Asianet Suvarna News Asianet Suvarna News

10 ತಿಂಗಳ ಮಗು ಜೊತೆ ಕಷ್ಟ ಪಡುತ್ತಿದ್ದ ಮಹಿಳೆಯ ಬ್ಯಾಗ್ ಹೊತ್ತು ಸಹಾಯ ಮಾಡಿದ ಅಜಿತ್‌ಗೆ ಮೆಚ್ಚುಗೆಯ ಮಹಾಪೂರ

10 ತಿಂಗಳ ಮಗು ಜೊತೆ ಕಷ್ಟ ಪಡುತ್ತಿದ್ದ ಮಹಿಳೆಯ ಬ್ಯಾಗ್ ಹೊತ್ತು ತಮಿಳಿನ ಸ್ಟಾರ್ ನಟ ಅಜಿತ್ ಸಹಾಯ ಮಾಡಿದ್ದಾರೆ. ಅಜಿತ್ ಅವರ ಗುಣ ಅಭಿಮಾನಿಗಳ ಹೃದಯ ಗೆದ್ದಿದೆ.

Ajith Kumar wins hearts by carrying bag of woman travelling with 10-month-old baby sgk
Author
First Published Apr 15, 2023, 4:58 PM IST | Last Updated Apr 15, 2023, 5:05 PM IST

ಕೆಲವೇ ಕೆಲವು ಕಲಾವಿದರು ಮಾತ್ರ ರೀಲ್ ಮೇಲೆ ಮಾತ್ರವಲ್ಲದೇ ರಿಯಲ್ ಲೈಫ್‌ನಲ್ಲೂ ಸ್ಟಾರ್ ಆಗುತ್ತಾರೆ. ಅಂಥ ಕಲಾವಿದರಲ್ಲಿ ತಮಿಳಿನ ಖ್ಯಾತ ನಟ ಅಜಿತ್ ಕುಮಾರ್ ಕೂಡ ಒಬ್ಬರು. ಯಾವಾಗಲೂ ಸರಳತೆ ಮತ್ತು ವಿನಮ್ರ ಸ್ವಭಾವದ ಮೂಲಕವೇ ಅಜಿತ್ ಅಭಿಮಾನಿಗಳ ಹೃದಯ ಗೆಲ್ಲುತ್ತಾರೆ. ನಿಜ ಜೀವನದಲ್ಲಿ ಅಜಿತ್ ನಡೆದುಕೊಳ್ಳುವ ರೀತಿ ಅಭಿಮಾನಿಗಳು ಮೆಚ್ಚುಗೆ ಪಾತ್ರವಾಗುತ್ತಿದೆ. ಅನೇಕ ಬಾರಿ ಅಜಿತ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಹಾಗಾಗಿಯೇ ಅಜಿತ್ ಎಂದರೆ ಅಭಿಮಾನಿಗಳಿಗೆ ಪ್ರಾಣ. ಸಿನಿಮಾಗಿಂತ ಹೊರತೆಯಾಗಿಯೂ ಅಜಿತ್ ಇಷ್ಟವಾಗುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ಇತ್ತೀಚೆಗೆ ಲಂಡನ್ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ. ಅಜಿತ್ ಅವರ ಈ ಗುಣ ವಿಜಯ್ ದಳಪತಿ ಅಭಿಮಾನಿಗಳ ಹೃದಯ ಸಹ ಗೆದ್ದಿದೆ.

ನಟ ಅಜಿತ್ ಗ್ಲಾಸ್ಗೋದಿಂದ ಚೆನ್ನೈಗೆ ವಿಮಾದಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯೊಬ್ಬರು ಏರ್ಪೋರ್ಟ್‌ನಲ್ಲಿ ತನ್ನ 10 ತಿಂಗಳ ಮಗುವನ್ನು ಹೊತ್ತುಕೊಂಡು ಜೊತೆಗೆ ಲಗೇಜ್ ಅನ್ನು ತೆಗೆದುಕೊಂಡು ಹೋಗಲು ಕಷ್ಟಪಡುತ್ತಿದ್ದರು. ಇದನ್ನು ನೋಡಿದ ನಟ ಅಜಿತ್ ಆ ಮಹಿಳೆಯ ಲಗೇಜ್ ಹೊತ್ತು ಸಹಾಯ ಮಾಡಿದ್ದಾರೆ. ಈ ಬಗ್ಗೆ ಮಹಿಳೆಯ ಪತಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಅಜಿತ್ ಜೊತೆ ಫೋಟೋ ಕ್ಲಿಕ್ಕಿಕೊಂಡು ಫೋಟೋವನ್ನು ಮಹಿಳೆಯ ಪತಿ ಹಂಚಿಕೊಂಡಿದ್ದಾರೆ. 

ಈ ಬಗ್ಗೆ ಮಹಿಳೆಯ ಪತಿ ಸಾಮಾಜಿಕ ಜಾಲತಾಣದಲ್ಲಿ ದೀರ್ಘ ಪೋಸ್ಟ್ ಶೇರ್ ಮಾಡಿದ್ದಾರೆ. 'ನನ್ನ ಪತ್ನಿ ಇಂದು ಗ್ಲಾಸ್ಗೋದಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದಳು. 10 ತಿಂಗಳ ಮಗುವಿನ ಜೊತೆ ಒಂಟಿಯಾಗಿ ಪಯಣ ಮಾಡುತ್ತಿದ್ದಳು. ಲಂಡನ್ ಏರ್ಪೋರ್ಟ್ ನಲ್ಲಿಅಜಿತ್ ಕುಮಾರ್ ಅವರನ್ನು ಭೇಟಿ ಮಾಡಿದರು. ಪತ್ನಿ ಮಗುವಿನ ಜೊತೆಗೆ ದೊಡ್ಡ ಸೂಟ್‌ಕೇಸ್ ಮತ್ತು ಮಗುವಿನ ಬ್ಯಾಗ್ ಕೂಡ ಜೊತೆಯಲ್ಲಿಟ್ಟುಕೊಂಡಿದ್ದರು. ಈ ಪೋಟೋಗೆ ಅಜಿತ್ ಕೇವಲ ಪೋಸ್ ನೀಡಿಲ್ಲ. ಮಗುವಿನ ಬ್ಯಾಗ್ ಅನ್ನು ಹೊತ್ತುಕೊಂಡು ಹೋಗಿ ಸಹಾಯ ಮಾಡಿದ್ದಾರೆ. ಫ್ಲೈಟ್ ಬರುವವರೆಗೂ ಬ್ಯಾಗ್ ಹಿಡಿದ್ದರು' ಎಂದು ಹೇಳಿದ್ದಾರೆ. 

ಅಜಿತ್ v/s ವಿಜಯ್; ಅತಿರೇಕಕ್ಕೇರಿದ ಫ್ಯಾನ್ ವಾರ್; ವಾರಿಸು, ತುಣಿವು ಪೋಸ್ಟರ್ ಹರಿದು ಕಿತ್ತಾಟ, ಲಾಠಿ ಚಾರ್ಜ್

ಬ್ಯಾಗ್ ಹೊತ್ತುಕೊಳ್ಳಲ ಅಜಿತ್ ಕೇಳಿದಾಗ ಪತ್ನಿ ನಿರಾಕರಿಸಿದಳು. ಆಗ ಅಜಿತ್  ಇದು ಸಾಧ್ಯನಾ, ನನಗೂ ಇಬ್ಬರೂ ಮಕ್ಕಳಿದ್ದಾರೆ, ಹಾಗಾಗಿ ಎಷ್ಟು ಕಷ್ಟ ಎನ್ನುವುದು ನನಗೂ ಗೊತ್ತಿದೆ' ಎಂದು ಅಜಿತ್ ಪ್ರತಿಕ್ರಿಯಿಸಿದ್ದನ್ನು ವಿವರಿಸಿದ್ದಾರೆ. ಲಗೇಜ್ ಅನ್ನು ಕ್ಯಾಬಿನ್ ಸಿಬ್ಬಂದಿಗೆ ನೀಡಿ ಬ್ಯಾಗ್ ಅನ್ನು ನನ್ನ ಪತ್ನಿಯ ಸೀಟ್‌ನಲ್ಲಿ ಇರಿಸುವವರೆಗೂ ಸಹಾಯ ಮಾಡಿದರು' ಎಂದು ಹೇಳಿದ್ದಾರೆ.  

ಈ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಜಿತ್ ಅವರನ್ನು ಹೊಗಳುತ್ತಿದ್ದಾರೆ. ಅಜಿತ್ ಕುಮಾರ್ ಪೋಷಕರು ಅವನನ್ನು ತುಂಬಾ ಚೆನ್ನಾಗಿ ಬೆಳೆಸಿದ್ದಾರೆ. ಎಲ್ಲಾ ಕ್ರೆಡಿಟ್ ಅವರ ಪೋಷಕರಿಗೆ ಎಂದು ಅಭಿಮಾನಿಯೊಬ್ಬ ಬರೆದುಕೊಂಡಿದ್ದಾರೆ. ಅಜಿತ್ ಅನೇಕರಿಗೆ ಸಹಾಯ ಮಾಡಿದ್ದಾರೆ. ಆದರೆ ಅವರು ಮಾಡುವ ಸಹಾಯವನ್ನು ಎಲ್ಲಿಯೂ ಬಹಿರಂಗ ಪಡಿಸಲು ಇಷ್ಟಪಡುವುದಿಲ್ಲ. ಕೆಲವೊಂದು ಮಾತ್ರ ವೈರಲ್ ಆಗುತ್ತದೆ. 

ಕಥೆ ಬದಲಾಯಿಸುವುದಿಲ್ಲ ಎಂದು ಹಠ ಮಾಡಿದ ನಯನತಾರಾ ಗಂಡ; ತಲಾ ಅಜಿತ್ ಸಿನಿಮಾದಿಂದ ಹೊರ ಬಂದ ವಿಘ್ನೇಶ್

ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟ ಅಜಿತ್ ಕೊನೆಯದಾಗಿ ತುನಿವು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬಾಕ್ಸ್ ಆಫೀಸ್ ನಲ್ಲಿ ತುನಿವು ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿತ್ತು. ಇದೀಗ AK 62 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜೊತೆಗೆ ಅಜಿತ್ ಸಿಕ್ಕಾಪಟ್ಟೆ ಟ್ರಾವೆಲಿಂಗ್ ಮಾಡುತ್ತಾರೆ. ಸದಾ ಸೈಕ್ಲಿಂಗ್, ಬೈಕ್ ಅಂತ ಸುತ್ತಾಡುತ್ತಿರುತ್ತಾರೆ. ದೇಶ-ವಿದೇಶ ಓಡಾತ್ತಿರುತ್ತಾರೆ. 

Latest Videos
Follow Us:
Download App:
  • android
  • ios