ಉದ್ವೇಗ ಕಡಿಮೆಯಾಗುತ್ತದೆ.  5 ನಿಮಿಷಗಳ ನಗು ದೇಹದ ಮಾಂಸಖಂಡಗಳನ್ನು ಸುಮಾರು 45 ನಿಮಿಷ ವಿಶ್ರಾಂತ ಸ್ಥಿತಿಗೆ ತಲುಪಿಸುತ್ತದೆ ಎಂದು ಅಧ್ಯಯನ ಹೇಳಿದೆ.

ಗರ್ಭಿಣಿ ದೀಪಿಕಾಗೆ ಇದೆಂಥ ಅಗ್ನಿಪರೀಕ್ಷೆನಪ್ಪಾ? ಯಾವ ಹೆಣ್ಣಿಗೂ ಇಂಥ ಸ್ಥಿತಿ ಬರಬಾರದು ಅಂತಿರೋ ಫ್ಯಾನ್ಸ್​

ಹಾಗೆನೇ ನಗುವಿನಲ್ಲಿ ಹಲವಾರು ಪ್ರಕಾರಗಳು ಇರುವುದು ಗೊತ್ತೇ ಇದೆ. ಮುಗುಳ್ನಗೆ, ಹಲ್ಲು ಕಿರಿದು ನಗುವುದು, ಬೇರೆಯವರನ್ನು ನೋಡಿ ನಗುವುದು, ಗಹಗಹಿಸಿ ನಗುವುದು, ಹಂಚು ಹಾರಿಹೋಗುವಂತೆ ನಡುವುದು, ಬಿದ್ದೂ ಬಿದ್ದೂ ನಗುವುದು... ಅಬ್ಬಾ ನಗುವಿನ ಬಗ್ಗೆ ಹೇಳುತ್ತಾ ಹೋದಷ್ಟೂ ಕಡಿಮೆಯೇ. ಇದೀಗ ನಟಿ ಆಲಿಯಾ ಭಟ್​ ನಕ್ಕಿರುವ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ, ರಣಬೀರ್​ ಸಿಂಗ್​ ಸೇರಿದಂತೆ ಹಲವು ನಟ-ನಟಿಯರನ್ನು ನೋಡಬಹುದು. ಇದು ಹಲವು ವಿಡಿಯೋಗಳ ತುಣುಕುಗಳನ್ನು ಒಳಗೊಂಡಿರುವ ಒಂದು ವಿಡಿಯೋ. ಇದರಲ್ಲಿ ಹೈಲೈಟ್​ ಆಗಿರುವುದು ಆಲಿಯಾ ಭಟ್​ ನಗು!

ಹೌದು. ಆಲಿಯಾ ಭಟ್​ ನಗು ಕೇಳಿ ನಮ್ಮ ಎದೆ ಒಡೆದೇ ಹೋಯ್ತು ಎಂದು ಹಲವರು ತಮಾಷೆ  ಮಾಡುತ್ತಿದ್ದಾರೆ. ಆ ಪರಿ ಗಹಗಹಿಸಿ ನಗುತ್ತಾರೆ ಆಲಿಯಾ ಭಟ್​. ಇದು ಕೇವಲ ಒಂದು ಸಮಯದಲ್ಲಿ ನಡೆದ ಘಟನೆಯಲ್ಲ. ಬದಲಿಗೆ ವಿವಿಧ ಸಂದರ್ಶನಗಳಲ್ಲಿ, ವಿವಿಧ ಸಂದರ್ಭಗಳಲ್ಲಿ, ವಿವಿಧ ಕಾರ್ಯಕ್ರಮ- ಘಟನೆಗಳಲ್ಲಿ ಆಲಿಯಾ ಭಟ್​ ನಗುವುದನ್ನು ಈ ವಿಡಿಯೋದಲ್ಲಿ ನೋಡಬಹುದು, ಕೇಳಬಹುದು. ಈ ಪರಿಯಲ್ಲಿ ನಟಿ ನಗುವುದು ಯಾಕೆ ಎನ್ನುವುದು ಮಾತ್ರ ಪ್ರಶ್ನೆ. ಆದರೆ ಎಲ್ಲಾ ವಿಡಿಯೋಗಳಲ್ಲಿಯೂ ಆಲಿಯಾ ಕೃತಕವಾಗಿಯಂತೂ ನಕ್ಕಿದ್ದಲ್ಲ. ಬಹುತೇಕ ನಟ-ನಟಿಯರಿಗೆ ಕೃತಕ ನಗು ಎನ್ನುವುದು ಮಾಮೂಲಾಗಿದೆ. ಅದು ಅವರಿಗೆ ಅನಿವಾರ್ಯ ಕೂಡ ಹೌದು. ಆದರೆ ಈ ವಿಡಿಯೋದಲ್ಲಿ ಆಲಿಯಾ ಭಟ್​ ನಗು ಒಮ್ಮೆ ಕೇಳಿ, ಏನು ಅನ್ನಿಸುತ್ತದೆ ಹೇಳಿ... 

ಮನೆಯಲ್ಲಿ ಬಿದ್ದಿರು... ಊಂ ಆಂಟವಾ ಐಟಂ ಸಾಂಗ್​ ಮಾಡಿದ್ರೆ ಅಷ್ಟೇ.. ಸಮಂತಾಗೆ ಬೆದರಿಕೆ ಬಂದಿತ್ತಂತೆ!

Latest Videos
Follow Us:
Download App:
  • android
  • ios