ತಮನ್ನಾ ಭಾಟಿಯಾ ಬಾಯ್‌ಫ್ರೆಂಡ್‌ ಜೊತೆ ಕಾಣಿಸಿಕೊಂಡ ನಟಿ ಸಮಂತಾ!

ನಟಿ ಸಮಂತಾ ರುತು ಪ್ರಭು ಮತ್ತು ವಿಜಯ್‌ ವರ್ಮಾ ಜೊತೆಯಾಗಿ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿದೆ. ವಿಡಿಯೋ ಜೊತೆಗೆ ನೋಡಿದ ಅಭಿಮಾನಿಗಳು ನಟಿ ತಮನ್ನಾ ಭಾಟಿಯಾ ಪ್ರಿಯತಮ ವಿಜಯ್‌ ವರ್ಮಾ ಅವರು ಸಮಂತಾ ಜೊತೆಗೆ ಕಾಣಿಸಿಕೊಂಡಿರುವ ಬಗ್ಗೆ ಹುಬ್ಬೇರಿಸಿದ್ದಾರೆ.

actress samantha ruth prabhu and Vijay varma spotted Amazon prime video 2024 Event gow

ನಟಿ ಸಮಂತಾ ರುತು ಪ್ರಭು ಮತ್ತು ವಿಜಯ್‌ ವರ್ಮಾ ಜೊತೆಯಾಗಿ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿದೆ. ವಿಡಿಯೋ ಜೊತೆಗೆ ನೋಡಿದ ಅಭಿಮಾನಿಗಳು ನಟಿ ತಮನ್ನಾ ಭಾಟಿಯಾ ಪ್ರಿಯತಮ ವಿಜಯ್‌ ವರ್ಮಾ ಅವರು ಸಮಂತಾ ಜೊತೆಗೆ ಕಾಣಿಸಿಕೊಂಡಿರುವ ಬಗ್ಗೆ ಹುಬ್ಬೇರಿಸಿದ್ದಾರೆ. ಆದರೆ  ಅಸಲಿಗೆ ಇವರಿಬ್ಬರು  ಅಮೆಜಾನ್ ಪ್ರೈಮ್ ವಿಡಿಯೋ ಮೆಗಾ ಈವೆಂಟ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಈವೆಂಟ್‌ ನಲ್ಲಿ ಭಾರತೀಯ ಚಿತ್ರರಂಗದ ನೂರಕ್ಕೂ ಹೆಚ್ಚು ತಾರೆಯರು ಭಾಗವಹಿಸಿದ್ದಾರೆ. ಸಮಂತಾ, ವಿಜಯ್‌ ವರ್ಮಾ , ತಮನ್ನಾ ಭಾಟಿಯಾ ಮಾತ್ರವಲ್ಲ ಅಕ್ಕಿನೇನಿ ನಾಗಚೈತನ್ಯ, ಅಭಿಷೇಕ್‌ ಬಚ್ಚನ್ , ರಾಣಾ ದಗ್ಗುಬಾಟಿ ಸೇರಿ ಹಲವರು ಕಾಣಿಸಿಕೊಂಡಿದ್ದರು.

ಬರೋಬ್ಬರಿ 18 ಕೆಜಿ ಇಳಿಸಿಕೊಂಡ ನೀತಾ ಅಂಬಾನಿ, 60ರ ಹರೆಯದಲ್ಲೂ ಯಾವ ಹಿ ...

ಪ್ರಸ್ತುತ ಮುಂಬೈನಲ್ಲಿ ವಾರ್ಷಿಕ ಅಮೆಜಾನ್ ಪ್ರೈಮ್ ವಿಡಿಯೋ ಕಾರ್ಯಕ್ರಮವು  ಮಾರ್ಚ್ 19ರ ಇಂದು ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ  ಮುಂಬರುವ ಪ್ರೈಮ್ ವಿಡಿಯೋ ಮೂಲ ಚಲನಚಿತ್ರಗಳು ಮತ್ತು ಸರಣಿಗಳನ್ನು ಪ್ರದರ್ಶಿಸುತ್ತದೆ. ಈವೆಂಟ್ ಸುಮಾರು 100 ಕ್ಕೂ ಹೆಚ್ಚು ತಾರೆಯರು ಭಾಗವಹಿಸಿದ್ದಾರೆ. ನಿರ್ಮಾಪಕ ಕರಣ್ ಜೋಹರ್‌ ನಡೆಸುತ್ತಿರುವ ಈ ವರ್ಷದ ಅತೀ ದೊಡ್ಡ ಈವೆಂಟ್‌ ಎಂದಯ ಹೇಳಲಾಗುತ್ತಿದೆ.  ಈ ಕಾರ್ಯಕ್ರಮದಲ್ಲಿ ಹಲವು  ಪ್ರದರ್ಶನಗಳು ಮತ್ತು ಚಲನಚಿತ್ರಗಳನ್ನು ಒಳಗೊಂಡಿದೆ. ಲೈವ್ ಶೋ ಅನ್ನು ಯೂಟ್ಯೂಬ್, ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಸ್ಟ್ರೀಮ್ ಮಾಡಲಾಗುತ್ತಿದೆ ಎಂದು ನೆಟ್‌ಫ್ಲಿಕ್ಸ್ ದೃಢಪಡಿಸಿದೆ.

ಅನಿಲ್ ಅಂಬಾನಿ ದಿವಾಳಿಯಾದ್ರೂ, ಕಿರಿಯ ಮಗನ ಕಾರು ಶೋಕಿಗೇನು ಕಮ್ಮಿ ಇಲ್ಲ!

ವರುಣ್ ಧವನ್ ಮತ್ತು ಸಮತಾ ರುತ್ ಪ್ರಭ್ ಅಭಿನಯದ ಸಿಟಾಡೆಲ್: ಹನಿ ಬನ್ನಿಯಿಂದ ಭುವನ್ ಅರೋರಾ ಒಳಗೊಂಡ ದುಪಾಹಿಯಾದಿಂದ  ಹಿಡಿದು ವಿವಿಧ ಭಾಷೆಗಳ 10ಕ್ಕೂ ಹೆಚ್ಚು ಸೀರೀಸ್‌ಗಳ ಪ್ರದರ್ಶನವಾಗಲಿದೆ. ರಾಣಾ ದಗ್ಗುಬಾಟಿ ಅವರ ಟಾಕ್ ಶೋ ದಿ ರಾಣಾ ಕನೆಕ್ಷನ್‌, ಉರ್ಫಿ ಜಾವೇದ್ ಅವರ ಫಾಲೋ ಕರ್ ಲೋ ಯಾರ್ , ಭೂಮಿ ಪೆಡ್ನೇಕರ್ ನೇತೃತ್ವದ ದಲ್ಡಾಲ್‌, ವಿಜಯ್ ವರ್ಮಾ ಅವರ ಮಟ್ಕಾ ಕಿಂಗ್‌ ಹೀಗೆ 10ಕ್ಕೂ ಹೆಚ್ಚು ಸೀರಿಸ್‌ಗಳ ಪ್ರದರ್ಶನ ಇರಲಿದೆ.

ಪ್ರಸಿದ್ಧ ಬಾಲಿವುಡ್‌ ತಾರೆಯರು ಮಾತ್ರವಲ್ಲ ದಕ್ಷಿಣ ಭಾರತದ ಮಲೆಯಾಳಂ, ತಮಿಳು, ತೆಲುಗು ಚಿತ್ರರಂಗದಿಂದ ಸೆಲೆಬ್ರಟಿಗಳು ಭಾಗಿಯಾಗಿದ್ದಾರೆ. ವಿಚ್ಚೇದಿತರಾದ ನಾಗ ಚೈತನ್ಯ ಮತ್ತು ಸಮಂತಾ ಕೂಡ ಒಂದೇ ಈವೆಂಟ್‌ನಲ್ಲಿ ಭಾಗವಹಿಸಿದ್ದರು.

 

Latest Videos
Follow Us:
Download App:
  • android
  • ios