Asianet Suvarna News Asianet Suvarna News

ಅಗತ್ಯಕ್ಕಿಂತ ಹೆಚ್ಚಿರುವ ಹಣ ವೇಸ್ಟ್, ಲೈಫ್ ಸೆಟಲ್ ಅರ್ಥ ಹೇಳಿದ ಕನ್ನಡತಿ ರಂಜನಿ ರಾಘವನ್

ಕನ್ನಡತಿ ಮೂಲಕವೇ ಮನೆ ಮಾತಾಗಿರುವ ರಂಜನಿ ರಾಘವನ್ ಲೈಫ್ ಸೆಟ್ಲ್ ಆಗೋದು ಅಂದ್ರೆ ಏನು ಎಂಬುದನ್ನು ಹೇಳಿದ್ದಾರೆ. ಬಾಳ ಸಂಗಾತಿ ಬಗ್ಗೆಯೂ ಮಾತನಾಡಿದ ಅವರು, ಸಂತೋಷ ಎಲ್ಲಿದೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

According to kannadathi actress ranjani raghavan  how much money needed to settle roo
Author
First Published Sep 16, 2024, 10:56 AM IST | Last Updated Sep 16, 2024, 10:56 AM IST

ಕನ್ನಡತಿ ಫೇಮ್ ನ ರಂಜನಿ ರಾಘವನ್ (Kannadathi fame Ranjani Raghavan)  ತಮ್ಮ ಸರಳತೆಗೆ ಪ್ರಸಿದ್ಧಿ ಪಡೆದಿದ್ದಾರೆ. ಅತ್ಯಂತ ಸಿಂಪಲ್, ಸಜ್ಜನ ನಟಿ ರಂಜನಿ ರಾಘವನ್. ಅವರ ಮಾತು, ನಡವಳಿಕೆ, ಸಾಹಿತ್ಯ ಮೇಲಿರುವ ಜ್ಞಾನ, ಮಧುರ ಧ್ವನಿ ಅಭಿಮಾನಿಗಳನ್ನು ಮತ್ತಷ್ಟು ಹತ್ತಿರಕ್ಕೆ ಸೆಳೆಯುತ್ತದೆ. ರಂಜನಿ ಬರೀ ಸಿನಿಮಾ, ಸಾಹಿತ್ಯದ ಬಗ್ಗೆ ಮಾತ್ರವಲ್ಲ ಜೀವನದ ಪಾಠಗಳನ್ನು ಅರಿತಿದ್ದಾರೆ. ಒಬ್ಬ ವ್ಯಕ್ತಿಗೆ ಜೀವನದಲ್ಲಿ ಏನು ಬೇಕು, ಸೆಟಲ್ ಆಗೋದು ಅಂದ್ರೆ ಏನು ಎಂಬುದನ್ನು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ನ್ಯಾಷನಲ್ ಟಿವಿ ಜೊತೆ ಮಾತನಾಡಿದ ರಂಜನಿ ರಾಘವನ್, ತಮ್ಮ ಪ್ರಕಾರ ಎಷ್ಟು ಹಣವಿದ್ರೆ ಜೀವನದಲ್ಲಿ ಸೆಟಲ್ ಎಂಬ ವಿಷ್ಯವನ್ನು ಹಂಚಿಕೊಂಡಿದ್ದಾರೆ. ನನಗೆ ಮತ್ತು ನಮ್ಮವರ ಅಗತ್ಯಗಳಿಗೆ ಸಾಕಾಗುವಷ್ಟು ಹಣವಿದ್ರೆ ನಾವು ಸೆಟಲ್ ಎನ್ನುತ್ತಾರೆ ರಂಜನಿ. ಊಟ, ತಿಂಡಿ, ಬಟ್ಟೆ, ಮನೆ, ಒಂದ್ ಕಾರು , ಅದಕ್ಕೆ ಫ್ಯುಯೆಲ್ ಹಾಕುವಷ್ಟು ಹಣವಿದ್ರೆ ಸಾಕು. ಇದೇ ನನ್ನ ಪ್ರಕಾರ ಸೆಟಲ್ ಎಂದಿದ್ದಾರೆ ರಂಜನಿ ರಾಘವನ್. ಐಷಾರಾಮಿ (Luxury) ಹೆಸರಿನಲ್ಲಿ ಯಾವುದೋ ಕಾರ್ ಅಥವಾ ವಸ್ತುಗಳನ್ನು ಖರೀದಿ ಮಾಡಲು ಮುಂದಾಗ್ತೇವೆ. ಆದ್ರೆ ನಾವು ಖರೀದಿಸೋ ಈ ವಸ್ತುವಿನಿಂದ ಅದನ್ನು ತಯಾರಿಸಿದಾತ ಶ್ರೀಮಂತನಾಗ್ತಾನೆ. ನಾವು ಮಾತ್ರ ಅದರ ಖರೀದಿ, ಸಾಲ ತೀರಿಸೋದ್ರಲ್ಲಿ ಸಮಯ ಹಾಳು ಮಾಡ್ತೇವೆ. ಅಗತ್ಯ ನಿತ್ಯದ ಅಗತ್ಯ ಪೂರೈಸಿದ ಮೇಲೂ ನಮ್ಮ ಬಳಿ ಹಣವಿದ್ರೆ ಆ ಹಣದ ಅಗತ್ಯವಿಲ್ಲ ಎನ್ನುತ್ತಾರೆ ರಂಜನಿ ರಾಘವನ್. ತಮ್ಮ ಅಗತ್ಯಪೂರೈಸಿದ ಮೇಲೂ ಮಿಕ್ಕಿ ಹಣವಿದ್ರೆ ಅದನ್ನು ಸಮಾಜದ ಉಳಿತಿಗೆ ಬಳಕೆ ಮಾಡ್ತೇನೆಯೇ ವಿನಃ ಅನಗತ್ಯ ದುಬಾರಿ ವಸ್ತುಗಳನ್ನು ಖರೀದಿ ಮಾಡಿಯಲ್ಲ ಎನ್ನುತ್ತಾರೆ ಅವರು. 

ಸ್ನಾನ ಮಾಡೋ ಫೋಟೋ ಶೇರ್ ಮಾಡಿದ ವೈಷ್ಣವಿ ಗೌಡ, ಸೊಂಟ ಪಟ್ಟಿ ನೋಡಿ ಬಿದ್ದೇ ಹೋದ ಫ್ಯಾನ್ಸ್!

ಇದೇ ವೇಳೆ ರಂಜನಿ ತಮ್ಮ ಜೊತೆಗಾರ, ಪ್ರೀತಿ ಬಗ್ಗೆಯೂ ಹೇಳಿದ್ದಾರೆ. ಜೀವನದಲ್ಲಿ ನಮ್ಮ ಏಳುಬೀಳುಗಳನ್ನು ನೋಡ್ಕೊಂಡು ಬಂದಿರೋರು, ಅವರ ಜೊತೆ ಜೀವನ ಪೂರ್ತಿ ಇರಬಹುದು ಎನ್ನುವ ಕಮಿಟ್ಮೆಂಟ್ ನನ್ನ ಪ್ರಕಾರ ಲವ್ ಎಂದಿರುವ ರಂಜನಿ, ಉಳಿದಿದ್ದೆಲ್ಲ ಸಿನಿಮಾಕ್ಕೆ ಮಾತ್ರ ಸೀಮತ ಎನ್ನತ್ತಾರೆ. ಜೀವನ ಪೂರ್ತಿ ನೆಮ್ಮದಿಯಾಗಿ ಬರುವಂತಹ ಜೊತೆಗಾರ ಬೇಕು ಎನ್ನುತ್ತಾರೆ ರಂಜನಿ.

ಪ್ರೀತಿಸುವ ವ್ಯಕ್ತಿ (loving person) ಖುಷಿ ನೀಡ್ತಾರೆ ಅಂತ ಕಾದು ಕುಳಿತುಕೊಳ್ಳೋದ್ರಲ್ಲಿ ಅರ್ಥವಿಲ್ಲ. ನಮ್ಮ ಖುಷಿಗೆ ನಾವೇ ಹೊಣೆ. ಅವರು ಆಗಾಗ ಬಂದು ಖುಷಿ ನೀಡ್ಬಹುದೇ ವಿನಃ, ಅವರಿಂದಲೇ ನನ್ನ ಖುಷಿ, ನನ್ನ ಸಂತೋಷಕ್ಕೆ ನೀನು ಕಾರಣವಾಗ್ತಿಲ್ಲ ಅಂತ ಆರೋಪ ಮಾಡ್ಬಾರದು   ಒಂಟಿಯಾಗಿ ಸಂತೋಷವಾಗಿರಲು ಸಾಧ್ಯವಿಲ್ಲ ಅಂದ್ರೆ ನೀವು ಜೀವನದಲ್ಲಿ ಖುಷಿಯಾಗಿರಲು ಸಾಧ್ಯವೇ ಇಲ್ಲ ಎನ್ನುತ್ತಾರೆ ರಂಜನಿ.

ರಂಜನಿ ರಾಘವನ್ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೆ ರಂಜನಿ ರಾಘವನ್ ತಮ್ಮ ಪ್ರೀತಿಯ ಬಗ್ಗೆ ಸೋಶಿಯಲ್ ಮೀಡಿಯಾ (social media) ದಲ್ಲಿ ಸ್ಪಷ್ಟಪಡಿಸಿದ್ದರು. ಅವರು ತಮ್ಮ ಬೆಸ್ಟ್ ಫ್ರೆಂಡ್, ಸಾಗರ್ ಭಾರಧ್ವಾಜ್ (Sagar Bhardwaj) ಅವರನ್ನು ಪ್ರೀತಿಸುತ್ತಿದ್ದಾರೆ. ರಂಜಿನಿ ಯಾವಾಗ ಮದುವೆ ಆಗ್ತಾರೆ ಅನ್ನೋದನ್ನು ತಿಳಿಸಿರಲಿಲ್ಲ. 

Emmy Awards 2024: 14 ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಶೋಗನ್, ಇಲ್ಲಿದೆ ವಿಜೇತರ ಪಟ್ಟಿ

ಈಗ ಈ ಸಂದರ್ಶನದಲ್ಲಿ ರಂಜಿನಿ ಸಾಗರ್ ಭಾರಧ್ವಾಜ್ ಬಗ್ಗೆಯೂ ಹೇಳಿದ್ದಾರೆ. ಇಬ್ಬರು ಕಾಲೇಜಿನಲ್ಲಿ ಕ್ಲಾಸ್ಮೇಂಟ್, ಇಬ್ಬರೂ ಕ್ಲಾಸ್ ಲೀಡರ್. ಓದೋದ್ರಲ್ಲಿ ಇಬ್ಬರ ಮಧ್ಯೆ ಸ್ಪರ್ಧೆಯಿತ್ತು. ಅವರು ನಮ್ಮ ಮನೆ ಸಮೀಪವೇ ಇದ್ರು ಎಂದಿದ್ದಾರೆ ರಂಜಿನಿ. ಮ್ಯೂಜಿಕ್, ನಟನೆ, ಸಿನಿಮಾ, ಲೇಖಕಿ ಹೀಗೆ ನನ್ನ ಪಾತ್ರಗಳು ಬದಲಾಗ್ತಿದ್ದರೂ ನಮ್ಮಿಬ್ಬರ ಮಧ್ಯೆ ಅದ್ರಿಂದ ಯಾವುದೇ ವ್ಯತ್ಯಾಸವಾಗೋದಿಲ್ಲ ಎನ್ನುತ್ತಾರೆ. ರಂಜಿನಿ ಸದ್ಯ ಸಿನಿಮಾದಲ್ಲಿ ಬ್ಯೂಸಿಯಿದ್ದಾರೆ. ಅವರು ಸತ್ಯಂ, ಕಾಂಗೂರು ಮತ್ತು ನೈಟ್‌ ಕರ್ಫ್ಯೂ ಸಿನಿಮಾದಲ್ಲಿ ನಟಿಸಿದ್ದಾರೆ. 
 

Latest Videos
Follow Us:
Download App:
  • android
  • ios