Asianet Suvarna News Asianet Suvarna News

ಅದಿತಿ ಜೊತೆ ಸಿದ್ಧಾರ್ಥ್ ಮಸ್ತ್ ಡಾನ್ಸ್; ಲವ್‌ಬರ್ಡ್ಸ್ ಕ್ಯೂಟ್ ವಿಡಿಯೋ ವೈರಲ್

ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ಇಬ್ಬರೂ ರೀಲ್ಸ್ ಮಾಡಿದ್ದು, ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 

Aditi Rao Hydari And Siddharth Dancing Together For Insta Reels, video viral sgk
Author
First Published Feb 28, 2023, 11:10 AM IST

ಬಹುಭಾಷಾ ನಟಿ ಅದಿತಿ ರಾವ್ ಹೈದರಿ ಮತ್ತು ಕಾಲಿವುಡ್ ಸ್ಟಾರ್ ಸಿದ್ಧಾರ್ಥ್ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಕದ್ದುಮುಚ್ಚಿ  ಓಡಾಡುತ್ತಿದ್ದ ಈ ಜೋಡಿ ಆಗಾಗ ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿದ್ದರು. ಆದರೀಗ ಇಬ್ಬರೂ ರಾಜರೋಶವಾಗಿ ಓಡಾಡುತ್ತಿದ್ದಾರೆ, ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ತಮ್ಮ ಪ್ರೀತಿ ವಿಚಾರವನ್ನು ಅಧಿಕೃತಗೊಳಿಸಿದ್ದಾರೆ. ಇದೀಗ ಸಿದ್ಧಾರ್ಥ್ ಮತ್ತು ಅದಿತಿ ಇಬ್ಬರೂ ಮಸ್ತ್ ಡಾನ್ಸ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇತ್ತೀಚೆಗಷ್ಟೆ  ಇಬ್ಬರೂ ಈವೆಂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಬಳಿಕ ಸಖತ್ ಡಾನ್ಸ್ ಮಾಡಿದ್ದಾರೆ. 

ಅದಿತಿ ಮತ್ತು ಸಿದ್ಧಾರ್ಥ್ ಇಬ್ಬರೂ ಇದೀಗ ರೀಲ್ಸ್ ಮಾಡಲು ಶುರು ಮಾಡಿಕೊಂಡಿದ್ದಾರೆ. ಇಬ್ಬರ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಈ ರೀಲ್ಸ್ ಈಗ ಟ್ರೆಂಡಿಂಗ್‌ನಲ್ಲಿದೆ. ಇಬ್ಬರೂ ಫೇಮಸ್ ತುಮ್ ತುಮ್ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಅಂದಹಾಗೆ ಇಬ್ಬರೂ ಸಿದ್ಧಾರ್ಥ್ ಮನೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಡಾನ್ಸ್ ವಿಡಿಯೋ ಶೇರ್ ಮಾಡಿರುವ ಅದಿತಿ, 'ಕೋತಿಗಳ ಡಾನ್ಸ್' ಎಂದು ಹೇಳಿದ್ದಾರೆ. 

ಈ ವಿಡಿಯೋ ನೋಡಿಗ ಬಳಿಕ ನೆಟ್ಟುಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಸಿಕ್ಕಾಪಟ್ಟೆ ಕ್ಯೂಟ್ ಎಂದು ಹೇಳುತ್ತಿದ್ದರೆ ಇನ್ನು ಕೆಲವರು ಇಷ್ಟು ಅದ್ಭುತವಾಗಿ ಡಾನ್ಸ್ ಮಾಡುತ್ತೀರಿ ಎಂದು ಗೊತ್ತಿರಲಿಲ್ಲ ಎನ್ನುತ್ತಿದ್ದಾರೆ. ಇನ್ನು ಕೆಲವರು ಲವ್ ಬರ್ಡ್ಸ್ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

ಅದಿತಿ ಮತ್ತು ಸಿದ್ಧಾರ್ಥ್ ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದಿತಿ ಸದ್ಯ ಸೌತ್ ಸಿನಿರಂಗದಲ್ಲಿ ನಿರತರಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಅದಿತಿ ಉತ್ತಮ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಅದಿತಿ, ಸಿದ್ಧಾರ್ಥ್ ಜೊತೆ ಮಹಾ ಸಮುದ್ರಂದಲ್ಲಿ ನಟಿಸಿದ್ದರು. ಇದೇ ಸಿನಿಮಾದ ಸೆಟ್ ನಲ್ಲಿ ಇಬ್ಬರ ಪ್ರೀತಿ ಪ್ರಾರಂಭವಾಗಿದ್ದು ಎನ್ನಲಾಗುತ್ತಿದೆ. ಸಿನಿಮಾ ಬಳಿಕವೂ ಇಬ್ಬರು ಹೆಚ್ಚಾಗಿ ಒಟ್ಟೊಟ್ಟಿಗೆ ಓಡಾಡುತ್ತಿದ್ದಾರೆ. ಇದೀಗ ಒಟ್ಟಿಗೆ ವಾಸಿಸುತ್ತಿದ್ದಾರೆ ಎನ್ನಲಾಗಿದೆ. 

ಸಿದ್ಧಾರ್ಥ್ ಜೊತೆ ಡೇಟಿಂಗ್: ಅದಿತಿ ರಾವ್‌ ಹೈದರಿ ಅನಿರೀಕ್ಷಿತ ಪ್ರತಿಕ್ರಿಯೆ; ನಟಿ ಹೇಳಿದ್ದಿಷ್ಟು

ಮದುವೆಯಾಗಿ ವಿಚ್ಛೇದನ ಪಡೆದಿರುವ ನಟಿ

ಅದಿತಿ ರಾವ್ ಹೈದರಿ ಬಗ್ಗೆ ಹೇಳುವುದಾದರೆ ನಟಿ ಈಗಾಗಲೇ ಮದುವೆಯಾಗಿದ್ದು ಪತಿಯಿಂದ ದೂರ ಆಗಿದ್ದಾರೆ. 2011ರಲ್ಲಿ ಅದಿತಿ ನಟ ಸತ್ಯದೀಪ್ ಮಿಶ್ರ ಜೊತೆ ಹಸೆಮಣೆ ಏರಿದ್ದರು. ಆದರೆ ಮದುವೆಯಾಗಿ ಎರಡು ವರ್ಷದಲ್ಲೇ ಪತಿಯಿಂದ ವಿಚ್ಛೇದನ ಪಡೆದು ದೂರ ಆದರು. ಬಳಿಕ ಸಿಂಗಲ್ ಆಗಿದ್ದ ಅದಿತಿ ಇದೀಗ ಸಿದ್ಧಾರ್ಥ್ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ.


ವಿಚ್ಛೇದನದ ನಂತರ ನಟನೊಂದಿಗೆ ಹೆಸರು ತಳುಕು, ರಾಜಕುಮಾರಿಯಾಗಿದ್ದರೂ ಜೀವನ ಸುಲಭವಾಗಿಲ್ಲ ಈ ನಟಿಯದು!

ಸಿದ್ಧಾರ್ಥ್ ಬಗ್ಗೆ

ಇನ್ನು ಸಿದ್ಧಾರ್ಥ್ ಬಗ್ಗೆ ಹೇಳುವುದಾದರೆ ಸಿದ್ಧಾರ್ಥ್ 2003ರಲ್ಲಿ ಮೇಘನಾ ಎನ್ನುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಮದುವೆ ಆಗಿ ಕೆಲವೇ ವರ್ಷಗಳಲ್ಲಿ 2007ರಲ್ಲಿ ಇಬ್ಬರು ವಿಚ್ಛೇದನ ಪಡೆದು ದೂರ ಆದರು. ಬಳಿಕ ಸಿದ್ದಾರ್ಥ್ ನಟಿ ಸಮಂತಾ ಜೊತೆ ಪ್ರೀತಿಯಲ್ಲಿದ್ದರು. ಆದರೆ ಸಮಂತಾ ಅವರಿಂದನೂ ದೂರ ಆಗಿ ಸಿಂಗಲ್ ಆಗಿದ್ದರು. ಇದೀಗ ಅದಿತಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.  

Follow Us:
Download App:
  • android
  • ios