ರೇಸ್‌ನಿಂದ ಹಿಂದೆ ಸರಿದ ಪ್ರಭಾಸ್; ಬಿಗ್ ಬಜೆಟ್ ಚಿತ್ರಗಳಿಗೆ ಹೆದರಿ 'ಆದಿಪುರುಷ್' ರಿಲೀಸ್ ಮುಂದಕ್ಕೆ?
ಪ್ರಭಾಸ್ ನಟನೆಯ ನಿರೀಕ್ಷೆಯ ಆದಿಪುರುಷ್ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹಾಕಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಭಾರಿ ನಿರೀಕ್ಷೆ ಹುಟ್ಟಿಹಾಕಿತ್ತು. ಆದರೆ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಅಷ್ಟೇ ನಿರಾಸೆ ಮೂಡಿಸಿದೆ. ಕಳಪೆ ಗ್ರಾಫಿಕ್ಸ್, ರಾವಣ ಪಾತ್ರ ಸೇರಿದಂತೆ ಅನೇಕ ವಿಚಾರಗಳಿಗೆ ಆದಿಪುರುಷ್ ಹಿಗ್ಗಾಮುಗ್ಗಾ ಟ್ರೋಲ್ ಆಗಿತ್ತು. ಟ್ರೈಲರ್‌ಗೆ ಸಿಕ್ಕ ಪ್ರತಿಕ್ರಿಯೆ ಸಿನಿಮಾತಂಡಕ್ಕೆ ಭಯ ಹುಟ್ಟಿಸಿದೆ. ಕೋಟಿ ಕೋಟಿ ವೆಚ್ಚದಲ್ಲಿ ತಯಾರಾದ ಆದಿಪುರುಷ್ ಟ್ರೋಲ್ ಆದ ಪರಿಗೆ ಚಿತ್ರತಂಡ ರಿಲೀಸ್ ಡೇಟ್ ಅನ್ನೇ ಮುಂದಕ್ಕೆ ಹಾಕಲು ನಿರ್ಧರಿಸಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆದಿಪುರುಷ್ ಸಿನಿಮಾ ಮುಂದಿನ ವರ್ಷ ಜನವರಿ 12ಕ್ಕೆ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿತ್ತು. ಆದರೀಗ ಬಿಡುಗಡೆ ತಡವಾಗಲಿದೆ ಎನ್ನಲಾಗುತ್ತಿದೆ.
ಆದಿಪುರುಷ್ ಸಿನಿಮಾಗಾಗಿ ಉಳಿದ ಸಿನಿಮಾಗಳು ಭಯ ಬಿದ್ದಿದ್ದವು. ಜನವರಿಯಲ್ಲಿ ಸಿನಿಮಾ ರಿಲೀಸ್ ಮಾಡಬೇಕು ಅಂದುಕೊಂಡಿದ್ದ ನಿರ್ಮಾಪಕರು ಪ್ರಭಾಸ್ ಸಿನಿಮಾಗಾಗಿ ಹಿಂದೇಟು ಹಾಕುತ್ತಿದ್ದರು. ಆದರೆ ಟ್ರೈಲರ್ ನೋಡಿ ಉಳಿದ ಸಿನಿಮಾ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಸಂಕ್ರಾಂತಿಗೆ ಬಿಡುಗಡೆ ಮಾಡುವ ಧೈರ್ಯ ತೋರಿ ರಿಲೀಸ್ ಡೇಟ್ ಘೋಷಣೆ ಮಾಡಿದ್ದಾರೆ. ಸಂಕ್ರಾಂತಿ ಸಮಯದಲ್ಲಿ ಅನೇಕ ಸಿನಿಮಾಗಳು ರಿಲೀಸ್ ಆಗುತ್ತಿವೆ. ಇದರಿಂದ ಹೆದರಿದ ಆದಿಪುರುಷ್ ಸಿನಿಮಾತಂಡ ತಮ್ಮ ಸಿನಿಮಾದ ರಿಲೀಸ್ ಡೇಟ್ ಮುಂದಕ್ಕೆ ಹಾಕಲು ನಿರ್ಧರಿಸಿದೆ ಎನ್ನಲಾಗಿದೆ.
ಸಂಕ್ರಾಂತಿ ರೇಸ್‌ನಿಂದ ಪ್ರಭಾಸ್ ಹಿಂದೆ ಸರಿಯುತ್ತಿದ್ದಾರೆ ಎನ್ನುವ ಮಾತು ವೈರಲ್ ಆಗಿದೆ. ಬಿಗ್ ಬಜೆಟ್ ನಲ್ಲಿ ತಯಾರಾದ ಆದಿಪುರುಷ್ ಸಿನಿಮಾವನ್ನು ಸಂಕ್ರಾಂತಿ ವೇಳೆ ರಿಲೀಸ್ ಮಾಡಿ ಅಪಾಯತಂದುಕೊಳ್ಳಲು ನಿರ್ಮಾಪಕರು ರೆಡಿಯಿಲ್ಲ. ಹಾಗಾಗಿ ಬಿಡುಗಡೆ ಮುಂದೂಡುವ ಪ್ಲಾನ್ ನಡೆಯುತ್ತಿದೆ ಎನ್ನಲಾಗಿದೆ.
Adipurush; ಇಂದಿನ ರಾವಣ ಇರೋದೆ ಹೀಗೆ, ಸೈಫ್ ಪಾತ್ರ ಸಮರ್ಥಿಸಿಕೊಂಡ ನಿರ್ದೇಶಕ ಓಂ ರಾವುತ್
ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಆದಿಪುರುಷ್ ಜನವರಿ 12ರಂದು ರಿಲೀಸ್ ಆಗುವುದು ಅನುಮಾನ. ಹಾಗಾಗಿ ಹೊಸ ರಿಲೀಸ್ ಡೇಟ್ ಯಾವಾಗ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಟ್ರೈಲರ್ ರಿಲೀಸ್ ಮಾಡಿ ಟ್ರೋಲ್ ಆಗಿರುವ ಸಿನಿಮಾತಂಡಕ್ಕೆ ಸಿನಿಮಾದ ಮೇಲೆ ನಿಜಕ್ಕೂ ಭಯ ಶುರುವಾಗಿದೆ. ಹಾಗಾಗಿ ಸಿನಿಮಾದ ಗ್ರಾಫಿಕ್ಸ್ ಮೇಲೆ ಮತ್ತಷ್ಟು ಕೆಲಸ ನಡೆಯುತ್ತಿದೆ. ಇದರಿಂದ ಸಿನಿಮಾತಂಡ ರಿಲೀಸ್ ಮುಂದಕ್ಕೆ ಹಾಕುವ ಸಾದ್ಯತೆ ಇದೆ.
ರಾವಣನನ್ನು ನೋಡಿದ್ದೀರಾ? Adipurush ಬೆಂಬಲಕ್ಕೆ ನಿಂತ ರಾಜ್ ಠಾಕ್ರೆ MNS
ಅಂದಹಾಗೆ ಆದಿಪುರುಷ್ ಓಂ ರಾವುತ್ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ. ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾವಣನಾಗಿ ಸೈಫ್ ಅಲಿ ಖಾನ್ ಮಿಂಚಿದ್ದಾರೆ. ಸೀತೆಯ ಪಾತ್ರದಲ್ಲಿ ಕೃತಿ ಸನೂನ್ ನಟಿಸಿದ್ದಾರೆ. ಸಾಕಷ್ಟು ದೊಡ್ಡ ಸ್ಟಾರ್ ಕಾಸ್ಟ್ ಇರುವ ಆದಿಪುರುಷ್ ಯಾವಾಗ ರಿಲೀಸ್ ಆಗಲಿದೆ? ಈಗಾಗಲೇ ಅನೌನ್ಸ್ ಮಾಡಿರುವ ಹಾಗೆ ಜನವರಿಯಲ್ಲೇ ಬಿಡುಗಡೆಯಾಗುತ್ತಾ ಕಾದು ನೋಡಬೇಕಿದೆ.