ಬೆಂಗಳೂರು(ಜು. 26)  ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ ಯೂ-ಟರ್ನ್ ಹೊಡೆದಿದ್ದಾರೆ. ಒಂದೇ ವರ್ಷದಲ್ಲಿ ನಟಿ ವಿಜಯಲಕ್ಷ್ಮಿ ಅಸಲಿ ಮುಖ ಬಯಲಾಗಿದೆ.  ಕರ್ನಾಟಕದಲ್ಲೇ ಇದ್ದು ಕಲಾವಿದರಿಂದ ಸಹಾಯ ಪಡೆದಿದ್ದ ನಟಿ ನಂತರ  ಕಿರುಕುಳ ಕೊಡ್ತಿದ್ದಾರೆ ಎಂದು ದೂರಿದ್ದರು.

ವರ್ಷದ ಹಿಂದೆ ಫೇಸ್ ಬುಕ್ ನಲ್ಲಿ ವಿಡಿಯೋ  ಶೇರ್ ಮಾಡಿದ್ದ ವಿಜಯಲಕ್ಷ್ಮಿ ನೀನು ತಮಿಳುನವಳು ಎಂದು ನನಗೆ ಮಾನಸಿಕ ಹಿಂಸೆ ಮಾಡಿದ್ದಾರೆ. ನಟ ರವಿಪ್ರಕಾಶ್ ಅನ್ನೋರು ನನಗೆ ಹಿಂಸೆ ನೀಡಿದ್ದರು.  ನನಗೆ ಮನೆ ಕೂಡ ಇರಲಿಲ್ಲ..ನಾನು ಎಲ್ಲರನ್ನ ಸಹಾಯಕ್ಕಾಗಿ ಬೇಡಿದೆ ಆದರೆ ಎಲ್ಲರೂ ನೀನು ತಮಿಳಿನವಳು ಎಂದು ನನಗೆ ಸಹಾಯ ಮಾಡಲಿಲ್ಲ  ಎಂದು ಹೇಳಿದ್ದರು.

ತಮಿಳಿನವಳು ಅನ್ನೋ ಕಾರಣದಿಂದ ನನಗೆ ಹಿಂಸೆ ಮಾಡುತ್ತಿದ್ದಾರೆ.  ನಾನು ಚೆನ್ನೈ ಗೆ ವಾಪಸ್ ಬರಬೇಕು ನನಗೆ ಸಹಾಯ ಮಾಡಿ  ಕನ್ನಡ ಚಿತ್ರರಂಗದ ಕಲಾವಿದರ ಸಂಘದಿಂದಲೂ ನನಗೆ ಕಿರುಕುಳ ಆಗುತ್ತಿದೆ. ಪೊಲೀಸರು, ಲಾಯರ್ ಎಲ್ಲರೂ ನನಗೆ ಹಿಂಸೆ ನೀಡುತ್ತಿದ್ದಾರೆ. ತಮಿಳಿನವಳು ಎನ್ನುವ ಕಾರಣದಿಂದ ನನಗೆ ಕಿರುಕುಳ ಕೊಡ್ತಿದ್ದಾರೆ ಎಂದು ಹೇಳಿದ್ದರು.

ಲೈವ್ ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ನಾಗಮಂಡಲ ನಟಿ

ಕಳೆದ ವಾರ ನಟ ರವಿಪ್ರಕಾಶ್ ಗೆ ಕಾಲ್ ಮಾಡಿ ಕ್ಷಮೆ ವಿಜಯಲಕ್ಷ್ಮಿ ಸಹೋದರಿ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ. ಕೇಸ್ ವಾಪಸ್ ತೆಗೆದುಕೊಳ್ಳಿ ನಮ್ಮದೇ ತಪ್ಪು ಎಂದದು ಸಹೋದರಿ ಉಷಾದೇವಿ ಕೇಳಿಕೊಂಡಿದ್ದರು.

ಬೆಂಗಳೂರಿಗೆ ಅವಕಾಶಕ್ಕೆ ಎಂದು ಬಂದಿದ್ದೆ. ಇಲ್ಲಿ ಕನ್ನಡದ ಬಿಗ್ ಬಾಸ್ ನಲ್ಲಿ ಅವಕಾಶ ಕೊಡುವುದಾಗಿ ತಿಳಿಸಿದ್ದರು. ಆದರೆ ಆರೋಗ್ಯ ಸರಿ ಇಲ್ಲದ ಕಾರಣ ಹೋಗಲಿಲ್ಲ 
ನೀನು ತಮಿಳುನವಳು ಎಂದು ನನಗೆ ಮಾನಸಿಕ ಹಿಂಸೆ ಮಾಡಿದ್ದಾರೆ.  ಸುದೀಪ್ ನನಗೆ ಸಹಾಯ ಮಾಡಿದ್ರು ಅದನ್ನು ಬಿಟ್ಟು ಇನ್ಯಾರು ಸಹಾಯ ಮಾಡಲಿಲ್ಲ. ನಟ ರವಿಪ್ರಕಾಶ್ ಅನ್ನೋರು ನನಗೆ ಹಿಂಸೆ ನೀಡಿದ್ರು ಎಂದು ಹೇಳಿದ್ದರು.

ಇದೀಗ ತಮಿಳುನಾಡಿನ ಚಿತ್ರರಂಗದಿಂದ ಹಿಂಸೆ ಆಗುತ್ತಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ವಿಜಯಲಕ್ಷ್ಮೀ ಎಲ್ಲರ ಮೇಲೆಯೂ ಆರೋಪ ಮಾಡುತ್ತಿದ್ದಾರೆ.