ಎಲ್ಲೆಡೆ ಮಗಳನ್ನು ಕರೆದೊಯ್ಯುವ ಐಶ್ವರ್ಯಾ: ಎಲ್ಲರ ಕಾಡ್ತಿರೋ ಪ್ರಶ್ನೆಗೆ ಮುಖ ತಿರುಗಿಸಿ ನಟಿ ಕೊಟ್ಟ ಉತ್ತರವೇನು?
ತಾವು ಎಲ್ಲೇ ಹೋದರೂ ಮಗಳನ್ನು ಶಾಲೆ ತಪ್ಪಿಸಿ ಕರೆದುಕೊಂಡು ಹೋಗುವ ಐಶ್ವರ್ಯ ರೈಗೆ ಪತ್ರಕರ್ತರು ನೇರವಾಗಿಯೇ ಪ್ರಶ್ನೆ ಕೇಳಿದ್ದು ನಟಿ ಹೇಳಿದ್ದೇನು ನೋಡಿ.
ನಟಿ ಐಶ್ವರ್ಯ ರೈ ಎಲ್ಲಿಯೇ ಹೋದರೂ ತಮ್ಮ ಮಗಳು ಆರಾಧ್ಯಳನ್ನು ಕರೆದುಕೊಂಡೇ ಹೋಗುವ ಬಗ್ಗೆ ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇದಕ್ಕೆ ಪರ-ವಿರೋಧ ನಿಲುವುಗಳು ವ್ಯಕ್ತವಾಗುತ್ತಿವೆ. ಇದಕ್ಕೆ ಮುಖ್ಯ ಕಾರಣ ಎಂದರೆ ಆರಾಧ್ಯಾಳಿಗೆ ಈಗ 12 ವರ್ಷ ವಯಸ್ಸು. ಆದರೆ ವಯಸ್ಸಿಗೂ ಮೀರಿದಂತೆ ದೇಹ ಬೆಳವಣಿಗೆ ಆಗಿದ್ದರೂ, ಆಕೆ ಅಮ್ಮನ ಸೆರಗು ಹಿಡಿದುಕೊಂಡು ಪುಟ್ಟ ಮಗುವಿನಂತೆ ವರ್ತಿಸುತ್ತಿದ್ದಾಳೆ ಎನ್ನುವುದು ಬಹುತೇಕರ ಅಭಿಪ್ರಾಯ. ಶಾಲೆಗೆ ಹೋಗುವ ಬಾಲಕಿಯನ್ನು ಹೀಗೆ ಎಲ್ಲೆಂದರಲ್ಲಿ ಕರೆದುಕೊಂಡು ಹೋಗುವುದು ಸರಿಯಲ್ಲ ಎನ್ನುವುದು ಹಲವರ ಅಭಿಮತವಾಗಿದೆ. ಅಷ್ಟಕ್ಕೂ ಅವರ ಮಗಳು ಅವರ ಇಷ್ಟ, ಉಳಿದವರು ತಲೆಯಾಕೆ ಕೆಡಿಸಿಕೊಳ್ಳಬೇಕು ಎಂದು ಇದಕ್ಕೆ ಹಲವರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹೀಗೆ ಪಾಲಕರು ಅಗತ್ಯಕ್ಕಿಂತ ಹೆಚ್ಚಿಗೆ ಕಾಳಜಿ ತೋರಿದರೆ ಮುಂದೊಂದು ದಿನ ಅದು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಹಲವರ ಕಾಳಜಿಯಾಗಿದ್ದು, ಅದಕ್ಕೆ ಉದಾಹರಣೆ ಎಂಬಂತೆ ಐಶ್ವರ್ಯ ರೈ ಅವರನ್ನು ಬಿಂಬಿಸಲಾಗುತ್ತಿದೆ ಎನ್ನುತ್ತಿದ್ದಾರೆ ಮತ್ತೆ ಕೆಲವರು.
ಇದೀಗ, ಪ್ಯಾರೀಸ್ ಫ್ಯಾಷನ್ ವೀಕ್ನಿಂದ ಮುಂಬೈಗೆ ಬಂದಿರುವ ಐಶ್ವರ್ಯ ರೈ ಇದೀಗ ದುಬೈಗೆ ಹಾರಿದ್ದು ಅಲ್ಲಿ ಕೂಡ ಆರಾಧ್ಯ ಅವಳನ್ನು ಅಂಟಿಕೊಂಡೇ ಇರುವುದನ್ನು ನೋಡಬಹುದು. ಈಗಲೂ ನೆಟ್ಟಿಗರಿಂದ ಅದೇ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ರೀತಿ ಅತಿಯಾಗಿರುವ ಪಾಸೆಸಿನೆಸ್ ಸರಿಯಲ್ಲ, ಅವಳನ್ನು ನೋಡಿದರೆ ಇನ್ನೂ ಚಿಕ್ಕ ಪಾಪು ರೀತಿಯಲ್ಲಿ ವರ್ತಿಸುತ್ತಿದ್ದಾಳೆ. ಈಗ ಅದು ಚೆನ್ನಾಗಿ ಕಾಣಿಸಬಹುದು, ಆದರೆ ಮುಂದೆ ಇಂಥ ಮಕ್ಕಳು ತಮ್ಮ ಬಗ್ಗೆ ಸ್ವತಂತ್ರವಾಗಿ ಯೋಚಿಸಲು ಸಾಧ್ಯವಾಗದೇ ಹೋಗಬಹುದು, ಹೀಗೆ ಅತಿಯಾದ ಕಾಳಜಿಯಿಂದ ಮಕ್ಕಳನ್ನು ಸಾಕಿದರೆ, ಮುಂದೆ ದೊಡ್ಡ ಅನಾಹುತ ಆಗುತ್ತದೆ, ಇದು ಐಶ್ವರ್ಯಳ ಬಗೆಗಿನ ಪ್ರಶ್ನೆಯಲ್ಲ, ಹೀಗೆ ತಮ್ಮ ಮಕ್ಕಳನ್ನು ಅತಿ ಎನ್ನುವಷ್ಟು ಜೋಪಾನ ಮಾಡುವ ಎಲ್ಲಾ ತಾಯಂದಿರಿಗೂ ಸಮರ್ಪಣೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
ಮಕ್ಕಳನ್ನು ಹ್ಯಾಂಡ್ಬ್ಯಾಗ್ನಂತೆ ಬಳಸೋದೆಂಥ ಸಂಸ್ಕೃತಿ? ಐಶ್ವರ್ಯ ರೈಗೆ ಮಾಳವಿಕಾ ಅವಿನಾಶ್ ಹೇಳಿದ್ದಿಷ್ಟು...
ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ವಾದ-ಪ್ರತಿವಾದಗಳ ನಡುವೆಯೇ, ಪತ್ರಕರ್ತರು ಖುದ್ದು ನಟಿಗೇ ಈ ಪ್ರಶ್ನೆಯನ್ನು ಕೇಳಿದ್ದಾರೆ. ನಿಮ್ಮ ಮಗಳು ಸದಾ ನಿಮ್ಮ ಜೊತೆ ಯಾಕೆ ಇರುತ್ತಾರೆ ಎಂದು ನೇರವಾಗಿಯೇ ಪ್ರಶ್ನೆ ಕೇಳಿದ್ದಾರೆ. ನಿಮ್ಮೊಂದಿಗೆ ಇದ್ದರೆ ಮತ್ತಷ್ಟು ಕಲಿಯುತ್ತಾಳೆಂಬ ಕಾರಣದಿಂದಲೋ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಈ ಪ್ರಶ್ನೆ ಐಶ್ವರ್ಯ ಅವರಿಗೆ ಸರಿ ಕಾಣಿಸಲಿಲ್ಲ. ಮುಖದ ಹಾವಭಾವ ಬದಲಾಗಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಆದರೂ ಸಾವರಿಸಿಕೊಂಡು ಅವಳು ನನ್ನ ಮಗಳು, ಸದಾ ನನ್ನ ಜೊತೆ ಇರುತ್ತಾಳೆ ಎಂದು ಹೇಳಿದ್ದಾರೆ. ಹೀಗೆ ಏನೋ ಹೇಳುತ್ತಲೇ ಮುಖ ತಿರುಗಿಸಿಕೊಂಡು ಹೋಗಿದ್ದಾರೆ ನಟಿ. ಅಲ್ಲಿ ತುಂಬಾ ಗಲಾಟೆ ಇದ್ದುದರಿಂದ ನಟಿ ಏನು ಉತ್ತರ ಕೊಟ್ಟಿದ್ದಾರೋ ಕೇಳಿಸುತ್ತಿಲ್ಲ. ಆದರೆ ಸರಿಯಾಗಿ ಉತ್ತರ ಕೊಡುವ ಬದಲು ಮುಖ ತಿರುಗಿಸಿಕೊಂಡು ಹೋಗಿದ್ದು ಯಾಕೆ ಎನ್ನುವುದು ಈಗ ನೆಟ್ಟಿಗರ ಪ್ರಶ್ನೆಯಾಗಿದೆ!
ನಟಿ ಮಾಳವಿಕಾ ಅವಿನಾಶ್ ಅವರು ತಾಯಿ ಮತ್ತು ಮಕ್ಕಳ ಬಗ್ಗೆ ಬರೆದಿರುವ ಇದೇ ರೀತಿಯ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಅಷ್ಟಕ್ಕೂ ಮಾಳವಿಕಾ ಅವರು ತಮ್ಮ ಪೋಸ್ಟ್ನಲ್ಲಿ ಎಲ್ಲಿಯೂ ನಟಿ ಐಶ್ವರ್ಯ ರೈ ಹೆಸರನ್ನು ಉಲ್ಲೇಖಿಸಿಲ್ಲ. ಬದಲಿಗೆ "ಮಕ್ಕಳನ್ನು ಹ್ಯಾಂಡ್ ಬ್ಯಾಗಿನಂತೆ ಜತೆಯಲ್ಲಿ ಎಲ್ಲಾ ಕಡೆ ಕರ್ಕೊಂಡು ಹೋಗೋದೆಂತ ಸಂಸ್ಕೃತಿ...? ಆಫೀಸಿಗೆ,ಆಫೀಸ್ ಟೂರಿಗೆ ಹೋದಾಗ ಮಕ್ಕಳನ್ನು ಕರ್ಕೊಂಡು ಹೋದರೆ ಸುಮ್ಮನ್ನಿರುತ್ತಾರೆಯೇ ಬಾಸು? ಮಿಕ್ಕವರಿಗೆ ಆಫೀಸಿದ್ದ ಹಾಗೆ ನಮಗೆ ಶೂಟಿಂಗ್, ಕಾರ್ಯಕ್ರಮಗಳು, ಫೋಟೊ ಶೂಟ್ ಇಂತಹವೆಲ್ಲಾ! ನಿಮ್ಮ ಯಾವುದೋ insecurity/ಅಸುರಕ್ಷತೆಯ ಕಾರಣ, ಹರೆಯದ ಹುಡುಗಿಯರನ್ನು ಕರ್ಕೊಂಡು ಹೋಗೊದ್ರಿಂದ ಆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವುದಿಲ್ಲವೇ? ತಾವು ತಮ್ಮ ತಾಯಂತ ತಲೆಯೊಳಗೆ ಸ್ಟಾರ್ ಆಗುತ್ತಾರೆ ಆ ಮಕ್ಕಳು. ತಾಯಿ ಹಾಕಿದ ಪರಿಶ್ರಮ, ಪಟ್ಟ ಕಷ್ಟ ಯಾವುದೂ ಆ ಮಕ್ಕಳಿಗೆ ಗೊತ್ತಿರುವುದಿಲ್ಲ ಎನ್ನುವ ಮೂಲಕ ಈ ರೀತಿ ಮಾಡುವುದು ಸರಿಯಲ್ಲ ಎಂದಿದ್ದರು. ಆದರೆ ಇದು ಐಶ್ವರ್ಯ ರೈ ಅವರಿಗೆ ಹೇಳಿ ಮಾಡಿಸಿದ ಮಾತು ಎಂದುಕೊಂಡ ಕಮೆಂಟಿಗರು ಈ ಪೋಸ್ಟ್ಗೂ ಸಾಕಷ್ಟು ಪರ-ವಿರೋಧ ಕಮೆಂಟ್ಗಳನ್ನು ಹಾಕುತ್ತಿದ್ದಾರೆ.
ಐಶ್ವರ್ಯ ರೈ ಮೈತುಂಬಾ ಬಟ್ಟೆ ಧರಿಸ್ತಿರೋ ಹಿಂದಿದೆ ಗಂಭೀರ ಆರೋಗ್ಯ ಸಮಸ್ಯೆ? ತೂಕ ಹೆಚ್ಚಲೂ ಇದೇ ಕಾರಣ!