16 ಸೆಕೆಂಡ್ ನಗ್ನದೇಹ ತೋರಿಸಿದ್ದಕ್ಕೆ ಮಗನಿಂದಾನೇ ದೂರವಾದೆ: ನಟಿ ಕಣ್ಣೀರು
ಚಿತ್ರವೊಂದರಲ್ಲಿ ನಗ್ನದೇಹವನ್ನು ತೋರಿಸಿದ ಕಾರಣ ತಾನು ಹೇಗೆ ಅಪಹಾಸ್ಯಕ್ಕೆ ಒಳಗಾದೆ, ಹೇಗೆ ತಮ್ಮ ಮಗನಿಂದ ದೂರವಾದೆ ಎನ್ನುವ ಕುರಿತು ಹಾಲಿವುಡ್ ನಟಿ ಶರೋನ್ ಸ್ಟೋನ್ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಹಲವು ಚಿತ್ರ ನಟಿಯರು ಬೆತ್ತಲಾಗುವುದು ಹೊಸ ವಿಷಯವೇನೂ ಅಲ್ಲ. ಸಂಪೂರ್ಣ ಅಂಗಾಂಗ ಪ್ರದರ್ಶನ ಮಾಡದಿದ್ದರೂ ಸಾಧ್ಯವಾದಷ್ಟು ಪ್ರದರ್ಶನ ಮಾಡಿ ಫೋಟೋಶೂಟ್ (Photoshoot) ಮಾಡಿಸಿಕೊಳ್ಳುವುದು ಮಾಮೂಲಾಗಿದೆ. ಹಿಂದೆಲ್ಲಾ ಇಂಥ ನಟಿಯರನ್ನು ಪೋರ್ನ್ ಸ್ಟಾರ್ ಎಂದು ಹೇಳಲಾಗುತ್ತಿತ್ತು. ಆದರೆ ಇಂದು ಅನೇಕ ನಟಿಯರು ಯಾವುದೋ ಚಿತ್ರಕ್ಕಾಗಿಯೋ ಇಲ್ಲವೇ ಪ್ರಚಾರಕ್ಕಾಗಿಯೋ ನಗ್ನತೆಯ ದರ್ಶನ ಮಾಡಿಸುವುದು ಇದೆ. ತೀರಾ ಕಾಂಟ್ರವರ್ಸಿಯಾಗಬಾರದು ಎನ್ನುವ ಕಾರಣಕ್ಕೆ ಯಾವುದೋ ಒಂದು ಚಿಕ್ಕ ವಸ್ತುವಿನಿಂದ ಖಾಸಗಿ ಅಂಗದ ಚೂರುಪಾರು ದೇಹವನ್ನು ಮುಚ್ಚಿಕೊಳ್ಳುವುದು ಇದೆ. ಹಾಲಿವುಡ್ನಲ್ಲಿ ಮಾತ್ರ ಕಾಣುತ್ತಿದ್ದ ದೇಹ ಪ್ರದರ್ಶನ ಇತ್ತೀಚೆಗಂತೂ ಮಾಮೂಲು ಎನ್ನಿಸುವಷ್ಟು ಆಗಿದೆ. ಅತ್ಯಂತ ಗೌರವದಿಂದ ತಮ್ಮದೇ ಇಮೇಜನ್ನು ಬೆಳೆಸಿಕೊಂಡಿದ್ದ ನಟಿಯರು ಕೂಡ ಚಿತ್ರರಂಗದಲ್ಲಿ ತಮ್ಮನ್ನು ಉಳಿಸಿಕೊಳ್ಳುವುದಕ್ಕಾಗಿ ಪೈಪೋಟಿಗೆ ಬಿದ್ದವರಂತೆ, ವಾಕರಿಕೆ ತರಿಸುವಷ್ಟರ ಮಟ್ಟಿಗೆ ದೇಹ ಪ್ರದರ್ಶನ ಮಾಡುತ್ತಿದ್ದಾರೆ. ಒಳ ಉಡುಪಿ ಧರಿಸದೇ ಫೋಟೋ ತೆಗೆಸಿಕೊಳ್ಳಲು, ಸೆಕ್ಸ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲೂ ಹಿಂಜರಿಯುವುದಿಲ್ಲ. ಆದರೆ ಇದೇ ದೃಶ್ಯ ಹಾಲಿವುಡ್ ನಟಿಯೊಬ್ಬಳ ಬದುಕನ್ನೇ ಕಸಿದುಕೊಂಡಿರುವ ಘಟನೆ ನಡೆದಿದೆ.
ಹೌದು. ಈಕೆಯ ಹೆಸರು ಶರೋನ್ ಸ್ಟೋನ್ (Sharon Stone). ಹಾಲಿವುಡ್ನ ಸೂಪರ್ಸ್ಟಾರ್ ಈಕೆ. ಶರೋನ್ ಮಾಡಿದ್ದ ಒಂದೇ ಒಂದು ಸನ್ನಿವೇಶದಿಂದ ಈಕೆ ಮಗನಿಂದ ದೂರವಾಗುವ ಹಾಗೆ ಮಾಡಿದ್ದು, ಅದನ್ನು ಖುದ್ದು ನಟಿಯೇ ಬಹಿರಂಗಪಡಿಸಿದ್ದಾರೆ. ವಾಸ್ತವವಾಗಿ, 1992 ರಲ್ಲಿ ಬಿಡುಗಡೆಯಾದ 'ಬೇಸಿಕ್ ಇನ್ಸ್ಟಿಂಕ್ಟ್' (Basic Instinct) ಚಿತ್ರದಲ್ಲಿ ಶರೋನ್ ಒಂದು ಸಣ್ಣ ನಗ್ನ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೇ ಇನ್ನೊಂದು ಚಿತ್ರದಲ್ಲಿ ಒಳಉಡುಪು ಇಲ್ಲದೆ ಕಾಣಿಸಿಕೊಂಡಿದ್ದರು. ಇದೇ ಅವರಿಗೆ ಮುಳುವಾಗಿದೆ. ಈ ಲೈಂಗಿಕ ಮತ್ತು ನಗ್ನ ದೃಶ್ಯಗಳಿಂದಾಗಿ, ಶರೋನ್ ರಾತ್ರೋರಾತ್ರಿ ಸಂವೇದನೆಯಾಗಿದ್ದರು. ಇದು ಅವರಿಗೆ ಭಾರಿ ಪ್ರಚಾರವನ್ನೂ ತಂದುಕೊಟ್ಟಿತ್ತು. ಇದರಿಂದ ನಟಿ ಹಿಗ್ಗಿ ಹೋಗಿದ್ದರು. ಆಕೆಗೆ ಚಿತ್ರರಂಗದಲ್ಲಿ ಬೇಡಿಕೆಯೂ ಹೆಚ್ಚಾಯಿತು.
ಬಾಲಿವುಡ್ನಲ್ಲಿ ಲೈಂಗಿಕ ಕಿರುಕುಳ: ಶಾಕಿಂಗ್ ಸತ್ಯ ತಿಳಿಸಿದ ನಟಿ Nargis Fakhri
ಆದರೆ ನಿಜಜೀವನದಲ್ಲಿ ಮಾತ್ರ ಈ ದೃಶ್ಯಗಳಿಂದ ಆಕೆ ಮಗನಿಂದ ದೂರವಾಗಬೇಕಾಗಿ ಬಂತು. ಐ ಹಾರ್ಟ್ ರೇಡಿಯೊದ ಇತ್ತೀಚಿನ ಪಾಡ್‌ಕಾಸ್ಟ್‌ನಲ್ಲಿ, ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪತಿಯಿಂದ ವಿಚ್ಛೇದನ ಪಡೆದ ಬಳಿಕ ಮಗ ರಾನ್‌ನ ಕಸ್ಟಡಿ ಪಡೆದುಕೊಳ್ಳಲು ಈ ಸೆಕ್ಸ್, ನಗ್ನ ದೃಶ್ಯಗಳು ತಮಗೆ ಹೇಗೆ ಮುಳುವಾಯಿತು ಎಂದು ನಟಿ ಬಹಿರಂಗಪಡಿಸಿದ್ದಾರೆ. 65 ವರ್ಷದ ನಟಿ ಈಗ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 'ನ್ಯಾಯಾಧೀಶರು ನನ್ನ ಪುಟ್ಟ ಮಗುವನ್ನು ಕೇಳಿದರು, ನಿಮ್ಮ ತಾಯಿ ಲೈಂಗಿಕ (Sex) ಚಲನಚಿತ್ರಗಳನ್ನು ಮಾಡಿದ್ದಾಳೆ ಎಂದು ನಿಮಗೆ ತಿಳಿದಿದೆಯೇ? ಎಂದು. ಆ ಕ್ಷಣದಲ್ಲಿ ನನ್ನ ಮಗ ಗಾಬರಿಯಿಂದ ಕಕ್ಕಾಬಿಕ್ಕಿಯಾದ. ಆತನಿಗೆ ಏನು ಹೇಳುವುದೋ ತಿಳಿಯಲಿಲ್ಲ. ಈ ರೀತಿಯಾಗಿ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲಾಯಿತು. ಮಗನನ್ನು ನನ್ನಿಂದ ದೂರ ಮಾಡಲಾಯಿತು' ಎಂದಿದ್ದಾರೆ ಶರೋನ್.
'ಇಂದು ಜನರು ಬೆತ್ತಲೆಯಾಗುವುದು ಹೊಸ ವಿಷಯವೇನಲ್ಲ. ಬಹುತೇಕ ಚಿತ್ರಗಳಲ್ಲಿ ಈ ದೃಶ್ಯವನ್ನು ಸಿನಿಮಾ ತುಂಬ ನೋಡಬಹುದು. ಆದರೆ 16 ಸೆಕೆಂಡ್ವರೆಗೆ ನಾನು ನನ್ನವಾಗಿ ಕಾಣಿಸಿಕೊಂಡಿದ್ದನ್ನು ನ್ಯಾಯಾಧೀಶರು ಪ್ರಶ್ನಿಸಿದರು. ಏನಿಂಥ ವಿಪರ್ಯಾಸ' ಎಂದು ನಟಿ ಪ್ರಶ್ನಿಸದ್ದಾರೆ. ಶರೋನ್ ಸ್ಟೋನ್ ಅವರು 1993 ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಯೂ ಮತ್ತಷ್ಟು ಅವಮಾನಕ್ಕೆ ಮತ್ತು ಅಪಹಾಸ್ಯಕ್ಕೊಳಗಾದರಂತೆ. ಈ ಸಮಯದಲ್ಲಿ ಅವರಿಗೆ 'ಬೇಸಿಕ್ ಇನ್‌ಸ್ಟಿಂಕ್ಟ್' ಚಿತ್ರಕ್ಕಾಗಿ ಪ್ರಶಸ್ತಿ ನೀಡಲು ಪರಿಗಣಿಸಲಾಗಿತ್ತು. ಈ ಚಿತ್ರವು ಕಾಮಪ್ರಚೋದಕ ಚಿತ್ರವಾಗಿದ್ದು, ಇದನ್ನು ಪಾಲ್ ವೆರ್ಹೋವನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಮೈಕೆಲ್ ಡಗ್ಲಾಸ್ ಪ್ರಮುಖ ಪಾತ್ರದಲ್ಲಿದ್ದರು. ಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ಈ ಚಿತ್ರವು ಆ ಸಮಯದಲ್ಲಿ ಸುಮಾರು $300 ಮಿಲಿಯನ್ (300 million dollar) ಗಳಿಸಿತು ಮತ್ತು ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿತ್ತು. ಆದರೆ ಕಾಮಪ್ರಚೋದಕವಾಗಿ ತಮ್ಮನ್ನು ಗುರುತಿಸಿ ಅಪಹಾಸ್ಯಕ್ಕೆ ಒಳಗಾದೆ ಎಂದಿದ್ದಾರೆ.
Sexually Assault: ಬಾಲಿವುಡ್ ನಟನ ಮೇಲೆಯೇ ಮಹಿಳೆ ಲೈಂಗಿಕ ದೌರ್ಜನ್ಯ- ಆಘಾತಕಾರಿ ಘಟನೆ ಬಹಿರಂಗ