ಮೋದಿ ಪರ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಪ್ರಚಾರ | ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ ದೀಪಿಕಾ-ರಣವೀರ್ ಫೋಟೋ | 

ಬೆಂಗಳೂರು (ಏ. 13): ಬಾಲಿವುಡ್ ಸ್ಟಾರ್ ಕಪಲ್ ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಮೋದಿ ಪರ ಪ್ರಚಾರ ಮಾಡುತ್ತಿದ್ದಾರೆ. ಕೇಸರಿ ದುಪ್ಪಟ್ಟ ಧರಿಸಿ ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೀಗೊಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದ್ಯ ಚಪಕ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ದೀಪಿಕಾ ಪಡುಕೋಣೆ ಸಿನಿಮಾವನ್ನು ಅರ್ಧದಲ್ಲೇ ಕೈ ಬಿಟ್ಟು ಮೋದಿ ಪರ ಪ್ರಚಾರದಲ್ಲಿ ತೊಡಗಿಕೊಂಡ್ರಾ ಎಂದು ಅಚ್ಚರಿಪಡಬೇಡಿ. ಈ ಸುದ್ದಿಯ ಅಸಲಿಯತ್ತೇ ಬೇರೆ. 

2018 ನವೆಂಬರ್ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೀಪಿಕಾ-ರಣವೀರ್ ಮದುವೆಯ ನಂತರ ಆಶೀರ್ವಾದ ಪಡೆಯಲು ಮುಂಬೈನ ಗಣೇಶ ದೇವಸ್ಥಾನಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕೇಸರಿ ದುಪ್ಪಟ್ಟ ಹಾಕಿಕೊಂಡಿದ್ದರು. ಇದನ್ನು ಎಡಿಟ್ ಮಾಡಿ ಕೇಸರಿ ದುಪ್ಪಟ್ಟದ ಮೇಲೆ ವೋಟ್ ಫಾರ್ ಬಿಜೆಪಿ ಎಂದು ಬರೆಯಲಾಗಿದೆ. 

ಈ ಫೋಟೋ ಅಪ್ ಲೋಡ್ ಮಾಡಿದ ಕೂಡಲೇ ಲಕ್ಷಗಟ್ಟಲೇ ಶೇರ್ ಆಗಿದೆ. ಫಾಲೋವರ್ಸ್ ಕೂಡಾ ಹೆಚ್ಚಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.