ಜೈ ಹಿಂದ್; ಆಸ್ಕರ್ ಗೆದ್ದ ಬಳಿಕ ನಿರ್ದೇಶಕ ರಾಜಮೌಳಿ ಫಸ್ಟ್ ರಿಯಾಕ್ಷನ್
ನಿರ್ದೇಶಕ ಎಸ್ ಎಸ್ ರಾಜಮೌಳಿ ಆಸ್ಕರ್ ಪ್ರಶಸ್ತಿ ಗೆದ್ದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಆಸ್ಕರ್ 2023ಕ್ಕೆ ಅದ್ದೂರಿ ತೆರೆ ಬಿದ್ದಿದೆ. ಈ ಬಾರಿಯ ಆಸ್ಕರ್ ಭಾರತೀಯರಿಗೂ ವಿಶೇಷವಾಗಿತ್ತು. 95ನೇ ಅಕಾಡೆಮಿ ಅವಾರ್ಡ್ ಸಮಾರಂಭದಸಲ್ಲಿ ಭಾರತ ಎರಡು ಆಸ್ಕರ್ ಪ್ರಶಸ್ತಿ ಗೆದ್ದು ಬೀಗಿದೆ. ಆರ್ ಆರ್ ಆರ್ ಸಿನಿಮಾದ ನಾಟು ನಾಟು..ಹಾಡು ಮತ್ತು ಅತ್ಯುತ್ತಮ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ದಿ ಎಲಿಫೆಂಡ್ ವಿಸ್ಪರ್ಸ್ ಪ್ರಶಸ್ತಿ ಗೆದ್ದುಕೊಂಡಿದೆ. ನಾಟು ನಾಟು...ಹಾಡು ಆಸ್ಕರ್ ಗೆಲ್ಲುತ್ತಿದ್ದಂತೆ ಇಡೀ ಆರ್ ಆರ್ ಆರ್ ತಂಡ ಸಂಭ್ರಮಿಸಿದೆ. 2023 ರ ಆಸ್ಕರ್ ಪ್ರಶಸ್ತಿ ವಿಜೇತರನ್ನು ಘೋಷಿಸುತ್ತಿದ್ದಂತೆ ನಿರ್ದೇಶಕ ಎಸ್‌ಎಸ್ ರಾಜಮೌಳಿ, ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಸಂತೋಷ, ಕಣ್ಣೀರು ಮತ್ತು ಅಪ್ಪುಗೆಯಿಂದ ಸಂಭ್ರಮಿಸಿದರು. ಆಸ್ಕರ್ ಗೆದ್ದ ಬಳಿಕ ಆರ್ ಆರ್ ಆರ್ ತಂಡದ ರಿಯಾಕ್ಷನ್ ವಿಡಿಯೋ ವೈರಲ್ ಆಗಿದೆ.
ಬಳಿಕ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಎಲ್ಲಿನ ಮಾಧಮಕ್ಕೆ ಪ್ರತಿಕ್ರಿಯೆ ನೀಡಿದರು. ಆಸ್ಕರ್ ಗೆದ್ದ ಸಂಭ್ರಮ ಹಂಚಿಕೊಂಡರು. ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ಪೋಸ್ಟ್ ಶೇರ್ ಆಸ್ಕರ್ ಗೆಲುವನ್ನು ಆಚರಿಸುತ್ತಿದ್ದಾರೆ. ಆಸ್ಕರ್ ಪ್ರಶಸ್ತಿಯನ್ನು ಆರ್ ಆರ್ ಆರ್ ಚಿತ್ರದ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಮತ್ತು ಸಾಹಿತಿ ಚಂದ್ರಬೋಷ್ ಮುಡಿಗೇರಿಸಿಕೊಂಡರು. ವೇದಿಕೆ ಮೇಲೆ ಇವರಿಬ್ಬರೇ ಕಾಣಿಸಿಕೊಂಡರು. ರಾಜಮೌಳಿ ಕಾಣಿಸಿಕೊಂಡಿಲ್ಲ. ಪ್ರಶಸ್ತಿ ಗೆದ್ದು ಬೀಗಿರುವ ಬಗ್ಗೆ ರಾಜಮೌಳಿ ಹೆಚ್ಚು ಮಾತನಾಡಿಲ್ಲ. ಆದರೆ ಒಂದೇ ಪದದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದರು.
ಹೌದು ರಾಜಮೌಳಿ ಆಸ್ಕರ್ ಗೆದ್ದ ಬಳಿಕ 'ಜೈ ಹಿಂದ್' ಎಂದು ಪೋಸ್ಟ್ ಮಾಡಿದ್ದಾರೆ. ಬೇರೆ ಏನು ಹೇಳದೆ ಜೈ ಹಿಂದ್ ಪದದ ಮೂಲಕವೇ ಎಲ್ಲವನ್ನು ವಿವರಿಸಿದ್ದಾರೆ. ರಾಜಮೌಳಿ ಅವರಿಗೆ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಅಭಿಮಾನಿಗಳು ಜೈ ಜಕ್ಕಣ್ಣ ಎಂದು ಹೇಳುತ್ತಿದ್ದಾರೆ. ರಾಜಮೌಳಿ ಮೇಲೆ ಪ್ರೀತಿಯ ಸುರಿಮಳೆಯೇ ಹರಿಸುತ್ತಿದ್ದಾರೆ. ಆರ್ ಆರ್ ಆರ್ ಸಿನಿಮಾ ರಿಲೀಸ್ ಆದಾಗಿನಿಂದ ರೌಜಮೌಳಿ ಪ್ರಪಂಚದಾದ್ಯಂತ ಓಡಾಡಿ ಪ್ರಚಾರ ಮಾಡಿದ್ದಾರೆ. ತಮ್ಮ ಸಿನಿಮಾದ ಬಗ್ಗೆ ಜಗತ್ತಿಗೆ ಪರಿಚಯಿಸಿದ್ದಾರೆ. ಇದೀಗ ಆಸ್ಕರ್ ಗೆಲ್ಲುವ ಮೂಲಕ ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದಾರೆ.
Oscar 2023; ಅಬ್ಬಾ...ಅಂತೂ ಸರಿಯಾಗಿ ಮಾತಾಡಿದ್ರು; Jr NTR ಇಂಗ್ಲಿಷ್‌ಗೆ ನೆಟ್ಟಿಗರ ಮೆಚ್ಚುಗೆ
ರಾಮ್ ಚರಣ್ ಪ್ರತಿಕ್ರಿಯೆ
ರಾಮ್ ಚರಣ್ ಸಾಮಾಜಿಕ ಜಾಲತಾಣದಲ್ಲಿ ಆಸ್ಕರ್ ಪ್ರಶಸ್ತಿ ಮನೆಗೆ ಬರ್ತಿದೆ ಎಂದು ಹೇಳಿದ್ದಾರೆ. 'ನಾವು ಗೆದ್ದಿದ್ದೇವೆ. ನಾವು ಭಾರತೀಯ ಚಿತ್ರರಂಗವಾಗಿ ಗೆದ್ದಿದ್ದೇವೆ. ನಾವೇ ಗೆದ್ದೆವು. ಆಸ್ಕರ್ ಪ್ರಶಸ್ತಿಗಳು ಮನೆಗೆ ಬರುತ್ತಿವೆ' ಎಂದು ಪೋಸ್ಟ್ ಮಾಡಿದ್ದಾರೆ.
Oscar Award: ನಾಟು ನಾಟುಗಾಗಿ ನಡೆದಿತ್ತು ಕೋಟಿ ಕೋಟಿಗಟ್ಟಲೆ ಬೆಟ್ಟಿಂಗ್?
ಜೂ.ಎನ್ ಟಿ ಆರ್ ಪ್ರತಿಕ್ರಿಯೆ
ಜೂ.ಎನ್ ಟಿ ಆರ್ ಆಸ್ಕರ್ ಪ್ರಶಸ್ತಿ ಹಿಡಿದು ಫೋಟೋ ಶೇರ್ ಮಾಡಿದ್ದಾರೆ. ಕೊನೆಗೂ ನಾವು ಸಾಧಿಸಿದ್ವಿ. ಎಂಎಂ ಕೀರವಾಣಿ ಅವರಿಗೆ ಅಭಿನಂದನೆಗಳು. ಜಕ್ಕಣ್ಣ ರಾಜಮೌಳಿ, ಚಂದ್ರಬೋಷ್ ಮತ್ತು ಇಡೀ ತಂಡಕ್ಕೆ' ಎಂದು ಹೇಳಿದರು. ಆರ್ ಆರ್ ಆರ್ ಸಿನಿಮಾದ ನಾಟು ನಾಟು.. ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ.