The Kerala Story: ಕೇವಲ ಸಿನಿಮಾವಲ್ಲ ಇದೊಂದು ಚಳುವಳಿ- ನಟಿ ಅದಾ ಶರ್ಮಾ ಬೋಲ್ಡ್ ಹೇಳಿಕೆ
ದಿ ಕೇರಳ ಸ್ಟೋರಿ ಕೇವಲ ಸಿನಿಮಾವಲ್ಲ ಇದೊಂದು ಚಳುವಳಿ ಎಂದು ನಟಿ ನಟಿ ಅದಾ ಶರ್ಮಾ ಹೇಳಿದ್ದಾರೆ.
ದಿ ಕೇರಳ ಸ್ಟೋರಿ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಚಿತ್ರಮಂದಿರಗಳಲ್ಲಿ ದಿ ಕೇರಳ ಸ್ಟೋರಿ ಭರ್ಜರಿ ಕಲೆಕ್ಷನ್ ಮಾಡಿದೆ. ಮೇ 5ರಂದು ತೆರೆಗೆ ಬಂದ ದಿ ಕೇರಳ ಸ್ಟೋರಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 150 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿ 200 ಕೋಟಿಯತ್ತ ಮುನ್ನುಗ್ಗುತ್ತಿದೆ. ಪ್ರಾರಂಭದಲ್ಲಿ ನಿಧಾನಗತಿಯಲ್ಲಿದ್ದ ಕಲೆಕ್ಷನ್ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಸಾಕಷ್ಟು ವಿರೋಧ ಮತ್ತು ಬ್ಯಾನ್‌ಗಳ ನಡುವೆಯೂ ಕೇರಳ ಸ್ಟೋರಿ ಸಿನಿಮಾ ಗೆದ್ದು ಬೀಗಿದೆ. ಸಿನಿಮಾ ಸಕ್ಸಸ್ ಬಳಿಕ ನಟಿ ಅದಾ ಶರ್ಮಾ ಸಾಕಷ್ಟು ಸಂದರ್ಶಗಳನ್ನು ನೀಡುತ್ತಿದ್ದಾರೆ. ಸಿನಿಮಾದಲ್ಲಿ ಶಾಲಿನಿ ಉನ್ನಿಕೃಷ್ಣನ್/ ಫಾತಿಮಾ ಬಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅದಾ ಶರ್ಮಾ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಸಿನಿಮಾದ ಬಗ್ಗೆ ಅದಾ ಶರ್ಮಾ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಭಯೋತ್ಪಾದಕ ಸಂಘಟನೆಗಳು ಯುವತಿಯರನ್ನು ಹೇಗೆ ಸೆರೆಹಿಡಿಯುತ್ತವೆ ಮತ್ತು ಅವರನ್ನು ಹೇಗೆ ಬ್ರೈನ್ ವಾಶ್ ಮಾಡುತ್ತಾರೆ ಎಂಬುದರ ಕುರಿತು ವೀಡಿಯೊಗಳನ್ನು ನೋಡಿರುವುದಾಗಿ ಹೇಳಿದ್ದಾರೆ. ಯುವಜನರು ದಿ ಕೇರಳ ಸ್ಟೋರಿಯನ್ನು ಇಷ್ಟಪಟ್ಟಿದ್ದಾರೆ ಎಂದು ಬಹಿರಂಗಪಡಿಸಿದರು.
'ಕಳೆದ ಒಂದು ವಾರದಲ್ಲಿ, ನಾನು ನಾಲ್ಕು ವಿಮಾನಗಳಲ್ಲಿ ಓಡಾಡಿದೆ. ಮೊದಲು ವಿಮಾನ ನಿಲ್ದಾಣಗಳಲ್ಲಿ ಅಭಿಮಾನಿಗಳು ಬಂದು ನನ್ನೊಂದಿಗೆ 1920 ಮತ್ತು ಕಮಾಂಡೋ ಬಗ್ಗೆ ಮಾತನಾಡುತ್ತಿದ್ದರು. ಅವರ ಕಣ್ಣುಗಳಲ್ಲಿ ಕಣ್ಣೀರು. ಅವರ ಕಣ್ಣುಗಳನ್ನು ತೆರೆದಿದ್ದಕ್ಕಾಗಿ ನನಗೆ ಧನ್ಯವಾದಗಳು. ನಾನು ಈಗಾಗಲೇ ನಾಲ್ಕೈದು ಬಾರಿ ಚಲನಚಿತ್ರವನ್ನು ನೋಡಿದ ಮತ್ತು ನಿರ್ದಿಷ್ಟ ದೃಶ್ಯಗಳನ್ನು ವಿವರಿಸುವ ಚಿಕ್ಕ ಹುಡುಗರನ್ನು ಭೇಟಿಯಾಗಿದ್ದೇನೆ. ಕೇರಳದ ಸ್ಟೋರಿ ಇನ್ನು ಮುಂದೆ ಕೇವಲ ಚಿತ್ರವಲ್ಲ, ಇದು ಒಂದು ಚಳುವಳಿಯಾಗಿ ಮಾರ್ಪಟ್ಟಿದೆ' ಎಂದು ಹೇಳಿದ್ದಾರೆ.
ಪ್ರತಿ ಸಿನಿಮಾ ಮಾಡುವಾಗಲೂ ಕೊನೆ ಸಿನಿಮಾ ಅಂದ್ಕೊಳ್ಳುತ್ತಿದ್ದೆ ; 'ಕೇರಳ ಸ್ಟೋರಿ' ನಟಿ ಅದಾ ಶರ್ಮಾ
'ನನಗೆ ಸಹ ಇದು ವಿಭಿನ್ನವಾಗಿದೆ ಏಕೆಂದರೆ ನಾನು ಮೊದಲ ಬಾರಿಗೆ ನಿಜ ಜೀವನದ ಕಥೆಯನ್ನು ಮಾಡುತ್ತಿದ್ದೇನೆ. ಶಾಲಿನಿ ಉನ್ನಿಕೃಷ್ಣನ್ ಅಥವಾ ಫಾತಿಮಾ ಬಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಭಯಾನಕ ಸ್ಥಿತಿಯನ್ನು ನಿಜವಾಗಿ ಅನುಭವಿಸಿದ ಯುವತಿಯಾಗಿ ನಾನು ತೆರೆಮೇಲೆ ಬಂದಿದ್ದೀನಿ' ಎಂದು ಹೇಳಿದರು. ಅಷ್ಟೆಯಲ್ಲದೇ ಇಂಥ ಭಯಾನಕ ಸ್ಥಿತಿಯಿಂದ ಬುದುಕಿದ ಜನರನ್ನು ಭೇಟಿಯಾಗಿ ಮಾತಕತೆ ನಡೆಸಿದ ಬಗ್ಗೆಯೂ ಹೇಳಿದ್ದಾರೆ.
The Kerala Story ನೋಡಿದ ಮುಸ್ಲಿಂ ಪತಿ ರಿಯಾಕ್ಷನ್ ಹೀಗಿತ್ತು ಎಂದ ನಟಿ ದೇವೋಲೀನಾ
'ತಮ್ಮ ಅಗ್ನಿಪರೀಕ್ಷೆಯ ಬಗ್ಗೆ ಮಾತನಾಡುವ ಕೆಲವು ಧೈರ್ಯಶಾಲಿ ಹುಡುಗಿಯರನ್ನು ನಾನು ಭೇಟಿಯಾದೆ. ಶಾಲಿನಿ ಇನ್ನೂ ಅಫ್ಘಾನಿಸ್ತಾನದ ಜೈಲಿನಲ್ಲಿರುವುದರಿಂದ ನಾನು ಚಿತ್ರದಲ್ಲಿ ನಟಿಸುವ ಹುಡುಗಿ ಅಲ್ಲ. ಮಲೆಯಾಳಂನಲ್ಲಿ ತನ್ನ ಮಗಳು ನೇಣು ಹಾಕಿಕೊಂಡ ತಾಯಿಯ ಪ್ರಶಂಸಾಪತ್ರವು ಚಿತ್ರದ ಕೊನೆಯಲ್ಲಿ ನಿಜವಾಗಿಯೂ ಸ್ಪರ್ಶಿಸುತ್ತಿದೆ ಎಂದು ನಾನು ಭಾವಿಸಿದೆ' ಎಂದು ಹೇಳಿದ್ದಾರೆ.