ಬಾಡಿ ಶೇಮಿಂಗ್‌ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಇದು ಚಿತ್ರರಂಗಕ್ಕೂ ಕಾಮನ್. ಕೆಲವು ನಟಿಯರು ಇದನ್ನು ನಿರ್ಲಕ್ಷಿಸುತ್ತಾರೆ. ಆದರೆ ಕೆಲವರು  ಟೀಕಿಸಿದವರನ್ನ ತರಾಟೆಗೆ ತೆಗೆದುಕೊಳ್ಳುತ್ತಾರೆ.

ಕಮಲ್‌ ಹಾಸನ್‌ ಪುತ್ರಿ ಅಸಲಿ ಮುಖವಿದು; ಮಾಡಿದ್ದನ್ನು ನಾಚಿಕೆ ಇಲ್ಲದೇ ಒಪ್ಪಿಕೊಂಡ ನಟಿ!

ಹೌದು! ತಮಿಳು ಚಿತ್ರರಂಗದ ಒನ್ ಆ್ಯಂಡ್ ಓನ್ಲಿ ಲೇಡಿ ಕಾಮಿಡಿ ಸ್ಟಾರ್ ಅಂದ್ರೆ ಅದು ವಿದ್ಯುಲ್ಲೇಖಾ. ನೋಡಲು ದಪ್ಪಗಿದ್ದರೂ ಯಾವ ಸ್ಟಾರ್ ನಟರಿಗೂ ಕಮ್ಮಿ ಇಲ್ಲ, ಇವರ ಫ್ಯಾನ್‌ ಕ್ರೇಜ್‌. ಕೆಲವೊಂದು ಆರೋಗ್ಯ ಸಮಸ್ಯೆಗಳಿಂದ ದಪ್ಪಗಿದ್ದ ವಿದ್ಯುಲ್ಲೇಖಾ ಈಗ ಸ್ಟಾರ್‌ ನಟಿಯರು ತಿರುಗಿ ನೋಡುವಂಥ ಸೈಜ್‌ಗಿಳಿದಿದ್ದಾರೆ.

ವಿದ್ಯುಲ್ಲೇಖಾ ದಪ್ಪವಿದ್ದ ಕಾರಣ ಚಿತ್ರದಲ್ಲೇ ಅನೇಕ ಬಾರಿ ಆಕೆಯ ಆಕಾರದ ಬಗ್ಗೆ ಹಾಸ್ಯ ಮಾಡುತ್ತಿದ್ದರು, ಇದು ಪಾತ್ರಕ್ಕೆ ಬೇಕೆಂದು ಸುಮ್ಮನಾಗುತ್ತಿದ್ದರು. ಆದರೆ ದಿನೆ ದಿನೇ ಅಪಹಾಸ್ಯ ಹೆಚ್ಚಾದ ಕಾರಣ ತಮ್ಮ ದೇಹ ದಂಡಿಸಲು ನಿರ್ಧರಿಸಿ, ಈಗ ಯಾವ ನಟಿಗೂ ಕಮ್ಮಿ ಇಲ್ಲ ಎನ್ನುವಂತೆ ಫಿಟ್ ಆಗಿದ್ದಾರೆ. ಎಲ್ಲರ ಹುಬ್ಬೇರುವಂತೆ ಮಾಡಿ ತೋರಿಸಿದ್ದಾರೆ.

ಮನೆಯಲ್ಲೇ ತಯಾರಿಸಿದ ಆಹಾರ ಹಾಗೂ ಸತತ ವರ್ಕೌಟ್‌ನಿಂದ ವಿದ್ಯುಲ್ಲೇಖಾ ಆರೋಗ್ಯವೂ ಸುಧಾರಿಸಿದೆ. ನೋಡಲು ಸೂಪರ್  ಡೂಪರ್‌ ಆಗಿದ್ದಾರೆ. ಬಾಡಿ ಟ್ರ್ಯಾನ್ಸ್‌ಫಾರ್ಮೇಷನ್ ಆದ ಮೇಲಂತೂ ಟ್ರೋಲ್ ಪೇಜ್‌ಗಳು ವಿದ್ಯುಲ್ಲೇಖಾ ಫ್ಯಾನ್‌ ಪೇಜ್‌ ಆಗೋಗಿದೆಯಂತೆ!  ಚಿತ್ರರಂಗದಲ್ಲಿ ಹಾಗೂ ಜಾಹೀರಾತುಗಳಲ್ಲಿ ಇವರಿಗೀಗ ಅವಕಾಶಗಳು ಕೈ ಬೀಸಿ ಕರೆಯುತ್ತಿವೆ.

 

ಸುಖಾ ಸುಮ್ಮನೆ ದೇಹವನ್ನು ಊದಿಸಿಕೊಂಡು, ಆತ್ಮವಿಶ್ವಾಸ ಕಡಿಮೆ ಮಾಡಿಕೊಳ್ಳೋರಿಗೆ ಈ ನಟಿ ಅತ್ಯುತ್ತಮ ಉದಾಹರಣೆ. ಮನಸ್ಸು ಹಾಗೂ ತಿನ್ನೋ ಆಹಾರದ ಮೇಲೆ  ಹಿಡಿತವಿಟ್ಟರೆ ಎಂಥ ದೇಹವನ್ನೇ ದಂಡಿಸಬಹುದು. ಮನಸ್ಸು ಮಾಡಬೇಕಷ್ಟೆ,. ದೇಹ ದಂಡಿಸಲು ಸಿದ್ಧರಾಗಬೇಕು. ಇಂಥ ಸಾಹಸಕ್ಕೆ ಕೈ ಹಾಕುವವರಿಗೆ ಆಲ್ ದಿ ಬೆಸ್ಟ್.