ಕಿರುತೆರೆಯ ಈ ನಟಿ ಅಮ್ಮನಾಗುತ್ತಿದ್ದಾರೆ!

ಬ್ಯೂಟಿ ಆ್ಯಂಡ್ ಬೋಲ್ಡ್ ಹುಡುಗಿ ದಿಶಾ ಮದನ್ ಅಮ್ಮನಾಗುತ್ತಿರುವ ಸಂತಸವನ್ನು 'we are pregnant' ಎಂದು ಹೇಳುವ ಮೂಲಕ ರಿವೀಲ್ ಮಾಡಿದ್ದಾರೆ.

Social media influencer  Disha Madan revels we are pregnant

ಆನ್‌ಲೈನ್‌ ಜಗತ್ತಿನ ಫೇಮಸ್‌ ಬೆಡಗಿ ದಿಶಾ ಮದನ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ. ಡಬ್‌ಸ್ಮಾಷ್, ಮ್ಯೂಸಿಕಲಿ ಹಾಗೂ ಟಿಕ್‌ಟಾಕ್‌ ಜಾಲಗಳಲ್ಲಿ ಎಲ್ಲರನ್ನೂ ಮೋಡಿ ಮಾಡಿದ್ದವರು ದಿಶಾ ಮದನ್.

ಕೆಲ ದಿನಗಳ ಹಿಂದೆ 'Surprise Surprise...ಕೆಲ ತಿಂಗಳುಗಳಿಂದ ಯಾವುದೇ ಸೋಶಿಯಲ್ ಆ್ಯಪ್‌ಗಳನ್ನು ಬಳಸಲು ಆಗುತ್ತಿರಲಿಲ್ಲ. ಅದಕ್ಕೆ ಕಾರಣವಿದೆ. We are Pregnant! ಕೆಲ ತಿಂಗಳಿಂದ ನನ್ನೊಂದಿಗೆ ಸದಾ ಇರುವ ನನ್ನ ಕುಟುಂಬದವರಿಗೆ ಬಿಗ್ ಥ್ಯಾಂಕ್ಸ್. ಶಶಾಂಕ್ (ಪತಿ) ಹಾಗೂ ನಾನು ನಮ್ಮ ಪುಟ್ಟ ಕಂದಮ್ಮನನ್ನು ಆಗಸ್ಟ್‌ ತಿಂಗಳಲ್ಲಿ ಬರ ಮಾಡಿಕೊಳ್ಳಲಿದ್ದೇವೆ' ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದು ಫೋಟೋವೊಂದರ ಜೊತೆ ಅಪ್ಲೋಡ್ ಮಾಡಿದ್ದಾರೆ.

ಸೋಷಿಯಲ್ ಮಿಡಿಯಾ ಸ್ಟಾರ್ ಖಾತೆಯಲ್ಲಿ ಫೋಟೋಗಳು ಮಾಯ! ಆಗಿದ್ದೇನು?

ಡ್ಯಾನ್ಸಿಂಗ್ ಸ್ಟಾರ್ಸ್ ರಿಯಾಲಿಟಿ ಶೋ ಹಾಗೂ 'ಕುಲವಧು' ಧಾರಾವಾಹಿ ಮೂಲಕ ಚಿರಪರಿಚಿತವಾದ ದಿಶಾ, ಆನ್‌ಲೈನ್ ಮೀಡಿಯಾದಲ್ಲಿ ಹಾಡಿಗೆ ಹೆಜ್ಜೆ ಹಾಕುತ್ತಾ, ಶಾಲಾ-ಕಾಲೇಜುಗಳಿಗೆ ಗೆಸ್ಟ್ ಆಗಿ ಹೋಗುತ್ತಿದ್ದವರು. ಅಲ್ಲದೇ ಪುನೀತ್ ರಾಜ್‌ಕುಮಾರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಹೇಟ್ ಯು ರೋಮಿಯೋ' ವೆಬ್‌ ಸೀರಿಸ್‌ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

Latest Videos
Follow Us:
Download App:
  • android
  • ios