Asianet Suvarna News Asianet Suvarna News

ಖ್ಯಾತ ಗಾಯಕನಿಗೆ ತನ್ನ ಮನೆ ಮಾರಿದ ಅಕ್ಷಯ್ ಕುಮಾರ್; 4 ಕೋಟಿಯ ಪ್ರಾಪರ್ಟಿ 6 ಕೋಟಿಗೆ ಸೇಲ್

ಅಕ್ಷಯ್ ಕುಮಾರ್ ತನ್ನ ಅಂಧೇರಿ ಪ್ರಾಪರ್ಟಿ ಮಾರಾಟ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಖ್ಯಾತ ಗಾಯಕರಾದ ಅರ್ಮಾನ್ ಮಲಿಕ್ ಮತ್ತು ಅಮಲ್ ಮಲಿಕ್ ಅವರ ತಂದೆ ದಬೂ ಮಲಿಕ್ ಅಕ್ಷಯ್ ಕುಮಾರ್ ಅಂಧೇರಿ ನಿವಾಸವನ್ನು ಖರೀದಿ ಮಾಡಿದ್ದಾರೆ. 

Akshay Kumar sells his Andheri property to Amaal and Armaan Malik  father Daboo Malik for Rs. 6 crores sgk
Author
First Published Sep 25, 2022, 5:50 PM IST

ಇತ್ತೀಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ವಹಿವಾಟು ಹೆಚ್ಚಾಗುತ್ತಿದೆ. ಅದರಲ್ಲಿ ಸ್ಟಾರ್ ಕಲಾವಿದರೇನು ಹೊರತಾಗಿಲ್ಲ. ಇದೀಗ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ತನ್ನ ಆಸ್ತಿ ಮಾರಾಟ ಮಾಡುವ ಮೂಲಕ ಇದಕ್ಕೆ ಸೇರಿಕೊಂಡಿದ್ದಾರೆ. ಬಾಲಿವುಡ್ ಹಂಗಾಮ ವರದಿ ಮಾಡಿರುವ ಪ್ರಕಾರ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ತನ್ನ ಅಂಧೇರಿ ವೆಸ್ಟ್ ಪ್ರಾಪರ್ಟಿಯನ್ನು ಸೇಲ್ ಮಾಡಿದ್ದಾರೆ. ಬಾಲಿವುಡ್ ನ ಖ್ಯಾತ ಗಾಯಕರ ಕುಟುಂಬಕ್ಕೆ ಅವರ ಅಂಧೇರಿ ಆಸ್ತಿ ಮಾರಾಟ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಬಾಲಿವುಡ್ ಸ್ಟಾರ್ ಕಲಾವಿದ ಎಂದಮೇಲೆ ಮುಂಬೈನಲ್ಲಿ ಅನೇಕ ಪ್ರಾಪರ್ಟಿ ಹೊಂದಿರುತ್ತಾರೆ. ಇದೀಗ ತನ್ನ ಒಂದು ಮನೆಯನ್ನು ಮಾರಾಟ ಮಾಡಿದ್ದಾರೆ ಅಕ್ಷಯ್ ಕುಮಾರ್. 

ಅಂದಹಾಗೆ ಅಕ್ಷಯ್ ಕುಮಾರ್ ತನ್ನ ಪ್ರಾಪರ್ಟಿ ಮಾರಾಟ ಮಾಡಿದ್ದು ಖ್ಯಾತ ಗಾಯಕರಾದ ಅರ್ಮಾನ್ ಮಲಿಕ್ ಮತ್ತು ಅಮಲ್ ಮಲಿಕ್ ಅವರ ತಂದೆ ದಬೂ ಮಲಿಕ್ ಅವರಿಗೆ. ಅಂದಹಾಗೆ ಅಕ್ಷಯ್ ಕುಮಾರ್ ಈ ಮನೆಯನ್ನು 4.12 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದರು ಎನ್ನಲಾಗಿದೆ. ಆದರೀಗ ಅರ್ಮನ್ ಮಲ್ಲಿಕ್ ಕುಟುಂಬಕ್ಕೆ 6 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಈ ಬಗ್ಗೆ ಅಕ್ಷಯ್ ಅಥವಾ ಅರ್ಮನ್ ಮಲಿಕ್ ಕುಟುಂಬದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. 

ಸರ್ಕಾರಿ ಜಾಹೀರಾತಿನಲ್ಲಿ ಎಡವಟ್ಟು; ಅಕ್ಷಯ್ ಕುಮಾರ್‌ಗೆ ನೆಟ್ಟಿಗರ ತರಾಟೆ

ಸದ್ಯ ಅಕ್ಷಯ್ ಕುಮಾರ್ ಸೇಲ್ ಮಾಡಿರುವ ಪ್ರಾಪರ್ಟಿ ತುಂಬಾ ವಿಶಾಲವಾಗಿತ್ತು. ಐಷಾರಾಮಿ ಅಪಾರ್ಟಮೆಂಟ್ ಆಗಿದ್ದು ವಿಶಾಲವಾದ ಬಾಲ್ಕನಿ ಕೂಡ ಹೊಂದಿತ್ತು. ವರದಿಯ ಪ್ರಕಾರ ಆಗಸ್ಟ್ ತಿಂಗಳಲ್ಲೇ ಮನೆಯ ಡೀಲ್ ಮುಗಿದಿತ್ತು ಎನ್ನಲಾಗಿದೆ. ಅಕ್ಷಯ್ ಕುಮಾರ್ ಬಳಿ ಈಗಾಗಲೇ ಸಾಕಷ್ಟು ಮನೆಗಳಿವೆ. ಅಂಧೇರಿ ಪಶ್ಚಿಮ ಮತ್ತು ಪೂರ್ವದಲ್ಲಿ ಬೋರಿವಲಿ, ಮುಲುಂದ್ ಮತ್ತು ಜುಹು ನಿವಾಸದ ಸುತ್ತಿಮುತ್ತ ಸಾಕಷ್ಟು ಆಸ್ತಿ ಸಂಪಾದನೆ ಮಾಡಿದ್ದಾರೆ 

ವಿಶೇಷ ಅಭಿಮಾನಿ ಜೊತೆ ಅಕ್ಷಯ್ ಕುಮಾರ್ ಮಸ್ತ್ ಡಾನ್ಸ್; ವಿಡಿಯೋ ವೈರಲ್

ಅಕ್ಷಯ್ ಕುಮಾರ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದ ಅಕ್ಷಯ್ ಕುಮಾರ್ ಅವರಿಗೆ 2022 ನಿರಾಸೆಯ ವರ್ಷವಾಗಿದೆ. ಈ ವರ್ಷ ತೆರೆಗೆ ಬಂದ ಯಾವ ಸಿನಿಮಾವೂ ಸಕ್ಸಸ್ ಆಗಿಲ್ಲ. ಸಾಮ್ರಾಟ್ ಪೃಥ್ವಿರಾಜ್, ರಕ್ಷಾ ಬಂಧನ್, ಬಚ್ಚನ್ ಪಾಂಡೆ ಸಿನಿಮಾಗಳು ಹೀನಾಯ ಸೋಲು ಕಂಡಿವೆ. ಸದ್ಯ ಅಕ್ಷಯ್ ಕುಮಾರ್ ಬಳಿ ರಾಮ್ ಸೇತು, ಸೆಲ್ಫಿ, ಓ ಮೈ ಗಾಡ್ 2, ಸೂರರೈ ಪೊಟ್ರಿ ರಿಮೇಕ್ ಸೇರಿದಂತೆ ಅನೇಕ ಸಿನಿಮಾಗಳು ಅಕ್ಷಯ್ ಕುಮಾರ್ ಬಳಿ ಇವೆ. ಕಳೆದ ವರ್ಷ ರಿಲೀಸ್ ಆದ ಸೂರ್ಯವಂಶಿ ಸಿನಿಮಾ ಬಿಟ್ಟರೆ ಅಕ್ಷಯ್ ಕುಮಾರ್ ಯಾವ ಸಿನಿಮಾನು ಹಿಟ್ ಆಗಿಲ್ಲ. ಹಾಗಾಗಿ ಅಕ್ಷಯ್ ಕುಮಾರ್ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಲು ಕಾಯುತ್ತಿದ್ದಾರೆ.  

Follow Us:
Download App:
  • android
  • ios