ಐಶ್ವರ್ಯ ರೈ ಬಚ್ಚನ್ ಮತ್ತು ಆರಾಧ್ಯ ಬಚ್ಚನ್ ತಾಯಿ-ಮಗಳ ಬಾಂಧವ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಐಶ್ವರ್ಯ ತಮ್ಮ ವೃತ್ತಿಜೀವನಕ್ಕೆ ವಿರಾಮ ನೀಡಿ ಮಗಳ ಆರೈಕೆಗೆ ಹೆಚ್ಚಿನ ಗಮನ ನೀಡಿದ್ದಾರೆ. ಆರಾಧ್ಯ ಕೂಡಾ ತಾಯಿಯ ತ್ಯಾಗವನ್ನು ಅರಿತುಕೊಂಡಿದ್ದಾಳೆ. ಇತ್ತೀಚೆಗೆ, ಆರಾಧ್ಯ ತನ್ನ ತಾಯಿಯ ಕಾರ್ಯವನ್ನು ಶ್ಲಾಘಿಸಿದ್ದು, ಐಶ್ವರ್ಯ ಭಾವುಕರಾಗಿದ್ದರು. ಐಶ್ವರ್ಯ ಮಗಳ ಭವಿಷ್ಯದ ಬಗ್ಗೆ ಜವಾಬ್ದಾರಿಯುತ ನಿರ್ಧಾರ ತೆಗೆದುಕೊಳ್ಳಲು ಪ್ರೋತ್ಸಾಹಿಸುತ್ತಿದ್ದಾರೆ, ಇದು ಅನೇಕ ಪಾಲಕರಿಗೆ ಮಾದರಿಯಾಗಿದೆ.
ಅಮ್ಮ ಐಶ್ವರ್ಯ ರೈ ಬಚ್ಚನ್ ಹಾಗೂ ಮಗಳು ಆರಾಧ್ಯ ಬಚ್ಚನ್ ಸದಾ ಸುದ್ದಿಯಲ್ಲಿರುವ ಸೆಲೆಬ್ರಿಟಿಗಳು. ಐಶ್ವರ್ಯ ರೈ ಮುದ್ದಿನ ಮಗಳು ಆರಾಧ್ಯ. ತಮ್ಮ ವೃತ್ತಿ ಜೀವನಕ್ಕೆ ಬ್ರೇಕ್ ನೀಡಿ, ಮಗಳ ಆರೈಕೆಗೆ ನಿಂತಿದ್ದ ಐಶ್ವರ್ಯ ಎಲ್ಲರನ್ನು ಅಚ್ಚರಿಗೊಳಿಸಿದ್ದಿದೆ. ವಿಶ್ವ ಸುಂದರಿಯಾಗಿ, ವಿಶ್ವದಾದ್ಯಂತ ಹೆಸರು ಮಾಡಿದ್ರೂ, ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾ ಮಾಡಿ ನಟನೆಯಲ್ಲಿ ಸೈ ಎನ್ನಿಸಿಕೊಂಡಿದ್ರೂ ಐಶ್ವರ್ಯ ರೈ ಕುಟುಂಬವನ್ನು ಬಿಟ್ಟುಕೊಟ್ಟಿಲ್ಲ. ವಿಶೇಷವಾಗಿ ಮಗಳನ್ನು ಎಲ್ಲೂ ಕೈ ಬಿಟ್ಟಿಲ್ಲ. ಹಾಗಾಗಿಯೇ ಅನೇಕ ಪಾಲಕರಿಗೆ ಐಶ್ವರ್ಯ ರೈ ಮಾದರಿಯಾಗಿದ್ದಾರೆ. ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದಕ್ಕೆ ಅವರು ಉತ್ತಮ ಉದಾಹರಣೆಯಾಗಿದ್ದಾರೆ. ಅದೇನೇ ಕಮೆಂಟ್ ಬರಲಿ, ಅದೇನೇ ಆರೋಪ ಬರಲಿ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ಮಗಳ ಕೈ ಹಿಡಿದು ಮಾಧ್ಯಮಗಳ ಮುಂದೆ ನಡೆದಿದ್ದಾರೆ.
ಐಶ್ವರ್ಯ ಹಾಗೂ ಆರಾಧ್ಯ ಇಬ್ಬರ ಬಾಂಡಿಂಗ್ ಚೆನ್ನಾಗಿದೆ. ಸದಾ ಅಮ್ಮನ ಜೊತೆಗಿರುವ ಆರಾಧ್ಯ, ಅಮ್ಮನನ್ನು ಸಂಪೂರ್ಣ ಅರಿತಿದ್ದಾಳೆ. ಅಮ್ಮನ ಕೆಲಸಗಳಿಗೆ ಸ್ಪೂರ್ತಿಯಾಗಿ ನಿಂತಿದ್ದಾಳೆ. ಅಮ್ಮ ತನಗಾಗಿ ಮಾಡಿದ ತ್ಯಾಗಗಳು ಆರಾಧ್ಯಗೆ ಅರಿವಿದೆ. ಹಾಗಾಗಿಯೇ ಅವಕಾಶ ಸಿಕ್ಕಾಗ ಎಲ್ಲರ ಮುಂದೆ ಅಮ್ಮನನ್ನು ಹೊಗಳಲು ಹಾತೊರೆಯುತ್ತಾಳೆ ಆರಾಧ್ಯ. ಅಮ್ಮನ ಹುಟ್ಟುಹಬ್ಬದ ದಿನ ಆರಾಧ್ಯ, ಐಶ್ವರ್ಯ ರೈ ಬಚ್ಚನ್ ಅವರನ್ನು ಮನಸ್ಪೂರ್ವಕವಾಗಿ ಹೊಗಳಿದ್ದಳು. ಮಗಳ ಮಾತು ಕೇಳಿ ಐಶ್ವರ್ಯ ಭಾವುಕರಾಗಿದ್ದರು.
ಖಾಸಗಿ ಅಂಗದ ಕುರಿತ ಅಡಲ್ಟ್ ಕಾಮಿಡಿ ಸಿನಿಮಾವಿದು; ಆದ್ರೂ ಅಶ್ಲೀಲತೆ ಇಲ್ಲ, ಮುಜುಗರ ಇಲ್ಲ! ಯಾವ ಚಿತ್ರ?
ಅಮ್ಮ ಮಾಡ್ತಿರುವ ಕೆಲಸ ಅಧ್ಬುತವಾಗಿದೆ. ವಿಶ್ವಕ್ಕೆ, ನಮಗೆ ಅಮ್ಮ ಸಹಾಯ ಮಾಡ್ತಿದ್ದಾರೆ ಅಂತ ಒಂದ್ಕಡೆ ಆರಾಧ್ಯ ಅಮ್ಮನ ಕೆಲಸವನ್ನು ಶ್ಲಾಘಿಸಿದ್ರೆ ಇನ್ನೊಂದು ಕಡೆ ಐಶ್ವರ್ಯ ರೈ ಬಚ್ಚನ್, ಮಗಳ ಮಾತಿಗೆ ಕರಗಿದ್ದರು. ಈ ವಿಡಿಯೋ ಹಳೆಯದಾದ್ರೂ ಇನ್ನೂ ವೈರಲ್ ಆಗ್ತಿದೆ. ಐಶ್ವರ್ಯ ರೈ ಬಚ್ಚನ್ ಹಾಗೂ ಆರಾಧ್ಯ ಬಚ್ಚನ್ ಮಧ್ಯೆ ಇರುವ ಅಮ್ಮ – ಮಗಳ ಪ್ರೀತಿಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಮಗಳ ಬಾಯಿಂದ ಇಂಥ ಮಾತುಗಳನ್ನು ಕೇಳಿದ್ರೆ ಅಮ್ಮನ ಗರ್ವ ಹೆಚ್ಚಾಗುತ್ತೆ ಅಂತ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಐಶ್ವರ್ಯ ಮಗಳಿಗಾಗಿ ಮಾಡ್ತಿರುವ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ.
ಬಚ್ಚನ್ ಕುಟುಂಬದ ಸೊಸೆಯಾಗಿ ಬಂದು ದೊಡ್ಡ ಜವಾಬ್ದಾರಿ ಮೈಮೇಲೆ ಎಳೆದುಕೊಂಡ ಐಶ್ವರ್ಯ, ಮಗಳು ಹುಟ್ಟುವವರೆಗೂ ಸಿನಿಮಾ ಮಾಡಿದ್ರು. ಆರಾಧ್ಯ ಜನನದ ನಂತ್ರ ವೃತ್ತಿಗೆ ಬ್ರೇಕ್ ತೆಗೆದುಕೊಂಡಿದ್ರು. ಸಂಪೂರ್ಣ ತಾಯ್ತನವನ್ನು ಎಂಜಾಯ್ ಮಾಡಿದ್ದ ಐಶ್ವರ್ಯ, ಮಗಳ ಆರೋಗ್ಯ, ಮಗಳ ಫಿಟ್ನೆಸ್ ಸೇರಿದಂತೆ ಸಣ್ಣ ಸಣ್ಣ ವಿಷ್ಯಕ್ಕೂ ಹೆಚ್ಚು ಆಧ್ಯತೆ ನೀಡ್ತಾ ಬಂದಿದ್ದಾರೆ. ಮಗಳ ಕಾರ್ಯಕ್ರಮಗಳಿಗೆ ಹಾಜರಾಗಿ, ಎಲ್ಲ ತಾಯಂದಿರಂತೆ ಸ್ಟೇಜ್ ಮೇಲೆ ಮಗಳ ಪರ್ಫಾಮೆನ್ಸ್ ನೋಡಿ ಖುಷಿಪಡುವ ಐಶ್ವರ್ಯ, ವಿದೇಶ ಇರಲಿ, ದೇಶ ಇರಲಿ, ಎಲ್ಲ ಪ್ರವಾಸಕ್ಕೂ ಮಗಳನ್ನು ತಮ್ಮ ಜೊತೆ ಕರೆದುಕೊಂಡು ಹೋಗ್ತಾರೆ. ಮಗಳಿಗೆ ಸಣ್ಣ ಸಮಸ್ಯೆಯಾದ್ರೂ ಅದು ಐಶ್ವರ್ಯ ಮುಖದಲ್ಲಿ ಗೋಚರಿಸುತ್ತೆ. ಅದಕ್ಕೆ ಕೆಲ ದಿನಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ವೈರಲ್ ಆಗಿದ್ದ ಆರಾಧ್ಯ ವಿಡಿಯೋ ಸಾಕ್ಷ್ಯ.
ಮಾನಸಿಕವಾಗಿ ನಾನು ಗಟ್ಟಿಗಿತ್ತಿ, ಸುಲಭವಾಗಿ ಕಣ್ಣೀರಿಡುವುದಿಲ್ಲ: ನಟಿ ನಯನತಾರಾ
ಆರಾಧ್ಯಗೆ ಐಶ್ವರ್ಯ ಮಾದರಿ ಅಮ್ಮನಾಗಿದ್ದಾರೆ. ಅಮ್ಮ ನಡೆದ ದಾರಿಯಲ್ಲೇ ಆರಾಧ್ಯ ನಡೆಯುತ್ತಿದ್ದಾಳೆ. ಆದ್ರೆ ಐಶ್ವರ್ಯ ಯಾವುದಕ್ಕೂ ಒತ್ತಡ ಹೇರಿಲ್ಲ. ಮಗಳು ಯಾವುದೇ ವೃತ್ತಿ ಆಯ್ಕೆ ಮಾಡಿಕೊಂಡ್ರೂ ನಾವದನ್ನು ಒಪ್ಪಿಕೊಳ್ತೇವೆ ಎನ್ನುವ ಮೂಲಕ ಮಗಳಿಗೆ ಜವಾಬ್ದಾರಿ ನೀಡಿದ್ದಾರೆ. ಈ ಮೂಲಕ ಅನೇಕ ಪಾಲಕರಿಗೆ ಐಶ್ವರ್ಯ ಸ್ಪೂರ್ತಿಯಾಗಿದ್ದಾರೆ.
