ಬಾಲಿವುಡ್ ನಟ ಅಮೀರ್ ಖಾನ್‌ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವುದಾಗಿ ಅವರ ವಕ್ತಾರ ಮಾಹಿತಿ ನೀಡಿದ್ದಾರೆ. ಈ ಮೂಲಕ ಬಾಲಿವುಡ್‌ನ ಮತ್ತೊಬ್ಬ ನಟನಿಗೆ ಕೊರೋನಾ ಬಾಧಿಸಿದೆ.

ಇತ್ತೀಚೆಗೆ ಅಮೀರ್ ಖಾನ್ ಅವರು ಚಲನಚಿತ್ರ ಪ್ರದರ್ಶನದಲ್ಲಿ ಕಂಡುಬಂದಿದ್ದಾರೆ. ಅಮೀರ್ ಖಾನ್ ಅವರ ವಕ್ತಾರರು, ಅಮೀರ್ ಖಾನ್ ಕೋವಿಡ್ 19 ಪರೀಕ್ಷೆ ಪಾಸಿಟಿವ್ ಬಂದಿದೆ ಎಂದಿದ್ದಾರೆ.

ಕೊರೋನಾ ವ್ಯಾಕ್ಸಿನ್ ಫಸ್ಟ್ ಡೋಸ್ ಪಡೆದ ಸಂಜಯ್ ದತ್.

ಅವರು ಎಲ್ಲಾ ನಿಯಮಗಳನ್ನು ಅನುಸರಿಸಿ ಸ್ವಯಂ ಕ್ವಾರೆಂಟೈನ್ ಆಗಿ ಮನೆಯಲ್ಲಿದ್ದಾರೆ.ಆರಮಾವಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ಅವರೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ತಮ್ಮನ್ನು ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷಿಸಿಕೊಳ್ಳಬೇಕು. ನಿಮ್ಮ ಎಲ್ಲಾ ಆಶಯಗಳಿಗೆ ಮತ್ತು ಕಾಳಜಿಗೆ ಧನ್ಯವಾದಗಳು ಎಂದು ಅವರ ವಕ್ತಾರ ತಿಳಿಸಿದ್ದಾರೆ.