Asianet Suvarna News Asianet Suvarna News

ಶೀಘ್ರದಲ್ಲಿ ಭೀಕರ ಚಂಡಮಾರುತ, ಸುನಾಮಿ- ಉರ್ಫಿ ವಿಡಿಯೋ ನೋಡಿ ನುಡೀತಿದ್ದಾರೆ ಭವಿಷ್ಯ!

ನಟಿ ಉರ್ಫಿ ಜಾವೇದ್​ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಅವರ ವಿಭಿನ್ನ ಗೆಟಪ್​ ನೋಡಿ, ಶೀಘ್ರದಲ್ಲಿ ಭೀಕರ ಚಂಡಮಾರುತ, ಸುನಾಮಿ ಬರೋದು ಗ್ಯಾರೆಂಟಿ ಅಂತಿದ್ದಾರೆ ಫ್ಯಾನ್ಸ್.
 

Actress Urfi Javed has appeared in public and seeing her different getup suc
Author
First Published Sep 18, 2023, 6:06 PM IST

ಉರ್ಫಿ ಜಾವೇದ್​ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ  ಸೋಷಿಯಲ್ ಮೀಡಿಯಾದಲ್ಲಿ  (Social media) ಸೆನ್ಸೇಷನ್ ಕ್ರಿಯೇಟ್​ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್​ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್​ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್​ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್​ (Troll) ಆಗುವುದು ಎಂದರೆ ಈಕೆಗೆ ತುಂಬಾ ಖುಷಿ.  ಉರ್ಫಿಯ ಬಹುತೇಕ ಅವತಾರಗಳು ಟಾಪ್ ಲೆಸ್. ಕೆಲ ದಿನಗಳ ಹಿಂದೆ  ಟಾಪ್‌ಲೆಸ್ ಅವತಾರದಲ್ಲೇ ಕಾಣಿಸಿಕೊಂಡಿದ್ದರು. ಉಟ್ಟಿದ್ದು ಸೀರೆಯಾದರೂ   ಉರ್ಫಿ  ಟಾಪ್‌ಲ್ಲಿ ಬ್ಲೂ ಸ್ಟಾರ್ ನೇತು ಹಾಕಿ ಮೈಮಾಟ ಪ್ರದರ್ಶಿಸಿದ್ದರು. ಮೈಯಲ್ಲಿ ಬ್ಲೌಸ್ ಇಲ್ಲದಿದ್ದರೂ ಕೈಗೆ ಗ್ಲೌಸ್ ಹಾಕಿ ಒಂದಷ್ಟು ಮ್ಯಾಚ್ ಮಾಡಿದ್ದರು. 

ಆದರೆ ಇಂದು ಸಾರ್ವಜನಿಕವಾಗಿ ಕಾಣಿಸಿಕೊಂಡಿರೋ ಉರ್ಫಿಯನ್ನು ನೋಡಿದ ಫ್ಯಾನ್ಸ್​ ಬೆಚ್ಚಿಬಿದ್ದಿದ್ದಾರೆ. ಶೀಘ್ರದಲ್ಲಿ ಭಾರತಕ್ಕೆ ಭೀಕರ ಚಂಡಮಾರುತ, ಸುನಾಮಿ ಅಪ್ಪಳಿಸಲಿದೆ ಎಂದಿದ್ದಾರೆ. ಕೆಲವು ಕಾಲಜ್ಞಾನಿಗಳು ಹೇಳಿರುವ ಮಾತನ್ನು ನೆನಪಿಸುತ್ತಿದ್ದಾರೆ. ಬಹುಶಃ ಈಗಲೇ ಭಯಾನಕ ದಿನಗಳು ಭಾರತಕ್ಕೆ ಬರಲಿದೆ ಎಂದಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಉರ್ಫಿ ಮೈತುಂಬ ಡ್ರೆಸ್​ ತೊಟ್ಟಿದ್ದಾರೆ.  ಅಂದರೆ ಕುರ್ತಾ ಧರಿಸಿ  ಶಾಕ್​ (Shock) ನೀಡಿದ್ದಾರೆ. ತಮಗೆ ಬಟ್ಟೆ ಎಂದರೆ ಅಲರ್ಜಿ. ಬಟ್ಟೆ ಧರಿಸಿದರೆ ಮೈಮೇಲೆ ಗುಳ್ಳೆಗಳು ಏಳುತ್ತವೆ ಎಂದು ಕೆಲ ತಿಂಗಳ ಹಿಂದೆ ಉರ್ಫಿ ಹೇಳಿಕೆ ಕೊಟ್ಟಿದ್ದರು. ಆದರೆ ಇದೀಗ ಮೈತುಂಬಾ ಬಟ್ಟೆ ಧರಿಸಿ ಸಾವರ್ಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ. ನಿಜವಾಗಿಯೂ ಈಕೆ ಉರ್ಫಿ ಹೌದಾ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಇವತ್ತು ಸೂರ್ಯ ಯಾವ ಕಡೆ ಹುಟ್ಟಿದ್ದಾನೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಅವರು ಕಾರಿನಿಂದ ಇಳಿಯುತ್ತಿದ್ದಂತೆಯೇ ಯುವಕರು ಅರೇ ಇವತ್ತು ಕುರ್ತನಾ ಎಂದು ಪ್ರಶ್ನಿಸಿದ್ದಾರೆ. ಕೆಲ ಜನರು ಈಕೆಯ ಹೊಸ ಅವತಾರದ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಕೆಲವರು ಹೀಗೆಲ್ಲಾ ನೀವು ಡ್ರೆಸ್​ ಹಾಕಿದರೆ, ನಮಗೆ ಗುರುತಿಸಲು ಕಷ್ಟವಾಗುತ್ತದೆ ಎಂದು ಕಾಲೆಳೆದಿದ್ದರೆ, ಇನ್ನು ಕೆಲವರು ಹಾಗಿದ್ದರೆ ನಾಳೆ ಮೈತುಂಬಾ ಗುಳ್ಳೆಗಳು ಏಳುವುದು ಗ್ಯಾರೆಂಟಿ ಎಂದಿದ್ದಾರೆ. 

ಆಡಿಷನ್‌ಗೆ ಕರ್ದು ತಬ್ಬಿಕೋ ಅಂದ್ರು, ಕ್ಯಾಮೆರಾನೇ ಇರ್ಲಿಲ್ಲ, ಆದ್ರೂ ನಾನು.. ಉರ್ಫಿ ಹೇಳಿದ್ದೇನು?

ಸ್ವಲ್ಪವೂ ಮೈ ಪ್ರದರ್ಶನವಿಲ್ಲದೇ ಈ ಡ್ರೆಸ್​ನಲ್ಲಿ ಉರ್ಫಿ ತುಂಬಾ ಸುಂದರವಾಗಿ ಕಾಣಿಸುತ್ತಿರುವುದಾಗಿ ಹಲವರು ಹೇಳುತ್ತಿದ್ದರೆ, ನಿಮ್ಮನ್ನು ಈ ಫುಲ್​ ಅವತಾರದಲ್ಲಿ ನೋಡಲು ಆಗ್ತಿಲ್ಲಾ ತಾಯೀ ಎಂದು ಕೆಲವರು ಕಾಲೆಳೆಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ಡಿನ್ನರ್ ಡೇಟ್‌ಗೂ ಮೊದಲು ಕ್ಯಾಮೆರಾಗೆ ಫೋಸ್ ನೀಡಿದ್ದ ಉರ್ಪಿ, ನಗು ನಗುತ್ತಲೇ ರೆಸ್ಟೋರೆಂಟ್‌ಗೆ ತೆರಳಿದ್ದಾರೆ. ಈ ಮೂಲಕ ತಮ್ಮ ಹಿಂಭಾಗದ ಸೌಂದರ್ಯವನ್ನು ತೋರಿಸಿ ಕಿಚ್ಚು ಹಚ್ಚಿದ್ದಾರೆ. ಉರ್ಫಿಯ ಹೊಸ ಅವತಾರಕ್ಕೆ ಎಂದಿನಂತೆ ಪರ ವಿರೋಧಗಳು, ಟೀಕೆಗಳು, ಹೊಗಳಿಕೆ ವ್ಯಕ್ತವಾಗಿದೆ. ಉರ್ಫಿಯನ್ನು ಬಾಲಿವುಡ್ ಫ್ಯಾಶನ್ ಡಿಸೈನರ್ ಆಗಿ ನೇಮಿಸಿಕೊಳ್ಳಿ, ಎಲ್ಲಾ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಿದೆ ಎಂದು ಸಲಹೆ ನೀಡಿದ್ದಾರೆ.

ಅದು ಸಾಲದು ಎಂಬಂತೆ ಕಳೆದ ವಾರ, ಉರ್ಫಿ ಜಾವೇದ್ ಹೊಸ ಕ್ರಿಯೆಟಿವಿಟಿ, ಹೊಸ ಫ್ಯಾಶನ್ ಮೂಲಕ ಪ್ರತ್ಯಕ್ಷರಾಗಿದ್ದರು.  ಉರ್ಫಿ ತಮ್ಮ ಅಕ್ವೇರಿಯಂ ಬ್ರಾ ತೊಟ್ಟು ಝಲಕ್ ತೋರಿಸಿದ್ದರು. ಮೀನುಗಳು ತುಂಬಿದ ಫಿಶ್ ಟ್ಯಾಂಕ್ ಬ್ರಾ ಹಾಕಿ ಮೈಮಾಟ ಪ್ರದರ್ಶಿಸಿದ್ದರು. ಉರ್ಫಿಯ ಅಕ್ವೇರಿಯಂ ಬ್ರಾದೊಳಗೆ  ಜೀವಂತ ಮೀನುಗಳಿದ್ದವು. ಕೆಂಪು ಬಣ್ಣದ ಮೀನುಗಳು ಓಡಾಡುತ್ತಿದ್ದವು. ಹೀಗೂ ಬ್ರಾ ಬಳಕೆ ಮಾಡಬಹುದಾ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಿದರ ಅಚ್ಚರಿಯಿಲ್ಲ. ಕಾರಣ ಇದು ಟ್ರಾನ್ಸಪರೆಂಟ್ ಪ್ಲಾಸ್ಟಿಕ್. ಅದರೊಳಗೆ ನೀರು, ಆ ನೀರಿನಲ್ಲಿ ಬಣ್ಣ ಬಣ್ಣದ ಮೀನು. ಟಾಪ್‌ಲೆಸ್  ಆಗಿರುವ ಉರ್ಫಿ ಜಾವೇದ್ ಇದೇ ಅಕ್ವೇರಿಯೆಂ ಬ್ರಾ ಧರಿಸಿದ್ದರು. ಆದರೆ ಈಗ ಮಾತ್ರ ಫುಲ್  ಡ್ರೆಸ್​ ತೊಟ್ಟು ಉಫ್​ ಎನಿಸುತ್ತಿದ್ದಾರೆ. 
ಉರ್ಫಿ ಜಾವೇದ್ ದ್ವಿಲಿಂಗಿ? ಕಾಜಲ್ ತ್ಯಾಗಿ ಜೊತೆ ಲಿಪ್‌ಲಾಕ್‌ ಫೋಟೋ ವೈರಲ್‌

Follow Us:
Download App:
  • android
  • ios