ಆರಾಧ್ಯ ಬಚ್ಚನ್, ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ YouTube ಚಾನೆಲ್‌ಗಳ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ನ್ಯಾಯಾಲಯವು ಗೂಗಲ್‌ಗೆ ನೋಟಿಸ್ ಜಾರಿ ಮಾಡಿ, ಸುಳ್ಳು ವಿಷಯ ತೆಗೆದುಹಾಕುವಂತೆ ಆದೇಶಿಸಿದೆ. ಮಕ್ಕಳ ಘನತೆಯನ್ನು ಗೌರವಿಸಬೇಕು ಎಂದು ನ್ಯಾಯಾಲಯ ಹೇಳಿದೆ. ವಿಚಾರಣೆ ಮಾರ್ಚ್ ೧೭ಕ್ಕೆ ಮುಂದೂಡಲ್ಪಟ್ಟಿದೆ. ಹಲವು ಯೂಟ್ಯೂಬ್ ಚಾನೆಲ್‌ಗಳಿಗೆ ಈ ಹಿಂದೆಯೇ ಮಧ್ಯಂತರ ಆದೇಶ ಹೊರಡಿಸಲಾಗಿತ್ತು.

ಬಾಲಿವುಡ್‌ನ ಸ್ಟಾರ್ ಜೋಡಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರ ಏಕೈಕ ಕುಡಿ ಆರಾಧ್ಯ ಬಚ್ಚನ್‌ ತಮ್ಮ ಮತ್ತು ತಮ್ಮ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿದ YouTube ಚಾನೆಲ್‌ಗಳು ಮತ್ತು ವೆಬ್‌ಸೈಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಮ್ಮ ಪೋಷಕರ ಸಹಾಯದಿಂದ ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಇದೀಗ ಈ ದಾವೆಗೆ ಸಂಬಂಧಿಸಿದಂತೆ ವಿಷಯವನ್ನು ಪರಾಂಬರಿಸದೆ ಅರೋಗ್ಯದ ಬಗ್ಗೆ ಸುಳ್ಳು ಸುದ್ದಿಗಳನ್ನು ಬಿತ್ತರಿಸಿದ ಕಂಟೆಂಟ್‌ಗಳನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಗೂಗಲ್‌ಗೆ ನೋಟಿಸ್‌ ಜಾರಿ ಮಾಡಿದೆ.

ಐಶ್ವರ್ಯ-ಅಭಿಷೇಕ್ ಕುಟುಂಬದಲ್ಲಿ ಮಹತ್ವದ ಬೆಳವಣಿಗೆ, ಕೋರ್ಟ್ ಮೆಟ್ಟಿಲೇರಿದ ಪುತ್ರಿ ಆರಾಧ್ಯ

ಆರಾಧ್ಯ ಅವರ ಅರ್ಜಿಯ ಮೇರೆಗೆ ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರು ನೋಟಿಸ್ ಜಾರಿ ಮಾಡಿದ್ದು, ಪ್ರತಿವಾದಿಗಳು ಈ ಪ್ರಕರಣದಲ್ಲಿ ಹಾಜರಾಗದ ಕಾರಣ ಏಕಪಕ್ಷೀಯವಾಗಿ ಮುಂದುವರಿಯಲು ಮತ್ತು ಅವರ ಪರವಾಗಿ ತೀರ್ಪು ನೀಡುವಂತೆ ಕೋರಿದರು. ಅಪ್ರಾಪ್ತ ಬಾಲಕಿ ಆರಾಧ್ಯ ಮತ್ತು ಆಕೆಯ ತಂದೆ ಅಭಿಷೇಕ್‌ ಸಲ್ಲಿಸಿರುವ ಪ್ರಕರಣದ ವಿಚಾರಣೆ ಮುಂದಿನ ತಿಂಗಳು ಮಾರ್ಚ್ 17 ರಂದು ನಡೆಯಲಿದೆ.

ಮಗುವಿನ ದೈಹಿಕ ಅಥವಾ ಮಾನಸಿಕ ಆರೋಗ್ಯದ ಬಗ್ಗೆ ವದಂತಿಗಳನ್ನು ಹರಡುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಒತ್ತಿ ಹೇಳಿದೆ. ಪ್ರಸಿದ್ಧ ವ್ಯಕ್ತಿಗಳ ಮಕ್ಕಳಾಗಿದ್ದರೂ, ಪ್ರತಿ ಮಗುವಿಗೂ ಗೌರವ ಮತ್ತು ಘನತೆಯಿಂದ ವರ್ತಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಮಾರ್ಚ್ 17 ರಂದು ಈ ಪ್ರಕರಣ ಮತ್ತೆ ವಿಚಾರಣೆಗೆ ಬರಲಿದೆ. ಬಾಲಿವುಡ್ ಟೈಮ್ಸ್, ಗೂಗಲ್ ಮತ್ತು ಇತರ ಸಂಬಂಧಿತ ಪಕ್ಷಗಳ ವಿರುದ್ಧ ಈ ಅರ್ಜಿ ಸಲ್ಲಿಸಲಾಗಿದೆ. 

ಏರ್‌ಪೋರ್ಟಲ್ಲಿ ಆರಾಧ್ಯ ಮಾಡಿದ ಒಂದು ಕೆಲಸಕ್ಕೆ ಫುಲ್ ಟ್ರೋಲ್!

ಇದಕ್ಕೂ ಮುನ್ನ ಏಪ್ರಿಲ್ 20, 2023 ರಂದು, ನ್ಯಾಯಾಲಯವು ಹಲವಾರು ಯೂಟ್ಯೂಬ್ ಚಾನೆಲ್‌ಗಳಿಗೆ ಆರಾಧ್ಯ ಅವರ ಆರೋಗ್ಯದ ಬಗ್ಗೆ ಸುಳ್ಳು ವಿಷಯವನ್ನು ಪ್ರಕಟಿಸುವುದನ್ನು ತಡೆಯುವ ಮಧ್ಯಂತರ ಆದೇಶವನ್ನು ಹೊರಡಿಸಿತ್ತು, ಮಗುವಿನ ಬಗ್ಗೆ ಅಂತಹ ತಪ್ಪು ಮಾಹಿತಿಯನ್ನು ಹರಡುವುದು "ಅಸ್ವಸ್ಥ ವಿಕೃತತೆಯನ್ನು" ಪ್ರತಿಬಿಂಬಿಸುತ್ತದೆ ಎಂದು ಹೇಳಿತ್ತು. ಆರಾಧ್ಯ ಬಚ್ಚನ್ ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅಥವಾ ನಿಧನರಾಗಿದ್ದಾರೆ ಎಂದು ತಪ್ಪಾಗಿ ಹೇಳಿಕೆ ನೀಡಿತ್ತು. ಈ ವೀಡಿಯೊಗಳನ್ನು ತೆಗೆದುಹಾಕಲು Google ಗೆ ನಿರ್ದೇಶಿಸಲಾಯಿತು.

ಬಾಲಿವುಡ್ ಟೈಮ್, ಬೊಲ್ಲಿ ಪಕೋರಾ, ಬೊಲ್ಲಿ ಸಮೋಸಾ ಮತ್ತು ಬಾಲಿವುಡ್ ಶೈನ್ ಸೇರಿದಂತೆ ಹಲವು ಯೂಟ್ಯೂಬ್ ಚಾನೆಲ್‌ಗಳಿಗೂ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ್ದು, ಹೆಚ್ಚಿನ ಹಾನಿಯನ್ನು ತಡೆಗಟ್ಟಲು ಮಧ್ಯಂತರ ಪರಿಹಾರವನ್ನು ನೀಡಲು ಪ್ರಾಥಮಿಕವಾಗಿ ಪ್ರಕರಣ ದಾಖಲಿಸಲಾಗಿದೆ. ಆರೋಗ್ಯ ಮತ್ತು ಖಾಸಗಿ ಜೀವನದ ಬಗ್ಗೆ ಹಂಚಿಕೊಂಡಿರುವ ಸುದ್ದಿ ಸಂಪೂರ್ಣ ಸುಳ್ಳು.ಬಚ್ಚನ್ ಕುಟುಂಬದ ಖ್ಯಾತಿಗೆ ಧಕ್ಕೆ ತಂದಿದೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿತ್ತು.

ಇಲ್ಲಿಯವರೆಗೆ ನಟ, ನಟಿಯರು ಇಂತಹ ದಾವೆ ಹೂಡುವುದು ಸಾಮಾನ್ಯವಾಗಿದ್ದರೂ, ಸ್ಟಾರ್ ಜೋಡಿಯ ಮಗಳು ಇಂತಹ ದಾವೆ ಹೂಡಿರುವುದರಿಂದ ಆರಾಧ್ಯಾ ಅವರ ಈ ಕ್ರಮವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಈ ಅರ್ಜಿಗೆ ಸಂಬಂಧಿಸಿದಂತೆ, ಸುಳ್ಳು ಸುದ್ದಿ ಹರಡಿದ Google, YouTube ಸೇರಿದಂತೆ ಹಲವು ಕಂಪನಿಗಳಿಗೆ ದೆಹಲಿ ಹೈಕೋರ್ಟ್ ನೋಟಿಸ್ ನೀಡಿದೆ.

ಆರಾಧ್ಯಾ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡಬಾರದು ಎಂದು ನ್ಯಾಯಾಲಯ ಆದೇಶಿಸಿತ್ತು. ಸಂಬಂಧಿತ ಚಾನೆಲ್‌ಗಳನ್ನು ನಿರ್ಬಂಧಿಸುವಂತೆ ಗೂಗಲ್‌ಗೆ ಸೂಚಿಸಿತ್ತು. ಇದರ ನಂತರ, ಸಂಬಂಧಿತ ಚಾನೆಲ್‌ಗಳನ್ನು ನಡೆಸುತ್ತಿರುವವರ ಬಗ್ಗೆ ಮಾಹಿತಿ ನೀಡುವುದಾಗಿ YouTube ತಿಳಿಸಿದೆ.

ಆರಾಧ್ಯ ಬಚ್ಚನ್ ಬಾಲಿವುಡ್ ನಟರಾದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ರ ಪುತ್ರಿ. ನವೆಂಬರ್ 16, 2011 ರಂದು ಜನಿಸಿದ ಈಕೆಗೆ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅಜ್ಜ-ಅಜ್ಜಿಯರಾಗಿದ್ದು, ಪ್ರಸಿದ್ಧ ಬಚ್ಚನ್ ಕುಟುಂಬದ ಕುಡಿಯಾಗಿದ್ದಾರೆ.

ಭಾರತದ ಅತ್ಯಂತ ಪ್ರಸಿದ್ಧ ಚಲನಚಿತ್ರ ಕುಟುಂಬಗಳಲ್ಲಿ ಒಂದಾದ ಆರಾಧ್ಯ ಹುಟ್ಟಿನಿಂದಲೇ ಸಾರ್ವಜನಿಕರ ಜೀವನದ ಗಮನದಲ್ಲಿದ್ದಾರೆ. ಕೇನ್ಸ್ ಚಲನಚಿತ್ರೋತ್ಸವದಂತಹ ಕಾರ್ಯಕ್ರಮಗಳಲ್ಲಿ ತಮ್ಮ ತಾಯಿಯೊಂದಿಗೆ ಕಾಣಿಸಿಕೊಂಡಿದ್ದರು. ಆರಾಧ್ಯ ಮುಂಬೈನ ಧೀರೂಭಾಯಿ ಅಂಬಾನಿ ಅಂತರರಾಷ್ಟ್ರೀಯ ಶಾಲೆಯಲ್ಲಿ ಓದುತ್ತಿದ್ದಾಳೆ.