ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ. ವಿದೇಶದ ಚಿತ್ರೀಕರಣ ವೇಳೆ ಈ ಘಟನೆ ಸಂಭಿವಿಸಿದ್ದು ಗಾಯಗೊಂಡಿದ್ದರೂ ್ಕ್ಷಯ್ ಚಿತ್ರೀಕರಣ ಮುಂದುವರೆಸಿದ್ದಾರೆ.
ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಸಹಾಸಗಳನ್ನು ಸ್ವತಃ ಅವರೇ ಮಾಡುತ್ತಾರೆ. ತನ್ನ ಡೇರ್‌ಡೆವಿಲ್ ಸಾಹಸಗಳನ್ನು ಪ್ರದರ್ಶಿಸಲು ಅಕ್ಷಯ್ ಹೆಸರುವಾಸಿಯಾಗಿದ್ದಾರೆ. ಹೈ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ವೇಳೆ ಅಕ್ಷಯ್ ಕುಮಾರ್ ಗಾಯಕೊಂಡಿದ್ದಾರೆ. ಬಡೇ ಮಿಯಾನ್ ಚೋಟೆ ಮಿಯಾನ್ ಸಿನಿಮಾದ ಚಿತ್ರೀಕರಣದಲ್ಲಿ ಅಕ್ಷಯ್ ಕುಮಾರ್ ಬ್ಯುಸಿಯಾಗಿದ್ದರು. ಚಿತ್ರದ ಆಕ್ಷನ್ ದೃಶ್ಯ ಸೆರೆ ಹಿಡಿಯುವಾಗ ಈ ಘಟನೆ ಸಂಭವಿಸಿದ್ದು ಅಕ್ಷಯ್ ಕುಮಾರ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಬಡೇ ಮಿಯಾನ್ ಚೋಟೆ ಮಿಯಾನ್ ಸಿನಿಮದಾ ಚಿತ್ರೀಕರಣ ಸ್ಕಾಟ್ಲೆಂಡ್‌ನಲ್ಲಿ ನಡೆಯುತ್ತಿತ್ತು. ಬಾಲಿವುಡ‌್‌ನ ಮತ್ತೋರ್ವ ನಟ ಟೈಗರ್ ಶ್ರಾಫ್ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಟೈಗರ್ ಮತ್ತು ಅಕ್ಷಯ್ ಇಬ್ಬರೂ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು.
ಅಕ್ಷಯ್ ಕುಮಾರ್ ಗಾಯಗೊಂಡಿದ್ದರೂ ಚಿತ್ರೀಕರಣ ಮುಂದುವರೆಸಿದ್ದರು. ಸದ್ಯ ಕೆಲವು ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಅಕ್ಷಯ್ ಕುಮಾರ್ ಅವರ ಮೊಣಕಾಲಿಗೆ ಗಾಯವಾದ ಕಾರಣ ಕೆಲವು ಕ್ಲೋಸ್ ಅಪ್ ಶಾಟ್‌ಗಳನ್ನು ಸೆರೆಹಿಡಿಯಲಾಗಿದೆ. ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಜೊತೆ ಪ್ರಮುಖ ಆಕ್ಷನ್ ದೃಶ್ಯ ಸೆರೆಹಿಡಿಯಲಾಗುತ್ತಿತ್ತು. ಆಗ ಅಕ್ಷಯ್ ಕುಮಾರ್ ಮೊಣಕಾಲಿಗೆ ಗಾಯವಾಗಿದೆ. ಪ್ರತಮ ಚಿಕಿತ್ಸೆ ಪಡೆದು ಚಿತ್ರೀಕರಣ ಮುಂದುವರೆಸಿದ್ದಾರೆ. ಶೂಟಿಂಗ್ ಮೇಲೆ ಪರಿಣಾಮ ಬೀರಬಾರದು ಎನ್ನುವ ಕಾರಣಕ್ಕೆ ಗಾಯವಾಗಿದ್ದರೂ ಚಿತ್ರೀಕರಣ ಮುಂದುವರೆಸಿದ್ದಾರೆ. ಸ್ಕಾಟ್ಲೆಂಡ್ ವೇಳಾಪಟ್ಟಿಗೆ ಯಾವುದೇ ತೊಂದರೆ ಆಗಬಾರದು ಎಂದು ಅಕ್ಷಯ್ ಕುಮಾರ್ ಶೂಟಿಂಗ್ ಮುಂದುವರೆಸಿದ್ದಾರೆ' ಎಂದು ವರದಿ ಮಾಡಿದೆ. ನೋವಾಗಿದ್ದರೂ ಸ್ಕಾಟ್ಲೆಂಡ್ ಚಿಕ್ರೀಕರಣ ಮುಗಿಸಿ ಬಳಿಕ ಕೊಂಚ ವಿಶ್ರಾಂತಿ ಪಡೆಲಿದ್ದಾರೆ ಎನ್ನಲಾಗಿದೆ.
ಹೀಗಾದ್ರೂ ಹಣ ಮಾಡಿ: ರೆಡ್ ಲೆಹಂಗಾ ಧರಿಸಿ ನೋರಾ ಜೊತೆ ಕುಣಿದ ಅಕ್ಷಯ್ ಕುಮಾರ್ ಸಖತ್ ಟ್ರೋಲ್
ಬಡೇ ಮಿಯಾನ್ ಚೋಟೆ ಮಿಯಾನ್ ಸಿನಿಮಾಗೆ ಅಲಿ ಅಬ್ಬಾಸ್ ಜಾಫರ್ ನಿರ್ದೇಶನ ಮಾಡುತ್ತಿದ್ದಾರೆ. ಟೈಗರ್ ಮತ್ತು ಅಕ್ಷಯ್ ಕುಮಾರ್ ಇಬ್ಬರನ್ನೂ ಒಟ್ಟಿಗೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. ಅಕ್ಷಯ್ ಕುಮಾರ್ ಸಾಲು ಸಾಲು ಸಿಮಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ಅಕ್ಷಯ್ ಕುಮಾರ್ ಯಾವ ಸಿನಿಮಾಗಳು ಸಹ ಸಕ್ಸಸ್ ಆಗಿಲ್ಲ. ಸಾಲು ಸಾಲು ಸೋಲಿನ ಸುಳಿಯಲ್ಲಿ ಸಿಲುಕಿರುವ ಅಕ್ಷಯ್ ಕುಮಾರ್ ಮತ್ತೆ ಸಕ್ಸಸ್ ಟ್ರ್ಯಾಕ್‌ಗೆ ಮರಳಲು ಕಾಯುತ್ತಿದ್ದಾರೆ.
ಈ ಸೋಲು ನನಗೆ ಹೊಸದಲ್ಲ; ಸತತ ಸೋಲಿನ ಹೊಣೆ ಹೊತ್ತುಕೊಂಡ ಅಕ್ಷಯ್ ಕುಮಾರ್
ಸತತ ಸೋಲಿನ ಬಗ್ಗೆ ಅಕ್ಷಯ್ ಹೇಳಿದ್ದೇನು?
ಸತತ ಸೋಲಿನ ಬಗ್ಗೆ ಮಾತನಾಡಿದ ಅಕ್ಷಯ್, 'ಈ ಸೋಲು ನನಗೆ ಮೊದಲ್ಲ. ನನ್ನ ವೃತ್ತಿ ಜೀವನದಲ್ಲಿ ನಾನು ಒಂದೇ ಬಾರಿಗೆ 16 ಸತತ ಫ್ಲಾಪ್‌ಗಳನ್ನು ಕಂಡಿದ್ದೆ. ಒಂದು ಸಮಯವಿತ್ತು. ಸತತ ಎಂಟು ಚಿತ್ರಗಳು ಸೋತಿತ್ತು. ಈಗ ನಾನು ಸತತವಾಗಿ ಮೂರು-ನಾಲ್ಕು ಚಿತ್ರಗಳನ್ನು ಹೊಂದಿದ್ದೇನೆ ಅವು ಕೆಲಸ ಮಾಡಲಿಲ್ಲ. ಅದು ನಿಮ್ಮ ಸ್ವಂತ ತಪ್ಪಿನಿಂದ ನಡೆಯುತ್ತದೆ. ಪ್ರೇಕ್ಷಕರು ಬದಲಾಗಿದ್ದಾರೆ, ನೀವು ಬದಲಾಗಬೇಕು. ನೀವು ಮತ್ತೆ ಹೊಸದಾಗಿ ಪ್ರಾರಂಭಿಸಬೇಕು ಏಕೆಂದರೆ ಪ್ರೇಕ್ಷಕರು ಬೇರೆ ಏನನ್ನೋ ಬಯಸುತ್ತಿದ್ದಾರೆ' ಎಂದು ಹೇಳಿದರು.
