ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್​, ಕಾಜೋಲ್​ ಬಳಿಕ ಇದೀಗ ನಟಿ ಆಲಿಯಾ ಭಟ್​ ಅವರ ಡೀಪ್​ಫೇಕ್​ ವಿಡಿಯೋ ವೈರಲ್​ ಆಗಿದೆ.  

ತಂತ್ರಜ್ಞಾನ ಮುಂದುವರೆದಂತೆ ಒಳ್ಳೆಯದಾಗುವುದು ಬಿಟ್ಟು ಕೆಟ್ಟದ್ದೇ ಹೆಚ್ಚಾಗುತ್ತಿದೆ. ಇದಾಗಲೇ ಡೀಪ್​ಫೇಕ್​ ತಂತ್ರಜ್ಞಾನಕ್ಕೆ ಕೆಲವು ನಟಿಯರು ಸೇರಿದಂತೆ ಇನ್ನು ಕೆಲವರು ಗುರಿಯಾಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರ ವಿಡಿಯೋ ವೈರಲ್​ ಆಗಿದ್ದು ಹಲ್​ಚಲ್​ ಸೃಷ್ಟಿಸಿತ್ತು. ಅದಾದ ಬಳಿಕ ಕತ್ರಿನಾ ಕೈಫ್​, ಕಾಜೋಲ್​ ಸೇರಿದಂತೆ ಕೆಲವು ನಟಿಯರ ತಿರುಚಿದ ಫೋಟೋಗಳು ವೈರಲ್​ ಆದವು. ಇದೀಗ ನಟಿ ಆಲಿಯಾ ಭಟ್​ ಅವರನ್ನು ತೀರಾ ಕೆಟ್ಟದಾಗಿ ಬಿಂಬಿಸುವ ಡೀಪ್​ಫೇಕ್​ ವಿಡಿಯೋ ವೈರಲ್​ ಆಗುತ್ತಿದೆ. ಇದು ಆಲಿಯಾ ಅವರನ್ನುಮಾತ್ರವಲ್ಲದೇ ಸಿನಿ ತಾರೆಯರನ್ನೂ ಪೇಚಿಗೆ ಸಿಲುಕಿದೆ. ಹೀಗೆಯೇ ಮುಂದುವರೆದರೆ ಸಾಮಾನ್ಯ ಹೆಣ್ಣು ಮಕ್ಕಳ ಸ್ಥಿತಿಯೇನು ಎಂಬ ಪ್ರಶ್ನೆ ಉದ್ಭವಿಸಿದೆ. ಸಾಮಾನ್ಯವಾಗಿ ಯಾವುದಾದರೂ ವಿಡಿಯೋ, ಫೋಟೋಗಳು ವೈರಲ್​ ಆದರೆ ಅದರ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡುವುದು ಕಡಿಮೆಯೇ. ಅಶ್ಲೀಲವಾಗಿ ಹೆಣ್ಣುಮಕ್ಕಳನ್ನು ಬಿಂಬಿಸಿದರೆ ಅವರ ಸ್ಥಿತಿ ಏನಾಗಬಹುದು ಎಂಬ ಬಗ್ಗೆ ಎಲ್ಲರಿಗೂ ಈಗ ಚಿಂತೆ ಶುರುವಾಗಿದೆ.

ರಶ್ಮಿಕಾ ಮಂದಣ್ಣ ಅವರ ಪ್ರಕರಣದಲ್ಲಿ ಆರೋಪಿಯೊಬ್ಬ ಸಿಕ್ಕಿದ್ದರೂ ಆತನ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೀಗೆ ತಪ್ಪಿತಸ್ಥರು ಸುಲಭದಲ್ಲಿ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುವ ಕಾರಣ, ತಪ್ಪಿತಸ್ಥರಿಗೆ ಕಾನೂನಿನ ಯಾವುದೇ ಭಯ ಇಲ್ಲದ ಹಿನ್ನೆಲೆಯಲ್ಲಿ ಇಂಥ ಪ್ರಕರಣಗಳು ಹೆಚ್ಚುತ್ತಲೇ ಸಾಗಿವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಿನ ಹೆಚ್ಚಿನ ಚಿತ್ರತಾರೆಯರು ಚಿತ್ರಕ್ಕಾಗಿ ಹಾಗೂ ಪ್ರಚಾರಕ್ಕಾಗಿ ಯಾವುದೇ ತೆರನಾದ ಬಟ್ಟೆ ಧರಿಸುತ್ತಾರೆ. ಇಂಥ ಡೀಪ್​ಫೇಕ್​ ತಂತ್ರಜ್ಞಾನ ಅವರ ಮೇಲೆ ಅಷ್ಟು ಪ್ರಭಾವ ಬೀರದೇ ಹೋಗಬಹುದು. ಆದರೆ ಇದೇ ರೀತಿ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಯಾರಾದರೂ ಈ ತಂತ್ರಜ್ಞಾನ ಬಳಸಿದರೆ, ಅವರು ನಾಚಿಕೆ, ಮರ್ಯಾದೆಗೆ ಅಂಜಿ ಜೀವವನ್ನೇ ಕಳೆದುಕೊಳ್ಳಬಹುದು ಎಂಬ ಆತಂಕ ಎದುರಾಗಿದೆ.

ನಟಿ ಕಾಜೋಲ್​ ಬಟ್ಟೆ ಬದಲಿಸುವ ಶಾಕಿಂಗ್​ ವಿಡಿಯೋ ವೈರಲ್​? ನಿಜಕ್ಕೂ ಆಗಿರೋದೇನು?

ಬಾಲಿವುಡ್ ನಟಿ ಆಲಿಯಾ ಭಟ್ ಅವರ ಮುಖವನ್ನು ಬಳಸಿಕೊಂಡು ರಚಿಸಲಾದ ಡೀಪ್ ಫೇಕ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆಲಿಯಾಳ ಮುಖವನ್ನು ಮಹಿಳೆಯ ದೇಹದ ಮೇಲಿರಿಸಿ ಅಶ್ಲೀಲ ಸನ್ನೆಗಳನ್ನು ಹಾಕಲಾಗಿದೆ.

ಇತ್ತೀಚೆಗಷ್ಟೇ ಆಲಿಯಾ ಭಟ್​, ತಮ್ಮ ಹಳೆಯ ಬಾಯ್​ಫ್ರೆಂಡ್​ ಬಗ್ಗೆ ಮಾತನಾಡಿ ಸಕತ್​ ಸದ್ದು ಮಾಡಿದ್ದರು. ಕಾಫಿ ವಿತ್​ ಕರಣ್ ಷೋ​ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವರುಣ್ ಧವನ್ ಹೊಸ ಅತಿಥಿಗಳಾಗಿದ್ದರು. ಆ ಸಮಯದಲ್ಲಿ ಆಲಿಯಾ ಭಟ್​ ಮಾತನಾಡಿದ ವಿಡಿಯೋ ಒಂದನ್ನು ಪ್ಲೇ ಮಾಡಲಾಯಿತು. ಅದರಲ್ಲಿ ಆಲಿಯಾ ವರುಣ್ ಮತ್ತು ಸಿದ್ಧಾರ್ಥ್ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದರು. ಸಿದ್ಧಾರ್ಥ್​ ನನ್ನ ಜೀವನದ ಮೊದಲ ಪ್ರೀತಿಯಾಗಿದ್ದು, ಈ ಪ್ರೀತಿಯನ್ನು ನೀಡಿದ್ದಕ್ಕಾಗಿ ಧನ್ಯವಾದ ಎಂದರು. ಅವನು ತುಂಬಾ ಉಲ್ಲಾಸಭರಿತನಾಗಿದ್ದ, ಧೈರ್ಯಶಾಲಿಯಾಗಿದ್ದ ಎಂದು ಸಿದ್ಧಾರ್ಥ್​ ಅವರನ್ನು ಆಲಿಯಾ ಹಾಡಿ ಹೊಗಳಿದರು. "ಸಿದ್ ನಿಜವಾಗಿಯೂ ಒಳ್ಳೆಯ ಗಾಯಕ. ಅವನು ತುಂಬಾ ಆರೋಗ್ಯವಂತ ವ್ಯಕ್ತಿ, ಆದ್ದರಿಂದ ಅವನು ಪಾರ್ಟಿಯನ್ನು ಮಾಡುವುದಿಲ್ಲ. ಅವನು ಅಂತರ್ಗತವಾಗಿರುವ ಪಂಜಾಬಿ. ಅದು ಹೇಗೆ ಎಂದು ಅವನಿಗೆ ತಿಳಿದಿದೆ. ತುಂಬಾ ಒಳ್ಳೆಯ ಮನುಷ್ಯ ಎಂದಿದ್ದರು. ಮದುವೆಯಾದರೂ ಹಳೆಯ ಬಾಯ್​ಫ್ರೆಂಡ್​​ ವಿಷ್ಯ ಬಿಟ್ಟಿಲ್ವಾ ಎಂದು ನಟಿಗೆ ಕಾಲೆಳೆದಿದ್ದರು ನೆಟ್ಟಿಗರು. 

ಮದ್ವೆಯಾದ್ರೂ ಎಕ್ಸ್​ ಬಾಯ್​ಫ್ರೆಂಡ್​ ಜತೆಗಿನ ಸವಿಸವಿ ನೆನಪು ಮೆಲುಕು ಹಾಕಿದ್ರು ಈ ಬಾಲಿವುಡ್​ ನಟಿಯರು!