Asianet Suvarna News Asianet Suvarna News

ಕೆಟ್ಟ ಚಟಗಳಿಲ್ಲದ ಸಾಫ್ಟ್ ಫ್ಯಾಮಿಲಿ ಬಾಯ್; ಸಮಂತಾ ಮಾತಿಗೆ ಮುಗುಳ್ನಕ್ಕ ವಿಜಯ್ ದೇವರಕೊಂಡ

ಖುಷಿ ಸಿನಿಮಾ ಬಿಡುಗಡೆಗೂ ಮೊದಲು ಬಹಳಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಸಮಂತಾ ಮತ್ತು ವಿಜಯ್ ದೇವರಕೊಂಡ ನಟನೆಯ ಲವ್-ರೊಮ್ಯಾಂಟಿಕ್ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾಯುತ್ತಿತ್ತು. 

Actress Samantha Ruth Prabhu talks about co actor Vijay Devarakonda in an Interview srb
Author
First Published Feb 26, 2024, 3:41 PM IST

ನಟಿ ಸಮಂತಾ ಅವರು ತಮ್ಮ ಸಿನಿಮಾ ಸಹ ನಟ ವಿಜಯ್ ದೇವರಕೊಂಡ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ನಟಿ ಸಮಂತಾ 'ನಟ ವಿಜಯ್ ದೇವರಕೊಂಡ ಒಬ್ಬ ರೆಬೆಲ್ ನಟ, ರೌಡಿ ಅಂತಲೂ ಕರೆಯುತ್ತಾರೆ. ಆದರೆ ಅವರಿಗೆ ಯಾವುದೇ ಕೆಟ್ಟ ಹವ್ಯಾಸಗಳಿಲ್ಲ. ಅವರದು ಝೀರೋ ಬ್ಯಾಡ್ ಹ್ಯಾಬಿಟ್ಸ್, ಅವರದು ಸಾಫ್ಟ್ ನೇಚರ್, ಅವರೊಬ್ಬ ಫ್ಯಾಮಿಲಿ ಬಾಯ್. ಪ್ರತಿ ದಿನ ಕೆಲಸ ಮಾಡ್ತಾರೆ, ಅಷ್ಟೇ ಅಲ್ಲ, ತುಂಬಾ ಶಿಸ್ತುಬದ್ಧ ವ್ಯಕ್ತಿ. ಕೆಲಸದ ಬಗ್ಗೆ ತುಂಬಾ ಫೋಕಸ್ ಇದೆ, ಇನ್ವಾಲ್ವ್‌ಮೆಂಟ್ ಇದೆ' ಎಂದಿದ್ದಾರೆ. 

ಸೆಪ್ಟೆಂಬರ್ 1, 2023ರಂದು ಬಿಡುಗಡೆಯಾಗಿದ್ದ ಖುಷಿ ಸಿನಿಮಾದಲ್ಲಿ ನಟಿ ಸಮಂತಾ ಹಾಗು ನಟ ವಿಜಯ್ ದೇವರಕೊಂಡ ಒಟ್ಟಾಗಿ ನಟಿಸಿದ್ದರು. ಶಿವ ನಿರ್ವಾಣ ನಿರ್ದೇಶನದ ಖುಷಿ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಸೂಪರ್ ಹಿಟ್ ದಾಖಲಿಸದಿದ್ದರೂ ಸಮಂತಾ ಮತ್ತು ವಿಜಯ್ ದೇವರಕೊಂಡ ಜೋಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಸಿನಿಮಾ ಸೆಟ್ಟೇರಿದ ದಿನದಿಂದಲೂ ಸಮಂತಾ-ವಿಜಯ್ ಫ್ಯಾನ್ಸ್  'ಖುಷಿ' ಸಿನಿಮಾ ತೆರೆಗೆ ಬರುವುದನ್ನೇ ಕಾಯುತ್ತಿದ್ದರು. ಆದರೆ, ಶಿವ ನಿರ್ವಾಣ ನಿರ್ದೇಶನದ ಈ ಚಿತ್ರವು ಫ್ಯಾನ್ಸ್‌ಗಳಿಗೆ ನಿರಾಸೆ ಮೂಡಿಸಿದೆ ಎನ್ನಬಹುದು. 

ಕರ್ನಾಟಕದಲ್ಲಿದ್ದ ಜಮೀನು ಕಳೆದುಕೊಂಡ್ವಿ, ಚೆನ್ನೈನಲ್ಲಿ ಚಿಕ್ಕ ಮನೆಯಲ್ಲಿದ್ವಿ; ಎಸ್‌ಎಸ್‌ ರಾಜಮೌಳಿ

ಖುಷಿ ಸಿನಿಮಾ ಬಿಡುಗಡೆಗೂ ಮೊದಲು ಬಹಳಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಸಮಂತಾ ಮತ್ತು ವಿಜಯ್ ದೇವರಕೊಂಡ ನಟನೆಯ ಲವ್-ರೊಮ್ಯಾಂಟಿಕ್ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾಯುತ್ತಿತ್ತು. ಅವರಿಬ್ಬರ ಲವ್ ಇಂಟಿಮೇಟ್ ಸೀನ್‌ಗಳು ಭಾರೀ ಮೆಚ್ಚುಗೆ ಗಳಿಸಿದ್ದರೂ ಹಳಿ ತಪ್ಪಿದ ಕಥೆಯ ಸಿನಿಮಾ ಹೇಳಿಕೊಳ್ಳುವಂಥ ಕಲೆಕ್ಷನ್ ಮಾಡಲು ವಿಫಲವಾಗಿದೆ. ಆದರೆ, ಸಿನಿಮಾ ತೀರಾ ಪ್ಲಾಪ್ ಆಗಿಲ್ಲ ಎಂಬ ಮಾತೂ ಸಹ ಕೇಳಿಬಂದಿದೆ. 

ಸದ್ಯದಲ್ಲೇ 'ಶಿವ'ನಾಗಿ ಬರಲಿದ್ದಾರೆ ಪ್ರಭಾಸ್; ಪಾರ್ವತಿಯಾಗಿ ಮಿಂಚಲಿದ್ದಾರಾ ಕಂಗನಾ ರಣಾವತ್?

ಒಟ್ಟಿನಲ್ಲಿ, ನಟಿ ಸಮಂತಾ ಅವರು ಖುಷಿ ಸಿನಿಮಾದ ಶೂಟಿಂಗ್ ವೇಳೆ ನಟ ವಿಜಯ್ ದೇವರಕೊಂಡ ಅವರನ್ನು ಹತ್ತಿರದಿಂದ ನೋಡಿದ್ದಾರೆ. ಅವರ ಕೆಲಸದಲ್ಲಿನ ಶ್ರದ್ಧೆ, ಶಿಸ್ತು ಸಮಂತಾರಿಗೆ ಇಷ್ಟವಾಗಿದೆ. ನಟ ವಿಜಯ್ ದೇವರಕೊಂಡ ಅವರಿಗೆ ಯಾವುದೇ ಬ್ಯಾಡ್ ಹ್ಯಾಬಿಟ್‌ಗಳು ಇಲ್ಲ ಎಂಬುದನ್ನು ಸಮಂತಾ ಅರಿತಿದ್ದಾರೆ. ಈ ಎಲ್ಲ ಸಂಗತಿಗಳನ್ನು ಅವರು ಸಂದರ್ಶನದ ವೇಳೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ, ಸದ್ಯ ನಟಿ ಸಮಂತಾ ಮೆಯೋಸಿಟಿಸ್ ಖಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 

ನಟ ವಿನೋದ್ ರಾಜ್ ಮದುವೆ ಗುಟ್ಟಾಗಿ ಇಟ್ಟಿದ್ದು ಯಾಕೆ; ಸ್ಪಷ್ಟ ಉತ್ತರ ಇಲ್ಲಿದೆ ನೋಡಿ!

Follow Us:
Download App:
  • android
  • ios