ಐಶ್ವರ್ಯಾ ರೈ ಸೊಸೆ ಬಚ್ಚನ್ ಕುಟುಂಬದ ಕುಡಿ ನವ್ಯಾ ನವೇಲಿ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಪ್ಯಾರೀಸ್ ಫ್ಯಾಷನ್‌ ವೀಕ್‌ನಲ್ಲಿ ಭಾಗವಹಿಸಿ, ಅತ್ತೆಯಂತೆಯೇ  ಪ್ರತಿಷ್ಠಿತ ಕಾಸ್ಮೆಟಿಕ್ ಬ್ರಾಂಡ್‌ ಲೋರಿಯಲ್‌ ಅನ್ನು ಪ್ರತಿನಿಧಿಸಿದ್ದಾರೆ.

ಸಿನಿಮಾ ಹಾಗೂ ಮಾಡೆಲಿಂಗ್ ಎರಡಕ್ಕೂ ಅವಿನಾಭಾವ ಸಂಬಂಧ, ಮಾಡೆಲಿಂಗ್‌ನಲ್ಲಿ ಫ್ಯಾಷನ್‌ ಶೋನಲ್ಲಿ ಮಿಂಚಿದವರು ಸಿನಿಮಾಗೆ ಸುಲಭವಾಗಿ ಎಂಟ್ರಿ ಪಡೆಯುತ್ತಾರೆ. ಆದರೆ ಬಾಲಿವುಡ್‌ ಬಿಗ್‌ ಬಿ ಅಮಿತಾಭ್ ಬಚ್ಚನ್ ಅವರ ಮೊಮ್ಮಗಳಿಗೆ ಸಿನಿಮಾದಲ್ಲಿ ಮಿಂಚುವ ಆಸೆ ಇದ್ದಿದ್ದರೆ ಆಕೆಗೆ ಮಾಡೆಲಿಂಗ್ ಮೂಲಕವೇ ಎಂಟ್ರಿ ಪಡೆಯಬೇಕಾದ ಅಗತ್ಯ ಇರಲಿಲ್ಲ. ಏಕೆಂದರೆ ಅಜ್ಜ ಅಮಿತಾಬ್‌ ಅಜ್ಜಿ ಜಯಾ ಬಚ್ಚನ್‌ ಅತ್ತೆ ಐಶ್ವರ್ಯಾ ರೈ (Ishwarya Rai) ಮಾವ ಅಭಿಷೇಕ್ (Abhishek Bachchan) ಎಲ್ಲರೂ ಸಿನಿಮಾ ರಂಗದಲ್ಲಿ ಪಳಗಿದವರೇ ಒಂದು ಚಿಟಿಕೆ ಹೊಡೆದರು ಅವಕಾಶಗಳ ಮಳೆಯೇ ಸುರಿಯುತ್ತದೆ. ಆದರೆ ಬುದ್ಧಿವಂತೆ ವಿದ್ಯಾವಂತೆ ಅನುರೂಪ ಸುಂದರಿಯೂ ಆಗಿರುವ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ತಮ್ಮ ಅತ್ಯಾಕರ್ಷಕ ಸೌಂದರ್ಯದ ಹೊರತಾಗಿಯೂ ಸಿನಿಮಾರಂಗದಿಂದ ದೂರವೇ ಉಳಿದು ತಮ್ಮದೇ ಆದ ಪ್ರಾಜೆಕ್ಟ್ ನವೇಲಿ (Project Naveli) ಎಂಬ ಸಂಸ್ಥೆಯೊಂದನ್ನು ಮುನ್ನಡೆಸುತ್ತಿದ್ದಾರೆ. ಇಂತಹ ನವೇಲಿ ಈಗ ಮೊತ್ತ ಮೊದಲ ಬಾರಿಗೆ ಪ್ರತಿಷ್ಠಿತ ಪ್ಯಾರೀಸ್ ಫ್ಯಾಷನ್‌ ವೀಕ್‌ನಲ್ಲಿ ಪ್ರತಿಷ್ಠಿತ ಕಾಸ್ಮೆಟಿಕ್ ಬ್ರಾಂಡ್‌ ಲೋರಿಯಲ್‌ ಅನ್ನು ಪ್ರತಿನಿಧಿಸಿದ್ದರು. ರಾಂಪ್‌ ಮೇಲೆ ಹೆಜ್ಜೆ ಇಟ್ಟ ನವ್ಯಾ ನವೇಲಿ ಹಲ್ಚಲ್ ಸೃಷ್ಟಿಸಿದ್ದಾರೆ. ವಿಶೇಷವೆಂದರೆ ಅತ್ತೆ ಐಶ್ವರ್ಯಾ ರೈ ಕೂಡ ಈ ಪ್ಯಾರೀಸ್‌ ಫ್ಯಾಷನ್ ವೀಕ್‌ನಲ್ಲಿ ಇದೇ ಬ್ರಾಂಡ್ ಅನ್ನು ಪ್ರತಿನಿಧಿಸಿದ್ದರು. ಈಗ ಅತ್ತೆಯ ನವ್ಯಾ ಕೂಡ ಭಾಗವಹಿಸುವ ಮೂಲಕ ಅತ್ತೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. 

ನವ್ಯಾ ನವೇಲಿ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಹೆಜ್ಜೆ ಹಾಕುತ್ತಿರುವ ವೀಡಿಯೋ ಈಗ ವೈರಲ್ ಆಗಿದ್ದು, ದೂರದಲ್ಲಿ ನಿಂತು ಅಮ್ಮ ಶ್ವೇತಾ ನಂದಾ (Shweta Bachchan) ಹಾಗೂ ತಾಯಿ ಜಯಾ ಬಚ್ಚನ್ ತಮ್ಮ ಮುದ್ದಿನ ಮೊಮ್ಮಗಳಿಗೆ ಪ್ರೋತ್ಸಾಹಿಸಿದ್ದಾರೆ. ಈ ಫ್ಯಾಷನ್ ವೀಕ್‌ನಲ್ಲಿ (Fashion week) ಭಾಗವಹಿಸುವ ಸಲುವಾಗಿ ಅಮ್ಮ ಹಾಗೂ ಅಜ್ಜಿಯ ಜೊತೆ ನವ್ಯಾ ನಂದಾ ಪ್ಯಾರೀಸ್‌ಗೆ ತೆರಳಿದ್ದರು. ಈ ಫ್ಯಾಷನ್ ವೀಕ್‌ನ ಫೋಟೋ ಹಾಗೂ ವೀಡಿಯೋಗಳನ್ನು ಸ್ವತಃ ನವ್ಯ ತಾಯಿ ಶ್ವೇತಾ ನಂದಾ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಜೊತೆಗೆ ಮಗಳಿಗಾಗಿ ಭಾವುಕ ಬರಹವೊಂದನ್ನು ಬರೆದಿದ್ದಾರೆ. 

ಪ್ರಧಾನಿಗೆ ಸಿಕ್ಕಿದ ಗಿಫ್ಟ್‌ಗಳ ಹರಾಜು: ಈ ಪ್ರಕ್ರಿಯೆಯಲ್ಲಿ ನೀವೂ ಭಾಗವಹಿಸಬಹುದು

ಈ ವಾರಾಂತ್ಯ ಎಲ್ಲಾ ರಸ್ತೆಗಳು ಪ್ಯಾರಿಸ್‌ನತ್ತ ಸೆಳೆದವು. ವಿಶೇಷವಾಗಿ ನವ್ಯಾ ಲೋರಿಯಲ್‌ ವಿಚಾರಗಳಲ್ಲೇ ಗಮನ ಕೇಂದ್ರಿಕರಿಸಿದ್ದರಿಂದ ನನಗೆ ಹಾಗೂ ನನ್ನ ತಾಯಿಗೆ ಈ ಕಾರ್ಯಕ್ರಮವೂ ಒಂದು ವಿಶೇಷ ಅನುಭವವಾಗಿತ್ತು. ನಾನು ಹಾಗೂ ನನ್ನ ತಾಯಿ (Jaya Bachchan)ತಿರುಗುವುದಕ್ಕಿಂತ ಹೆಚ್ಚು ತಿನ್ನುವುದರಲ್ಲೇ ಬ್ಯುಸಿ ಆಗಿದ್ದೆವು. ನಮ್ಮ ಪುಟ್ಟ ಹುಡುಗಿ ಫ್ಯಾಷನ್‌ ವೀಕ್‌ನಲ್ಲಿ ನಗುವಿನೊಂದಿಗೆ ವೇದಿಕೆಯಲ್ಲಿ ಹೆಜ್ಜೆ ಇಟ್ಟಾಗ ನಾನು ಹಾಗೂ ಅಮ್ಮ ಭಾವುಕರಾಗಿ ಕಣ್ಣೀರನ್ನು ತಡೆದುಕೊಂಡೆವು. ಈ ಶೋ ನಮನ್ನು ತುಂಬಾ ಭಾವುಕರನ್ನಾಗಿಸಿತ್ತು. ಇದು ಆಕೆ ಅವಳ ಮೊದಲ ಹುಟ್ಟುಹಬ್ಬಕ್ಕೂ ಮೊದಲು ಆಕೆ ಇಟ್ಟ ಮೊದಲ ಹೆಜ್ಜೆಗಳನ್ನು ನನಗೆ ನೆನಪು ಮಾಡಿತ್ತು. ಎಲ್ಲಾ ಪೋಷಕರು ಇದನ್ನು ಹೇಳುತ್ತಾರೆ, ಇದೊಂದು ಕಿರಿಕಿರಿ ವಿಚಾರವೆಂದು ಅದು ನಿಜ, ಆಕೆ ಕೆಂಪು ಬಣ್ಣದ ಧಿರಿಸು ಧರಿಸಿದ್ದಳು. ಐಫೆಲ್ ಟವರ್ ಗುಲಾಬಿ ಬಣ್ಣಕ್ಕೆ ತಿರುಗಿತು, ಮತ್ತು ನಾವು ತುಂಬಾ ಹೆಮ್ಮೆಯಿಂದ, ತುಂಬಾ ಭಾವನಾತ್ಮಕವಾಗಿ ಹಾಗೂ ತುಂಬಾ ಹಸಿವಿನಿಂದ ಮನೆಗೆ ಹೋದೆವು. ಅಲ್ಲದೇ ಫ್ಯಾಷನ್ ಶೋದಲ್ಲಿ ಚಾಕೋಲೇಟ್ ತಿನ್ನುವುದು ಸರಿಯಲ್ಲವಾದರೂ ನಾವು ಚಾಕೋಲೇಟ್ ತಿಂದೆವು, ಏಕೆಂದರೆ ಅದಕ್ಕೆ ನಾವು ಯೋಗ್ಯರಾಗಿದ್ದೆವು ಎಂದು ಶ್ವೇತಾ ನಂದಾ ಮಗಳು ಭಾಗವಹಿಸಿದ ಫ್ಯಾಷನ್ ವೀಕ್‌ ಬಗ್ಗೆ ಬರೆದುಕೊಂಡು ಭಾವುಕರಾಗಿದ್ದರು. 

ಗೋಲ್ಡನ್‌ ಟೆಂಪಲ್‌ಗೆ ಭೇಟಿ ನೀಡಿ ಪಾತ್ರೆ ತೊಳೆದ ರಾಹುಲ್‌ ಗಾಂಧಿ

ಅಮ್ಮನ ಪೋಸ್ಟ್‌ಗೆ ಮಗಳು ಪ್ರತಿಕ್ರಿಯಿಸಿದ್ದು, ನೀವಿಬ್ಬರೂ ನನಗೆ ಬೇಕಾದ ಶಕ್ತಿಯನ್ನು ನೀಡಿದ್ದೀರಿ ಎಂದು ಹೇಳಿದ್ದಾರೆ. ಈ ಪೋಸ್ಟ್‌ಗೆ ಲಿಟ್ಲ್‌ ಮಿಸ್ ಲೋರಿಯಲ್ ಎಂದು ಶ್ವೇತಾ ನಂದ ಶೀರ್ಷಿಕೆ ನೀಡಿದ್ದಾರೆ. ನವ್ಯಾ ಹೊರತಾಗಿ ಬಚ್ಚನ್ ಕುಟುಂಬದ ಸೊಸೆ, ಐಶ್ವರ್ಯಾ ರೈ ಅವರು ಹಲವು ವರ್ಷಗಳ ಕಾಲ ಲೋರಿಯಲ್ ಬ್ರಾಂಡ್‌ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಅನೇಕ ಮಾಡೆಲ್ ಸೆಲೆಬ್ರಿಟಿಗಳ ಜೊತೆ ಐಶ್ವರ್ಯಾ ರಾಂಪ್ ವಾಕ್ ಮಾಡಿ ಕಾಸ್ಮೆಟಿಕ್ ದೈತ್ಯ ಲೋರಿಯಲ್ ಅನ್ನು ಪ್ರತಿನಿಧಿಸಿದ್ದರು. 

ದೇಶದ ಹಲವು ರಾಜ್ಯಗಳಲ್ಲಿದೆ ಜಗದೋದ್ಧಾರಕನಿಗೆ ಆಸ್ತಿ: ಪುರಿ ಜಗನ್ನಾಥ ಎಷ್ಟೊಂದು ಶ್ರೀಮಂತ

View post on Instagram