ಬಾಲಿವುಡ್‌ (Bollywood)ನ ಎಂಟರ್‌ಟೈನ್‌ಮೆಂಟ್ ಕ್ವೀನ್ ರಾಖಿ ಸಾವಂತ್ (Rakhi Sawant). ವಿಲಕ್ಷಣವಾಗಿ ಡ್ರೆಸ್ ಮಾಡ್ಕೊಂಡು, ವಿಚಿತ್ರವಾಗಿ ಮಾತನಾಡ್ಕೊಂಡು ಪಾಪರಾಜಿಗಳ ಕೈಗೆ ಸಿಕ್ಕು ಟ್ರೋಲ್ ಆಗ್ತಾರೆ. ಆದ್ರೆ ಈ ಬಾರಿ ರಾಖಿ ಇನ್ನಷ್ಟು ವಿಚಿತ್ರವಾಗಿ ವರ್ತಿಸಿದ್ದಾರೆ. ನೆಟ್ಟಿಗರು ಏನಪ್ಪಾ ಈ ಮಹಾತಾಯಿಯ ಅವತಾರ ಅಂತಿದ್ದಾರೆ.

ರಷ್ಯಾ ಮತ್ತು ಉಕ್ರೇನ್‍ ನಡುವಿನ ಯುದ್ಧ ಸಾಕಷ್ಟು ಸಾವು-ನೋವಿಗೆ ಕಾರಣವಾಗಿದೆ. ಯುದ್ಧ ಬಾಧಿತ ಉಕ್ರೇನ್ ರಾಜಧಾನಿ ಕೀವ್‍ನಲ್ಲಿ ಎರಡು ಬಾರಿ ಸ್ಫೋಟ ಸಂಭವಿಸಿದೆ. ಅದೆಷ್ಟೋ ಮಂದಿ ಮನೆ, ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಪುಟ್ಟ ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿ ಬೀದಿ ಪಾಲಾಗಿದ್ದಾರೆ. ರಸ್ತೆ ಬದಿಗಳಲ್ಲಿ ನಿಂತು ರಕ್ಷಿಸುವಂತೆ ಮೊರೆಯಿಡುತ್ತಿದ್ದಾರೆ. ರಷ್ಯಾ (Russia) ವಿರುದ್ಧ ಹೋರಾಡಲು ಉಕ್ರೇನ್‌ನ (Ukraine) ಪ್ರಜೆಗಳೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಉಕ್ರೇನ್ನ ಜನರು ಜೀವಭಯದಿಂದ ಸಿಕ್ಕ ರೈಲು ವಿಮಾನಗಳನ್ನು ಹತ್ತಿ ದೇಶ ಬಿಡುತ್ತಿದ್ದಾರೆ.

ಜಗತ್ತಿನಾದ್ಯಂತ ರಷ್ಯಾ-ಉಕ್ರೇನ್ ಯುದ್ಧ ಭೀತಿಗೆ ಕಾರಣವಾಗಿದೆ. ಶಾಂತಿಗಾಗಿ ಜನರು ಮೊರೆಯಿಡುತ್ತಿದ್ದಾರೆ. ಯುದ್ಧ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವಿರುದ್ಧ ವಿಶ್ವಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಉಕ್ರೇನ್‌ ಮೇಲಿನ ರಷ್ಯಾ ದಾಳಿಯನ್ನು ಖಂಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ‘ವಿದೇಶವೊಂದರ ಮೇಲೆ ಪೂರ್ವ ನಿರ್ಧರಿತ ಮತ್ತು ಅಪ್ರಚೋದಿತ ದಾಳಿ ನಡೆಸಿದ ಸರ್ವಾಧಿಕಾರಿಗಳು ಸೂಕ್ತ ಬೆಲೆ ತೆರಬೇಕಾಗಿ ಬರಲಿದೆ’ ಎಂದು ಪುಟಿನ್‌ಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.‘ಈಗ ಪುಟಿನ್‌ ಯುದ್ಧದಲ್ಲಿ ಮುನ್ನಡೆಯುತ್ತಿರಬಹುದು. ಮುಂದಿನ ದಿನದಲ್ಲಿ ಅವರು ಭಾರೀ ಬೆಲೆ ತೆರಬೇಕಾಗುತ್ತದೆ. ಇದರ ಪರಿಣಾಮ ಅರಿವು ಅವರಿಗಿಲ್ಲ’ ಎಂದು ಚಾಟಿ ಬೀಸಿದ್ದಾರೆ.

ಲೊಟ್ಟೆ 100 ಕೋಟಿ, ಇದು ಸಿಂಪಲ್ ಸರ ಕಣೋ; ಕಾಲೆಳೆದವರಿಗೆ Rakhi Sawant ಉತ್ತರ

ಭಾರತದಲ್ಲಿ ಸದಾ ವಿವಾದಾತ್ಮಕ ಹೇಳಿಕೆಯಿಂದಲೇ ಸುದ್ದಿ, ಟ್ರೋಲ್ ಆಗುವ ನಟಿ ರಾಖಿ ಸಾವಂತ್ (Rakhi Sawant) ಸಹ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಯುದ್ಧವನ್ನು ನಿಲ್ಲಿಸುವಂತೆ ಬೆದರಿಕೆ ಹಾಕಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಂನಲ್ಲಿ ನಟಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್ (Bollywood) ಚಿತ್ರರಂಗದಲ್ಲಿ ಕ್ವೀನ್ ಆಫ್‌ ಎಂಟರ್ನೈಟ್ಮೆಂಟ್ ಎಂದರೆ ಅದು ರಾಖಿ ಸಾವಂತ್‌. (Rakhi Sawant). ಸಿನಿಮಾ ಕ್ಷೇತ್ರದಲ್ಲಿ ಕಡಿಮೆ ಹೆಸರು ಮಾಡಿದರೂ ಐಟಂ ಸಾಂಗ್, ಬಿಗ್ ಬಾಸ್ ಸ್ಪರ್ಧಿಯಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಮುಖ್ಯವಾಗಿ ಬಿಗ್ ಬಾಸ್‌ ಸೀಸನ್‌ 15ರಲ್ಲಿ ರಾಖಿ ಕಾಣಿಸಿಕೊಂಡಿದ್ದರು.

ಹಿಂದಿ ಸಿನಿಮಾ (Bollywood)ಕ್ಷೇತ್ರದಲ್ಲಿ ಸದಾ ವಿವಾದದಲ್ಲಿರುವ ನಟಿ ರಾಖಿ ಸಾವಂತ್, ವಿಚಿತ್ರವಾಗಿ ಡ್ರೆಸ್ ಮಾಡಿಕೊಂಡು ಪ್ಯಾಪರಾಜಿಗಳಿಗೆ ಫೋಸ್ ಕೊಡುತ್ತಿರುತ್ತಾರೆ. ತನ್ನ ವಿಲಕ್ಷಣ ವರ್ತನೆಗಳು ಮತ್ತು ಕಾಮೆಂಟ್‌ಗಳಿಗೆ ಹೆಸರುವಾಸಿಯಾಗಿರುವ ರಾಖಿ ಸಾವಂತ್ ಈಗ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವೀಡಿಯೋದಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ರಾಖಿ ಸಾವಂತ್ ಮಾತನಾಡಿರುವುದು ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ. ರಾಖೀ ಸಾವಂತ್, ತಮ್ಮ ಇತ್ತೀಚಿನ ವೀಡಿಯೋದಲ್ಲಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಯುದ್ಧವನ್ನು ನಿಲ್ಲಿಸುವಂತೆ ಬೆದರಿಕೆ ಹಾಕಿದ್ದಾರೆ. 

View post on Instagram

ಪತಿಯಿಂದ ಬೇರ್ಪಡುವುದಾಗಿ ಘೋಷಿಸಿದ ರಾಖಿ ಸಾವಂತ್‌; ಸಂಬಂಧವೇ fake ಎಂದ ನೆಟ್ಟಿಗರು!

ವಿಮಾನ ನಿಲ್ದಾಣದಲ್ಲಿ ಆಕೆ ನೀಲಿ ಬಣ್ಣದ ಸನ್‌ಗ್ಲಾಸ್‌ ಧರಿಸಿ ಫೋನ್‌ನಲ್ಲಿ ಮಾತನಾಡುತ್ತಿರುವ ವಿಡಿಯೋ ವಿಚಿತ್ರವಾಗಿದೆ. ಈ ದೃಶ್ಯವನ್ನು ರಾಖಿಯ ಸ್ನೇಹಿತ ರಾಜೀವ್ ಖಿಂಚಿ ರೆಕಾರ್ಡ್ ಮಾಡಿದ್ದಾರೆ. ‘ನನ್ನ ಸಹೋದರಿ, ರಾಖಿ ತುಂಬಾ ಕೋಪಗೊಂಡಿದ್ದಾಳೆ, ಬೇರೆ ಭಾಷೆಯಲ್ಲಿ ಮಾತನಾಡುತ್ತಿದ್ದಾಳೆ. ಮತ್ತು ಅವಳು ಪುಟಿನ್ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾಳೆ’ ಎಂದು ಅವರು ಹೇಳಿದರು.

ಜಿಮ್‌ನ ಹೊರಗೆ ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಮಾತನಾಡಿರುವ ರಾಖಿ ಸಾವಂತ್, 'ಯುದ್ಧವನ್ನು ನಿಲ್ಲಿಸಲು ರಷ್ಯಾಕ್ಕೆ ಹೇಳುತ್ತೇನೆ' ಎಂದು ಹೇಳಿದ್ದರು. ಯುದ್ಧವನ್ನು ನಿಲ್ಲಿಸದಿದ್ದರೆ ತನ್ನ ಹೆಲಿಕಾಪ್ಟರ್‌ನಿಂದ ರಷ್ಯಾಕ್ಕೆ ಹೋಗಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬೀಳಿಸಬೇಕಾಗುತ್ತದೆ’ ಎಂದು ರಾಖಿ ಪುಟಿನ್‌ಗೆ ಎಚ್ಚರಿಕೆ ನೀಡಿದ್ದಾರೆ. ಅದೇನೆ ಇರ್ಲಿ ಯಾವಾಗ್ಲೂ ಬೇಕಾಬಿಟ್ಟಿ ಹೇಳಿಕೆ ಕೊಡೋ ರಾಖಿ ಈ ಬಾರಿ ಪುಟಿನ್‌ಗೆ ಬೆದರಿಕೆ ಹಾಕ್ತೇನೆ ಅನ್ನೋ ಅಸಂಭವ ಹೇಳಿಕೆ ಕೊಡೋ ಮೂಲಕ ಮತ್ತೆ ಟ್ರೋಲ್ ಆಗ್ತಿರೋದಂತೂ ಸುಳ್ಳಲ್ಲ.