ಬೆಂಗಳೂರು(ಜು. 26)  ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದ ನಟಿ ವಿಜಯಲಕ್ಷ್ಮಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.  ನಾನು ಕನ್ನಡತಿ ಎಂಬ ಕಾರಣಕ್ಕೆ ನಿರ್ದೇಶಕ ಸಿಮನ್​ ಕಿರುಕುಳ ನೀಡುತ್ತಿದ್ದಾನೆ.  ಅವರನ್ನು ಯಾವ ಕಾರಣಕ್ಕೂ ಬಿಡಬೇಡಿ ಎಂದು ನಟಿ ಹೇಳಿದ್ದಾರೆ. ಸಿಮನ್ ನಾಮ್​ ತಮಿಳರ್ ಕಚ್ಚಿ ಪಕ್ಷದ ಕೋ ಆರ್ಡಿನೇಟರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. 

ಫೇಸ್ ಬುಕ್ ಲೈವ್ ಬಂದ ನಟಿ, ಈಗಾಗಲೆ ಎರಡು ಮಾತ್ರೆ ತೆಗೆದುಕೊಂಡಿದ್ದೇನೆ. ನನ್ನ ಬಿಪಿ ಲೋ ಆಗುತ್ತಿದೆ. ಇನ್ನು ಕೆಲವೇ ಕ್ಷಣದಲ್ಲಿ ಸಾಯಲಿದ್ದೇನೆ ಎಂದಿದ್ದಾರೆ. ಅಸ್ವಸ್ಥಗೊಂಡ ನಟಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆತ್ಮಹತ್ಯೆಗೆ ಮುಂದಾದ ಜಯಶ್ರೀ ರಾಮಯ್ಯಗೆ ಕಿಚ್ಚ ಸುದೀಪ್ ಸ್ಫೂರ್ತಿಯ ಮಾತು...

ಅನಾರೋಗ್ಯದ ಕಾರಣಕ್ಕೆ ವಿಜಯಲಕ್ಷ್ಮಿ ಚಿಕಿತ್ಸೆ ಪಡೆದುಕೊಂಡಿದ್ದರು. ನಾಗಮಂಡಲ ಮತ್ತು ಸೂರ್ಯವಂಶ ಚಿತ್ರದ ಮೂಲಕ ಹೆಸರು ಮಾಡಿದ್ದರು.  ತಮಿಳು ಮತ್ತು ಕನ್ನಡದಲ್ಲಿ ಮಾತನಾಡಿರುವ ನಟಿ ವಿಡಿಯೋ ಮಾಡಿ ಆತ್ಮಹತ್ಯೆ ಎಂದಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಸಹ ಖಿನ್ನತೆಗೆ ಒಳಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಈ ಪ್ರಪಂಚಕ್ಕೆ ಗುಡ್ ಬೈ ಹೇಳುತ್ತಿದ್ದೇನೆ ಎಂದು ಹೇಳಿದ್ದರು.