ಆದಿಪುರುಷ್ 3ಡಿ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದು, ರಿಲೀಸ್ ಆಗೋ ಡೇಟ್‌ಗೆ ಕಾಯ್ತಿದ್ದಾರೆ ಸಿನಿಪ್ರಿಯರು

ಪ್ರಭಾಸ್ ಮತ್ತು ಸೈಫ್ ಅಲಿ ಖಾನ್ ನಟನೆಯ ಆದಿ ಪುರುಷ್ ಸಿನಿಮಾ ತೆರೆಗೆ ಅಪ್ಪಳಿಸೋಕೆ ರೆಡಿಯಾಗಿದೆ. ಮುಂದಿನ ವರ್ಷವಲ್ಲ, ಅದಕ್ಕೂ ಮುಂದಿನ ವರ್ಷ.. ಆದಿಪುರುಷ್ ಸಿನಿಮಾ ಆಗಸ್ಟ್ 11 2022ರಲ್ಲ;ಿ ರಿಲೀಸ್ ಆಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಬಾಹುಬಲಿ ನಟ ಪ್ರಭಾಸ್ ಸ್ವತಃ ಪೋಸ್ಟ್ ಹಾಕಿದ್ದಾರೆ. ಆದಿ ಪುರುಷ್ ಸಿನಿಮಾ 11.08. 2022 ಕ್ಕೆ ರಿಲೀಸ್ ಆಗಲಿದೆ ಎಂದಿದ್ದಾರೆ. ಕೆಟ್ಟದರ ವಿರುದ್ಧ ಒಳ್ಳೆಯತನದ ಗೆಲುವೇ ಈ ಸಿನಿಮಾ ಕಥೆ.

ಯುವರ್‌ಲೈಫ್‌ನಲ್ಲಿ ವೆಬ್‌ಸ್ಟೈಟ್‌ಗೆ ರಶ್ಮಿಕಾ ಮಂದಣ್ಣ ಅತಿಥಿ ಸಂಪಾದಕಿ!

ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಲಂಕೇಶ್ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾ ಓಂ ರಾವತ್ ಅವರು ಪ್ರಭಾಸ್ ಜೊತೆ ಮಾಡುತ್ತಿರುವ ಮೊದಲ ಸಿನಿಮಾ. ಸೈಫ್ ಅಲಿ ಖಾನ್‌ ಜೊತೆಗೆ ಇದು ಎರಡನೇ ಸಿನಿಮಾ.

View post on Instagram

7 ಸಾವಿರ ವರ್ಷದ ಹಿಂದೆ ಜಗತ್ತಿನ ಅತ್ಯಂತ ಬುದ್ಧಿವಂತ ರಾಕ್ಷಸ ಬದುಕಿದ್ದ ಎಂದು ಪೋಸ್ಟ್ ಹಾಕೋ ಮೂಲಕ ಪ್ರಭಾಸ್ ಸೈಫ್ ಅಲಿ ಖಾನ್ ಲಂಕೇಶ್ ಪಾತ್ರವನ್ನು ಪರಿಚಯಿಸಿದ್ದರು. ಅಗಸ್ಟ್‌ನಲ್ಲಿ ಸಿನಿಮಾದ ಪೋಸ್ಟರ್ ಪೋಸ್ಟ್ ಮಾಡಿದ್ದರು ನಟ. ಈ ಹಿಂದೆ ಸೈಫ್ ಓಂ ರಾವತ್‌ನ ಥಾನಾಜಿ ಸಿನಿಮಾದಲ್ಲಿ ನಟಿಸಿದ್ದರು.