ಸ್ನೇಹಿತೆಯ ಮದುವೆಗೆ ದುಬಾರಿ ನೆಕ್‌ಲೇಸ್ ಧರಿಸಿದ ರಾಖಿ ಸಾವಂತ್. ಕಾಲೆಳೆದ ಸ್ನೇಹಿತನಿಗೆ ಕ್ಲಾಸ್.....
ಬಾಲಿವುಡ್ (Bollywood) ಚಿತ್ರರಂಗದಲ್ಲಿ ಕ್ವೀನ್ ಆಫ್ ಮನೋರಂಜನೆ ಅಂತ ಹೇಳಿದರೆ, ಎಲ್ಲರೂ ಮೊದಲು ತೋರಿಸುವುದು ರಾಖಿ ಸಾವಂತ್ ಅವರನ್ನು (Rakhi Sawant). ಬಿಗ್ ಬಾಸ್ ಸೀಸನ್ 15ರಲ್ಲಿ ಪತಿ ರಿತೇಶ್ (Ritesh) ಜೊತೆ ಆಗಮಿಸಿ, ಸುದ್ದಿ ಆದ ನಟಿ ಇದೀಗ ಚಂಡೀಗಢ್‌ನಲ್ಲಿ ಸ್ನೇಹಿತೆ ಅಫ್ಸಾನ ಖಾನ್ (Afsana Khan) ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಗಾಯಕಿ ಅಫ್ಸಾನ ಮದುವೆ ಅದ್ಧೂರಿಯಾಗಿ ನಡೆಯುತ್ತಿರುವ ಕಾರಣ ಪ್ರತಿಯೊಂದೂ ಈವೆಂಟ್‌ಗೂ ರಾಖಿ ವಿಭಿನ್ನವಾಗಿ ಮಿಂಚುತ್ತಿದ್ದಾರೆ.
ಬಾಲಿವುಡ್‌ನ ಜನಪ್ರಿಯ ಫ್ಯಾಷನ್ ಡಿಸೈನರ್ ರಾಜೀವ್ ಖಿಂಚಿ (Rajeevn kinchi) ಜೊತೆ ಕಾಣಿಸಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರಾಜೀವ್ ಖಿಂಚಿ ಮತ್ತು ರಾಖಿ ಒಟ್ಟಿಗೆ ಪ್ರಯಾಣ ಮಾಡುತ್ತಿದ್ದು, ರಾಖಿ ಧರಿಸಿದ ಡೈಮೆಂಡ್ (Daimond) ಲುಕ್ ಸರದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ರಾಖಿ ಉತ್ತರಿಸಿರುವ ಶೈಲಿಗೆ ಟ್ರೋಲ್ ಅಗುತ್ತಿದ್ದಾಳೆ.
B-ಟೌನಲ್ಲಿ ಆಕೆ ಒಬ್ಬಳೇ ಪ್ರಾಮಾಣಿಕವಾದ ವ್ಯಕ್ತಿ, ಅವಳನ್ನು ಮೆಚ್ಚುತ್ತೇನೆ: Raj Kundra
ನೀಲಿ ಬಣ್ಣದ ಡ್ರೆಸ್ ಧರಿಸಿರುವ ರಾಖಿ, 'ನನ್ನ ನೆಕ್‌ಲೇಸ್ ನೋಡಿ, ಸೊರೊಸ್ಕಿದು. ನಾನು ಸೊರೊಸ್ಕಿ ಬೇಬಿ' ಎಂದು ಜೋರಾಗಿ ಕೂಗಿದ್ದಾರೆ. ಈ ಸರದ ನಿಜವಾದ ಹೆಸರು ಸ್ವರೋವ್ಸ್ಕಿ (swarovski). ರಾಖಿ ಪಕ್ಕಾ ಬಿಹಾರಿ ಸ್ಟೈಲ್‌ನಲ್ಲಿ ಉಚ್ಚಾರಣೆ ಮಾಡಿರುವುದಕ್ಕೆ ಟ್ರೋಲ್ ಆಗಿದ್ದಾರೆ. 'ಇನ್ಮೇಲೆ ನೀವು ರಾಖಿಗೆ ನಿಮ್ಮ ಬ್ರ್ಯಾಂಡ್‌ನ ಯಾವ ವಸ್ತುಗಳನ್ನು ನೀಡಬೇಡಿ. ಆಕೆ ಅದರ ಹೆಸರು ಹಾಳು ಮಾಡುತ್ತಾಳೆ,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಅದಿಕ್ಕೆ ರಾಜೀವ್ ಮತ್ತೊಂದು ವಿಡಿಯೋ ಹಂಚಿಕೊಂಡು, 'ಇವತ್ತು ರಾತ್ರಿ ನಡೆಯುವ ಕಾರ್ಯಕ್ರಮಕ್ಕೆ ತಯಾರಿ ಆಗಿರಬೇಕು ಅಲ್ವಾ? ಓ ಇದೇ ಅಲ್ವಾ ನಿಮ್ಮ ದುಬಾರಿ ಖರೀದಿ 1.5 ಕೋಟಿ ರೂ. ಸರ ಅದಕ್ಕೆ ಇಷ್ಟೊಂದು ಮಾತನಾಡುತ್ತಿರುವುದು,' ಎಂದು ಹೇಳಿದ್ದಾರೆ. ಪಕ್ಕದಲ್ಲಿದ್ದ ರಾಖಿ 'ಹಲೋ ಅಣ್ಣ ಇದು 1.5 ಕೋಟಿ ರೂ. ಸರ ಅಲ್ಲ ಕಣೋ. ಇದು ಸೊರೊಸ್ಕಿ ಸರ ಸೊರೊಸ್ಕಿ,' ಎಂದು ಉತ್ತರಿಸಿದ್ದಾರೆ. 'ಸರಿ ಬಿಡು ಇದು 1.5 ಕೋಟಿ ರೂ. ಅಲ್ಲ ಅಂದ್ರೆ 100 ಕೋಟಿ ರೂ. ಆಗಿರಬಹುದು,' ಎಂದು ರಾಜೀವ ಹೇಳುತ್ತಾರೆ. 'ಲೊಟ್ಟೆ 100' ಕೋಟಿ ಎಂದು ರಾಖಿ ನಕ್ಕಿದ್ದಾರೆ.
![]()
ರಾಖಿ ಕೋಪ ಮಾಡಿಕೊಳ್ಳುವುದು ಬಹಳ ಕಡಿಮೆಯೇ. ಅಫ್ಸಾನ ಮದುವೆಗೆ ರಾಖಿ ಹಾಕಿ ಕೊಂಡಿದ್ದ ಮೆಹೇಂದಿ ಮತ್ತು ರಾಕೇಶ್ ಜೊತೆಗೆ ನಡೆದ ಮದುವೆಗೆ ಹಾಕಿಕೊಂಡ ಮೆಹೆಂದಿ ಎರಡೂ ಫೋಟೋಗಳನ್ನು ನೆಟ್ಟಿಗರೂ ವೈರಲ್ ಮಾಡುತ್ತಿದ್ದಾರೆ, ಮಿಸ್ ಮ್ಯಾಚ್ ಮಾಡುತ್ತಿರುವುದಕ್ಕೆ ರಾಖಿ ಕೋಪ ಮಾಡಿಕೊಂಡಿದ್ದಾರೆ. 'ಅಫ್ಸಾನ ಮದುವೆಗೆಂದು ನಾನು ಬಹಳ ಖುಷಿಯಿಂದ, ಇಷ್ಟ ಪಟ್ಟು ಮೆಹಂದಿ ಹಾಕಿದ್ದೇನೆ. ಆದ್ರೆ ರಿತೇಶ್ ಜೊತೆ ಮದುವೆ ಆಗುವಾಗ ಅಳುತ್ತಾ ಮೆಹಂದಿ ಹಾಕಿದ್ದೆ,' ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಕ್ಯಾಮೆರಾ ಎದುರು ಪತಿಗೆ ಒತ್ತಾಯ ಮಾಡಿ ಮುತ್ತಿಟ್ಟ ನಟಿ Rakhi Sawant!
ಕೆಲವು ದಿನಗಳ ಹಿಂದೆ ರಾಖಿ ಮತ್ತು ರಾಕೇಶ್ ದೂರವಾದರು. ಇಬ್ಬರೂ ಪೋಸ್ಟ್ ಮೂಲಕ ಜನರಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನನ್ನ ಪ್ರೀತಿ ಫ್ಯಾನ್ಸ್ ಹಾಗೂ ಹಿತೈಷಿಗಳೇ, ನಾನು ಮತ್ತು ರಿತೇಶ್ ಪರಸ್ಪರ ಬೇರ್ಪಟ್ಟಿದ್ದೇವೆ, ಎಂದು ನಾವು ನಿಮಗೆ ಹೇಳಲು ಬಯಸುತ್ತೇವೆ. ಬಿಗ್ ಬಾಸ್ ನಂತರ ಬಹಳಷ್ಟು ಸಂಭವಿಸಿದೆ ಮತ್ತು ನನ್ನ ನಿಯಂತ್ರಣಕ್ಕೆ ಮೀರಿದ ಅನೇಕ ಸಂಗತಿಗಳು ನಡೆದಿವೆ. ನಾವು ಬಹಳಷ್ಟು ಪ್ರಯತ್ನಿಸಿದ್ದೇವೆ. ಆದರೆ ಕೊನೆಯಲ್ಲಿ ನಾವು ನಮ್ಮ ಜೀವನವನ್ನು ಪ್ರತ್ಯೇಕವಾಗಿ ಕಳೆಯಲು ನಿರ್ಧರಿಸಿದ್ದೇವೆ. ನಾವಿಬ್ಬರೂ ಪ್ರತ್ಯೇಕವಾಗಿ ಮುಂದುವರಿಯುವುದು ಉತ್ತಮ ಎಂದು ನಾನು ಭಾವಿಸುತ್ತೇನೆ. ಪ್ರೇಮಿಗಳ ದಿನಕ್ಕೆ (Valentines Day) ಒಂದು ದಿನ ಮೊದಲು ಇವೆಲ್ಲವೂ ಸಂಭವಿಸಿದೆ, ಎಂದು ನನಗೆ ತುಂಬಾ ಬೇಸರವಾಗಿದೆ. ಆದರೆ ನಿರ್ಧಾರ ತೆಗೆದು ಕೊಳ್ಳಬೇಕಾಗಿತ್ತು. ರಿತೇಶ್ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ. ಇದೀಗ ನಾನು ನನ್ನ ಕೆಲಸದ ಮೇಲೆ ಗಮನ ಹರಿಸಬೇಕು. ನನ್ನನ್ನು ಸಂತೋಷದಿಂದ ಮತ್ತು ಆರೋಗ್ಯವಾಗಿಟ್ಟುಕೊಳ್ಳಬೇಕು. ನನ್ನನ್ನು ಅರ್ಥ ಮಾಡಿಕೊಂಡ ಮತ್ತು ಬೆಂಬಲಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು' ಎಂದು ಪೋಸ್ಟ್ ಮಾಡಿದ್ದರು.
