ಇನ್ ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್ ಕಾರ್ಯಕ್ರಮದಲ್ಲಿ ಅಜಯ್ ದೇವಗನ್ ವೈಯಕ್ತಿಕ ಜೀವನ ಹಾಗೂ ಔದ್ಯೋಗಿಕ ಜೀವನದ ಬಗ್ಗೆ ಮಾತನಾಡಿದ ನಟ

ಪ್ರಸಿದ್ಧ ಶೋ ಇನ್ ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್ ಕಾರ್ಯಕ್ರಮದಲ್ಲಿ ಈ ಬಾರಿ ಬಾಲಿವುಡ್ ಸ್ಟಾರ್ ನಟ, ನಟಿ ಕಾಜೊಲ್ ಅವರ ಪತಿ ಅಜಯ್ ದೇವಗನ್ ಭಾಗವಹಿಸಿದ್ದಾರೆ. ಡಿಸ್ಕವರ್ ಪ್ಲಸ್‌ನಲ್ಲಿ ಅಕ್ಟೋಬರ್‌ 22ರಂದು ಪ್ರಸಾರವಾಗುವ ಎಪಿಸೋಡ್‌ನಲ್ಲಿ ಅಜಯ್ ದೇವಗನ್ ಕಾಣಿಸಿಕೊಳ್ಳಲಿದ್ದಾರೆ.

ಥಾನಾಜಿ ನಟ ಈ ಶೋನಲ್ಲಿ ತಮ್ಮ ವೈಯಕ್ತಿಕ ಜೀವನ ಹಾಗೂ ಔದ್ಯೋಗಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ನಟ ತಮ್ಮ ತಂದೆ ವೀರು ದೇವಗನ್ ಬಗ್ಗೆ ಮಾತನಾಡಿದ್ದಾರೆ.

ಅಜಯ್ ದೇವಗನ್: ಆಕ್ಷನ್ ಹೀರೋ

ಅಜಯ್ ದೇವಗನ್ ಇತ್ತೀಚೆಗೆ ಮಾಲ್ಡೀವ್ಸ್‌ನಲ್ಲಿ ಇಂಟೂ ದ ವೈಲ್ಡ್ ವಿತ್ ಬೇರ್ ಗ್ರಿಲ್ಸ್ ಎಪಿಸೋಡ್‌ಗಾಗಿ ಚಿತ್ರೀಕರಿಸಿದ್ದಾರೆ. ಆಕ್ಷನ್ ಹೀರೋ ಆಗಿದ್ದ ದಿನಗಳನ್ನು ನೆನಪಿಸಿಕೊಂಡ ಅಜಯ್, ನಾನು ಸಾಕಷ್ಟು ಸಾಹಸಗಳನ್ನು ಮಾಡಿದ್ದೇನೆ. ಏಕೆಂದರೆ ನಾವು ಸಿನಿಮಾಗಳಲ್ಲಿ ಸಾಹಸಗಳನ್ನು ಮಾಡಲು ಪ್ರಾರಂಭಿಸಿದಾಗ ಯಾವುದೇ ವ್ಯವಸ್ಥೆಗಳು ಇರಲಿಲ್ಲ. ಆದ್ದರಿಂದ, ನಾವು 30 ಅಥವಾ 40 ಅಡಿಗಳಿಂದ ಜಿಗಿಯಬೇಕಾಗಿತ್ತು.

View post on Instagram

ನೀವು ಪೆಟ್ಟಿಗೆಗಳ ಮೇಲೆ ಇಳಿಯಬೇಕಾಗಿತ್ತು. ಹೆಚ್ಚಿನ ಸಮಯದಲ್ಲಿ ನಮ್ಮ ಕಾಲು ಅಥವಾ ಇನ್ನೇನ್ನಾದರೂ ಮುರಿಯುತ್ತಿತ್ತು. ನೀವು ನೆಲದ ಮೇಲೆ ಬೀಳುವಾಗ ಕ್ರ್ಯಾಶ್ ಮ್ಯಾಟ್ಸ್ ಕೂಡಾ ಇರಲಿಲ್ಲ. ಆದ್ದರಿಂದ ನಾವು ನೈಜ್ಯತೆಯನ್ನು ಶೂಟ್ ಮಾಡುತ್ತಿದ್ದೆವು ಎಂದಿದ್ದಾರೆ.

ತಂದೆಯ ಕುರಿತು ಅಜಯ್ ಮಾತು

ಅಜಯ್ ದೇವಗನ್ ಅವರ ಜನ್ಮದಿನದಂದು ಅವರ ತಂದೆ ವೀರೂ ದೇವಗನ್ ಅವರನ್ನು ನೆನಪಿಸಿಕೊಂಡಿದ್ದಾರೆ. ಆಕ್ಷನ್ ಡೈರೆಕ್ಟರ್ ಮೇ 27, 2019 ರಂದು ನಿಧನರಾದರು. ಅವರ ತಂದೆಯನ್ನು ಕಳೆದುಕೊಂಡ ಬಗ್ಗೆ ಮಾತನಾಡಿ ನಿಮ್ಮ ಹೆತ್ತವರನ್ನು ಕಳೆದುಕೊಳ್ಳುವುದು ಕಷ್ಟ. ಏಕೆಂದರೆ ನಿಮ್ಮ ಜೀವನದ ಮೊದಲ 20 ವರ್ಷಗಳಲ್ಲಿ ನೀವು ಅವರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅವರು ಮೂರ್ಖರು ಎಂದು ನೀವು ಯೋಚಿಸುತ್ತೀರಿ. ಅವರು ಕಾಯಿಲೆಯಿಂದ ಬಳಲುತ್ತಿದ್ದರು. ಸ್ಟಂಟ್‌ಗಳಿಂದಾಗಿ ಸಾಕಷ್ಟು ಗಾಯಗಳಾಗಿತ್ತು. ಅವರ ತಲೆಯ ಮೇಲೆ 45 ಹೊಲಿಗೆಗಳನ್ನು ಹೊಂದಿದ್ದರು ಎಂದಿದ್ದಾರೆ.

YouTube video player

ನಟ ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅಜಯ್ ದೇವಗನ್ ಅನೇಕ ಸಿನಿಮಾ ತಯಾರಿಸುತ್ತಿದ್ದಾರೆ. ಅವರು ಗಂಗೂಬಾಯಿ ಕಾಠಿಯಾವಾಡಿ, ಎಸ್‌ಎಸ್ ರಾಜಮೌಳಿಯ ಆರ್‌ಆರ್‌ಆರ್, ಮೈದಾನ್ ಮತ್ತು ಅವರ ನಿರ್ದೇಶನದ ಮೇಡೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಡಿಸ್ನಿ+ಹಾಟ್‌ಸ್ಟಾರ್‌ನ ವೆಬ್ ಸರಣಿ ರುದ್ರ: ದಿ ಎಡ್ಜ್ ಆಫ್ ಡಾರ್ಕ್‌ನೆಸ್‌ನೊಂದಿಗೆ ತಮ್ಮ ಡಿಜಿಟಲ್ ಪ್ರವೇಶವನ್ನು ಮಾಡಲು ಸಜ್ಜಾಗಿದ್ದಾರೆ.