Asianet Suvarna News Asianet Suvarna News

ನನ್ನ ಧ್ವನಿಯಿಂದ ತುಂಬಾ ಟೀಕೆ ಎದುರಿಸಿದೆ; ಟ್ರೋಲ್‌ಗಳನ್ನು ನೆನೆದು ರಾಣಿ ಮುಖರ್ಜಿ ಭಾವುಕ

ವಿಭಿನ್ನ ಹೆಸರು ಮತ್ತು  ನಟನೆ ಮೂಲಕ ಬಿ-ಟೌನ್‌ನಲ್ಲಿ ಹೆಸರು ಮಾಡಿರುವ ರಾಣಿ ಮುಖರ್ಜಿ ಜನರ ನೆಗೆಟಿವ್ ಕಾಮೆಂಟ್ ಎಷ್ಟು ಪರಿಣಾಮ ಬೀರಿತ್ತು ಎಂದು ಮಾತನಾಡಿದ್ದಾರೆ.

Actress Rani Mukerji talks about getting negative comment on voice vcs
Author
First Published Mar 8, 2023, 11:54 AM IST | Last Updated Mar 8, 2023, 11:54 AM IST

1998ರಲ್ಲಿ ಬಾಲಿವುಡ್‌ ಚಿತ್ರರಂಗಕ್ಕೆ ಕಾಲಿಟ್ಟ ರಾಣಿ ಮುಖರ್ಜಿ ಆರಂಭದಲ್ಲಿ ತುಂಬಾ ಅವಮಾನಗಳನ್ನು ಎದುರಿಸಿದ್ದಾರೆ. 2002ರಲ್ಲಿ ವೃತ್ತಿ ಜೀವನದಲ್ಲಿ ಬಿಗ್ ಬ್ರೇಕ್ ಸಿಕ್ಕಿತ್ತು. ಅಲ್ಲಿಂದ ರಾಣಿ ಕ್ರಿಯೇಟ್ ಮಾಡಿರುವುದು ಬಿಗ್ ಹಿಸ್ಟರ್. ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಣಿ ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್‌ಗಳ ಬಗ್ಗೆ ರಿಯಾಕ್ಟ್‌ ಮಾಡಿದ್ದಾರೆ. 

ಧ್ವನಿ:

'ನನ್ನದೇ ಆದ ನಂಬಿಕೆಗಳನ್ನು ಸೃಷ್ಟಿ ಮಾಡಿಕೊಂಡು ಅದನ್ನು ಚಾಚು ತಪ್ಪದೆ ಫಾಲೋ ಮಾಡುತ್ತೀನಿ. ಹೀಗಾಗಿ ಜನರು ಏನೇ ಕಾಮೆಂಟ್ ಮಾಡಿದ್ದರೂ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಜನರು ಏನೆಂದು ಹೇಳುತ್ತಾರೆ ಅಂತ ಕೇಳಿಸಿಕೊಳ್ಳುತ್ತಿದ್ದರೆ ನನಗೋಸ್ಕರ ಬದುಕುವುದಿಲ್ಲ ಬದಲಿಗೆ ಮತ್ತೊಬ್ಬರಿಗೆ ಬದುಕಿದ ರೀತಿ ಇರುತ್ತದೆ. ಪಬ್ಲಿಕ್ ಫಿಗರ್ ಆದ ಮೇಲೆ ನಾನು ನಮ್ಮ ಪ್ರಿನ್ಸಿಪಲ್ಸ್‌ಗಳನ್ನು ತಪ್ಪದೆ ಫಾಲೋ ಮಾಡಬೇಕು ಏಕೆಂದರೆ ಸಾವಿರಾರು ಮಂದಿ ನಮ್ಮನ್ನು ನೋಡುತ್ತಿರುತ್ತಾರೆ. ಒಬ್ಬರಿಗೆ ಸರಿ ಅನಿಸಿದ್ದು ಮತ್ತೊಬ್ಬರಿಗೆ ತಪ್ಪು ಅನಿಸಬಹುದು ಅದನ್ನು ನಂಬಿಕೊಂಡು ಜೀವನ ಮಾಡಿದ್ದರೆ ನಾನು ನಾಯಕಿ ಆಗುತ್ತಿರಲಿಲ್ಲ. ಹೆಚ್ಚಿಗೆ ಒಳ್ಳೆಯದನ್ನು ಸ್ವೀಕರಿಸುತ್ತೀನಿ ನೆಗೆಟಿವ್‌ನ ತಲೆಯಲ್ಲಿ ಇಟ್ಟುಕೊಂಡು ಸರಿ ಮಾಡಿಕೊಳ್ಳುವೆ ಆದರೆ ಅದನ್ನೇ ನಂಬಿ ಮುಂದಿನ ಹೆಜ್ಜೆ ನಿಧಾನ ಮಾಡುವುದಿಲ್ಲ. ಏನಾದರೂ ಅಜೆಂಡಾ ಇಟ್ಟುಕೊಂಡು ಕಾಲೆಳೆಯುವ ಕೆಲಸ ಮಾಡಿದರೆ ಅದನ್ನು ಸ್ವೀಕರಿಸುವುದಿಲ್ಲ' ಎಂದು ಪಿಂಕ್‌ವಿಲಾ ಸಂದರ್ಶನದಲ್ಲಿ ರಾಣಿ ಮಾತನಾಡಿದ್ದಾರೆ.

ವಿವಾದಕ್ಕೆ ಕಾರಣವಾದ Amitabh Bachchan ಜೊತೆಯ Rani Mukerji ಕಿಸ್ಸಿಂಗ್‌ ಸೀನ್‌!

'ವೃತ್ತಿ ಜೀವನದ ಆರಂಭದಲ್ಲಿ ಅನೇಕರು ನನ್ನ ಧ್ವನಿ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದರು ಆದನ್ನು ಗಂಭೀರವಾಗಿ ಪರಿಗಣಿಸಿದ್ದರೆ ಪ್ರೀತಿ ಕೊಟ್ಟವರನ್ನು ಲೆಕ್ಕ ಮಾಡುವುದನ್ನು ನಿಲ್ಲಿಸಿ ಬಿಡುತ್ತಿದ್ದೆ. ಇಂದು ಜನರು ನನ್ನನ್ನು ಗುರುತಿಸುವುದೇ ನನ್ನ ಧ್ವನಿಯಿಂದ ನನಗೆ ತುಂಬಾ ಖುಷಿ ಕೊಡುತ್ತದೆ. ಇಷ್ಟು ವರ್ಷದ ಜರ್ನಿಯಲ್ಲಿ ನನ್ನ ಧ್ವನಿ ಫೇಮಸ್ ಆಗುತ್ತದೆ ಎಂದು ಯಾರೂ ನಂಬಿರಲಿಲ್ಲ. ಕೆಲವೊಂದು ವಿಚಾರಗಳಲ್ಲಿ ಹೆಚ್ಚಿಗೆ ನಂಬಿಕೆ ಇಟ್ಟು ದೇವರ ಮೇಲೆ ಭಾರ ಹಾಕಬಹುದು. ಮಹಿಳೆಯರು ಮಾತ್ರ ಜೀವನದಲ್ಲಿ ಕಷ್ಟ ಪಡುತ್ತಾರೆ ಅನ್ನೋದು ಸುಳ್ಳು ನನ್ನ ಪ್ರಕಾರ ಗಂಡಸರು ಕೂಡ ಕಷ್ಟ ಪಡುತ್ತಾರೆ. ನಮ್ಮ ಇಂಡಸ್ಟ್ರಿಯಲ್ಲಿ ನಾನು ನೋಡಿರುವ ಪ್ರಕಾರ ಹೇರ್‌ಸ್ಟೈಲ್‌ ಮಾಡುವವರು ಹೆಣ್ಣು ಮಕ್ಕಳೇ.  ಆಗ ನಾವು ಕೂಡ ಹೇರ್‌ ಸ್ಟೈಲ್ ಮಾಡಬಹುದು ಎಂದು ಗಂಡರು ಗುರುತಿಸಿಕೊಳ್ಳಬೇಕಿತ್ತು. ಸುಮ್ಮನೆ ಜನರು ಕಾಮೆಂಟ್ ಮಾಡುವುದನ್ನು ಕೇಳಿಸಿಕೊಳ್ಳಬಾರದು...ಒಂದೊಂದು ವೃತ್ತಿ ಜೀವನದಲ್ಲಿ ಒಂದೊಂದು ರೀತಿ ಜಾಲೆಂಜ್‌ ಇರುತ್ತದೆ. ಪ್ರತಿಯೊಂದು ಫೀಡ್‌ನಲ್ಲಿ ಮಹಿಳಾ ಬಾಸ್‌ಗಳು ಇದ್ದಾರೆ. ಡಿಫರೆಂಟ್ ಕಮ್ಯೂನಿಟಿಯಿಂದ ಬಂದವರು ಬೇರೆ ಬೇರೆ ರೀತಿಯಲ್ಲಿ ಸಮಾನತೆ ಕಾಣುತ್ತಾರೆ'ಎಂದು ರಾಣಿ ಹೇಳಿದ್ದಾರೆ. 

ರಾಣಿ ಮುಖರ್ಜಿಯ ಸೀ ಫೇಸಿಂಗ್‌ ಹೊಸ ಮನೆ ಹೇಗಿದೆ ನೋಡಿ!

'ಸಣ್ಣ ವಯಸ್ಸಿನ ಹುಡುಗಿ ಇದ್ದಾಗ ನನ್ನ ಆಸೆಗಳು ಬೇರೆ ಆಗಿತ್ತು ನಾಯಕಿ ಆಗುವ ಕನಸು ಕಂಡಿರಲಿಲ್ಲ. ಸಿನಿಮಾ ಕ್ಷೇತ್ರ ಅಂದ್ರೆ ಹೆಚ್ಚಿನ ಪ್ರಮುಖ್ಯತೆ ಮತ್ತು ಗೌರವ ಕೊಡುತ್ತಿರಲಿಲ್ಲ. ನಟನೆಯನ್ನ ವೃತ್ತಿ ಜೀವನವಾಗಿ ಯಾರೂ ನೋಡಿರಲಿಲ್ಲ. ಲಾಯರ್‌ ಆಗಬೇಕು ಅಥವಾ interior design ಆಗಬೇಕು ಎಂದು ಕನಸು ಕಂಡಿದ್ದೆ. ಸಿನಿಮಾ ಬ್ಯಾಗ್ರೌಂಡ್‌ನಿಂದ ಬಂದರೂ ನನ್ನ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಇರಲಿಲ್ಲ ನಾನು ಹುಟ್ಟುವ ಮೊದಲು ನನ್ನ ತಂದೆ ಸಿನಿಮಾ ನಿರ್ಮಾಣ ಮಾಡುತ್ತಿದ್ದರು. ನಾನು ಹುಟ್ಟಿದ ಸಮಯದಲ್ಲಿ ತಂದೆ ಸಿನಿಮಾ ಮಾಡುತ್ತಿರಲಿಲ್ಲ. ಸಾಮಾನ್ಯ ಕುಟುಂಬದಿಂದ ಬಂದಿರುವ ಹುಡುಗಿ ಆಗಿರುವ ಕಾರಣ ಸಿನಿಮಾ ವಿಚಾರಗಳನ್ನು ಮನೆಯಲ್ಲಿ ಚರ್ಚೆ ಮಾಡುತ್ತಿರಲಿಲ್ಲ. ಅವಕಾಶ ಬಂದಾಗ ಒಂದು ಸಲ ಪ್ರಯತ್ನ ಪಡುಬೇಕು ಎಂದು ತಾಯಿ ಹೇಳಿದ್ದರು ಸಿನಿಮಾ ಕ್ಷೇತ್ರ ಇಷ್ಟವಾಗಿಲ್ಲ ಅಂದ್ರೆ ಓದುವ ಕಡೆ ಗಮನಿಸಬಹುದು ಎನ್ನುತ್ತಿದ್ದರು. ಒಂದು ಪ್ರಯತ್ನಕ್ಕೆ ಒಳ್ಳೆ ಅವಕಾಶಗಳು ಸಿಕ್ಕಿತ್ತು' ಎಂದಿದ್ದಾರೆ ರಾಣಿ.  

Latest Videos
Follow Us:
Download App:
  • android
  • ios