ಅಯ್ಯೋ..! ಮತ್ತೇ ಏನಾಯ್ತು; ರಕ್ತ ಸೋರುತ್ತಿರುವ ಸಮಂತಾ ಕೈ ನೋಡಿ ಫ್ಯಾನ್ಸ್ ಶಾಕ್

ನಟಿ ಸಮಂತಾ ರಕ್ತ ಸೋರುತ್ತಿರುವ ಕೈನ ಫೋಟೋ ಶೇರ್ ಮಾಡಿದ್ದಾರೆ. ಅಭಿಮಾನಿಗಳು ಏನಾಯಿತು ಎಂದು ಆತಂಕಗೊಂಡಿದ್ದಾರೆ. 

Actress Samantha shares a photo of injured hand sgk

ಸೌತ್ ಸ್ಟಾರ್ ಸಮಂತಾ ಮತ್ತೆ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಸ್ಯಾಮ್ ಅಪರೂಪದ ಕಾಯಿಲೆ Myositisನಿಂದ ಬಳಲುತ್ತಿದ್ದರು.  ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಅನಾರೋಗ್ಯದ ಕಾರಣ ಸಮಂತಾ ಸಿನಿಮಾ ಕೆಲಸಕ್ಕೆ ಬ್ರೇಕ್ ನೀಡಿದ್ದರು. ಚಿತ್ರೀಕರಣ ಮುಂದಕ್ಕೆ ಹಾಕಿದ್ದರು. ಇದೀಗ ಅನೇಕ ತಿಂಗಳ ಬಳಿಕ ಶೂಟಿಂಗ್‌ಗೆ ಮರಳಿದ್ದಾರೆ. ಸದ್ಯ ಸಮಂತಾ ಮುಂಬೈನಲ್ಲಿದ್ದಾರೆ. ಇಂಗ್ಲಿಷ್​ನ ‘ಸಿಟಾಡೆಲ್​’ ಸೀರಿಸ್‌ನ ಭಾರತೀಯ ವರ್ಷನ್​ ಸಿಟಾಡೆಲ್ ಶೂಟಿಂಗ್​ನಲ್ಲಿ ಸಮಂತಾ ಬ್ಯುಸಿ ಆಗಿದ್ದಾರೆ. ಈ ನಡುವೆ ಸಮಂತಾ ರಕ್ತ ಸೋರುತ್ತಿರುವ ಕೈಗಳ ಫೋಟೋವನ್ನು ಶೇರ್ ಮಾಡಿದ್ದಾರೆ. ಸಮಂತಾ ಫೋಟೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. Myositisನಿಂದ ಚೇತರಿಸಿಕೊಳ್ಳುತ್ತಿದ್ದ ಸಮಂತಾ ಅವರಿಗೆ ಮತ್ತೇ ಏನಾಯಿತು ಎಂದು ಆತಂಕ ಪಟ್ಟಿದ್ದಾರೆ. 

ಅಷ್ಟಕ್ಕೂ ಶೂಟಿಂಗ್ ವೇಳೆ ಸಮಂತಾ ಕೈಗೆ ಗಾಯವಾಗಿದೆ. ಗಾಯವಾಗಿರುವ ಕೊಗಳ ಫೋಟೋವನ್ನು ಸಮಂತಾ ಹಂಚಿಕೊಂಡಿದ್ದಾರೆ. ಸಿಟಾಡೆಲ್ ವೆಬ್ ಸೀರಿಸ್ ಚಿತ್ರೀಕರಣ ವೇಳೆ ಗಾಯವಾಗಿದೆ ಎನ್ನಲಾಗಿದೆ. 
ನಟಿ ಸಮಂತಾ ಬಾಲಿವುಡ್ ಸ್ಟಾರ್ ವರುಣ್ ಧವನ್ ಜೊತೆ ವೆಬ್​ ಸೀರಿಸ್​ನಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್​ನ ಜನಪ್ರಿಯ ಸೀರಿಸ್ ‘ಸಿಟಾಡೆಲ್’​​ ಭಾರತದ ವರ್ಷನ್‌ನಲ್ಲಿ ಮೂಡಿಬರುತ್ತಿದೆ. ವಿಶೇಷ ಎಂದರೆ ಈ ಸೀರಿಸ್‌ಗೆ ‘ದಿ ಫ್ಯಾಮಿಲಿ ಮ್ಯಾನ್​’ ಸೀರಿಸ್ ಖ್ಯಾತಿಯ ರಾಜ್ ಹಾಗೂ ಡಿಕೆ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಈಗ ಆರಂಭ ಆಗಿದ್ದು ಸಮಂತಾ ಮತ್ತು ವರುಣ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. 

ಈ ಸೀರಿಸ್ ಅಮೇಜಾನ್​ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಲಿದೆ. ಈ ಸರಣಿಯ ಶೂಟಿಂಗ್​ ವೇಳೆ ಸಮಂತಾ ಕೈಗೆ ಗಾಯಗಳಾಗಿವೆ. ಸ್ವತಃ ಸಮಂತಾ ಅವರೇ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಮಂತಾ ಫೋಟೋ ನೋಡಿ ಅಭಿಮಾನಿಗಳು ಒಮ್ಮೆ ಶಾಕ್ ಆಗಿದ್ದಾರೆ. ಏನಾಯಿತು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸಮಂತಾ ಕೈ ಬೆರಳುಗಳಲ್ಲಿ ರಕ್ತ ಸೋರುತ್ತಿದೆ. ಅಂದಹಾಗೆ ಸಮಂತಾ ಈ ಸೀರಿಸ್ ನಲ್ಲಿ ಆಕ್ಷನ್ ದೃಶ್ಯಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದಾರೆ. ಆಕ್ಷನ್ ದೃಶ್ಯ ಸೆರೆಹಿಡಿಯುವಾಗ ಹಾಗೆ ಆಗಿದೆ ಎನ್ನಲಾಗಿದೆ. 

ಹೆಲ್ತ್ ಅಪ್‌ಡೇಟ್ ನೀಡಿದ ಸಮಂತಾ; ಚಿಕಿತ್ಸೆ ಬಗ್ಗೆ ಹೇಳಿದ್ದೇನು?

ಅಂದಹಾಗೆ ಸಿಟಾಡೆಲ್ ನಿರ್ದೇಶಕರಾದ ರಾಜ್ ಮತ್ತು ಡಿಕೆ ಸಮಂತಾ ಜೊತೆ ದಿ ಫ್ಯಾಮಿಲಿ 2ನಲ್ಲಿ ಕೆಲಸ ಮಾಡಿದ್ದರು. ಇದೀಗ ಸಮಂತಾ ಜೊತೆ ಎರಡನೇ ಬಾರಿಗೆ ಕಲೆಸ ಮಾಡುತ್ತಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ನಲ್ಲೂ ಸಮಂತಾ ಸಿಕ್ಕಾಪಟ್ಟೆ ಆಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದರು. ಸಿಟಾಡೆಲ್ ನಲ್ಲೂ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ನೋವು ನಷ್ಟ ಸಂಕಟ; ಕಷ್ಟ ದಿನಗಳಿಂದ ಹೊರ ಬಂದಿದ್ದು ಹೇಗೆಂದು ಹಂಚಿಕೊಂಡ ಸಮಂತಾ

ಸಮಂತಾ ಕೊನೆಯದಾಗಿ ಯಶೋದ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಸಾಕುಂತಲಂ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈಗಾಗಲೇ ಹಾಡುಗಳು ಮತ್ತು ಟ್ರೇಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ಮುಂದಕ್ಕೆ ಹೋಗಿದೆ. ವಿಜಯ್ ದೇವರಕೊಂಡ ಖುಷಿ ಸಿನಿಮಾದ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಸದ್ಯ ವೆಬ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ.  

Latest Videos
Follow Us:
Download App:
  • android
  • ios