Ambani Event: ಅಂಬಾನಿ ಕಾರ್ಯಕ್ರಮದಲ್ಲಿ ಐಶ್ವರ್ಯಾ-ಅಭಿಷೇಕ್ ಖುಷಿಯಾಗಿರೋ ದೃಶ್ಯಕ್ಕೆ ಫ್ಯಾನ್ ಫಿದಾ
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಕಾರ್ಯಕ್ರಮದ ವೀಡಿಯೋಗಳು, ಫೋಟೊಗಳು ಎಲ್ಲೆಡೆ ವೈರಲ್ ಆಗಿವೆ. ವಿವಿಧ ಕಾರ್ಯಕ್ರಮಗಳ ವಿವರಗಳು ಇನ್ನೂ ಹೊರಬರುತ್ತಿವೆ. ಈ ನಡುವೆ ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್ ಹಾಗೂ ಆರಾಧ್ಯಾ ಕೂಡ ಸಂತಸದಿಂದ ಪಾಲ್ಗೊಂಡಿರುವ ವೀಡಿಯೋ ಸದ್ಯ ವೈರಲ್ ಆಗಿದೆ.
ಅಂಬಾನಿ ಕುಟುಂಬದ ಮಹತ್ವದ ಕಾರ್ಯಕ್ರಮ ಗುಜರಾತಿನ ಜಾಮ್ ನಗರದಲ್ಲಿ ವಿಜೃಂಭಣೆಯಿಂದ ನಡೆದಿದೆ. ಅನಂತ್ ಅಂಬಾನಿಯ ವಿವಾಹಪೂರ್ವ ಸಮಾರಂಭಗಳು ಅದ್ದೂರಿಯಾಗಿದ್ದು, ದೇಶ-ವಿದೇಶದ ಗಣ್ಯರು ಪಾಲ್ಗೊಂಡಿದ್ದರು. ಮೂರು ದಿನಗಳ ಕಾಲ ನಡೆದ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಉದ್ಯಮ ವಲಯ, ಬಾಲಿವುಡ್ ತಾರೆಯರು ಪಾಲ್ಗೊಂಡು ಇಡೀ ದೇಶದ ಕುತೂಹಲದ ಕಣ್ಣು ಜಾಮ್ ನಗರದಲ್ಲಿ ನೆಲೆಸುವಂತೆ ಮಾಡಿದರು. ಮದುವೆ ನಿಕ್ಕಿಯಾಗಿರುವುದು ಬರುವ ಜುಲೈನಲ್ಲಾದರೂ ಈಗಲೇ ಅದ್ದೂರಿಯಿಂದ ಸಂಗೀತ್, ಸಫಾರಿ ಸೇರಿದಂತೆ ಅನೇಕ ಈವೆಂಟ್ ಗಳನ್ನು ನಡೆಸಿರುವುದು ವಿಶೇಷ. ಇದರಲ್ಲಿ ಮದುಮಗ ಅನಂತ್ ಅಂಬಾನಿ ಹಾಗೂ ಮದುಮಗಳು ರಾಧಿಕಾ ಮರ್ಚೆಂಟ್ ಅವರ ಜೋಡಿಯೂ ಸಕ್ಕತ್ತಾಗಿ ಮಿಂಚಿದೆ. ರಾಧಿಕಾ ಮರ್ಚೆಂಟ್ ಯಾವ ಬಾಲಿವುಡ್ ತಾರೆಗೂ ಕಮ್ಮಿಯಿಲ್ಲದಂತೆ ಕಂಗೊಳಿಸಿದ್ದುದು ಎಲ್ಲರ ಗಮನ ಸೆಳೆದಿದೆ. ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಬಹುತೇಕ ಬಾಲಿವುಡ್ ತಾರೆಯರು ಪಾಲ್ಗೊಂಡು ಸಮಾರಂಭಕ್ಕೆ ಖಳೆ ನೀಡಿದರು. ಇದರಲ್ಲಿ ತಾರಾ ದಂಪತಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ತಮ್ಮ ಮಗಳೊಂದಿಗೆ ಹಾಗೂ ಇಡೀ ಕುಟುಂಬದೊಂದಿಗೆ ಪಾಲ್ಗೊಂಡಿದ್ದುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕೆಲ ದಿನಗಳ ಹಿಂದೆ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಹಾಗೂ ಅಭಿಷೇಕ್ (Abhishek) ಬಚ್ಚನ್ ಇನ್ನೇನು ಡಿವೋರ್ಸ್ (Divorce) ಪಡೆದುಕೊಂಡೇ ಬಿಟ್ಟರು ಎನ್ನುವಲ್ಲಿಗೆ ಸುದ್ದಿಯಾಗಿತ್ತು. ಇದು ಐಶ್ವರ್ಯಾ ಹಾಗೂ ಅಭಿಷೇಕ್ ಅಭಿಮಾನಿಗಳಲ್ಲಿ (Fans) ನಿರಾಸೆಯನ್ನೂ ಮೂಡಿಸಿತ್ತು. ಇದೀಗ, ಖುಷಿ ಪಡುವಂತಹ ದೃಶ್ಯವೊಂದು ಸೆರೆ ಸಿಕ್ಕಿದೆ. ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ತಮ್ಮ ಮಗಳು ಆರಾಧ್ಯಾ (Aradhya) ಜತೆ ಅಂಬಾನಿ ಕುಟುಂಬ (Ambani Family) ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜತೆಯಾಗಿ ಖುಷಿಯಿಂದ ಪಾಲ್ಗೊಂಡಿರುವ ವೀಡಿಯೋ ಈಗ ವೈರಲ್ ಆಗಿದೆ.
ಅನಂತ್-ರಾಧಿಕಾ ವಿವಾಹ ಇಷ್ಟು ಗ್ರ್ಯಾಂಡ್ ಆಗಿ ನಡೀತಿರೋದ್ಯಾಕೆ, ಕಾರಣ ಬಹಿರಂಗಪಡಿಸಿದ ನೀತಾ ಅಂಬಾನಿ!
ಬೀಟ್ ಮ್ಯೂಸಿಕ್ ಎಂಜಾಯ್
ಐಶ್ವರ್ಯಾ ಹಾಗೂ ಅಭಿಷೇಕ್ ಕೆನೆ ಬಣ್ಣದ ಸಾಂಪ್ರದಾಯಿಕ ಉಡುಪು (Traditional Outfit) ಧರಿಸಿದ್ದರೆ, ಆರಾಧ್ಯಾ ಬಿಳಿ ಬಣ್ಣದ ಡ್ರೆಸ್ ನಲ್ಲಿ ಮಿಂಚುತ್ತಿದ್ದರು. ಅಷ್ಟೇ ಅಲ್ಲ, ಸಮಾರಂಭಕ್ಕೆ (Event) ಪ್ರವೇಶಿಸುವಾಗ ಬಚ್ಚನ್ ಕುಟುಂಬದ ಹಿರಿಯ ಅಮಿತಾಭ್ ಬಚ್ಚನ್ ಸೇರಿದಂತೆ ಎಲ್ಲರೂ ಜತೆಯಾಗಿ ಬಂದಿಳಿದಿರುವುದು ವಿಶೇಷವಾಗಿತ್ತು. ಇನ್ನು, ಸಮಾರಂಭದಲ್ಲಿ ಅಭಿಷೇಕ್ ಮತ್ತು ಐಶ್ವರ್ಯಾ ಡೋಲಿನ (Dhol) ಜೋರಾದ ಬೀಟ್ (Beat) ಅನ್ನು ಎಂಜಾಯ್ ಮಾಡುತ್ತಿದ್ದರು. ಅಭಿಷೇಕ್ ಡೋಲಿನ ಬೀಟ್ ಗೆ ಅನುಗುಣವಾಗಿ ಸಂತಸದಿಂದ ತಮ್ಮ ತಲೆಯನ್ನು ಕುಣಿಸುತ್ತಿದ್ದರೆ, ಆರಾಧ್ಯಾ ಮತ್ತು ಐಶ್ವರ್ಯಾ ಚಪ್ಪಾಳೆ (Claps) ತಟ್ಟುವ ಮೂಲಕ ಖುಷಿ ವ್ಯಕ್ತಪಡಿಸುತ್ತಿದ್ದರು. ಮ್ಯೂಸಿಕ್ ಕೊನೆಗೊಂಡಾಗ ಎಲ್ಲರೂ ಜೋರಾದ ಚಪ್ಪಾಳೆ ತಟ್ಟಿ ಮತ್ತೊಮ್ಮೆ ಸಂತಸ ಪಡುವುದು ವೀಡಿಯೋದಲ್ಲಿ ಸೆರೆಯಾಗಿದೆ.
ಮ್ಯಾಚಿಂಗ್ ಮ್ಯಾಚಿಂಗ್
ಅಷ್ಟೇ ಅಲ್ಲ, ಇಡೀ ಬಚ್ಚನ್ ಕುಟುಂಬ ವಿವಾಹಪೂರ್ವ ಸಮಾರಂಭದಲ್ಲಿ (Program) ಪಾಲ್ಗೊಂಡಿತ್ತು. ಈ ಸಮಾರಂಭಕ್ಕಾಗಿ ಅಮಿತಾಭ್ ಬಚ್ಚನ್ ಕೆನೆ ಬಣ್ಣದ ಕುರ್ತಾ, ಪೈಜಾಮಾ ಧರಿಸಿ ಕಲರ್ ಫುಲ್ ಶಾಲ್ ಧರಿಸಿದರೆ, ಜಯಾ ಬಚ್ಚನ್ ಸಹ ಕೆನೆ ಬಣ್ಣದ ಸೀರೆಯುಟ್ಟು ಶಾಲ್ ಧರಿಸಿದ್ದರು.
ಅನಂತ್ ಅಂಬಾನಿ-ರಾಧಿಕಾ ಗ್ರ್ಯಾಂಡ್ ವೆಡ್ಡಿಂಗ್, ಬಾರ್ಬಿ ಗೊಂಬೆಯಂತೆ ಮಿಂಚಿದ ಅಂಬಾನಿ ಭಾವೀ ಸೊಸೆ
ಶ್ವೇತಾ ಗೋಲ್ಡನ್ ಉಡುಪಿನಲ್ಲಿ ಮಿಂಚಿದರೆ, ನವ್ಯಾ ಒಬ್ಬರೇ ಗಾಢ ಬಣ್ಣದ ಲೆಹೆಂಗಾ ಧರಿಸಿದ್ದರು. ಅಗಸ್ತ್ಯ ಕೆನೆ ಬಣ್ಣದ ಶೆರ್ವಾನಿ ಆಯ್ಕೆ ಮಾಡಿಕೊಂಡಿದ್ದರು. ಮೂರು ದಿನಗಳ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಕೊನೆಯ ದಿನ ಪಾಲ್ಗೊಂಡಿದ್ದ ಬಚ್ಚನ್ ಕುಟುಂಬ ಒಟ್ಟಿನಲ್ಲಿ ಕೆನೆ, ಬಿಳಿ ಬಣ್ಣದ ಮ್ಯಾಚ್ (Matching) ನಲ್ಲಿ ಮಿಂಚಿತ್ತು.