ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಯಶ್ಸಿನ ಬಳಿಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಇತಿಹಾಸದಲ್ಲಿ ದಾಖಲಾಗದ ಎರಡು ಘಟನೆಗಳನ್ನು ಸಿನಿಮಾ ಮಾಡುವುದಾಗಿ ಹೇಳಿದ್ದ ಅಗ್ನಿಹೋತ್ರಿ ಇದೀಗ ದಿ ದೆಹಲಿ ಫೈಲ್ಸ್ ಸಿನಿಮಾ ಅನೌನ್ಸ್ ಮಾಡಿದ್ದಾರೆ. 

ದಿ ಕಾಶ್ಮೀರ್ ಫೈಲ್ಸ್ (The Kashmir Files) ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದ ಸಿನಿಮಾ. ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಕೊರೊನಾ ಬಳಿಕ ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಅತೀ ಹೆಚ್ಚು ಕಮಾಯಿ ಮಾಡಿದ ಸಿನಿಮಾ ಎನ್ನುವ ಖ್ಯಾತಿಯನ್ನು ಗಳಿಸಿದೆ. ನಿರ್ದೇಶಕ ಅಗ್ನಿಹೋತ್ರಿ ಸಾರಥ್ಯದಲ್ಲಿ ಬಂದ ಸಿನಿಮಾವನ್ನು ಪ್ರೇಕ್ಷಕರು ಮಾತ್ರವಲ್ಲದೇ ಸಿನಿಮಾ ಗಣ್ಯರು ಮತ್ತು ರಾಜಕೀಯ ಗಣ್ಯರು ಸಹ ಹಾಡಿಹೊಗಳಿದ್ದರು.

ಕಾಶ್ಮೀರ್ ಫೈಲ್ಸ್ ಹಿಂದಿಯಲ್ಲಿ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಮಾಡಿದೆ. ಈ ಯಶಸ್ಸಿನ ನಂತರ ನಿರ್ದೇಶಕ ಅಗ್ನಿಹೋತ್ರಿ ಇತಿಹಾಸದಲ್ಲಿ ದಾಖಲಾಗದ ಮತ್ತೆಡರು ಕಥೆಯನ್ನು ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಇತಿಹಾಸದಲ್ಲಿ ದಾಖಲಾಗದ ಎರಡು ಘಟನೆಗಳ ಬಗ್ಗೆ ಸಿನಿಮಾ ಮಾಡುವುದಾಗಿ ಇತ್ತೀಚಿಗೆ ಬಹಿರಂಗ ಪಡಿಸಿದ್ದರು. ಇದೀಗ ಒಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಏಪ್ರಿಲ್15ರಂದು ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅನೌನ್ಸ್ ಮಾಡಿರುವ ಅಗ್ನಿಹೋತ್ರಿ ದಿ ದೆಹಲಿ ಫೈಲ್ಸ್(The Delhi Files) ಮಾಡುವುದಾಗಿ ಹೇಳಿದ್ದಾರೆ.

'ಕಾಶ್ಮೀರ್ ಫೈಲ್ಸ್ ಸಕ್ಸಸ್ ಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು. ಕಳೆದ 4 ವರ್ಷಗಳಿಂದ ನಾವು ಅತ್ಯಂತ ಪ್ರಮಾಣಿಕವಾಗಿ ಶ್ರಮಿಸಿದ್ದೇವೆ. ಕಾಶ್ಮೀರದಲ್ಲಾದ ಹಿಂದೂಗಳಿಗೆ ಮಾಡಿದ ಅನ್ಯಾಯ ಮತ್ತು ನರಮೇದದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮುಖ್ಯವಾಗಿದೆ. ನಾನು ಇದೀಗ ಹೊಸ ಚಿತ್ರದಲ್ಲಿ ಕೆಲಸ ಸಮಯ. ದಿ ದೆಹಲಿ ಫೈಲ್ಸ್' ಎಂದು ಹೇಳಿದ್ದಾರೆ.

ಅಂದಹಾಗೆ ಈ ಮೊದಲೇ ಬಹಿರಂಗ ಪಡಿಸಿದ ಹಾಗೆ ಕಾಶ್ಮೀರ್ ಫೈಲ್ಸ್ ಸಿನಿಮಾತಂಡವೇ ಮತ್ತೆ ಒಂದಾಗಿ ದೆಹಲಿ ಫೈಲ್ಸ್ ಚಿತ್ರದಲ್ಲಿ ಕೆಲಸ ಮಾಡುವ ಸಾಧ್ಯತೆ ಇದೆ. ನಿರ್ದೇಶಕ ಅಗ್ನಿ ಹೋತ್ರಿ, ಅಭಿಷೇಕ್ ಅಗರ್ವಾಲ್ ಮತ್ತು ಪಲ್ಲವಿ ಜೋಶಿ ಈ ಮೂವರು ಸೇರಿ ಮತ್ತೊಂದು ನೈಜ ಘಟನೆ ಆಧಾರಿತ ಕಥೆಯನ್ನು ಸಿನಿಮಾ ಮಾಡಲು ತಯಾರಾಗಿದ್ದಾರೆ. ಇತ್ತೀಚಿಗಷ್ಟೆ ಅಗ್ನಿಹೋತ್ರಿ ಇತಿಹಾಸದಲ್ಲಿ ಸಮಾಧಿಯಾಗಿರುವ ಘಟನೆಗಳ ಮೇಲೆ ಚಲನಚಿತ್ರ ಮಾಡುವುದಾಗಿ ಅಗ್ನಿಹೋತ್ರಿ ಬಹಿರಂಗ ಪಡಿಸಿದ್ದರು ಅದರಂತೆ ಈಗ ಮೊದಲ ಸಿನಿಮಾ ಅನೌನ್ಸ್ ಮಾಡಿದ್ದಾರೆ.

View post on Instagram


Kashmir Files ಸಕ್ಸಸ್ ಬೆನ್ನಲ್ಲೇ ಮತ್ತೆರಡು ನೈಜ ಘಟನೆ ಆಧಾರಿತ ಸಿನಿಮಾ ಘೋಷಿಸಿದ ಅಗ್ನಿಹೋತ್ರಿ

ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್ 90 ದಶಕದಲ್ಲಿ ಕಾಶ್ಮೀರ ಪಂಡಿತರ ಹತ್ಯೆ ಮತ್ತು ವಲಸೆ ಬಗ್ಗೆ ಇರುವ ಸಿನಿಮಾವಾಗಿದೆ. ಕೇವಲ 15 ಕೋಟಿ ರೂಪಾಯಿನಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಸಿನಿಮಾ ಬಿಡುಗಡೆಯಾಗಿ 5 ವಾರಗಳಲ್ಲಿ ಕಾಶ್ಮೀರ ಫೈಲ್ಸ್ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಕೊರೊನಾ ಬಳಿಕ ಹಿಂದಿಯಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿ ಸಿನಿಮಾವಾಗಿದೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಅನುಪಮ್ ಖೇರ್, ವಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ದರ್ಶನ್ ಕುಮಾರ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಸ್ಟಾರ್ ಕಲಾವಿದರಿಲ್ಲದೆ, ಅಬ್ಬರದ ಪ್ರಚಾರ ವಿಲ್ಲದೆ ಈ ಸಿನಿಮಾ ಗಳಿಸಿದ ದೊಡ್ಡ ಮಟ್ಟದ ಸಕ್ಸಸ್ ಬಾಲಿವುಡ್ ಮಂದಿಗೆ ಅಚ್ಚರಿ ಮೂಡಿಸಿದೆ.

The Kashmir Files: ಜನರ ಭಾವನೆ ಜೊತೆ ಆಟ ಆಡಿ ಹಣ ಮಾಡಿದ್ದಾಯ್ತು, ಈಗ ಬ್ಯಾಂಕಾಕ್ ನಲ್ಲಿ ಪಾರ್ಟಿನಾ?

ನೌಟಂಕಿ ಸಿನಿಮಾ ಮುಗಿಸಿರುವ ಅಗ್ನಿಹೋತ್ರಿ

ಕಾಶ್ಮೀರ್ ಫೈಲ್ಸ್ ಸಕ್ಸಸ್ ಖುಷಿಯಲ್ಲೇ ಅಗ್ನಿಹೋತ್ರಿ ಮತ್ತೊಂದು ಸಿನಿಮಾ ನೌಟಂಕಿ ಚಿತ್ರೀಕರಣ ಮುಗಿಸಿದ್ದಾರೆ. ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ. ಲಾಕ್ ಡೌನ್ ನಿಂದ ಕಾಶ್ಮೀರ್ ಫೈಲ್ಸ್ ಸಿನಿಮಾ ಚಿತ್ರೀಕರಣ ನಿಂತ ಸಮಯದಲ್ಲಿ ಈ ಸಿನಿಮಾದ ಚಿತ್ರೀಕರಣ ಮುಗಿಸಿರುವುದಾಗಿ ಹೇಳಿದ್ದಾರೆ. ರೆಡಿ ಇದ್ದ ಸ್ಕ್ರಿಪ್ಟ್ ಅನ್ನು ಗ್ಯಾಪ್ ನಲ್ಲಿ ಸಿನಿಮಾ ಮಾಡಿ ಮುಗಿಸಿದ್ದಾರೆ ಅಗ್ನಿಹೋತ್ರಿ. ನೌಟಂಕಿ ಸಿನಿಮಾ ಕೂಡ ತುಂಬಾ ಕಡಿಮೆ ಬಜೆಟ್ ನಲ್ಲಿ ತಯಾರಾದ ಸಿನಿಮಾ. ಸದ್ಯ ಮತ್ತೆ ಎರಡು ಘಟನಗಳನ್ನು ತೆರೆಮೇಲೆ ತರಲು ಸಿದ್ಧರಾಗಿರುವ ಅಗ್ನಿಹೋತ್ರಿ ಯಾವ ಘಟನೆಯನ್ನು ಹೇಳುತ್ತಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಸದ್ಯದಲ್ಲೇ ಅಗ್ನಿಹೋತ್ರಿ ಸಿನಿಮಾ ಘೋಷಣೆಯಾಗುವ ಸಾಧ್ಯತೆ ಇದೆ.