Asianet Suvarna News Asianet Suvarna News

ಇದು ಅದ್ಭುತ ಸಮಯವಾಗಿದೆ; ಸೌತ್ v/s ಬಾಲಿವುಡ್ ಚರ್ಚೆಗೆ ನಟಿ ಐಶ್ವರ್ಯಾ ರೈ ಹೇಳಿಕೆ

ಇತ್ತೀಚಿಗಷ್ಟೆ ದೆಹಲಿಯಲ್ಲಿ ನಡೆದ ಪೊನ್ನಿಯನ್ ಸೆಲ್ವನ್ ಸಿನಿಮಾದ ಪ್ರೆಸ್ ಮೀಟ್ ನಲ್ಲಿ ಐಶ್ವರ್ಯಾ ರೈ ನಾರ್ತ್ ವರ್ಸಸ್ ಸೌತ್ ಚರ್ಚೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 

Aishwarya Rai Bachchan on North vs South debate she says Need to break away from typical thinking sgk
Author
First Published Sep 27, 2022, 4:19 PM IST

ದಕ್ಷಿಣ ಭಾರತದ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಹಿಟ್ ಆಗುತ್ತಿರುವ ಬೆನ್ನಲ್ಲೆ ಸೌತ್ ವರ್ಸಸ್ ನಾರ್ತ್ (ಬಾಲಿವುಡ್) ಎನ್ನುವ ಚರ್ಚೆಯೂ ಜೋರಾಗಿತ್ತು. ಸಾಮಾಜಿರ ಜಾಲತಾಣದಲ್ಲಿ ಈ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ದಕ್ಷಿಣ ಭಾರತದ ಸಿನಿಮಾಗಳ ಹೊಡೆತಕ್ಕೆ ಬಾಲಿವುಡ್ ತತ್ತರಿಸಿಹೋಗಿದ್ದು ಬಾಲಿವುಡ್ ಕತೆ ಮುಗಿಯಿತು ಎನ್ನುವ ಮಾತು ಕೇಳಿಬರುತ್ತಿತ್ತು. ಅನೇಕ ಸ್ಟಾರ್ ಕಲಾವಿದರು ಸಹ ಈ ಪ್ರತಿಕ್ರಿಯೆ ನೀಡಿ ತಮ್ಮದೆ ಶೈಲಿಯ ಉತ್ತರ ನೀಡಿದ್ದಾರೆ. ಇದೀಗ ಈ ಬಗ್ಗೆ ಬಾಲಿವುಡ್ ಸ್ಟಾರ್ ನಟಿ ಐಶ್ವರ್ಯಾರೈ ಪ್ರತಿಕ್ರಿಯೆ ನೀಡಿದ್ದಾರೆ. ಐಶ್ವರ್ಯಾ ರೈ ಸದ್ಯ ಬಹುನಿರೀಕ್ಷೆಯ ಪೊನ್ನಿಯನ್ ಸೆಲ್ವನ್ ಪಾರ್ಟ್-1 ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. 

ಇತ್ತೀಚಿಗಷ್ಟೆ ದೆಹಲಿಯಲ್ಲಿ ಪೊನ್ನಿಯನ್ ಸೆಲ್ವನ್ ಸಿನಿಮಾದ ಪ್ರೆಸ್ ಮೀಟ್ ಹಮ್ಮಿಕೊಳ್ಳಲಾಗಿತ್ತು. ಪ್ರತಿಕಾಗೋಷ್ಠಿಯಲ್ಲಿ ಐಶ್ವರ್ಯಾ ರೈ ನಾರ್ತ್ ವರ್ಸಸ್ ಸೌತ್ ಚರ್ಚೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.  ಮಾಜಿ ವಿಶ್ವ ಸುಂದರಿಯ ಹೇಳಿಕೆ ಈಗ ವೈರಲ್ ಆಗಿದೆ. ಐಶ್ವರ್ಯಾ ರೈ ಬಾಲಿವುಡ್ ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸಿದ್ದಾರೆ. ಹಾಗಾಗಿ ಎರಡೂ ಸಿನಿಮಾರಂಗದ ಬಗ್ಗೆಯೂ ಮಾಜಿ ವಿಶ್ವಸುಂದರಿಗೆ ಗೊತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಐಶ್ವರ್ಯಾ, 'ಇದೀಗ ಅದ್ಭುತ ಸಮಯವಾಗಿದೆ, ನಾವು ಕಲಾವಿದರು  ಸಿನಿಮಾವನ್ನು ನೋಡುವ ವಿಶಿಷ್ಟ ವಿಧಾನದಿಂದ ದೂರವಿರಬೇಕಾಗಿದೆ. ಎಲ್ಲಾ ಅಡೆತಡೆಗಳು ದೂರ ಆಗುತ್ತಿರುವ ಉತ್ತಮ ಸಮಯ ಎಂದು ನಾನು ಭಾವಿಸುತ್ತೇನೆ. ನಮ್ಮ ಸಿನಿಮಾ ರಾಷ್ಟ್ರಮಟ್ಟದಲ್ಲಿ ಜನರಿಗೆ ತಿಳಿದಿದೆ. ವಾಸ್ತವವಾಗಿ, ಪ್ರೇಕ್ಷಕರು ಎಲ್ಲಾ ಭಾಗದ ಸಿನಿಮಾವನ್ನು ನೋಡಲು ಬಯಸುತ್ತಿದ್ದಾರೆ' ಎಂದು ಹೇಳಿದರು. 

Aishwarya Rai Pregnant: ಬಾಲಿವುಡ್ ನಟಿ ಐಶ್ವರ್ಯ ರೈ ಮತ್ತೆ ಗರ್ಭಿಣಿನಾ?

'ಹಲವಾರು ವೇದಿಕೆಗಳ ಮೂಲಕ ರಾಷ್ಟ್ರೀಯವಾಗಿ ಪ್ರವೇಶಿಸಬಹುದಾದ ಪರಿಪೂರ್ಣ ಸಮಯ ಎಂದು ನಾನು ಭಾವಿಸುತ್ತೇನೆ. ಭಾರತದಾದ್ಯಂತ ಎಲ್ಲರೂ ಸಿನಿಮಾ ನೋಡಬಹುದು. ಹಾಗಾಗಿ ನಾವು ಈ ಸಾಂಪ್ರದಾಯಿಕ ಆಲೋಚನಾ ವಿಧಾನದಿಂದ ಹೊರಗುಳಿಯಬೇಕು. ಇಂದು ಎಲ್ಲರಿಗೂ ಪ್ರವೇಶಿಸಬಹುದಾದ ಉತ್ತಮ ಸಮಯ. ದೇಶಾದ್ಯಂತ ಜನರು ಸಿನಿಮಾವನ್ನು ಅಪ್ಪಿಕೊಳ್ಳುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ' ಎಂದು ಐಶ್ವರ್ಯಾ ರೈ ಬಚ್ಚನ್ ಹೇಳಿದರು.

ಪೊನ್ನಿಯಿನ್ ಸೆಲ್ವನ್ ಚಿತ್ರಕ್ಕಾಗಿ ಐಶ್ವರ್ಯಾ ರೈ ಪಡೆದ ಫೀಸ್‌ ಬಹಿರಂಗ

ಐಶ್ವರ್ಯಾ ರೈ, ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಣಿರತ್ನಂ ಸಾರಥ್ಯದಲ್ಲಿ ಮೂಡಿಬಂದಿರುವ ಪೊನ್ನಿಯನ್ ಸೆಲ್ವನ್ ಕಲ್ಕಿ ಕೃಷ್ಣಮೂರ್ತಿ ಅವರು ಬರೆದ ಪೊನ್ನಿಯನ್ ಸೆಲ್ವನ್ ಕಾದಂಬರಿ ಆಧರಿಸಿ ಸಿನಿಮಾ ಮಾಡಲಾಗಿದೆ. ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಚಿಯಾನ್ ವಿಕ್ರಮ್, ಜಯಂ ರವಿ, ಕಾರ್ತಿ, ತ್ರಿಷಾ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿರುವ ಪೊನ್ನಿಯನ್ ಸಲ್ವನ್ ಸೆಪ್ಟಂಬರ್ 30ರಂದು ರಿಲೀಸ್ ಆಗುತ್ತಿದೆ.  

Follow Us:
Download App:
  • android
  • ios