ಹಾಸ್ಯಪ್ರಧಾನ ಪಾತ್ರಗಳಲ್ಲಿ ಮಿಂಚುತ್ತಿದ್ದ ನಟಿ ವಿದ್ಯುಲೇಖಾ  ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅಭಿಮಾನಿಗಳಿಗೆ ಭಾವಿ ಪತಿಯನ್ನು ಪರಿಚಯಿಸಿದ್ದಾರೆ.

'ರ್ಯಾಂಬೋ 2' ಚಿತ್ರದಲ್ಲಿ ನಟ ಶರಣ್‌ ಜೊತೆ ಹಾಸ್ಯಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡ ನಟ ವಿದ್ಯುಲೇಖಾ ಉದ್ಯಮಿ ಸಂಜಯ್‌ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಬ್ಬರು ಕುಟುಂಬದವರು ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಲಾಕ್‌ಡೌನ್‌ನಲ್ಲಿ ಫ್ಯಾಟ್‌ನಿಂದ ಫಿಟ್‌ ಅಂಡ್‌ ಸ್ಲಿಮ್‌ ಆಗಿ ಬದಲಾದ ತಮಿಳು ನಟಿ

ಸಂಜಯ್ ಹಾಗೂ ನಾನು 26 ಆಗಸ್ಟ್‌ ಎಂಗೇಜ್ ಆದೇವು ನಮ್ಮ ಈ ರೋಕಾ ಕಾರ್ಯಕ್ರಮ ತುಂಬಾ ಖಾಸಗಿ ಆಗಿದ್ದ ಕಾರಣ ಕುಟುಂಬದವರು ಮಾತ್ರ ಭಾಗಿಯಾಗಿದ್ದರು. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ನಮ್ಮ ಮೇಲಿರಲಿ.ನಾವಿಬ್ಬರೂ ಮಾಸ್ಕ್ ಧರಿಸಿದ್ದೆವು. ಆದರೆ ಈ ಫೋಟೋ ಶೂಟ್‌ ಸಮಯದಲ್ಲಿ ತೆಗೆದಿಡಲಾಗಿತ್ತು. ನಿಮ್ಮೆಲ್ಲರ ಕಾಮೆಂಟ್ ನಾನು ಓದುತ್ತಿರುವೆ. ತುಂಬಾ ಥ್ಯಾಂಕ್ಸ್' ಎಂದು ಬರೆದುಕೊಂಡಿದ್ದಾರೆ.

View post on Instagram

2012ರಲ್ಲಿ ಗೌತಮ್ ಮೆನನ್ ಜೊತೆ 'Neethaane En Ponvasantham' ಚಿತ್ರದಲ್ಲಿ ಅಭಿನಯಿಸುವ ಮೂಲಕ ಸಿನಿ ಪ್ರಪಂಚಕ್ಕೆ ಕಾಲಿಟ್ಟರು. ಎಂಟು ವರ್ಷದ ಸಿನಿಮಾ ಜರ್ನಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತುಂಬಾ ದಪ್ಪವಿದ್ದ ಕಾರಣ ವಿದ್ಯುಲೇಖಾ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದರು. ಅವರಿಗೆ ಇಷ್ಟವಾದ ಪ್ರಾತ ಹಾಗೂ ನೆಚ್ಚಿನ ಶೈಲಿಯ ಡ್ರೆಸ್ ಸಿಗದ ಕಾರಣ ವರ್ಕೌಟ್‌ ಮಾಡಲು ಆರಂಭಿಸಿದ್ದರು. ತಮ್ಮ ಟ್ರಾನ್ಸಫಾರ್ಮೇಶನ್ ಬಗ್ಗೆ ಅಪ್ಡೇಟ್‌ ಶೇರ್ ಮಾಡುವ ಮೂಲಕ ಅನೇಕರಿಗೆ ಸ್ಫೂರ್ತಿಯಾದರು. ಅದರಲ್ಲೂ ಇತ್ತೀಚಿಗೆ ಶೇರ್ ಮಾಡಿಕೊಂಡ ಫೋಟೋ ತುಂಬಾನೇ ವೈರಲ್ ಆಗುತ್ತಿದೆ.

ಬಾಡಿ ಶೇಮಿಂಗ್‌ ಮಾಡುವವರ ಬಾಯಿ ಮುಚ್ಚಿಸಿದ ಹಾಸ್ಯ ನಟಿ ಲುಕ್‌ ನೋಡಿ

View post on Instagram

ಅಕ್ಟೋಬರ್ 2017 ಪೋಟೋ ಹಾಗೂ ಆಗಸ್ಟ್‌ 2020ರ ಫೋಟೋ ಅಪ್ಲೋಡ್‌ ಮಾಡಿಕೊಂಡು ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ. ' 2017ರಲ್ಲಿ ವಿದ್ಯುಲೇಖಾ ಅವರ ತುಂಬಾ ಅನಾರೋಗ್ಯಕರ ಜೀವನಶೈಲಿ, ಕೆಟ್ಟ ನಿದ್ರೆ ,ಕಳಪೆ ಆಹಾರ ಪದ್ಧತಿ ಹಾಗೂ ವ್ಯಾಯಾಮ ಮಾಡಲು ಯಾವುದೇ ಪ್ರೇರಣೆ ಇಲ್ಲದೆ ಇದ್ದವಳು. ಇದರಿಂದ ಆಕೆ ಪಿಸಿಓಡಿ ಕಂಟ್ರೋಲ್ ಮೀರಿತ್ತು. ಆದರೆ ಇಂದು ವಿದ್ಯು ಇರುವ ರೀತಿ ಬದಲಾಗಿದೆ. ಆರೋಗ್ಯವಾಗಿ ಎನರ್ಜಿಟಿಕ್ ಆಗಿದ್ದಾಳೆ. ಎಡಕ್ಕೆ ಇರುವ ಹುಡುಗಿ ನನಗೆ ಇಷ್ಟ. ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ತನ್ನ ಜೀವನ ರೂಪಿಸಿಕೊಂಡಿದ್ದಾರೆ ಅಲ್ಲದೇ ಬಲಕ್ಕಿರುವ ಹುಡುಗಿ ತನ್ನ ಜೀವನದಲ್ಲಿ ಏನು ಮುಖ್ಯವೆಂದು ಪರಿಗಣಿಸಿ ಇಂದು ಇಲ್ಲಿ ನಿಂತಿದ್ದಾಳೆ. ಜೀವನದಲ್ಲಿ ಯಾರ ಮಾತುಗಳಿಗೂ ಕೇರ್ ಮಾಡಬೇಡಿ ನಿಮ್ಮ ಆರೋಗ್ಯ ನಿಮ್ಮ ಇಷ್ಟ. ಗುರಿ ಇಟ್ಟುಕೊಂಡರೆ ನೀವೂ ಬದಲಾಗುತ್ತೀರ' ಎಂದು ಹೇಳುತ್ತಾ ಇತರರಿಗೆ ಮಾದರಿಯಾಗಿದ್ದಾರೆ.