Alia Bhatt- Ranbir Kapoor: ಮದುವೆಯಾದ 7 ತಿಂಗಳಿಗೆ ತಾಯಿಯಾದ ಆಲಿಯಾ; ನೆಟ್ಟಿಗರಿಂದ ಸಖತ್ ಟ್ರೋಲ್
Alia Bhatt- Ranbir Kapoor welcome baby girl: ರಣಬೀರ್ ಕಪೂರ್ ಜೊತೆ ಮದುವೆಯಾಗಿ 7 ತಿಂಗಳಿಗೆ ಮಗುವಿಗೆ ಜನ್ಮ ನೀಡಿದ ನಟಿ ಅಲಿಯಾ ಭಟ್ ಸಖತ್ ಟ್ರೋಲ್ ಆಗುತ್ತಿದ್ದಾರೆ.
ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಸದ್ಯ ತಾಯ್ತನ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಅಲಿಯಾ ಭಟ್ ಮೊದಲ ಮಗುವಿಗೆ ಜನ್ಮ ನೀಡಿದರು. ನವೆಂಬರ್ 6ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಅಲಿಯಾ ದಂಪತಿಗೆ ಅಭಿಮಾನಿಗಳು ಮತ್ತು ಗಣ್ಯರಿಂದ ಶುಭಾಶಯಗಳ ಸುರಿಮಳೆ ಬರುತ್ತಿದೆ. ಅಲಿಯಾ ಮತ್ತು ರಣಬೀರ್ ಕಪೂರ್ ಇಬ್ಬರೂ ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಅಲಿಯಾ ಮತ್ತು ರಣಬೀರ್ ದಂಪತಿ ಸಖತ್ ಟ್ರೋಲ್ ಆಗುತ್ತಿದ್ದಾರೆ. ಮದುವೆಯಾಗಿ 7 ತಿಂಗಳಿಗೆ ಮಗು ಪಡೆದ ವಿಚಾರಕ್ಕೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ನೆಟ್ಟಿಗರು ಅಲಿಯಾ ಮತ್ತು ರಣಬೀರ್ ವೆಡ್ಡಿಂಗ್ ದಿನಾಂಕ ಮತ್ತು ಡೆಲಿವರಿ ದಿನಾಂಕವನ್ನು ಬರೆದು ಅಲಿಯಾ ಕಾಲೆಳೆಯುತ್ತಿದ್ದಾರೆ. 'ಮದುವೆಯಾಗಿದ್ದು ಏಪ್ರಿಲ್ 18ರಂದು ಮಗುವಿಗೆ ಜನ್ಮ ನೀಡಿದ್ದು ನವೆಂಬರ್ 6. ಇದು ಕೇವಲ 6 ತಿಂಗಳು ಮತ್ತು 23 ದಿನಗಳಾಗಿದೆ ಅಷ್ಟೆ' ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, 'ಅಲಿಯಾ ವಾಹ್, ನಿಮ್ಮಿಬ್ಬರಿಗೂ ಅಭಿನಂದನೆಗಳು. ಬಾಲಿವುಡ್ ಯಾವಾಗಲೂ ಅದ್ಭುತ ಕೆಲಸಗಳನ್ನು ಮಾಡುತ್ತದೆ, ಈಗ 6 ತಿಂಗಳಲ್ಲಿ ಮಗುವಿಗೆ ಜನ್ಮ ನೀಡಿರುವುದು ಇದು ನಿಜವಾಗಿಯೂ 9 ತಿಂಗಳಿಗೆ ಬೆಂಕಿ ಹಚ್ಚಿದೆ. ನಿಮಗೆ ಮತ್ತು ಮಗುವಿಗೆ ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ' ಕಾಲೆಳೆದಿದ್ದಾರೆ.
ಭಾನುವಾರ (ನವೆಂಬರ್ 6) ಬೆಳಿಗ್ಗೆ, ಆಲಿಯಾ ಮತ್ತು ರಣಬೀರ್ ಇಬ್ಬರೂ ಹೆಚ್ಎನ್ ರಿಲಯನ್ಸ್ ಆಸ್ಪತ್ರೆಗೆ ಎಂಟ್ರಿ ಕೊಟ್ಟರು. ಸ್ವಲ್ಪ ಸಮಯದಲ್ಲೇ ನೀತು ಕಪೂರ್ ಮತ್ತು ಮತ್ತು ಅಲಿಯಾ ಭಟ್ ತಾಯಿ ಸೋನಿ ರಜ್ದಾನ್ ಕೂಡ ಆಸ್ಪತ್ರೆಗೆ ದಾವಿಸಿದರು. ಆಗಲೇ ಅಲಿಯಾ ಭಟ್ ಮಗುವಿಗೆ ಜನ್ಮ ನೀಡಿದ್ದಾರೆ ಎನ್ನುವ ವೈರಲ್ ಆಗಿತ್ತು. ಬಳಿಕ ಅಲಿಯಾ ದಂಪತಿ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು.
ಮದುವೆಯಾದ 7 ತಿಂಗಳಿಗೆ ತಾಯಿಯಾದ Alia Bhatt, ಅತ್ತೆ ನೀತು ಕಪೂರ್‌ಗಿಂತ ಫಾಸ್ಟ್
ಅಲಿಯಾ ಸದ್ಯ ಆಸ್ಪತ್ರೆಯಲ್ಲಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ರಣಬೀರ್ ಕಪೂರ್ ತಾಯಿ ನೀತು ಕಪೂರ್ ಹೇಳಿದ್ದಾರೆ. ನೀತು ಕಪೂರ್ ಪ್ರತಿದಿನ ಆಸ್ಪತ್ರೆಗೆ ಭೇಟಿ ನೀಡಿ ಮೊಮ್ಮಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅಲಿಯಾಗೆ ಹೆಣ್ಣು ಮಗುವಾಗಿರುವುದು ಇಡೀ ಕಪೂರ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಸದ್ಯದಲ್ಲೇ ಅಲಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.
ರಣಬೀರ್ ಕಪೂರ್ ತಂದೆಯಾದ ಈ ಹೊತ್ತಲ್ಲಿ ಅವರ 3 ಮಾಜಿ ಗೆಳತಿಯರು ಪ್ರತಿಕ್ರಿಯಿಸಿದ್ದು ಹೀಗೆ
ಇನ್ನು ಅಲಿಯಾ ಭಟ್ ಸಿನಿಮಾ ವಿಚಾರಕ್ಕೆ ಬರುವುದಾರೇ ಕೊನೆಯದಾಗಿ ಬ್ರಹ್ಮಾಸ್ತ್ರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ರಣಬೀರ್ ಮತ್ತು ಅಲಿಯಾ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದೆ. ಇನ್ನು ಸಿನಿಮಾ ಜೊತೆಗೆ ಅಲಿಯಾ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ನಟಿಸುತ್ತಿದ್ದರು. ಕರಣ್ ಜೋಹರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಸದ್ಯ ನಿಂತಿದೆ. ರಣ್ವೀರ್ ಸಿಂಗ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.