Asianet Suvarna News Asianet Suvarna News

ಮೊದಲರಾತ್ರಿ ನಾವು ಆ ಕೆಲಸವನ್ನೇ ಮಾಡಲಿಲ್ಲ, ಇಬ್ಬರಿಗೂ ಸುಸ್ತಾಗಿತ್ತು ಎಂದ ಆಲಿಯಾ ಭಟ್

ಬಾಲಿವುಡ್ ಡಿಂಪಲ್ ಗರ್ಲ್ ಆಲಿಯಾ ಭಟ್ ಫಸ್ಟ್‌ನೈಟ್ ಬಗ್ಗೆ ಹೇಳಿದ ಮಾತು ಕೇಳಿ ಒಂದು ಕ್ಷಣ  ಎಲ್ಲರೂ  ಆಶ್ಚರ್ಯಚಕಿತರಾಗಿದ್ದರು. ಫಸ್ಟ್ ನೈಟ್ ದಿನ ಸಿನಿಮಾಗಳಲ್ಲಿ ತೋರಿಸುವಂತೆ ನಡೆಯಲ್ಲ ಎಂದು ಹಲವು ಮಹಿಳೆಯರು ಹೇಳಿಕೊಂಡಿದ್ದಾರೆ.

Alia bhat shares her first night experience mrq
Author
First Published Aug 18, 2024, 3:00 PM IST | Last Updated Aug 18, 2024, 3:00 PM IST

ಮುಂಬೈ: ಫಸ್ಟ್ ದಿನ ಏನು ನಡೆಯಲ್ಲ ಎಂಬ ವಿಷಯವನ್ನು ಕರಣ್ ಜೋಹರ್ ಶೋನಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಹೇಳಿಕೊಂಡಿದ್ದಾರೆ. ಆಲಿಯಾ  ಭಟ್ ಮತ್ತು ರಣ್‌ಬೀರ್ ಕಪೂರ್  ಮದುವೆಯಾಗಿ ವರ್ಷ ಕಳೆದಿದ್ದು, ದಂಪತಿಗೆ ಮುದ್ದಾದ ಮಗಳಿದ್ದಾಳೆ. ತಮ್ಮ ಶೋನಲ್ಲಿ ಭಾಗಿಯಾಗಿದ್ದ ಆಲಿಯಾ ಭಟ್‌ಗೆ ಕರಣ್ ಜೋಹರ್ ಮದುವೆ ಅನ್ನೋದು ಕನಸು. ಕೆಲವರು ಹೀಗೆಯೇ ಮದುವೆ ಆಗಬೇಕೆಂದು  ಕನಸು ಕಾಣುತ್ತಿರುತ್ತಾರೆ. ಫಸ್ಟ್ ನೈಟ್‌ ಬಗ್ಗೆಯೂ ಅನೇಕ ಕಲ್ಪನೆಗಳನ್ನು ಜನರು ಹೊಂದಿರುತ್ತಾರೆ. ಅದರೆ ಫಸ್ಟ್‌ ನೈಟ್‌ ಬಗ್ಗೆ ಆಲಿಯಾ ಭಟ್ ಮುಕ್ತವಾಗಿ ಮಾತನಾಡಿದ್ದಾರೆ. ಮದುವೆ ಹಾಗೂ ರಿಲೇಶನ್ ಶಿಪ್‌ ಬಗ್ಗೆ ಕೆಲವು ಪ್ರಶ್ನೆಗಳನ್ನು ಕರಣ್ ಜೋಹರ್ ಕೇಳಿದ್ದರು. 

ಮೊದಲರಾತ್ರಿ ಎಲ್ಲರೂ ಅಂದುಕೊಂಡಂತೆ ಏನೂ ನಡೆಯಲ್ಲ. ಇಡೀ ದಿನ ಮದುವೆ  ಸಮಾರಂಭದಲ್ಲಿ ಭಾಗಿಯಾಗಿರುವ ಕಾರಣ ಕೊಂಚವೂ ವಿಶ್ರಾಂತಿ ಸಿಕ್ಕಿರಲ್ಲ. ಹಾಗಾಗಿ ದಣಿವು ಆಗಿರುತ್ತದೆ ಎಂದು ಆಲಿಯಾ ಭಟ್ ಹೇಳಿದ್ದರು. ಆಲಿಯಾ ಅವರ ಈ ಮಾತು ಕೇಳುತ್ತಿದ್ದಂತೆ ಕರಣ್ ಜೋಹರ್ ಜೋರಾಗಿ  ನಕ್ಕಿದ್ದರು. ಭಾರತದ ಬಹುತೇಕ ಮಹಿಳೆಯರು ಆಲಿಯಾ ಭಟ್ ಮಾತಿಗೆ ಸಮ್ಮತಿ ಸೂಚಿಸುತ್ತಾರೆ. ಸಿನಿಮಾಗಳಲ್ಲಿ ತೋರಿಸುವಂತೆ ಫಸ್ಟ್ ನೈಟ್ ನಡೆಯಲ್ಲ ಎಂದು ಹೇಳುತ್ತಾರೆ.

ನನ್ನ ಆಪ್ತ ಸ್ನೇಹಿತನನ್ನು ಪ್ರೀತಿಸಿ ಮದುವೆಯಾದೆ. ಮೊದಲ ರಾತ್ರಿಗಾಗಿ ಪ್ರಸಿದ್ಧ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಲಾಗಿತ್ತು. ಕೋಣೆಯನ್ನು  ಹೂಗಳಿಂದ ಅಲಂಕರಿಸಲಾಗಿತ್ತು. ಈ ಕೋಣೆ ಯ ಬಾಡಿಗೆಯೂ ಅತ್ಯಧಿಕವಾಗಿತ್ತು. ಹಾಗಾಗಿ ಹೋಟೆಲ್‌ನಲ್ಲಿ ಸಿಗುವ ಎಲ್ಲಾ  ಸೌಲಭ್ಯಗಳನ್ನು ಬಳಸಿಕೊಂಡೆವು. ನಂತರ ಜೊತೆಯಾಗಿ ಇಷ್ಟವಾದ ಸಿನಿಮಾ ನೋಡಲಾಯ್ತು. ನಂತರ ಮದುವೆಗೆ ಬಂದ ಅತಿಥಿಗಳ ಬಗ್ಗೆ ಮಾತನಾಡುತ್ತಾ ಹರಟೆ ಹೊಡೆಯಲಾಯ್ತು. ಗಂಡನ ಜೊತೆಗಿನ ಕಳೆದ ಮೊದಲರಾತ್ರಿ  ಅದ್ಭುತವಾಗಿತ್ತು. ಆದ್ರೆ ನಾವು ಆವತ್ತು ಸೆಕ್ಸ್ ಮಾಡಲಿಲ್ಲ ಎಂದು ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. 

ಮದುವೆ ಸೀರೆ ಸಿಕ್ತು, ಛತ್ರ ಬುಕ್ ಆಯ್ತು; ಫಸ್ಟ್‌ ನೈಟ್‌ನೂ ತೋರ್ಸಮ್ಮ ಎಂದು ಮಧು ಗೌಡ ಕಾಲೆಳೆದ ನೆಟ್ಟಿಗರು!

ನನ್ನದು ಅರೆಂಜ್ ಮ್ಯಾರೇಜ್ ಆಗಿತ್ತು. ಮದುವೆಗೂ ಮುನ್ನ ಯಾರ ಜೊತೆಯಲ್ಲಿಯೂ ನಾನು  ಸೆಕ್ಸ್ ಮಾಡಿರಲಿಲ್ಲ. ವರ್ಜಿನ್ ಆಗಿದ್ದ ನಾನು ಮೊದಲರಾತ್ರಿ ಬಗ್ಗೆ ತುಂಬಾ ಉತ್ಸುಕಳಾಗಿದ್ದೆ. ಆದ್ರೆ ಮದುವೆಯ ಶಾಸ್ತ್ರಗಳು ತುಂಬಾ ಸಮಯದವರೆಗೆ ನಡೆದವು. ನಮಗೆ ಫಸ್ಟ್‌ನೈಟ್‌  ಒಂದು ದೊಡ್ಡ ಅಗ್ನಿಪರೀಕ್ಷೆಯಾಗಿತ್ತು. ಇಡೀ ದಿನ ನನ್ನ ಪತಿ ಮದುವೆಯ ಕೆಲಸದಲ್ಲಿ ತೊಡಗಿದ್ದರಿಂದ ತುಂಬಾ ದಣಿದಿದ್ದರು. ಕೋಣೆಗೆ ಬರುತ್ತಿದ್ದಂತೆ ಪತಿ ನಿದ್ದೆಗೆ  ಜಾರಿದರು. ಆ ರಾತ್ರಿ  ನನಗೆ ತುಂಬಾ ನಿರಾಶೆಯಾಯ್ತು. ಆದರೆ ಈಗ ನಾನು ಪತಿಯ ಅಂದಿನ ವರ್ತನೆ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. 

ನನ್ನ ಪತಿ ಆರ್ಮಿಯಲ್ಲಿ ಕೆಲಸ ಮಾಡುತ್ತಿರುವ ಕಾರಣ ಅವರನ್ನು ಮದುವೆಗೆ ಮೊದಲು ಭೇಟಿಯಾಗಿರಲಿಲ್ಲ. ಆದ್ರೆ ಅನಿವಾರ್ಯ ಕಾರಣಗಳಿಂದ ಮದುವೆ ದಿನವೇ ಪತಿ ಸೇವೆಗೆ ಹಿಂದಿರುಗುವ ಸನ್ನಿವೇಶ ಉಂಟಾಯ್ತು. ನನ್ನ ಮೊದಲರಾತ್ರಿಯ ಕನಸು ಭಗ್ನವಾಯ್ತು. ಆದ್ರೆ  ಪತಿ ಕೆಲವೇ ದಿನಗಳಲ್ಲಿ ಹಿಂದಿರುಗಿ ಬಂದು ಎಂಬ ವಿಷಯವನ್ನು ಮಹಿಳೆ ಹಂಚಿಕೊಂಡಿದ್ದಾರೆ. 

ಮದುವೆ ಸೀರೆ ಸಿಕ್ತು, ಛತ್ರ ಬುಕ್ ಆಯ್ತು; ಫಸ್ಟ್‌ ನೈಟ್‌ನೂ ತೋರ್ಸಮ್ಮ ಎಂದು ಮಧು ಗೌಡ ಕಾಲೆಳೆದ ನೆಟ್ಟಿಗರು!

Latest Videos
Follow Us:
Download App:
  • android
  • ios