Asianet Suvarna News Asianet Suvarna News

ಸಂಜಯ್​ ದತ್​ಗೆ ಅಜಯ್​ ದೇವಗನ್​ ಫ್ಯಾಮಿಲಿ ಡಾಕ್ಟರ್​ ಅಂತೆ! ಔಷಧದ ಗುಟ್ಟು ತಿಳಿಸಿದ ನಟ

ಸಂಜಯ್​ ದತ್​ ಅವರಿಗೆ ಅಜಯ್​ ದೇವಗನ್​ ಅವರೇ ಫ್ಯಾಮಿಲಿ ಡಾಕ್ಟರ್​ ಅಂತೆ. ಈ ವಿಷಯವನ್ನು ಅವರು ಬಹಿರಂಗಗೊಳಿಸಿದ್ದಾರೆ. ಹಾಗಿದ್ದರೆ ಅಜಯ್​ ದೇವಗನ್​ ನೀಡುವ ಔಷಧ ಯಾವುದು? 
 

Ajay Devgn is Sanjay Dutts family doctor by  special medicines suc
Author
First Published Aug 5, 2023, 5:51 PM IST

ಬಹುತೇಕ ಮಂದಿಗೆ ಫ್ಯಾಮಿಲಿ ಡಾಕ್ಟರ್​ ಎಂದು ಒಬ್ಬ ವೈದ್ಯ ಇರುತ್ತಾರೆ. ಇನ್ನು ಸಿನಿಮಾ ಮಂದಿಗೆ ಕೇಳಬೇಕೆ? ಅವರಿಗಂತೂ ವೈದ್ಯರು ಇದ್ದೇ ಇರುತ್ತಾರೆ. ಅದೇ ರೀತಿ ಬಾಲಿವುಡ್ ಸೂಪರ್​ಸ್ಟಾರ್​ ಸಂಜಯ್ ದತ್ (Sanjay Dutt) ಅವರಿಗೂ ಮನೆ ವೈದ್ಯರು ಇದ್ದಾರೆ. ಅದರಲ್ಲೇನು ವಿಶೇಷ ಅಂತೀರಾ? ವಿಶೇಷ ಇರುವುದು ಅಲ್ಲಿಯೇ. ಸಂಜಯ್​ ದತ್​ ಅವರ ಫ್ಯಾಮಿಲಿ ಡಾಕ್ಟರ್​ ಬೇರಾರೂ ಅಲ್ಲ, ಖುದ್ದು ಇನ್ನೋರ್ವ ನಟ, ಕಾಜೋಲ್​ ಪತಿ ಅಜಯ್​ ದೇವಗನ್​ ಅಂತೆ! ಹೌದು. ಈ ವಿಷಯವನ್ನು ದಿ ಕಪಿಲ್​ ಶರ್ಮಾ ಟಿವಿ ಷೋನಲ್ಲಿ ಹಿಂದೊಮ್ಮೆ ಸಂಜಯ್​ ದತ್​ ತಿಳಿಸಿದ್ದು, ಅದರ ವಿಡಿಯೋ ಇದೀಗ ವೈರಲ್​ ಆಗುತ್ತಿದೆ.  ಅಜಯ್‌ಗೆ ಔಷಧಿಗಳ ಬಗ್ಗೆ ಸಾಕಷ್ಟು ಜ್ಞಾನವಿದೆ ಎಂದು ಸಂಜಯ್ ದತ್ ಕಾರ್ಯಕ್ರಮದಲ್ಲಿ ಹೇಳಿದ್ದರು. 

ಹಾಗಿದ್ದರೆ ಅಜಯ್​ ದೇವಗನ್​ ಮೆಡಿಕಲ್​ ಓದಿದ್ದಾರಾ ಅಥವಾ ಮನೆ ಮದ್ದಿನ ರೀತಿ ಏನಾದರೂ ಉತ್ತಮ ಔಷಧ ಕೊಡುತ್ತಾರಾ ಎಂದು ಎಲ್ಲರೂ ಅಂದುಕೊಳ್ಳಬಹುದು. ಆದರೆ ಅಸಲಿಗೆ ಅಜಯ್​ ದೇವಗನ್​ (Ajay Devgn) ಅವರು ಸಂಜಯ್​ ದಂತ್​ ಅವರಿಗೆ ಕೊಡುವ ಔಷಧಗಳು ಇವ್ಯಾವುವೂ ಅಲ್ಲ. ಈ ಷೋನದಲ್ಲಿ ಕಪಿಲ್​ ಶರ್ಮಾ ಅವರು ಸಂಜಯ್​ ದತ್​ ಅವರಿಗೆ ಫ್ಯಾಮಿಲಿ ಡಾಕ್ಟರ್​ ಬಗ್ಗೆ ಕೇಳಿದ ಪ್ರಶ್ನೆಗೆ ನಟ, ಅಜಯ್​ ದೇವಗನ್​ ಹೆಸರು ಹೇಳಿದ್ದಾರೆ. ನಂತರ ಈ ಬಗ್ಗೆ ಇನ್ನಷ್ಟು ವಿಸ್ಕೃತವಾಗಿ ಕೇಳಿದಾಗ, ನಿಜ ನಿಜ... ಅಜಯ್​ ಬಳಿ ಅತ್ಯುತ್ತಮ ಔಷಧಗಳಿವೆ. ಯಾವುದೇ ಸಮಸ್ಯೆ ಇದ್ದರೂ ಅದನ್ನು ತೆಗೆದುಕೊಂಡರೆ ಗುಣಮುಖ ಆಗಿಬಿಡುತ್ತದೆ ಎಂದು ಜೋರಾಗಿ ನಕ್ಕಿರುವ ಸಂಜಯ್​ ದತ್​. ಎರಡೇ ಎರಡು ಹನಿಗಳನ್ನು ತೆಗೆದುಕೊಂಡರೂ ಸಾಕು  ಎಲ್ಲವೂ ಗುಣವಾಗುತ್ತದೆ ಎಂದಿದ್ದಾರೆ!

Sanjay Dutt Birthday: 308 ಗರ್ಲ್​ಫ್ರೆಂಡ್ಸ್ ಜೊತೆ ಡೇಟಿಂಗ್​; ಲವ್​ಗೆ ಮುನ್ನ ಸ್ಮಶಾನಕ್ಕೆ ಭೇಟಿ?

  ಸಂಜಯ್ ದತ್ ಅವರು ಅಜಯ್ ದೇವಗನ್ ಅವರನ್ನು ತಮ್ಮ ಕುಟುಂಬ ವೈದ್ಯ ಎಂದು ಬಣ್ಣಿಸಿದರು ಮತ್ತು ಅಜಯ್​ ದೇವಗನ್​ ಔಷಧಿಗಳು ಮತ್ತು ಹೋಮಿಯೋಪತಿಯ (Homeopathy) ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿದ್ದಾರೆ ಎಂದು ಹೇಳಿದರು. ಇದರ ಬಗ್ಗೆ ವಿವರಿಸುತ್ತಾ, ಅವರ ಬಳಿ ಅಂತಹ ಔಷಧಿ ಇದೆ, ದಿನ ರಾತ್ರಿ 60 ರಿಂದ 90 ತೆಗೆದುಕೊಂಡರೆ ಅದು ಸಕತ್​ ವರ್ಕ್​ ಆಗುತ್ತದೆ. ರಾತ್ರಿ ಈ ಔಷಧ ಕುಡಿದು ಮಲಗಿದರೆ ಬೆಳಿಗ್ಗೆ ಎಲ್ಲವೂ ಸರಿಯಾಗಿಬಿಡುತ್ತದೆ ಎಂದಿದ್ದಾರೆ! ಇದಾಗಲೇ ಸಂಜಯ್​ ದತ್​ ಯಾವ ಔಷಧದ ಬಗ್ಗೆ ಮಾತನಾಡಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುತ್ತದೆ.

ಸಂಜಯ್​ ದತ್​ ಅವರ ಸ್ವಭಾವವೇ ಹಾಗೆ.  ಅವರು ಯಾವ ವಿಚಾರಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ತಮ್ಮ ವೈಯಕ್ತಿಕ ಜೀವನವನ್ನು ಖುಲ್ಲಂಖುಲ್ಲಾ ಆಗಿ ಹೇಳಿಕೊಳ್ಳುತ್ತಾರೆ. ತಮ್ಮ ಜೀವನದ ಹಲವು ಗುಟ್ಟುಗಳನ್ನು,  ಕಾಂಟ್ರವರ್ಸಿ ವಿಚಾರಗಳನ್ನು ಕೂಡ ಅವರು ಕಾರ್ಯಕ್ರಮಗಳಲ್ಲಿ ತೆರೆದಿಟ್ಟಿರುವುದು ಇದೆ. ಕಳೆದ ಕೆಲ ದಿನಗಳ ಹಿಂದೆ ತಮಗೆ 308 ಗರ್ಲ್​​ಫ್ರೆಂಡ್ಸ್ ಇದ್ದರು ಎಂಬ ವಿಚಾರವನ್ನೂ ಅವರು ಹೇಳಿದ್ದರು. ಇನ್ನು ಇವರ ಚಿತ್ರದ ಕುರಿತು ಹೇಳುವುದಾದರೆ,  ಟಾಲಿವುಡ್​ನ  ‘ಡಬಲ್ ಇಸ್ಮಾರ್ಟ್​’ ಚಿತ್ರ ಸದ್ಯ ಇವರ ಕೈಯಲ್ಲಿದ್ದು, ಇದರಲ್ಲಿ ಖಳನಾಯಕನಾಗಿ ನಟಿಸುತ್ತಿದ್ದಾರೆ.  ಅವರ ಹುಟ್ಟುಹಬ್ಬದಂದು  ಇತ್ತೀಚೆಗೆ ಈ ಚಿತ್ರದ ಫಸ್ಟ್​ ಲುಕ್ ರಿಲೀಸ್ ಆಗಿತ್ತು.  ಬಿಗ್ ಬುಲ್ ಎಂದು ಪಾತ್ರಕ್ಕೆ ಹೆಸರು ಇಡಲಾಗಿದೆ. ಕನ್ನಡದ ‘ಕೆಡಿ’ ಚಿತ್ರಕ್ಕೂ ಸಹಿ ಹಾಕಿರುವ ಸಂಜುಬಾಬಾ ಅಲ್ಲಿಯೂ ಖಳನಾಯಕನಾಗಿ ನಟಿಸುತ್ತಿದ್ದಾರೆ.  ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರುವ ಈ ಚಿತ್ರವನ್ನು ಪ್ರೇಮ್  (Prem) ನಿರ್ದೇಶನ ಮಾಡುತ್ತಿದ್ದಾರೆ. 

ಬಾಲಿವುಡ್ ತೊರೆದೇ ಬಿಟ್ರಾ ಸಂಜು ಬಾಬಾ: ಸೌತ್ ಚಿತ್ರರಂಗದಲ್ಲಿ ಫುಲ್ ಬ್ಯುಸಿ ಅಧಿರಾ..!

Follow Us:
Download App:
  • android
  • ios