Asianet Suvarna News Asianet Suvarna News

ದಾಂಪತ್ಯ ಜೀವನಕ್ಕೆ ಅದಿತಿ ರಾವ್ ಹೈದರಿ – ಸಿದ್ಧಾರ್ಥ್, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್‌  

ನಟಿ ಅದಿತಿ ರಾವ್ ಹೈದರಿ ಹಾಗೂ ನಟ ಸಿದ್ಧಾರ್ಥ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾರ್ಚ್ ನಲ್ಲಿ ಎಂಗೇಜ್ ಮಾಡ್ಕೊಂಡಿದ್ದ ಜೋಡಿ ಈಗ ದೇವಸ್ಥಾನದಲ್ಲಿ ಮದುವೆಯಾಗಿದೆ. ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.
 

aditi rao hydari and siddharth got married first picture roo
Author
First Published Sep 16, 2024, 1:32 PM IST | Last Updated Sep 16, 2024, 1:32 PM IST

ಬಾಲಿವುಡ್ ತಾರಾ ಜೋಡಿ ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ (Bollywood star couple Aditi Rao Hydari and Siddharth ) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದಂಪತಿ ನಮ್ಮ ಮದುವೆ (marriage) ಯ ಫೋಟೋಗಳನ್ನು ಸೋಶಿಯಲ್ ಮೀಡಿಯಾ (Social Media) ದಲ್ಲಿ ಹಂಚಿಕೊಂಡು ಅಭಿಮಾನಿಗಳ ಕಣ್ಣಿಗೆ ಹಬ್ಬವುಂಟು ಮಾಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ನವ ಜೋಡಿಗೆ ಅಭಿನಂಧನೆಯೆ ಮಹಾಪೂರವೇ ಹರಿದು ಬರ್ತಿದೆ. 

ಸಿದ್ಧಾರ್ಥ್ ಹಾಗೂ ಅದಿತಿ ಮದುವೆ ಫೋಟೋ ಹಂಚಿಕೊಂಡಿರುವ ಅದಿತಿ, ನೀವು ನನ್ನ ಸೂರ್ಯ, ನನ್ನ ಚಂದ್ರ ಮತ್ತು ನನ್ನ ಎಲ್ಲಾ ನಕ್ಷತ್ರಗಳು... ಶಾಶ್ವತವಾಗಿ ಆತ್ಮದ ಗೆಳೆಯರಾಗಿರಿ, ಶ್ರೀಮತಿ ಮತ್ತು ಶ್ರೀ ಆಡು - ಸಿದ್ಧು ಎಂದು ಶೀರ್ಷಿಕೆ ಹಾಕಿದ್ದಾರೆ. ಇದೋ ಪೋಸ್ಟನ್ನು ಸಿದ್ಧಾರ್ಥ್ ಕೂಡ ತಮ್ಮ ಇನ್ಸ್ಟಾಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಹೇಮಾ ಮಾಲಿನಿ ಮನೆಯಲ್ಲಿತ್ತು ಪಿರಿಯಡ್ಸ್ ನಿರ್ಬಂಧ, ಮುಟ್ಟು ಮುಗಿದ್ಮೇಲೆ ತಲೆ ಸ್ನಾನ ಕಡ್ಡಾಯವಾಗಿತ್ತು ಎಂದ ಇಶಾ ಡಿಯೋಲ್

ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್, ಇನ್ಸ್ಟಾಗ್ರಾಮ್ ನಲ್ಲಿ( Instagram) 9 ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದೇವಾಲಯದ ಹೊರಗೆ ತೆಗೆದ ಕೆಲ ಫೋಟೋಗಳಿವೆ. ಅದಿತಿ ತಿಳಿ ಕಂದು ಬಣ್ಣದ ಸೀರೆ ಉಟ್ಟಿದ್ದಾರೆ. ಸಿದ್ಧಾರ್ಥ್ ದಕ್ಷಿಣ ಭಾರತೀಯ ಸಂಸ್ಕೃತಿಯಂತೆ ಬಿಳಿ ಬಣ್ಣದ ಧೋತಿ ಮತ್ತು ಕುರ್ತಾವನ್ನು ಧರಿಸಿದ್ದಾರೆ.  ಸಿದ್ಧಾರ್ಥ್ ಮತ್ತು ಅದಿತಿ ಮದುವೆ, ತೆಲಂಗಾಣದ ವನಪರ್ತಿಯಲ್ಲಿರುವ 400 ವರ್ಷಗಳಷ್ಟು ಹಳೆಯದಾದ ಶ್ರೀರಂಗಪುರ ದೇವಸ್ಥಾನದಲ್ಲಿ ನಡೆದಿದೆ ಎನ್ನಲಾಗಿದೆ. ಆದ್ರೆ ಅದಿತಿ ಅಥವಾ ಸಿದ್ಧಾರ್ಥ್ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ.

ಒಂದು ಫೋಟೋದಲ್ಲಿ ಸಿದ್ಧಾರ್ಥ್ ಮತ್ತು ಅದಿತಿ ಪುರೋಹಿತರಿಗೆ ನಮಸ್ಕಾರ ಮಾಡ್ತಿರೋದನ್ನು ನೋಡ್ಬಹುದು. ಇಬ್ಬರು ಮಾಲೆ ಧರಿಸಿ, ಕೈ ಮುಗಿದು ಕುಳಿತಿದ್ದಾರೆ.  ಇನ್ನೊಂದು ಫೋಟೋದಲ್ಲಿ ಮನೆಯ ಹಿರಿಯ ಮಹಿಳೆಯರು ಅದಿತಿ ಮತ್ತು ಸಿದ್ಧಾರ್ಥ್ ಅವರಿಗೆ ಆಶೀರ್ವಾದ ಮಾಡ್ತಿರೋದನ್ನು ನೀವು ಕಾಣ್ಬಹುದು. ಕೊನೆಯ ಫೋಟೋದಲ್ಲಿ ಇಬ್ಬರು ಪ್ರೀತಿಯಿಂದ ಹಗ್ ಮಾಡ್ಕೊಂಡಿದ್ದು, ಇಬ್ಬರ ಮುಖದಲ್ಲಿ ನಗುವಿದೆ. 

ಸ್ಟಾರ್ ಜೋಡಿ ತಮ್ಮ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿದ್ದಂತೆ ಅದು ವೇಗವಾಗಿ ವೈರಲ್ ಆಗ್ತಿದೆ. ಸದ್ಯ ಫೋಟೋ ಟ್ರೆಂಡ್ ನಲ್ಲಿದ್ದು, ಸೋನಾಕ್ಷಿ ಸಿನ್ಹಾ, ಅನನ್ಯಾ ಪಾಂಡೆ, ದುಲ್ಕರ್ ಸಲ್ಮಾನ್, ಆಥಿಯಾ ಶೆಟ್ಟಿ, ದಿಯಾ ಮಿರ್ಜಾ ಸೇರಿದಂತೆ ಹಲವು ತಾರೆಯರು ನವದಂಪತಿಗೆ ಶುಭಹಾರೈಸಿದ್ದಾರೆ.

ಅದಿತಿ 2002 ರಲ್ಲಿ ವಕೀಲ ಮತ್ತು ಮಾಜಿ ನಟ ಸತ್ಯದೀಪ್ ಮಿಶ್ರಾ ಅವರನ್ನು ವಿವಾಹವಾಗಿದ್ದರು. ಆದ್ರೆ 2012 ರಲ್ಲಿ ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು. ಈ ಬಗ್ಗೆ ಅದಿತಿ ಹೇಳಿಕೆ ಕೂಡ ನೀಡಿದ್ದರು. ಒಂದು ವರ್ಷದ ನಂತರ 2013 ರಲ್ಲಿ ಅದಿತಿ, ಸತ್ಯದೀಪ್ ಅವರಿಗೆ ವಿಚ್ಛೇದನ ನೀಡಿದ್ದರು. ಅದಿತಿ ಅವರು 17 ವರ್ಷದವರಾಗಿದ್ದಾಗ ಸತ್ಯದೀಪ್ ಅವರನ್ನು ಭೇಟಿಯಾಗಿದ್ದರ. ಅದಿತಿ ತಮ್ಮ 24 ನೇ ವಯಸ್ಸಿನಲ್ಲಿಯೇ ಸತ್ಯದೀಪ್ ಅವರನ್ನು ವಿವಾಹವಾಗಿದ್ದರು. 

ಅಗತ್ಯಕ್ಕಿಂತ ಹೆಚ್ಚಿರುವ ಹಣ ವೇಸ್ಟ್, ಲೈಫ್ ಸೆಟಲ್ ಅರ್ಥ ಹೇಳಿದ ಕನ್ನಡತಿ ರಂಜನಿ ರಾಘವನ್

ಅದಿತಿ - ಸಿದ್ಧಾರ್ಥ್ ಮಧ್ಯೆ ಪ್ರೀತಿ : ಅದಿತಿ ಮತ್ತು ಸಿದ್ಧಾರ್ಥ್ 2021 ರಲ್ಲಿ ಮಹಾ ಸಮುದ್ರಂ ಚಿತ್ರದ ಸೆಟ್‌ನಲ್ಲಿ ಮೊದಲು ಭೇಟಿಯಾದ್ರು. ಇಬ್ಬರೂ ಒಂದೇ ವರ್ಷದಲ್ಲಿ ಪರಸ್ಪರ ಡೇಟಿಂಗ್ ಮಾಡಲು ಶುರು ಮಾಡಿದ್ದರು. ಮಾರ್ಚ್ 28, 2024 ರಂದು ಇಬ್ಬರೂ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.  ಇದು ಸಿದ್ಧಾರ್ಥ್ ಅವರಿಗೂ ಎರಡನೇ ಮದುವೆ. ಅವರು 2003 ರಲ್ಲಿ ಮೇಘನಾ ಅವರನ್ನು ವಿವಾಹವಾಗಿದ್ದರು. ಪೀತಿಸಿ ಮದುವೆಯಾಗಿದ್ದ ಜೋಡಿ 2006 ರ ಸುಮಾರಿಗೆ ಬೇರೆ ವಾಸ ಶುರು ಮಾಡಿದ್ದರು. 2007 ರಲ್ಲಿ ವಿಚ್ಛೇದನ ಪಡೆದಿರೋದಾಗಿ ಹೇಳಿಕೆ ನೀಡಿದ್ದರು. 
 

Latest Videos
Follow Us:
Download App:
  • android
  • ios