Asianet Suvarna News Asianet Suvarna News

The Kashmir Files: ಜನರ ಭಾವನೆ ಜೊತೆ ಆಟ ಆಡಿ ಹಣ ಮಾಡಿದ್ದಾಯ್ತು, ಈಗ ಬ್ಯಾಂಕಾಕ್ ನಲ್ಲಿ ಪಾರ್ಟಿನಾ?

The Kashmir Files: ದೇಶದಲ್ಲಿ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರ ಕಾಶ್ಮೀರ್‌ ಫೈಲ್ಸ್ ಸೃಷ್ಟಿಸಿದ ಸಂಚಲನ ಏನು ಅಂತ ನಮ್ಮೆಲ್ಲರಿಗೂ ಗೊತ್ತು. ಈ ಚಿತ್ರ ಇದೀಗ ಬ್ಯಾಂಕಾಕ್ ನಲ್ಲಿ ಕಮಾಲ್ ಮಾಡಹೊರಟಿದೆ. ಆದರೆ ಇದನ್ನೇ ಒಂದು ವರ್ಗದ ಜನ ಹೇಗೆ ತಿರುಚಬಹುದು ಅನ್ನೋ ಟ್ವೀಟ್ ಇದೀಗ ಎಲ್ಲೆಡೆ ಓಡಾಡ್ತಿದೆ.

After Kashmir files success Agnihotri enjoying party in Bangkok?
Author
Bengaluru, First Published Apr 13, 2022, 5:19 PM IST

ವಿವೇಕ್ ಅಗ್ನಿಹೋತ್ರಿ ಅವರ 'ಕಾಶ್ಮೀರ್ ಫೈಲ್ಸ್' (Kashmir files)ಚಿತ್ರ ಒಂದು ಕಡೆ ದೇಶದ ಕೋಟಿ ಕೋಟಿ ಜನರನ್ನು ಬಡಿದೆಬ್ಬಿಸುವ ಕೆಲಸ ಮಾಡಿತು. ಕಾಶ್ಮೀರಿ ಪಂಡಿತರ (Kashmiri Pundit Genocide) ಮೇಲಾದ ಅನ್ಯಾಯದ ಮೇಲೆ ಬೆಳಕು ಚೆಲ್ಲಿ ಅವರ ಬದುಕು ಹೇಗೆ ದಾರುಣವಾಗಿ ಕೊನೆಗೊಂಡಿದೆ ಅನ್ನೋದನ್ನು ತೋರಿಸಿತು. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು, ಜನ ಸಾಮಾನ್ಯರವರೆಗೆ ಎಲ್ಲರೂ ಕಾಶ್ಮೀರಿ ಪಂಡಿತರಿಗಾದ ಅನ್ಯಾಯವನ್ನು ಕಂಡು ಮರುಗುವ ಹಾಗೆ ಮಾಡಿದ್ದು ಈ ಸಿನಿಮಾದ ಹೆಗ್ಗಳಿಕೆ. ದೇಶದಲ್ಲಿ ಹೀಗೆಲ್ಲ ಸಂಚಲನ ಸೃಷ್ಟಿಸಿದ ಈ ಚಿತ್ರ ವಿದೇಶಗಳಲ್ಲೂ ಭರ್ಜರಿ ಕಮಾಲ್ ಮಾಡುತ್ತಿದೆ. ಅಲ್ಲಿನ ಎನ್ನಾರೈಗಳು ಈ ಸಿನಿಮಾವನ್ನು ಮುಕ್ತವಾಗಿ ಸ್ವಾಗತಿಸಿದ್ದಾರೆ. ಜೊತೆಗೆ ಆ ದೇಶದ ಜನರೂ ಕುತೂಹಲದಿಂದ ಈ ಸಿನಿಮಾವನ್ನು ನೋಡುತ್ತಿದ್ದಾರೆ. ಇದೀಗ ಕಾಶ್ಮೀರ ಫೈಲ್ಸ್ ಲಂಡನ್‌ನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ಪ್ರದರ್ಶನದಲ್ಲಿ ಪ್ರೇಕ್ಷಕರ ಜೊತೆಗೆ ವಿವೇಕ್ ಅಗ್ನಿಹೋತ್ರಿ (Vivek agnihotri) ಹಾಗೂ ಅವರ ಸಿನಿಮಾ ಕೆಲಸಗಳ ಸಹಭಾಗಿ, ಪತ್ನಿ ಪಲ್ಲವಿ ಜೋಷಿ ಅವರೂ ಈ ಸಿನಿಮಾ ನೋಡ್ತಿದ್ದಾರೆ.

Kashmir Files ಸಕ್ಸಸ್ ಬೆನ್ನಲ್ಲೇ ಮತ್ತೆರಡು ನೈಜ ಘಟನೆ ಆಧಾರಿತ ಸಿನಿಮಾ ಘೋಷಿಸಿದ ಅಗ್ನಿಹೋತ್ರಿ

ಈ ಬಗ್ಗೆ ವಿವೇಕ್ ಜೋಷಿ ಅವರು ನಾಟಕೀಯವಾಗಿ ಟ್ವೀಟ್ ಅನ್ನೂ ಮಾಡಿದ್ದಾರೆ. ಈ ಟ್ವೀಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ಇದು ನಾವಿಬ್ಬರು ಅಂದರೆ ವಿವೇಕ್ ಮತ್ತು ಪಲ್ಲವಿ. ನಮ್ಮ ಹಿಂದೆ ಕಾಣಿಸ್ತಿರೋದು ಬ್ಯಾಂಕಾಕ್ (Bangkok). ಮತ್ತು ಇಲ್ಲಿ ನಮ್ಮ ಪಿಕ್ಚರ್ ನಡೀತಿದೆ' ಅಂತ ಜೋರಾಗಿ ನಗುತ್ತಾ ಹೇಳುವ ವೀಡಿಯೋ ಈ ಟ್ವೀಟ್ ನಲ್ಲಿದೆ. ಅವರು ಬೊಟ್ಟು ಮಾಡಿ ತೋರಿಸುವ ಕಡೆ ಕಾಶ್ಮೀರ್ ಫೈಲ್ಸ್ ಚಿತ್ರದ ಪೋಸ್ಟರ್ ಇದೆ. ಜೊತೆಗೆ ಕಾಶ್ಮೀರ್ ಫೈಲ್ಸ್‌ನ ಫಸ್ಟ್ ಸ್ಕ್ರೀನಿಂಗ್ ವಿವೇಕ್ ಅಗ್ನಿಹೋತ್ರಿ ಹಾಗೂ ಪಲ್ಲವಿ ಜೋಷಿ ಅವರ ಜೊತೆಗೆ ವೀಕ್ಷಿಸೋಣ ಅನ್ನುವ ನೋಟ್ ಈ ಬ್ಯಾನರ್‌ನಲ್ಲಿದೆ. ಕಾಶ್ಮೀರ್ ಫೈಲ್ಸ್ ಲಂಡನ್‌ಗೆ ಹೋಗಿ ಅಲ್ಲೂ ಕಮಾಲ್ ಮಾಡಹೊರಟಿರುವುದನ್ನು ಅನೇಕರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಆದರೆ ಇದಕ್ಕಿಂತ ಭಿನ್ನವಾದ ಟ್ವೀಟ್ ಒಂದು ಇದೀಗ ಸದ್ದು ಮಾಡುತ್ತಿದೆ.

 

ವಿವೇಕ್ ಹಾಗೂ ಪಲ್ಲವಿ ಅವರ ಬ್ಯಾಂಕಾಕ್ ಸಿನಿಮಾ ಪ್ರದರ್ಶನದ ಟ್ವೀಟ್ (Tweet) ಅನ್ನು ಸೌರಭ್ ಅನ್ನುವವರು ರೀಟ್ವೀಟ್ ಮಾಡಿದ್ದಾರೆ. ಜೊತೆಗೆ ತಮ್ಮ ನೋಟ್ ಅನ್ನೂ ಹಿಂದಿಯಲ್ಲಿ ಹಾಕಿದ್ದಾರೆ. 'ಇಲ್ಲಿ ಅಂದರೆ ಭಾರತದಲ್ಲಿಕಾಶ್ಮೀರ್ ಫೈಲ್ಸ್ ಜನರ ಭಾವನೆಗಳ ಜೊತೆಗೆ ಆಟ ಆಡಿ ಅವರನ್ನು ಪ್ರಚೋದಿಸಿ ಹಣ ಮಾಡಿದ್ದಾಯ್ತು. ಈಗ ನೀವಿಬ್ರೂ ಬ್ಯಾಂಕಾಕ್‌ನಲ್ಲಿ ಪಾರ್ಟಿ ಮಾಡ್ತಿದ್ದೀರಾ?' ಅಂತ ವ್ಯಂಗ್ಯವಾಗಿ ಕೇಳುವ ಪೋಸ್ಟ್ ಇದು. ಹೀಗೆ ಟ್ವೀಟ್ ಮಾಡಿದರವ ಹಿನ್ನೆಲೆಯನ್ನು ಗಮನಿಸಿದರೆ ಅವರ ಈ ಟ್ವೀಟ್‌ನಲ್ಲಿ ವ್ಯಂಗ್ಯದ ಧ್ವನಿ ಇರೋದು ತಿಳಿಯುತ್ತದೆ. ಅಂದರೆ ವಿವೇಕ್ ಅವರ ಕಾಶ್ಮೀರ್ ಫೈಲ್ಸ್‌ಅನ್ನು ವಿರೊಧಿಸುವ ಜನ ಈ ಥರ ಟ್ವೀಟ್ ಮಾಡಬಹುದು ಅನ್ನೋ ಧ್ವನಿ ಇದೆ. ಆದರೆ ಅದನ್ನು ಸರಿಯಾಗಿ ಗಮನಿಸದೇ ಕೆಲವರು ಅಗ್ನಿಹೋತ್ರಿ ಅವರ ಪರ ಹಾಗೂ ವಿರೋಧದ ಪ್ರತಿಕ್ರಿಯೆ ನೀಡಿದ್ದಾರೆ.

ಕೊರೊನಾ ಬಳಿಕ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಮೊದಲ ಹಿಂದಿ ಸಿನಿಮಾ The Kashmir Files; ಗಳಿಸಿದ್ದೆಷ್ಟು?

ಮನೀಶಾ ತ್ರಿಪಾಠಿ ಎಂಬವರು ಅಗ್ನಿಹೋತ್ರಿ ದಂಪತಿ ಬ್ಯಾಂಕಾಕ್‌ನಲ್ಲಿ ಪಾರ್ಟಿ ಮಾಡಿದ್ರೆ ಅದರಲ್ಲೇನು ತಪ್ಪು, ಅವರು ಈ ಸಿನಿಮಾಗಾಗಿ ತಮ್ಮ ಬದುಕಿನ ಮೂರು ವರ್ಷಗಳನ್ನು ವ್ಯಯಿಸಿದ್ದಾರೆ. ಈ ಮೂಲಕ ಸತ್ಯವನ್ನು ಇಡೀ ದೇಶದ ಜನರಿಗೆ ಮನದಟ್ಟು ಮಾಡಿದ್ದಾರೆ. ಅವರು ಈ ಬ್ರೇಕ್ ತೆಗೆದುಕೊಳ್ಳಲು ಅರ್ಹರು ಎಂದು ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಫರಾಸ್ ಅನ್ನುವವರು, 'ವಿವೇಕ್ ಸತ್ಯ ಹೇಳ್ತಿದ್ದಾರಾ? ಹಾಗಿದ್ರೆ ಸತ್ಯವನ್ನು ಹಾಗೇ ಹೇಳಬಹುದಿತ್ತಲ್ಲಾ, ಅದಕ್ಕೊಂದು ಭಾವನೆಗಳ ಜೊತೆಗೆ ಆಟ ಆಡುವಂಥಾ ಫಿಕ್ಷನ್‌ಅನ್ನು(Fiction) ಯಾಕೆ ಸೇರಿಸಬೇಕಿತ್ತು?' ಎಂದು ಪ್ರಶ್ನಸಿದ್ದಾರೆ. ಹೀಗೆ ಪರ, ವಿರೋಧದ ಪ್ರತಿಕ್ರಿಯೆಗಳಲ್ಲಿ ಚರ್ಚೆ ಮುಂದುವರಿದಿದೆ. ಸಾವಿರಾರು ಜನ ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾಲ್ಕೂವರೆ ಸಾವಿರ ಜನ ಈ ಟ್ವೀಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ದಿ ಕಾಶ್ಮೀರ್ ಫೈಲ್ಸ್ ಏಕ್ ಅರ್ಧಸತ್ಯ' ಕಾರ್ಯಕ್ರಮಕ್ಕೆ ಕಾಶ್ಮೀರಿ ಪಂಡಿತರಿಗೆ ತಡೆ

ಒಟ್ಟಾರೆ ವಿವೇಕ್ ಅವರ ಸಿನಿಮಾ ಮಾತ್ರ ಅಲ್ಲ, ಅವರ ಸಣ್ಣ ವೀಡಿಯೋ ತುಣುಕು ಸಹ ಚರ್ಚೆಗೆ ಗ್ರಾಸವಾಗ್ತಿದೆ. ಅವರ ಪ್ರತೀ ನಡೆಯೂ ನ್ಯಾಶನಲ್ ಇಶ್ಯೂ ಥರ ಡಿಸ್ಕಶನ್ ಪ್ಯಾನಲ್‌ಗೆ ಬರುತ್ತಿದೆ. ಅಲ್ಲಿಗೆ ಈ ದಂಪತಿ ಎಂಥಾ ಪ್ರಭಾವಿಗಳಾಗ್ತಿದ್ದಾರೆ ಅನ್ನೋ ವಿಚಾರವೂ ಗಮನ ಸೆಳೆಯುತ್ತದೆ.

Follow Us:
Download App:
  • android
  • ios