Asianet Suvarna News Asianet Suvarna News

ಅಜಿತ್ v/s ವಿಜಯ್; ಅತಿರೇಕಕ್ಕೇರಿದ ಫ್ಯಾನ್ ವಾರ್; ವಾರಿಸು, ತುಣಿವು ಪೋಸ್ಟರ್ ಹರಿದು ಕಿತ್ತಾಟ, ಲಾಠಿ ಚಾರ್ಜ್

ಕಾಲಿವುಡ್ ನಲ್ಲಿ ಅಜಿತ್ ಮತ್ತು ವಿಜಯ್ ಅಭಿಮಾನಿಗಳ ವಾರ್ ಅತಿರೇಕಕ್ಕೇರಿದ್ದು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. 

Thunivu vs Varisu: Ajith and Vijay fans fight outside Chennai cinema theater, tore movie posters sgk
Author
First Published Jan 11, 2023, 11:15 AM IST

ಕಾಲಿವುಡ್‌ನಲ್ಲಿ ಫ್ಯಾನ್ ವಾರ್ ತಾರಕಕ್ಕೇರಿದೆ. ತಲಾ ಅಜಿತ್ ಮತ್ತು ದಳಪತಿ ವಿಜಯ್ ಅಭಿಮಾನಿಗಳ ನಡುವಿನ ಕಿತ್ತಾಟ ಜೋರಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ವಾರ್ ಇದೀಗ ಚಿತ್ರಮಂದಿರದ ಅಂಗಳಕ್ಕೂ ಕಾಲಿಟ್ಟಿದೆ. ವಿಜಯ್ ಅತ್ತು ಅಜಿತ್ ಅಭಿಮಾನಿಗಳಿಬ್ಬರೂ ಚಿತ್ರದ ಪೋಸ್ಟರ್ ಹರಿದು ಕಿತ್ತಾಡಿಕೊಳ್ಳುವ ಮಟ್ಟಕ್ಕೆ ತಲುಪಿದೆ. ದಳಪತಿ ವಿಜಯ್ ನಟನೆಯ ವಾರಿಸು ಸಿನಿಮಾ ಮತ್ತು ಅಜಿತ್ ಕುಮಾರ್ ನಟನೆಯ ತುಣಿವು ಸಿನಿಮಾ ಒಂದೇ ದಿನ ತೆರೆಗೆ ಬಂದಿದೆ. ಸಂಕ್ರಾಂತಿ ಹಬ್ಬಕ್ಕೂ ಮೊದಲು ತೆರೆಗೆ ಬಂದ ತುಣಿವು ಮತ್ತು ವಾರಿಸು ಸಿನಿಮಾಗಳು ಅಭಿಮಾನಿಗಳನ್ನು ರಂಜಿಸಿದ್ದಕ್ಕಿಂತ ಹೆಚ್ಚಾಗಿ ಕಿತ್ತಾಟಕ್ಕೆ ಕಾರಣವಾಗಿದೆ.  ಕಾಲಿವುಡ್ ಬಾಕ್ಸ್ ಆಫೀಸ್ ವಾರ್ ಗಿಂತ ಅಭಿಮಾನಿಗಳ ವಾರ್ ಜೋರಾಗಿದೆ. 

ದಳಪತಿ ವಿಜಯ್ ಮತ್ತು ಅಜಿತ್ ಅಭಿಮಾನಿಗಳು ಸಿನಿಮಾ ನೋಡಲು ಚೆನ್ನೈನ ಚಿತ್ರಮಂದಿರದ ಮುಂದೆ ಹಾಜರಾಗಿದ್ದರು. ಚಿತ್ರಮಂದಿರದ ಹೊರಭಾಗದಲ್ಲಿದ್ದ ವಾರಿಸು ಪೋಸ್ಟರ್ ಅನ್ನು ಅಜಿತ್ ಅಭಿಮಾನಿಗಳು ಹರಿದು ಹಾಕಿದರು. ಅದೇ ಸಮಯಕ್ಕೆ ವಿಜಯ್ ಅಭಿಮಾನಿಗಳು ಸಹ ತುಣಿವು ಪೋಸ್ಟರ್ ಹರಿದು ಹಾಕಿದರು. ಪೋಸ್ಟರ್ ಹರಿದುಹಾಕುವ ಮೂಲಕ ಪ್ರಾರಂಭವಾದ ಜಗಳ ತಾರಕಕ್ಕೇರಿತು. ಪೋಸ್ಟರ್ ಬೆಂಕಿ ಹಚ್ಚಲು ಪ್ರಯತ್ನಿಸಿದರು. ಪರಿಸ್ಥಿತಿ ಬಿಗುಡಾಯಿಸುತ್ತಿದ್ದಂತೆ ಸ್ಥಳಕ್ಕೆ ಎಂಟ್ರಿ ಕೊಟ್ಟ ಪೊಲೀಸರು ಅಜಿತ್ ಮತ್ತು ವಿಜಯ್ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್ ಮಾಡಿ ಅಭಿಮಾನಿಗಳನ್ನು ಚದುರಿಸಿದರು.

'ಅಜಿತ್‌ಗಿಂತ ವಿಜಯ್ ದೊಡ್ಡ ಸ್ಟಾರ್' ಎಂದು ವಿವಾದ ಸೃಷ್ಟಿಸಿದ ದಿಲ್ ರಾಜು; ರೊಚ್ಚಿಗೆದ್ದ ತಲಾ ಅಭಿಮಾನಿಗಳು

ನಟ ಅಜಿತ್ ಮತ್ತು ವಿಜಯ್ ಬರೋಬ್ಬರಿ 8 ವರ್ಷಗಳ ಬಳಿಕ ಚಿತ್ರಮಂದಿರದಲ್ಲಿ ಮುಖಾಮುಖಿಯಾಗಿದ್ದಾರೆ. ಜನವರಿ 11ರಂದು ಇಬ್ಬರು ಸ್ಟಾರ್ ನಟರ ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗಿವೆ. ಅದರಲ್ಲೂ ಅಜಿತ್ ಸಿನಿಮಾ ನಿನ್ನ ರಾತ್ರಿಯೆ ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿದೆ. ಹಾಗಾಗಿ ಅಜಿತ್ ಅಭಿಮಾನಿಗಳಿಗೆ ನಿದ್ದೆ ಇಲ್ಲದ ರಾತ್ರಿಯಾಗಿತ್ತು. ವಿಜಯ್ ಸಿನಿಮಾಗಿಂತ ಮುಂಚಿತವಾಗಿಯೇ ತುಣಿವು ಸಿನಮಾ ವೀಕ್ಷಿಸಿದ್ದಾರೆ ಅಭಿಮಾನಿಗಳು. ಅದ್ದೂರಿಯಾಗಿ ಸಿನಿಮಾವನ್ನು ಸ್ವಾಗತಿಸಲಾಗಿದೆ. ಹೆಚ್ ವಿನೋದ್ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬಂದಿದ್ದು ಬೋನಿ ಕಪೂರ್ ಬಂಡವಾಳ ಹೂಡಿದ್ದಾರೆ. ತುಣಿವು ಸಿನಿಮಾದ ಮೊದಲ ಪ್ರದರ್ಶನದ ನಂತರ ವಿಜಯ್ ವಾರಿಸು ಸಿನಿಮಾ ರಿಲೀಸ್ ಆಗಿದೆ. 

100 ಕೋಟಿ ದಾಟಿದ ವಿಜಯ್ ಸಂಭಾವನೆ; 'ವಾರಿಸು' ಚಿತ್ರಕ್ಕೆ ದಾಖಲೆ ಸಂಭಾವನೆ ಪಡೆದ ದಳಪತಿ

ವಾರಿಸು ಸಿನಿಮಾದಲ್ಲಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಶರತ್ ಕುಮಾರ್, ಶಾಮ್ ಪ್ರಭು, ಶ್ರೀಕಾಂತ್, ಪ್ರಕಾಶ್ ರಾಜ್, ಯೋಗಿ ಬಾಬು ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ನಟಿಸಿದ್ದಾರೆ. ಥಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಬೀಸ್ಟ್ ಸಿನಿಮಾದ ಬಳಿಕ ವಿಜಯ್ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಬೀಸ್ಟ್ ಚಿತ್ರಮಂದಿರದಲ್ಲಿ ಹೀನಾಯ ಸೋಲು ಕಂಡಿತ್ತು. ಹಾಗಾಗಿ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. 

Follow Us:
Download App:
  • android
  • ios