ಕಿರುತೆರೆ ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ. ಡೆತ್‌ ನೋಟ್ ನೋಡಿ ಶಾಕ್ ಆದ ಕುಟುಂಬಸ್ಥರು...

ಇತ್ತೀಚಿನ ದಿನಗಳಲ್ಲಿ ಸರಣಿ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಕಿರುತೆರೆ ನಟಿಯರು ಮತ್ತು ಮಾಡೆಲ್‌ಗಳ ಪ್ರಕರಣವೇ ಹೆಚ್ಚು. ಇದೀಗ ಹಿಂದಿ ಕಿರುತೆರೆ ಜನಪ್ರಿಯ ನಟಿ ವೈಶಾಲಿ ಟಕ್ಕರ್ ಒಂದು ವರ್ಷದಿಂದ ವಾಸಿಸುತ್ತಿದ್ದ ಇಂದೋರ್‌ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ರೂಮಿನಲ್ಲಿ ಡೆತ್‌ ನೋಟ್ ಪತ್ತೆ ಮಾಡಿದ್ದಾರೆ.

ವೈಶಾಲಿ ತಮ್ಮ ರೂಮ್‌ನ ಫ್ಯಾನ್‌ಗೆ ನೇಣಿಗೆ ಶರಣಾಗಿದ್ದಾರೆ. ಬಾಗಿಲು ತೆಗೆಯದ ಕಾರಣ ಅಕ್ಕ ಪಕ್ಕದ ಮನೆಯವರು ಪೊಲೀಸರಿಗೆ ತಿಳಿಸಿ ಬಾಗಿಲು ಹೊಡೆಸಿದ್ದಾರೆ. ತೇಜಾಜಿ ನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ರೂಮ್‌ನಲ್ಲಿ ಡೆತ್‌ನೋಟ್‌ ಪತ್ತೆಯಾಗಿದೆ. ಫಸ್ಟ್‌ ಹ್ಯಾಂಡ್‌ ಮಾಹಿತಿ ಪ್ರಕಾರ ಲವ್ ಅಫೇರ್ ಎನ್ನಲಾಗಿದೆ. ಪೊಲೀಸರು ಹಚ್ಚಿನ ತನಿಖೆ ನಡೆಸುತ್ತಿದ್ದು ಮಾಹಿತಿ ಹೊರ ಬರಬೇಕಿದೆ. 

ವೈಶಾಲಿ ಸರುರಾಲ್‌ ಸಿಮರ್ ಕಾ ಧಾರಾವಾಇಯಲ್ಲಿ ಅಂಜಲಿ ಭಾರದ್ವಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೂಪರ್ ಸಿಸ್ಟರ್‌ನಲ್ಲಿ ಆನಂತರ ಶಿವಾನಿ ಶಿವರಾಮ್, ವಿಶ್ ಯಾ ಯಾತ್ರೆ ಧಾರಾವಾಹಿಯಲ್ಲಿ ನೇತ್ರಾ ಸಿಂಗ್, ಮನಮೋಹಿನಿ 2 ಧಾರಾವಾಹಿಯಲ್ಲಿ ಅನನ್ಯಾ ಮಿಶ್ರ ಪಾತ್ರದಲ್ಲಿ ಅಭಿನಯಿಸಿದ್ದಾರೆ. 

2021ರ ಏಪ್ರಿಲ್‌ನಲ್ಲಿ ವೈಶಾಲಿ ಎಂಗೇಜ್‌ ಆಗಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದರು. ರೋಕಾ ಸಮಾರಂಭದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿ husband to be ಅಂತ ಪರಿಚಯಿಸಿಕೊಟ್ಟರು. ಡಾಕ್ಟರ್ ಅಭಿನಂದನ್ ಸಿಂಗ್ ಮತ್ತು ವೈಶಾಲಿ ಕುಟುಂಬಸ್ಥರು ಮಾತ್ರ ರೋಕಾ ಸಮಾರಂಭದಲ್ಲಿದ್ದರು. ಕಿನ್ಯಾದಲ್ಲಿ ಅಭಿನಂದನ್ ದಂತ ವೈದ್ಯನಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಜೂನ್ ತಿಂಗಳಿನಲ್ಲಿ ಮದುವೆ ಆಗಬೇಕಿತ್ತು ಆದರೆ ಅಭಿನಂದನ್‌ ಮದುವೆ ಮುಂದೂಡಿ ಮುಂದೂಡಿ ಸೆಪ್ಟೆಂಬರ್ 2022ರಲ್ಲಿ ಗುಡ್‌ ಬೈ ಹೇಳಿದ್ದರು ಎಂದು ವೈಶಾಲಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

Model Suicide ಐಷಾರಾಮಿ ಹೋಟೆಲ್‌ನಲ್ಲಿ ಮಾಡಲ್ ನೇಣಿಗೆ ಶರಣು; ಡೆತ್‌ ನೋಟ್‌ನಲ್ಲಿತ್ತು ಸತ್ಯ

ಆತ್ಮಹತ್ಯೆಗೂ 5 ದಿನ ಮುನ್ನ ವೈಶಾಲಿ ಟಕ್ಕರ್ ಫನ್ನಿ ಇನ್‌ಸ್ಟಾಗ್ರಾಂ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇದ್ದ ಕಾರಣ ಪ್ರತಿಯೊಂದನ್ನು ಶೇರ್ ಮಾಡಿ ಅಪ್ಡೇಟ್ ಮಾಡಿದ್ದಾರೆ.

ನಟ ಲೋಕೇಶ್ ರಾಜೇಂದ್ರ ಆತ್ಮಹತ್ಯೆ:

1996ರಲ್ಲಿ ತಮಿಳು ಕಿರುತೆರೆಯಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ ವಿಡತ್ತು ಕರುಪ್ಪು ಧಾರಾವಾಹಿಯಲ್ಲಿ ರಾಸು ಎಂದೇ ಜನಪ್ರಿಯತೆ ಪಡೆದುಕೊಂಡ ಬಾಲನಟ ಲೋಕೇಶ್‌ ಅಗಲಿದ್ದಾರೆ. 1996ರಿಂದ ಈಗಿನವರೆಗೂ ಲೋಕೇಶ್‌ ಕಿರುತೆರೆಯಲ್ಲಿ ಸಖತ್ ಬ್ಯುಸಿಯಾಗಿರುವ ನಟ, ಈಗ ಮಾಧ್ಯಮ ಸೇರುವ ಮನಸ್ಸು ಮಾಡಿದ್ದರು ಎನ್ನಲಾಗಿತ್ತು. ದುರ್ವಿಧಿ ಲೋಕೇಶ್‌ ಆತ್ಮಹತ್ಯೆ ಮಾಡಿಕೊಳ್ಳುವ ಜೀವನ ಈ ಬದುಕಿಗೆ ಅಂತ್ಯವಾಡಿದ್ದಾರೆ. 

ಹೌದು! 34 ವರ್ಷದ ಲೋಕೇಶ್ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವರು ವೈವಾಹಿಕ ಜೀವನದಲ್ಲಿ ಆಗುತ್ತಿರುವ ಸಮಸ್ಯೆ ಎಂದಿದ್ದಾರೆ ಇನ್ನೂ ಕೆಲವರು ಹಣಕಾಸಿನ ಸಮಸ್ಯೆ ಎಂದಿದ್ದಾರೆ. ಲೋಕೇಶ್ ತಂದೆ ನೀಡಿರುವ ಮಾಹಿತಿ ಪ್ರಕಾರ 150 ಸೀರಿಯಲ್ ಮತ್ತು 15 ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರಂತೆ. 

ಶವವಾಗಿ ಪತ್ತೆಯಾದ ಕೇರಳದ ಯುವ ರೂಪದರ್ಶಿ: ಪತಿ ಪೊಲೀಸ್ ಕಸ್ಟಡಿಗೆ

 ಶವವಾಗಿ ಪತ್ತೆಯಾದ ನಟಿ ದೀಪಾ:

ಸಾಧನೆ ಮಾಡಬೇಕು ಎಂದು ಕನಸು ಕಟ್ಟಿಕಂಡು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ತಮಿಳು ನಟಿ ದೀಪಾ (ಪಾಲಿನ್​ ಜೆಸ್ಸಿಕಾ) ಶವವಾಗಿ ಪತ್ತೆಯಾಗಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ದೀಪಾ ಶವ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ದೀಪಾ ಅವರಿಗೆ 29 ವರ್ಷ ವಯಸ್ಸಾಗಿತ್ತು. ಚೆನ್ನೈ ಹೊರವಲಯದ ಅಪಾರ್ಟ್​ಮೆಂಟ್​ನಲ್ಲಿ ನೆಲೆಸಿದ್ದ ದೀಪಾ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ (ಸೆಪ್ಟಂಬರ್ 17) ಈ ಪ್ರಕರಣ ನಡೆದಿದೆ. ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ವರದಿಗಾಗಿ ನಿರೀಕ್ಷಿಸಲಾಗುತ್ತಿದೆ. ದೀಪಾ ಅವರ ಮೂಲ ಹೆಸರು ಪಾಲಿನ್​ ಜೆಸ್ಸಿಕಾ. ಆದರೆ ಚಿತ್ರರಂಗದಲ್ಲಿ ಅವರು ದೀಪಾ ಎಂದು ಖ್ಯಾತಿಗಳಿದ್ದರು. ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು.