Asianet Suvarna News Asianet Suvarna News

ಹೀರೊಯಿನ್‌ ಆಗುವ ಮನಸ್ಸಿದ್ರೆ ಮಂಚಕ್ಕೆ ಬಾ; ಕರಾಳ ಅನುಭವ ಹೇಳಿದ ನಟಿ ಸಾಧಿಕಾ

ಹೀರೊಯಿನ್‌ ಆಗುವ ಆಸೆಯಿದ್ದರೆ ತಮಗೆ ಕೆಲವರು ಮಂಚಕ್ಕೆ ಕರೆದಿದ್ದ ಅನುಭವವನ್ನು ಶೇರ್‍ ಮಾಡಿಕೊಂಡಿದ್ದಾರೆ ಮಾಲಿವುಡ್ ನಟಿ ಸಾಧಿಕಾ ವೇಣುಗೋಪಾಲ್‌. 
 

Actress Sadhika Venugopal about casting couch in industry suc
Author
First Published Aug 23, 2023, 12:56 PM IST

ಕಾಸ್ಟಿಂಗ್​ ​ ಕೌಚ್​ (casting couch) ಎನ್ನುವುದು ಕೆಲ ವರ್ಷಗಳಿಂದ ಸಿನಿರಂಗದಲ್ಲಿ ಬಹಳ ಸದ್ದು ಮಾಡಿದ ಶಬ್ದ. 2018ರಲ್ಲಿ ನಟಿ ಶ್ರುತಿ ಹರಿಹರನ್​ ಅವರು ತಮಗೆ ಆಗಿರುವ ಕಹಿ ಘಟನೆಗಳನ್ನು ಹಂಚಿಕೊಂಡ ಬಳಿಕ ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈಗಲೂ   ನಟಿಯರು ಸೇರಿದಂತೆ ವಿವಿಧ ಕ್ಷೇತ್ರಗಳ ಮಹಿಳೆಯರು  ತಮ್ಮ ಮೇಲಾಗಿದ್ದ ಲೈಂಗಿಕ ದೌರ್ಜನ್ಯಗಳ ಕುರಿತು ಹೇಳಿಕೊಂಡರು. ಕೆಲ ಪುರುಷರ ಮೇಲೂ ಇಂಥ ಘಟನೆಗಳು ನಡೆದಿರುವುದು ಅಲ್ಲಲ್ಲಿ ವರದಿಯಾಗಿದ್ದು, ಅವರೂ ತಮಗೆ ಆಗಿರುವ ಅನುಭವ ಹೇಳುತ್ತಿದ್ದಾರೆ.  ಇದೀಗ ಮಾಲಿವುಡ್‌ ನಟಿ ಸಾಧಿಕಾ ವೇಣುಗೋಪಾಲ್​​ ಈ ಬಗ್ಗೆ ಮಾತನಾಡಿದ್ದಾರೆ. 

ಹೀರೊಯಿನ್‌ ಆಗುವ ಆಸೆ ಇದ್ದರೆ ಮಂಚಕ್ಕೆ ಬಾ ಎಂದು ನೇರವಾಗಿಯೇ ಕರೆದಿರುವವರ ಬಗ್ಗೆ ನಟಿ ಮಾತನಾಡಿದ್ದಾರೆ. ಅಷ್ಟಕ್ಕೂ ತಮ್ಮನ್ನು ಹೀಗೆ ನೇರವಾಗಿಯೇ ಕೇಳಲು ಕಾರಣವನ್ನೂ ನಟಿ ಬಿಚ್ಚಿಟ್ಟಿದ್ದಾರೆ. ಏಕೆಂದರೆ ಇಂದಿನ ಬಹುತೇಕ ನಟಿಯರಂತೆಯೇ ಸಾಧಿಕಾ ಕೂಡ ಬೋಲ್ಡ್‌ ಫೋಟೋ ಶೂಟ್‌ ಮಾಡಿಸಿಕೊಂಡು ಅದರನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುತ್ತಿರುತ್ತಾರೆ. ತಮ್ಮ ಇಂಥ ಫೋಟೋಗಳನ್ನು ನೋಡಿ ತಾವು ಎಲ್ಲದ್ದಕ್ಕೂ ಸಿದ್ಧ ಎಂದು ಅಂದುಕೊಂಡು ಈ ರೀತಿ ಆಹ್ವಾನ ನೀಡುತ್ತಿರಬಹುದು ಎಂದು ಸಾಧಿಕಾ ಹೇಳಿದ್ದಾರೆ.

Priyanka Chopra: ಅಂಡರ್​ವೇರ್​ ಕಳಚಿ ಎಂದಿದ್ದ ಆ ನಿರ್ದೇಶಕ: ಕರಾಳ ದಿನದ ಕುರಿತು ಮೌನ ಮುರಿದ ನಟಿ

 ನಾನು ಮಂಚ ಹಂಚಿಕೊಳ್ಳಲು ಓಕೆ ಎಂದರೆ  ಪ್ರಮುಖ ನಾಯಕಿ ಪಾತ್ರವನ್ನು ನೀಡುವುದಾಗಿ ಅನೇಕರು ತಮಗೆ ಆಫರ್‌ ನೀಡಿದ್ದರು. ಬಹುಶಃ ನನ್ನ ಫೋಟೋ ನೋಡಿ ಅವರೆಲ್ಲಾ ಹೀಗೆ ಮಾಡಿರಬಹುದು ಎಂದಿದ್ದಾರೆ ನಟಿ. ಹೀಗೆ ಆಫರ್‌ ನೀಡಿದವರಲ್ಲಿ ಹೆಚ್ಚಿನವರು ಮಧ್ಯವರ್ತಿಗಳು (Middlemen). ಈ ವಿಷಯ ಚಿತ್ರದ ನಿರ್ಮಾಪಕ ಅಥವಾ ನಿರ್ದೇಶಕರಿಗೆ ತಿಳಿದಿರುತ್ತದೆಯೋ ಇಲ್ಲವೋ ಗೊತ್ತಿಲ್ಲ.  ಆದರೆ ಸಿನಿಮಾ ಉದ್ಯಮದಲ್ಲಿ   ನಡೆಯುವುದೇ ಹೀಗೆ. ಇಂತಹ ಹೆಚ್ಚಿನ ಕರೆಗಳು ಸಿನಿಮಾ ರಂಗದ ಮಧ್ಯವರ್ತಿಗಳಿಂದಲೇ ಬರುತ್ತವೆ. ನಾನು ಯಾರಾದರೂ ಒಬ್ಬರಿಗೆ ಮಂಚ ಹಂಚಿಕೊಳ್ಳಲು ರೆಡಿಯಿರುವುದಾಗಿ ‘ಹೌದು‘ ಎಂದು ಹೇಳಿದರೆ ಸಾಕು, ನಾನು ಎಂದಿಗೂ ಈ ಕಾಸ್ಟಿಂಗ್​ ಕೌಚ್​ ಹಳ್ಳದಿಂದ ಹೊರಬರಲು ಸಾಧ್ಯವಿಲ್ಲ. ಏಕೆಂದರೆ ಅವರಿಗೆ ನಾನು  ದುರ್ಬಲ ಎಂದು ತಿಳಿಯುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾನು ಯಾವಾಗಲೂ ಇಂತಹ ಆಫರ್​ಗಳಿಗೆ ನೋ ಎಂದು ಹೇಳುತ್ತೇನೆ ಎಂದು ಸಾಧಿಕಾ ತಿಳಿಸಿದ್ದಾರೆ. 

ಕೆಲವು ನಟಿಯರು ಆಗಾಗ ಸಾಮಾಜಿಕ ಮಾಧ್ಯಮದಲ್ಲಿ (Social media) ಹೀಗೆ ಮಂಚಕ್ಕೆ ಕರೆಯುವ  ಸಿನಿಮಾ ವ್ಯಕ್ತಿಗಳ ಅನೇಕ ಹೆಸರುಗಳನ್ನು ಬಹಿರಂಗಪಡಿಸುವುದರಿಂದ ಕೆಲವರು ನನ್ನನ್ನು ನೇವಾಗಿ ಸಂಪರ್ಕಿಸಲು ಭಯಪಡುತ್ತಾರೆ. ನಾನು ಕೂಡ ಜಾಲತಾಣದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂಬ ಭಯದಿಂದ ನನ್ನನ್ನು ಸಂಪರ್ಕಿಸಲು ಹೆದರುತ್ತಾರೆ ಎಂದಿರುವ ನಟಿ, ಇದೇ ಕಾರಣಕ್ಕೆ  ನಾನು ಅನೇಕ ಪಾತ್ರಗಳನ್ನು ಕಳೆದುಕೊಂಡಿದ್ದೇನೆ ಎಂದರು. ಯಾವುದೇ ಸಾರ್ವಜನಿಕ ವೇದಿಕೆಯಲ್ಲಿ ನಾನು ಯಾರನ್ನೂ ಕೀಳಾಗಿ ಕಾಣಲು ಬಯಸುವ ವ್ಯಕ್ತಿಯಲ್ಲ.  ಈ ಬಗ್ಗೆ ಖಚಿತವಾಗಿ ಹೇಳುವುದೇನೆಂದರೆ, ದಯವಿಟ್ಟು ನನ್ನ ಫೋಟೋಶೂಟ್‌ಗಳಿಂದ ನನ್ನನ್ನು ಈ ರೀತಿಯಾಗಿ  ನಿರ್ಣಯಿಸಬೇಡಿ. ನಾನು ವಿಭಿನ್ನ ವ್ಯಕ್ತಿ ಎಂದು ಸಾಧಿಕಾ ಉಲ್ಲೇಖಿಸಿದ್ದಾರೆ.

Casting Couch: ನನ್ನನ್ನೇ ಮಂಚಕ್ಕೆ ಕರೆದಿದ್ದ ಆತ, ಇನ್ನು ನಟಿಯರ ಗತಿ? ಎಂದ ನಟ ರಾಜೀವ್​

Follow Us:
Download App:
  • android
  • ios