ಬೆಂಗಳೂರು (ಮಾ. 11): ಬಾಲಿವುಡ್ ಕ್ಯೂಟ್ ಕಪಲ್ ಅಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಡೇಟಿಂಗ್ ಮಾಡುತ್ತಿರುವ ಸುದ್ಧಿ ಈಗ ಹಳೆಯದಾಗಿದೆ. 

ಸೋನು ಗೌಡಗೆ 'ಐ ಲವ್ ಯೂ' ಅಂದ ಉಪ್ಪಿ ಫ್ಯಾನ್ಸ್!

ಅಲಿಯಾ ಹಾಗೂ ರಣಬೀರ್ ಇಬ್ಬರೂ ಬಾಲಿವುಡ್ ನಲ್ಲಿ ಸ್ಟಾರ್ ಸೆಲಬ್ರಿಟಿಗಳು. ಅಲಿಯಾ ಭಟ್ ಮೊದಲು ಸಿದ್ಧಾರ್ಥ್ ಮಲೋತ್ರಾ ಜೊತೆ ಡೇಟಿಂಗ್ ನಡೆಸುತ್ತಿದ್ದರು. ಅದೇನಾಯ್ತೋ ಏನೋ ಇಬ್ಬರು ಬೇರೆ ಬೇರೆಯಾದರು. ಇತ್ತ ರಣಬೀರ್ ಕಪೂರ್ ದೀಪಿಕಾ ಪಡುಕೋಣೆ ಜೊತೆ ಡೇಟಿಂಗ್ ನಡೆಸುತ್ತಿದ್ದರು. ಅದು ಕೂಡಾ ಮುರಿದಿ ಬಿತ್ತು. ನಂತರ ಅಲಿಯಾ- ರಣಬೀರ್ ಕಪೂರ್ ಒಟ್ಟಿಗೆ ಕಾಣಿಸಿಕೊಳ್ಳ ತೊಡಗಿದರು.

 

ಇವರ ಪ್ರೀತಿಗೆ ಎರಡೂ ಮನೆಯವರು ಒಪ್ಪಿಗೆ ನೀಡಿದ್ದು ಮದುವೆಗೆ ಮುಹೂರ್ತ ಹುಡುಕುತ್ತಿದ್ದಾರೆ ಎನ್ನಲಾಗಿದೆ. ಏಪ್ರಿಲ್ ನಲ್ಲಿ ಮದುವೆ ಡೇಟ್ ಫಿಕ್ಸ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸದ್ಯದಲ್ಲೇ ಇಬ್ಬರೂ ಹಸೆಮಣೆ ಏರುವುದು ಖಚಿತವಾಗಿದೆ ಎನ್ನಲಾಗುತ್ತಿದೆ.