Samantha; 30 ಸಾವಿರ ಬಿಕಿನಿ ಪ್ರಮೋಷನ್‌ಗೆ ಇಷ್ಟೊಂದು ಹಣ ಪಡೆದ್ರಾ ಸ್ಯಾಮ್!

ಟಾಲಿವುಡ್ ಸ್ಟಾರ್ ನಟಿ ಸಮಂತಾ ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ಬಳಿಕ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ಸಮಂತಾ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಭಾರಿ ಬ್ಯುಸಿಯಾಗಿದ್ದಾರೆ. 

Actress Samantha Took Rs 90 lakh To Promote 30K Swimwear sgk

ಟಾಲಿವುಡ್ ಸ್ಟಾರ್ ನಟಿ ಸಮಂತಾ(Samantha) ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ 2 (The Family Man 2) ವೆಬ್ ಸೀರಿಸ್ ಬಳಿಕ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ಸಮಂತಾ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಭಾರಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಸಮಂತಾ ಬ್ಯುಸಿಯಾಗಿರುವ ಜೊತೆಗೆ ಸಿಕ್ಕಾಪಟ್ಟೆ ಕಾಸ್ಟ್ಲಿ ಕೂಡ ಆಗಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ನಟಿ ಸಮಂತಾ ಸಿನಿಮಾವೊಂದಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಸಮಂತಾ ಸಿನಿಮಾವೊಂದಕ್ಕೆ 4 ರಿಂದ 5 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. 

ಕೇವಲ ಸಿನಿಮಾದಿಂದ ಮಾತ್ರವಲ್ಲದೇ ಜಾಹೀರಾತಿನ ಮೂಲಕವೂ ಸಿಕ್ಕಾಪಟ್ಟೆ ಹಣ ಪಡೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿ ಸಮಂತಾ ಇನ್ಸ್ಟಾಗ್ರಾಮ್ ನಲ್ಲಿ ಒಂದು ಫೋಟೋ ಪೋಸ್ಟ್ ಮಾಡಲು ಭಾರಿ ಹಣ ಪಡಯುತ್ತಾರೆ. ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಸದಾ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗಷ್ಟ ಸಮಂತಾ ಹಾಟ್ ಬಿಕಿನಿ ಫೋಟೋಸೇರ್ ಮಾಡಿದ್ದರು. ಸಮಂತಾ ಹೊಸ ಬಿಕಿನಿ ಫೋಟೋಗೆ ಅಭಿಮಾನಿಗಳು ಬ್ಯುಸಿಯಾಗಿದ್ದರು. 

ಸಮಂತಾ ಹಾಟ್ ಬಿಕಿನಿ ಪೋಸ್ ನೋಡಿ ನಟಿ ಅನುಷ್ಕಾ ಶರ್ಮಾ ಹೇಳಿದ್ದೇನು?

ಅಂದಹಾಗೆ ಸಮಂತಾ ಬಿಕಿನಿ ಧರಿಸಿದ್ದು ಹೊಸ ಬ್ರ್ಯಾಂಡ್  ಒಂದರ ಪ್ರೋಮಷನ್‌ಗಾಗಿ. ಬರ್ಬೆರಿ ಬ್ರ್ಯಾಂಡ್‌ಗಾಗಿ ಸಮಂತಾ ಮಾಡಿಸಿದ ಬಿಕಿನಿ ಫೋಟೋಶೂಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಫಾರಿನ್ ಬ್ರ್ಯಾಂಡ್ ಪ್ರಮೋಷನ್‌ಗೆ ಸಮಂತಾ ಸಿಕ್ಕಾಪಟ್ಟೆ ಚಾರ್ಜ್ ಮಾಡುತ್ತಾರೆ. ಸಮಂತಾ ಧರಿಸಿರುವ ಬರ್ಬೆರಿ ಸ್ವಿಮ್‌ವೇರ್ ಬೆಲೆ 30 ಸಾವಿರ ರೂಪಾಯಿ. ಆದರೆ ಈ ಸ್ವಿಮ್ ಧಿರಿಸಿನ ಪ್ರಮೋಷನ್‌ಗೆ ಪಡೆದ ಸಂಭಾವನೆ ನಿಜಕ್ಕೂ ಅಚ್ಚರಿ ಪಡುವಂತೆ ಮಾಡಿದೆ. ಸಮಂತಾ ಹಾಟ್ ಬಿಕಿನಿ ಪ್ರಮೋಷನ್ ಗೆ ಬರೋಬ್ಬರಿ 90 ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಅಂದಹಾಗೆ ಸಮಂತಾಗೆ ಸಾಮಾಜಿಕ ಜಾಲತಾಣದಿಂದ  ತಿಂಗಳಿಗೆ 1 ರಿಂದ 3 ಕೋಟಿ ಸಂಪಾದನೆ ಮಾಡುತ್ತಾರೆ. ತಿಂಗಳಿಗೆ ಕಮ್ಮಿ ಅಂದರೂ ಸಮಂತಾ 3 ರಿಂದ 4 ಜಾಹೀರಾತಿನ ಪೋಸ್ಟ್ ಶೇರ್ ಮಾಡುತ್ತಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಸಮಂತಾ ಯಾಕೆ ಇಷ್ಟು ಕಾಸ್ಟ್ಲಿ ಆಗಿದ್ದಾರೆ ಎನ್ನುವುದು ಗೊತ್ತಾಯಿತ್ತಲ್ಲಾ..

ಸಮಂತಾ ಸಿನಿಮಾ ವಿಚಾರಗಳ ಬಗ್ಗೆ ಹೇಳುವುದಾರೆ, ಸದ್ಯ ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜೊತೆಗೆ ವೆಬ್ ಸೀರಿಸ್ ಕೂಡ ಮಾಡುತ್ತಿದ್ದಾರೆ. ಫ್ಯಾಮಿಲಿ ಮ್ಯಾನ್-2 ಬಳಿಕ ಸಮಂತಾ ಸಿಕ್ಕಾಪಟ್ಟೆ ಖ್ಯಾತಿಗಳಿಸಿದ್ದಾರೆ. ತೆಲುಗಿನಲ್ಲಿ ಶಾಕುಂತಲಂ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾ ಬಳಿಕ ಯಶೋಧ ಮತ್ತು ಖುಷಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಖುಷಿ ಚಿತ್ರದಲ್ಲಿ ಸಮಂತಾ ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ದೇವರಕೊಂಡ ಜೊತೆ ನಟಿಸುತ್ತಿದ್ದಾರೆ.

ಸಮಂತಾಗೆ 'ಹಾಟಿ' ಎಂದ ಅನುಷ್ಕಾ, ಆದ್ರೆ, ಕೊಹ್ಲಿ ಕಾಲೆಳೆದ ನೆಟ್ಟಿಗರು!

ಇತ್ತೀಚಿಗಷ್ಟೆ ಸಮಂತಾ ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ರಣ್ವೀರ್ ಮತ್ತು ಸಮಂತಾ ಸೆಲ್ಫಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಂದಹಾಗೆ ಇಬ್ಬರೂ ಜಾಹೀರಾತು ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಚಿತ್ರೀಕರಣ ವೇಳೆ ಕ್ಲಿಕ್ಕಿಸಿದ ಫೋಟೋ ಅದಾಗಿತ್ತು. ಇಬ್ಬರ ಫೋಟೋ ವೈರಲ್ ಆದ ಬಳಿಕ ಒಟ್ಟಿಗೆ ಸಿನಿಮಾ ಮಾಡಲಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ. ಇನ್ನು ಬಾಲಿವುಡ್‌ನಲ್ಲಿ ಸಮಂತಾ  ಮತ್ತೊಂದು ಹೊಸ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

Latest Videos
Follow Us:
Download App:
  • android
  • ios